ಸಾಮಾಜಿಕ ಜಾಲತಾಣಗಳ ಬಳಕೆ- ಶಿಷ್ಟಾಚಾರವಿರಲಿ


Team Udayavani, Feb 13, 2021, 7:00 AM IST

ಸಾಮಾಜಿಕ ಜಾಲತಾಣಗಳ ಬಳಕೆ- ಶಿಷ್ಟಾಚಾರವಿರಲಿ

ನವಮಾಧ್ಯಮ ಎಲ್ಲ ಕ್ಷೇತ್ರಗಳಿಗೂ ಲಗ್ಗೆ ಇಟ್ಟಿದೆ. ನಮ್ಮ ಕೆಲಸಗಳು ಸಲೀಸಾಗತೊಡಗಿವೆ. ಆಧುನಿಕ, ವೇಗಶೀಲ ಹಾಗೂ ಸ್ಮಾರ್ಟ್‌ಬದುಕಿಗೆ ಅಗತ್ಯ ಎನಿಸಿಕೊಂಡ ಅನು ಕೂಲಗಳನ್ನು ನವಮಾಧ್ಯಮ ಕೊಡುಗೆಯಾಗಿ ನೀಡಿದ್ದು, ಇನ್ನೊಂದೆಡೆೆ ಅಷ್ಟೇ ಅಡ್ಡಿ, ಆತಂಕಗಳನ್ನು ತಂದೊಡ್ಡುವ ಸನ್ನಿವೇಶಗಳನ್ನೂ ಹುಟ್ಟುಹಾಕಿವೆ. ಕೌಟುಂಬಿಕ ಅಥವಾ ಸಾರ್ವಜನಿಕ ಎನಿಸಿಕೊಂಡಿದ್ದ ವಿಚಾರಗಳು “ಖಾಸಗಿ ಮೀ ಟೈಮ್‌’ ಎಂಬ ಮೂಸೆಯೊಳಗೆ ಸೇರಿಕೊಂಡರೆ ಖಾಸಗಿ ಅನಿಸಿಕೊಂಡವೆಲ್ಲವೂ ಸಾರ್ವಜನಿಕ ಸ್ವತ್ತಾಗಿ ಪರಿಣಮಿ ಸಿವೆ. ಉದಾಹರಣೆಗೆ ಸಹಭೋಜನ, ಕೌಟುಂಬಿಕ‌ ಕಾಲ ಕ್ಷೇಪ, ಮನೋರಂಜನ ಕಾರ್ಯಕ್ರಮಗಳ ಸಮೂಹ ವೀಕ್ಷಣೆ ಇತ್ಯಾದಿಗಳೆಲ್ಲವೂ ತಂತ್ರಜ್ಞಾನದ ತೆರೆಯ ಪ್ರಭಾ ವದೊಳಗೆ ಸೆರೆಯಾಗಿ ಹೋಗಿ ಅವೆಲ್ಲ ಖಾಸಗೀ ಅನಿಸಿ ಕೊಂಡಿವೆ. ಒಬ್ಬ ವ್ಯಕ್ತಿಯ ಖಾಸಗೀ ವಿಚಾರಗಳು; ಅದು ಕೇವಲ ಆತನ ವೈಯ ಕ್ತಿಕ ಡೈರಿಯೊಳಗೆ ಸೇರಲು ಮಾತ್ರ ಅರ್ಹ ಎನಿಸಿಕೊಂಡವುಗಳು ಸಾರ್ವಜನಿಕ ಸ್ವತ್ತಾಗಿವೆ. ಇದರ ಪರಿಣಾಮ ಸಾಮಾಜಿಕ ಸಭ್ಯತೆ, ನೈತಿಕ ಚೌಕಟ್ಟಿನ ಅಡಿಪಾಯ ನಿಧಾನವಾಗಿ ಅಭದ್ರವಾಗುತ್ತಿರುವ ಸಂದೇಶ ವನ್ನೂ ನೀಡುತ್ತಿವೆ.

ನವಮಾಧ್ಯಮಗಳ ಕುರಿತಾದ ಚರ್ಚೆಯಲ್ಲಿ ಬಹುತೇಕ ವಿಚಾರಗಳು; ಜನರ ಬದಲಾದ ಜೀವನಶೈಲಿ ಮತ್ತು ನಡವಳಿಕೆಗಳಿಗೆ ತಂತ್ರಜ್ಞಾನ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುವ ವಿಷಯಗಳತ್ತ ಗಿರಕಿ ಹೊಡೆಯುತ್ತದೆಯೇ ವಿನಾ ಅದರ ಬಳಕೆದಾರರಾದ ನಮ್ಮ ನಡವಳಿಕೆಗಳು ಹೇಗಿರಬೇಕು ಎನ್ನುವುದರ ಬಗೆಗೆ ಉಲ್ಲೇಖ ಅತ್ಯಂತ ವಿರಳ. ಈ ಬಗ್ಗೆ ಚರ್ಚೆಗಳು ನಡೆದರೂ ಹಣಕಾಸಿನ ವಂಚನೆ, ಖಾಸಗೀ ಹಕ್ಕುಗಳ ಉಲ್ಲಂಘನೆ, ಮಾನಹಾನಿ ಕುರಿತಾದ ವಿಚಾರಗಳು ಹಾಗೂ ನಾವು ಹೊಂದಿರಬೇಕಾದ ಜಾಗರೂಕತೆಗಳ ಕುರಿತಾಗಿ ಮಾತ್ರವೇ ಪ್ರಸ್ತಾವವಾಗುತ್ತವೆ. ಒಟ್ಟಿನಲ್ಲಿ ನಡೆಯುವ ಚರ್ಚೆಗಳು ಇನ್ನೊಬ್ಬರಿಂದಾಗಿ ನಮಗಾಗುವ ಮೋಸ ಅಥವಾ ನಾವು ಎದುರಿಸಬೇಕಾದ ಪರಿಣಾಮಗಳ ಬಗೆಗೆ ಇರುತ್ತವೆಯೇ ವಿನಾ ದಿನನಿತ್ಯದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸು ವಾಗ ನಾವು ಪಾಲಿಸಬೇಕಾದ ಶಿಷ್ಟಾಚಾರಗಳ ಬಗೆಗೆ ಮಾಹಿತಿ ಕಡಿಮೆ. ಆದರೆ ಜಗತ್ತೇ ಹಳ್ಳಿಯಾಗುತ್ತಿರುವ ಸಂದರ್ಭದಲ್ಲಿ ನಾವಿರುವ ಸಮುದಾಯ ನಮ್ಮನ್ನು ಗಮನಿ ಸುವುದಕ್ಕಿಂತಲೂ ಹೆಚ್ಚಾಗಿ ವರ್ಚುವಲ್‌ ಸಮುದಾಯ ನಮ್ಮನ್ನು ಗಮನಿಸುತ್ತಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು.

ಸಾಮಾನ್ಯವಾಗಿ ಪ್ರತೀ ಮನೆಯಲ್ಲಿಯೂ ಶಾಲೆ ಯಲ್ಲಿಯೂ ಮಕ್ಕಳಿಗೆ ಸಾಮಾಜಿಕ ಶಿಷ್ಟಾಚಾರಗಳ ಕುರಿತು ಬೋಧ‌ನೆಗಳು ನಡೆಯುತ್ತವೆ. ಹೇಗೆ ಆಹಾರ ಸೇವಿಸಬೇಕು, ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ವರ್ತನೆ ಹೇಗಿರಬೇಕು, ವೇಷ ಭೂಷಣ ಹೇಗಿದ್ದರೆ ಚೆನ್ನ, ಹಿರಿಯರೊಂದಿಗೆ ನಮ್ಮ ವರ್ತನೆ ಹೇಗಿರಬೇಕು ಇತ್ಯಾದಿ. ಬಹುಶಃ ಈ ಶಿಷ್ಟಾಚಾರಗಳ ಪಠ್ಯ ಮಗುವಿಗೆ ನೀಡುವ ಉದ್ದೇಶವೇ ಇತರ‌ರೆದುರು ನಮ್ಮ ವ್ಯಕ್ತಿತ್ವ ವನ್ನು ಹೇಗೆ ತೋರ್ಪಡಿಸಿಕೊಳ್ಳಬೇಕು ಹಾಗೂ ಗೌರವಯುತವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದಾಗಿದೆ. ಯಾಕೆಂದರೆ ಹೆಚ್ಚಿನ ಸಂದರ್ಭದಲ್ಲಿ ನಮ್ಮ ವ್ಯಕ್ತಿತ್ವದ ವ್ಯಾಖ್ಯಾನವಾಗುವುದೇ ಇತರರು ನಮ್ಮ ಬಗ್ಗೆ ಹೊಂದಿರುವ ಅಭಿಪ್ರಾಯದ ಆಧಾರದಲ್ಲಿ. ನಮ್ಮಿಷ್ಟದ ಹಾಗೆ ನಾವು ಬದುಕುತ್ತೇವೆ ಎಂಬುದು ವೈಯಕ್ತಿಕ  ಸ್ವಾತಂತ್ರ್ಯದ ಆಯ್ಕೆಗಳನ್ನು ಹೇಳಿದರೂ ನಮ್ಮ ಬಗೆಗಿನ ಇತರರ ಅಭಿಪ್ರಾಯವೇ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಹಾಗೂ ಅದರ ಜತೆಗೆ ನಮಗೆ ದಕ್ಕುವ ಗೌರವವೂ ಎಂಬುದನ್ನು ಮರೆಯುವಂತಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಾಮಾಜಿಕ ಕಟ್ಟುಪಾಡುಗಳಿಗೆ ಬದ್ಧರಾ ಗಿಯೇ ಇರಬೇಕಾಗುತ್ತದೆ. ಸಾಮಾಜಿಕ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾದ ಶಿಷ್ಟಾಚಾರಗಳನ್ನು ನಾವು ಡಿಜಿಟಲ್‌ ವೇದಿಕೆ ಗಳಲ್ಲೂ ಅಳವಡಿಸಿಕೊಳ್ಳಬೇಕಾದ ಅನಿವಾರ್ಯ ಇಂದಿನ ಅಗತ್ಯ. ಜಗತ್ತೇ ಹಳ್ಳಿಯಾಗಿದೆ ಎಂದ ಮೇಲೆ ನಮ್ಮ ಹಳ್ಳಿಯ ಜನರಿಗಿಂತ ನೂರು ಪಟ್ಟು ಜನ ನಮ್ಮ ನಡವಳಿಕೆಗಳನ್ನು, ನಮ್ಮ ಯೋಚನೆಗಳನ್ನು ಗಮನಿಸಿರುತ್ತಾರೆ ಎಂಬುದು ಸ್ಪಷ್ಟ.

ಒಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಒಟ್ಟು 60 ಕೋಟಿ ಇಂಟರ್ನೆಟ್‌ ಬಳಕೆದಾರರು, 45.9 ಕೋಟಿ ವಾಟ್ಸ್‌  ಆ್ಯಪ್‌ ಬಳಕೆದಾರರು, 32.5 ಕೋಟಿ ಫೇಸ್‌ಬುಕ್‌ ಬಳಕೆ  ದಾರರು, 42.5 ಕೋಟಿ ಯೂಟ್ಯೂಬ್‌ ಬಳಕೆದಾರರಿದ್ದಾರೆ. ದಿನವೊಂದಕ್ಕೆ ಒಬ್ಬ ವ್ಯಕ್ತಿ ಸರಾಸರಿ 2.5 ಗಂಟೆಗಳಷ್ಟು ಕಾಲ ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುತ್ತಿದ್ದಾನೆೆ. ಈ ಅಂಕಿ ಸಂಖ್ಯೆಗಳನ್ನು ಗಮನಿಸುವಾಗ ಒಂದು ವಿಚಾರವಂತೂ ಸ್ಪಷ್ಟವಾಗುತ್ತಿದೆ. ನಾವೀಗ ಎರಡು ಪ್ರಪಂಚದಲ್ಲಿ ಬದುಕುತ್ತಿ ದ್ದೇವೆ!. ಒಂದು ನಾವಿರುವ  ಭೌತಿಕ ಪ್ರಪಂಚ, ಇನ್ನೊಂದು ನಾವು ಅತೀ ಹೆಚ್ಚು ಅವಲಂಬಿತವಾಗಿರುವ ಅಂತರ್ಜಾಲ ಎಂಬ ವರ್ಚುವಲ್‌ ಪ್ರಪಂಚ. ಹಾಗಿದ್ದಾಗ ನಮ್ಮ ನಡವಳಿಕೆಗಳ ಬಗೆಗೆ‌ ಈ ಎರಡೂ ಪ್ರಪಂಚಗಳಲ್ಲೂ ನಮ್ಮ ನಿಗಾ ಅಗತ್ಯವಲ್ಲವೇ?.

ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ನಡವಳಿಕೆಗಳು ಅಥವಾ ಶಿಷ್ಟಾಚಾರಗಳು ಎಂದರೆ, ನಾವು ಹಂಚಿಕೊಳ್ಳುವ ಮಾಹಿತಿ, ಚಿತ್ರಗಳು ಹಾಗೂ ದೃಶ್ಯಾವಳಿಗಳ ಕುರಿತು ಒಂದಷ್ಟು ಗಮನ. ಫಾರ್ವರ್ಡೆಡ್‌ ಮಾಹಿತಿಯನ್ನು ಹಂಚಿ ಕೊಳ್ಳು ವಾಗ ಇರಬೇಕಾದ ಎಚ್ಚರಿಕೆ, ಇನ್ನೊಬ್ಬರ ಪೋಸ್ಟ್‌ ಗಳಿಗೆ ಪ್ರತಿಕ್ರಿಯಿಸುವಾಗ ಇರಬೇಕಾದ ಜಾಗರೂಕತೆ, ಮಾಹಿತಿಯನ್ನು ಪಡೆಯುವಾಗ ಹಾಗೂ ಅದನ್ನು ಇತರ ರೊಂದಿಗೆ ಹಂಚಿಕೊಳ್ಳುವಾಗ ಅದು ಸತ್ಯವೇ? ಮಿಥ್ಯವೇ? ಎಂದು ತಿಳಿದುಕೊಳ್ಳುವ ವ್ಯವಧಾನ. ವ್ಯೂವ್‌, ರೀಚ್‌, ಶೇರ್‌ ಎಂಬ ತ್ರಿವಳಿ ಸೂತ್ರಗಳೇ ಯಶಸ್ಸಿನ ಲೆಕ್ಕಾಚಾರವಲ್ಲ ಎಂಬ ಕನಿಷ್ಟ ಪರಿಜ್ಞಾನ ಇತ್ಯಾದಿ.

ಮೇಲೆ ಹೇಳಿದ ವಿಚಾರಗಳನ್ನು ನಿರ್ದಿಷ್ಟವಾಗಿ ಹೇಳಬೇಕೆಂದರೆ, ಅಲ್ಲಿ ಹಂಚಿಕೊಳ್ಳುವ ಯಾವುದೇ ವಿಚಾರಗಳು ನಮ್ಮ ವ್ಯಕ್ತಿತ್ವವನ್ನು ಚಂದವಾಗಿಸುವ, ನಮ್ಮ ಕುರಿತಾದ ಗೌರವವನ್ನು ಕಾಪಿಡುಕೊಳ್ಳುವ ಸ್ವರೂಪವನ್ನು ಹೊಂದಿರಬೇಕಾಗುತ್ತದೆ. ಸಾಧ್ಯವಾದಷ್ಟು ಯಾರೋ ಬರೆದುದನ್ನು ಹಂಚಿಕೊಳ್ಳುವ ಬದಲಾಗಿ ಸೃಜನಶೀಲ ಬರಹ ಗಳು, ಚಿತ್ರಗಳು, ವೀಡಿಯೋಗಳು ಜಗತ್ತಿನೆಡೆಗೆ ನಮ್ಮನ್ನು ನಾವು ಧನಾತ್ಮಕವಾಗಿ ವಿಸ್ತರಿಸಿಕೊಳ್ಳುವಲ್ಲಿ ಸಹಾಯಕ ವಾಗಬಲ್ಲವು. ಇನ್ನಷ್ಟು ಜನರಿಗೆ ನಮ್ಮ ಅಭಿರುಚಿಗಳು, ಸಾಧನೆಗಳು ಗೊತ್ತಾಗಬಹುದು. ಹಾಗೆಯೇ ಅದು ಇತರರನ್ನು ಪ್ರಭಾವಿಸಬಹುದು. ಸಾಮಾಜಿಕ ಜಾಲತಾಣಗಳ ಬಳಕೆ ನನ್ನ ಖಾಸಗಿ ವಿಚಾರ ಎಂದು ಬೇಕಾಬಿಟ್ಟಿಯಾಗಿ ಬರೆದುಕೊಳ್ಳುವಂತಿಲ್ಲ. ಹಾಗೆಂದು ನಮ್ಮ ಭಾವನೆಗಳನ್ನು ಅಲ್ಲಿ ಹಂಚಿಕೊಳ್ಳಲೇ ಬಾರದೇ? ಖಂಡಿತಾ ಹಂಚಿಕೊಳ್ಳ ಬಹುದು, ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಅದು ಸೃಜನಶೀಲತೆಗೆ ವೇದಿಕೆ ಹೌದು. ಆದರೆ ತೀರಾ ಖಾಸಗಿ ವಿಚಾರಗಳನ್ನು ನಾವು ಸಾರ್ವಜನಿಕವಾಗಿ ಹೇಗೆ ಹೇಳಿಕೊಳ್ಳು ವು ದಿಲ್ಲವೋ ಹಾಗೆಯೇ ಜಾಲತಾಣಗಳಲ್ಲಿ ಹಂಚಿಕೊಳ್ಳದಿದ್ದರೆ ಉತ್ತಮ. ಸಾರ್ವಜನಿಕವಾಗಿ ಹಂಚಿಕೊಳ್ಳುವ ವಿಚಾರಗಳಿ ಗಿಂತ ಜಾಲತಾಣಗಳಲ್ಲಿ ಹಂಚಿಕೊಳ್ಳುವ ವಿಚಾರಗಳು ಅತೀ ವೇಗವಾಗಿ, ಅತೀ ಹೆಚ್ಚು ಜನರಿಗೆ ತಲುಪುವ ಕಾಲ ಇದು. ಆದಕಾರಣ ನಿಮ್ಮ ಗೌರವಕ್ಕೆ ಚ್ಯುತಿ ತರುವ ಯಾವುದೇ ವಿಚಾರಗಳನ್ನು ಅಲ್ಲಿ ಹಂಚಿಕೊಳ್ಳದಿದ್ದರೆ ಉತ್ತಮ.

ನಾವು ಹಾಕಿದ ಪೋಸ್ಟ್‌ಗಳ ವೀಕ್ಷಕರ ಸಂಖ್ಯೆ ಯಾವುದೇ ಗುಣಾತ್ಮಕ ಯಶಸ್ಸನ್ನು ಹೇಳುವುದಿಲ್ಲ. ನಾವು ಹಂಚಿದ ಮಾಹಿತಿ, ಪೋಟೋ, ವೀಡಿಯೋ ಎಲ್ಲರೂ ಪೂರ್ತಿಯಾಗಿ ನೋಡಿರಲೇ ಬೇಕೆಂದಿಲ್ಲ ಅಥವಾ ನೋಡಿದರೂ ಅದನ್ನು ಅವರು ಗಮನಿಸಿದ್ದಾರೆ ಎಂಬ ಅರ್ಥವೂ ಅಲ್ಲ. ಆದ್ದರಿಂದ ಆ ಸಂಖ್ಯೆಯ ಕುರಿತೇ ಪದೇ ಪದೆ ಖಚಿತಪಡಿಸಿಕೊಳ್ಳುತ್ತಾ ತಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡದಿ ರುವುದು ಉತ್ತಮ. ಇದು ಕೂಡಾ ಒಂದರ್ಥದಲ್ಲಿ  ನಮ್ಮ ಸಮಯವನ್ನು ಪರಿಣಾಮಾತ್ಮಕವಾಗಿ ಹೇಗೆ ಕಳೆಯಬೇಕೆಂಬ ಶಿಷ್ಟಚಾರವಲ್ಲವೇ?.

 

ಗೀತಾವಸಂತ್‌ ಇಜಿಮಾನ್‌ ಉಜಿರೆ

ಟಾಪ್ ನ್ಯೂಸ್

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

siddaramaih-Meeting

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.