ಶಿವಸೇನೆಯ ವಿಚಾರದಲ್ಲಿ ಏಕಿಷ್ಟು “ಸೆಕ್ಯುಲರ್‌ ಸೈಲೆನ್ಸ್‌’?


Team Udayavani, Nov 30, 2019, 5:46 AM IST

zx-20

ಕೇವಲ ನಾಲ್ಕು ವರ್ಷಗಳ ಹಿಂದೆ, ಇದೇ ಶಿವಸೇನೆಯೇ ಅಲ್ಲವೇ “ಮುಸಲ್ಮಾನರ ಮತದಾನದ ಹಕ್ಕನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದ್ದು? ಈ ಮಾತನ್ನಾಡಿದವರು ಮತ್ಯಾರೂ ಅಲ್ಲ, ಈಗ ಎಡಪಂಥೀಯರಿಂದ “ಕಿಂಗ್‌ಮೇಕರ್‌” ಎಂದು ಹೊಗಳಿಸಿಕೊಳ್ಳುತ್ತಿರುವ ಶಿವಸೇನೆಯ ಇದೇ ಸಂಜಯ್‌ ರಾವತ್‌! ಆದರೂ ಏನಂತೆ, ಸಂಜಯ್‌ ರಾವತ್‌ ಬಿಜೆಪಿಯನ್ನು ಅತ್ಯಂತ ಉಗ್ರವಾಗಿ ವಿರೋಧಿಸುತ್ತಾರಲ್ಲವೇ? ಹೀಗಾಗಿ ಅವರ “ಕೋಮುವಾದಿ ಪಾಪಗಳೆಲ್ಲ’ ತೊಳೆದುಹೋದವು!

“”ಯುದ್ಧವೆನ್ನುವುದೇ ಶಾಂತಿ. ಸ್ವಾತಂತ್ರ್ಯವೆನ್ನುವುದು ಗುಲಾಮಗಿರಿ. ನಿರ್ಲಕ್ಷ್ಯವೇ ಶಕ್ತಿ!”
ಆಂಗ್ಲ ಲೇಖಕ ಜಾರ್ಜ್‌ ಆರ್ವೆಲ್‌ ಬರೆದ ಲೋಕವಿಖ್ಯಾತ ಕಾದಂಬರಿ “1984’ರಲ್ಲಿ ಬರುವ ಸಾಲುಗಳಿವು. ಇವು ನಿರಂಕುಶ ಪ್ರಭುತ್ವವನ್ನು ನಡೆಸುತ್ತಿರುವ ಪಕ್ಷವೊಂದರ ಪ್ರಮುಖ ಘೋಷಣೆಯಾಗಿರುತ್ತದೆ.
ಆರ್ವೆಲ್‌ರ ಧಾಟಿಯಲ್ಲೇ ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳನ್ನು ಒಂದೇ ಒಂದು ಘೋಷವಾಕ್ಯದಲ್ಲಿ ಬಣ್ಣಿಸಬೇಕು ಎಂದರೆ, ಹೀಗೆ ಬಣ್ಣಿಸಬಹುದೇನೋ: ಈಗ “”ಕೋಮುವಾದವೇ
ಜಾತ್ಯತೀತತೆ”!

ಭಾರತೀಯ ಜನತಾಪಾರ್ಟಿಯನ್ನು ಏನಕೇನ ಅಧಿಕಾರದಿಂದ ದೂರವಿಡಬೇಕು ಎಂಬ ಕಾರಣಕ್ಕಾಗಿ ಪ್ರಬಲ ಬಲಪಂಥೀಯ ಪಕ್ಷವಾದ ಶಿವಸೇನೆಯು, ಪ್ರಬಲ ಜಾತಿವಾದಿ ಪಕ್ಷವಾದ ಎನ್‌ಸಿಪಿ ಮತ್ತು ಪ್ರಬಲ ಎಡಪಂಥೀಯ ಪಕ್ಷವಾದ ಕಾಂಗ್ರೆಸ್‌ ಜತೆ ಮಾಡಿಕೊಂಡಿರುವ ಈ ಅವಕಾಶವಾದಿ ಮೈತ್ರಿಯನ್ನು ನೋಡಿದಾಗ, “ಜಾತ್ಯತೀತತೆ’ ಎಂಬ ಪದಕ್ಕೆ ತಿಲಾಂಜಲಿ ಇಡಲು ಇದು ಸುಸಮಯ ಎಂದೆನಿಸುತ್ತದೆ. ಎಲ್ಲಾ ರೀತಿಯಿಂದಲೂ ಈ ಪದವು ಎಂದೋ ತನ್ನ ಅರ್ಥವನ್ನುಕಳೆದುಕೊಂಡು ನಿರ್ಜೀವವಾಗಿದೆ.

ಇನ್ನು ಮುಂದೆ ಯಾರಾದರೂ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ ಮತ್ತು ಅದರ ಸಮಾನ ಮನಸ್ಕ ಪಕ್ಷಗಳೇನಾದರೂ “ಸೆಕ್ಯುಲರ್‌-ಕಮ್ಯುನಲ್‌’ ಎನ್ನುವ ಪದ ಬಳಸಿ, ತಮ್ಮನ್ನು ತಾವು ಎದುರಿನವರಿಗಿಂತ ಭಿನ್ನವೆಂದು ಬಿಂಬಿಸಿಕೊಳ್ಳಲು ಬಯಸಿದರೆ, ಅವುಗಳಂಥ ವಂಚಕರು ಮತ್ಯಾರೂ ಇಲ್ಲ ಎನ್ನುವುದರಲ್ಲಿ ಸಂಶಯವೇ ಬೇಡ. ಇಂದು ಸೆಕ್ಯುಲರಿಸಂ ಎನ್ನುವ ಪದಕ್ಕೆ ಅರ್ಥವೇ ಉಳಿದಿಲ್ಲ. ಅದೀಗ “ಎಡಪಂಥೀಯರಿಗೆ ಅಪೇಕ್ಷಣೀಯವಲ್ಲದ್ದು’ ಎಂಬುದಕ್ಕೆ ಉದಾಹರಣೆಯಾಗಿ ಉಳಿದಿದೆಯಷ್ಟೆ.

ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್‌ ನಾಥೂರಾಮ್‌ ಗೋಡ್ಸೆಯನ್ನು “ರಾಷ್ಟ್ರವಾದಿ’ ಎಂದು ಕರೆದಿದ್ದಾರೆೆ. ಈ ಕಾರಣಕ್ಕಾಗಿ ಆಕ್ರೋಶಗೊಂಡ ರಾಹುಲ್‌ ಗಾಂಧಿಯವರು “”ಉಗ್ರವಾದಿ ಪ್ರಜ್ಞಾ ಠಾಕೂರ್‌, ಉಗ್ರವಾದಿ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಾರೆ. ಭಾರತೀಯ ಸಂಸತ್ತಿನ ಇತಿಹಾಸದಲ್ಲಿ ಇದೊಂದು ದುಃಖದ ದಿನ” ಎಂದಿದ್ದಾರೆ. ಆದರೆ ಅತ್ತ ಶಿವಸೇನೆ ಗೋಡ್ಸೆಯನ್ನು ಹೊಗಳುತ್ತಲೇ ಬಂದಿರುವ ಪಕ್ಷ. ಇದೇ ಶಿವಸೇನೆಯು ತನ್ನ ಮುಖವಾಣಿ ಸಾಮ್ನಾದಲ್ಲಿ “”ನಾಥೂರಾಮ್‌ ಗೋಡ್ಸೆ ಇಟಲಿಯಿಂದ ಬಂದವರಲ್ಲ, ಅವರೊಬ್ಬ ಅಪ್ರತಿಮ ದೇಶಭಕ್ತರಾಗಿದ್ದರು” ಎಂದು ಹೇಳುವ ಮೂಲಕ ಗೋಡ್ಸೆಗೆ “ದೇಶಭಕ್ತ’ ಪಟ್ಟ ಕೊಟ್ಟಿತ್ತು! ಅಫ್ಕೋರ್ಸ್‌ ಶಿವಸೇನೆಯನ್ನು ಪ್ರಶ್ನಿಸಲು “ಜಾತ್ಯತೀತತೆ’ ಅಲಿಯಾಸ್‌
“ಅವಕಾಶವಾದಿತನ’ದಲ್ಲಿ ಅವಕಾಶವಿಲ್ಲ!

ಕೇವಲ ಏಳು ವರ್ಷಗಳ ಹಿಂದೆಯಷ್ಟೇ ಶಿವಸೇನೆಯ ಮುಖ್ಯಸ್ಥ ಬಾಳಾ ಸಾಹೇಬ್‌ ಠಾಕ್ರೆಯವರು, ಸೋನಿಯಾರ ದೇಶ ನಿಷ್ಠೆಯನ್ನು ಪ್ರಶ್ನಿಸಿದ್ದರು. “”ಸೋನಿಯಾ ವಿದೇಶಿ ಮಹಿಳೆ. ಭಾರತದ ಬಗ್ಗೆ ಅವರಿಗೆಂಥ ಪ್ರೀತಿಯಿರಬಲ್ಲದು?” ಎಂದು 2012ರಲ್ಲಿ  ಪ್ರಶ್ನಿಸಿದ್ದರು ಬಾಳಾ ಠಾಕ್ರೆ. ರಾಹುಲ್‌ ಗಾಂಧಿಯವರಿಗೆ ಮೇಲಿನ ಮಾತುಗಳಿಗಿಂತಲೂ “ಜಾತ್ಯತೀತತೆಯ’ ಮೈತ್ರಿ ಧರ್ಮವೇ ಮುಖ್ಯವೆಂದು ಕಾಣಿಸುತ್ತದೆ. ಇದೇ ವೇಳೆಯಲ್ಲೇ ಮುಖ್ಯವಾಹಿನಿ ಮಾಧ್ಯಮಗಳೂ ಗೋಡ್ಸೆ ವಿಚಾರದಲ್ಲಿ ಶಿವಸೇನೆಯ ನಿಲುವನ್ನು ಪ್ರಶ್ನಿಸುತ್ತಿಲ್ಲ ಎನ್ನುವುದನ್ನೂ ಗಮನಿಸಿ! ಮಾಧ್ಯಮಗಳು ಶಿವಸೇನೆಯ ವಿಷಯದಲ್ಲಿ ಸೆಕ್ಯುಲರ್‌ ಸೈಲೆನ್ಸ್‌(ಜಾತ್ಯತೀತ ಮೌನ)ವನ್ನು ತಾಳಿವೆ!

ಕೇವಲ ನಾಲ್ಕು ವರ್ಷಗಳ ಹಿಂದೆ, ಇದೇ ಶಿವಸೇನೆಯೇ ಅಲ್ಲವೇ “ಮುಸಲ್ಮಾನರ ಮತದಾನದ ಹಕ್ಕನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದ್ದು? ಈ ಮಾತನ್ನಾಡಿದವರು ಮತ್ಯಾರೂ ಅಲ್ಲ, ಈಗ ಎಡಪಂಥೀಯರಿಂದ “”ಕಿಂಗ್‌ಮೇಕರ್‌” ಎಂದು ಹೊಗಳಿಸಿಕೊಳ್ಳುತ್ತಿರುವ ಇದೇ ಸಂಜಯ್‌ ರಾವತ್‌! ಕಳೆದ ವರ್ಷವಷ್ಟೇ ಇದೇ ವ್ಯಕ್ತಿ, ತಮ್ಮ ಪಕ್ಷದವರು ಬಾಬ್ರಿ ಮಸೀದಿಯನ್ನು ಕೇವಲ 17 ನಿಮಿಷದಲ್ಲಿ ಧ್ವಂಸ ಮಾಡಿದ್ದರು ಎಂದಿದ್ದರು. ಆದರೂ ಏನಂತೆ, ಸಂಜಯ್‌ ರಾವತ್‌ ಬಿಜೆಪಿಯನ್ನು ಅತ್ಯಂತ ಉಗ್ರವಾಗಿ ವಿರೋಧಿಸುತ್ತಾರಲ್ಲವೇ? ಹೀಗಾಗಿ ಅವರ “ಕೋಮುವಾದಿ ಪಾಪಗಳೆಲ್ಲ’ ತೊಳೆದುಹೋದವು!

ಇದೇ ವರ್ಷದ ಆರಂಭದಲ್ಲಿ, ಅಂದರೆ ಲೋಕಸಭಾ ಚುನಾವಣೆಗೂ ಮುನ್ನ ಶಿವಸೇನೆಯು, “”ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಶ್ರೀಲಂಕಾದಲ್ಲಿನಂತೆ ಭಾರತದಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧ ಜಾರಿ ಮಾಡಬೇಕು” ಎಂದು ಮೋದಿ ಸರ್ಕಾರಕ್ಕೆ ಆಗ್ರಹಿಸಿತ್ತು. ಆಗ ಬಿಜೆಪಿಯು ಶಿವಸೇನೆಯ ಈ
ಬೇಡಿಕೆಯನ್ನು ವಿರೋಧಿಸಿತು. ಈಗ ಹೇಗಿದ್ದರು ಶಿವಸೇನೆ

ಅಘಾಡಿಯ ಭಾಗವಾಗಿದೆಯಲ್ಲವೇ? ಇನ್ಮುಂದೆ ಯಾರೂ ಅದನ್ನು ಪ್ರಶ್ನಿಸುವುದಿಲ್ಲ ಬಿಡಿ. ಅಷ್ಟೊಂದು ಪ್ರಬಲ ಹಿಂದುತ್ವವಾದಿಯಲ್ಲದ ಬಿಜೆಪಿಯನ್ನು ಕೋಮುವಾದಿ ಎಂದೇ ಕರೆಯಲಾಗುತ್ತದೆ, ಆದರೆ ತೀವ್ರ ಬಲಪಂಥೀಯ ಪಕ್ಷವಾದ ಶಿವಸೇನೆ ಈಗ ಸರಿಹೋಗಿದೆಯಂತೆ. ಏಕೆಂದರೆ, ಅದು ಬಿಜೆಪಿಗೆ ಮೋಸ ಮಾಡಿದೆಯಲ್ಲವೇ! 1993ರ ಮುಂಬೈ ದಾಳಿಯ ನಂತರ ನಡೆದ ಕೋಮುದಂಗೆಗಳಲ್ಲಿ 900ಕ್ಕೂ ಹೆಚ್ಚು ಜನರು ಸಾವಿಗೀಡಾದರು. ಆದರೆ ಕಾಂಗ್ರೆಸ್‌ ಪಾಲಿಗೆ ನರೇಂದ್ರ ಮೋದಿ ಯಾವಾಗಲೂ “ಸಾವಿನ ವ್ಯಾಪಾರಿ’ ಆಗಿ ಇರುತ್ತಾರೆ, ಶಿವಸೇನೆ ಮಾತ್ರ ಪ್ರಜಾಪ್ರಭುತ್ವದ ದೀವಟಿಗೆ ಹೊತ್ತು ಅಡ್ಡಾಡುವ ಪಕ್ಷವಾಗುತ್ತದೆ.

ಕಳೆದ ಮೂರು ದಶಕಗಳಲ್ಲಿನ ಶಿವಸೇನೆಯ ಕೋಮುವಾದದ ಬಗ್ಗೆ ಹೀಗೆ ಪುಟಗಟ್ಟಲೇ ಬರೆಯುತ್ತಲೇ ಸಾಗಬಹುದು. ಬಿಜೆಪಿಗಿಂತಲೂ ಎಷ್ಟೋ ಪ್ರಬಲ ಬಲಪಂಥೀಯ ಪಕ್ಷವಾಗಿಯೇ ಉಳಿದಿದೆ ಶಿವಸೇನೆ. ಆದರೆ ಅದ್ಯಾವುದೂ ಈಗ ಲೆಕ್ಕಕ್ಕೆ ಬರುವುದಿಲ್ಲ ಬಿಡಿ. ಕಾಂಗ್ರೆಸ್‌ನವರು ಏನು ಹೇಳುತ್ತಾರೋ ಅದೇ ಜಾತ್ಯತೀತತೆ. ಆದರೆ ನಾವು ಇನ್ನೆಷ್ಟು ದಿನ ಈ ರಾಜಕೀಯದಾಟದಲ್ಲಿ ಭಾಗಿಯಾಗಬೇಕು, ಜಾತ್ಯತೀತತೆ ಎಂಬ ಅರ್ಥ ಕಳೆದುಕೊಂಡ ಪದವನ್ನು ಇತಿಹಾಸದ ಪುಟ ಸೇರಿಸುವುದೇ ಸರಿಯೇನೋ.
(ಲೇಖನ ಮೂಲ- ಸ್ವರಾಜ್ಯ.ಕಾಂ)

– ಅರಿಹಂತ ಪವಾರಿಯ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.