ನುಡಿದರೆ ನಡೆಯಬೇಕು… ಬದುಕು ಬೇರೆ, ಕೃತಿ ಬೇರೆಯಲ್ಲ..!
Team Udayavani, Mar 26, 2021, 7:08 PM IST
ಅದೊಂದು ಕಾಲವಿತ್ತಂತೆ ಬೆಳಗ್ಗೆ ಎದ್ದ ಕೂಡಲೇ ಎರಡು ಕೈ ಜೋಡಿಸಿ ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ ಕರಮೂಲೆ ಸ್ಥಿತೆ ಗೌರಿ ಪ್ರಭಾತೆ ಕರದರ್ಶನಂ ಎಂದು ಪ್ರಾರ್ಥಿಸಿ ನಂತರ ಎಲ್ಲಾ ಕೆಲಸ ಕಾರ್ಯಗಳು ನಡೆಯುತ್ತಿದ್ದವು.
ಆದರೆ ಈಗ..? ಪರಿವರ್ತನೆಯಾಗದ ರೀತಿಯಲ್ಲಿ ಪರಿವರ್ತನೆಯಾದ ಯುಗದಲ್ಲಿ..? ಬದುಕಂದರೇ, ಕೇವಲ ವಾಟ್ಸ್ಯಾಪ್, ಫೇಸ್ಬುಕ್ ಗಳಷ್ಟೇ ಅಂಗೈಯೊಳಗಿದ್ದರೆ ಸಾಕೆನ್ನುವ ದಿನಗಳಲ್ಲಿ..? ಹೌದು, ಈಗೀಗ ನಮ್ಮ ನಿಮ್ಮಲ್ಲಿ ಹೆಚ್ಚಿನವರದ್ದು, ವಾಟ್ಸ್ಯಾಪ್ ಫೇಸ್ಬುಕ್ ಗಳಿಗೆ ದರ್ಶನವಾದ ಮೇಲೆಯೇ ನಮ್ಮ ಮುಂದಿನ ಕೆಲಸ.
ಓದಿ : ‘ಈಗೋ’ ಒಳ್ಳೆಯದೇ… ಎಲ್ಲಿಯ ತನಕವೆಂದರೇ..
ಬದುಕೆಂದರೇ ಈಗೀಗ ಫಾರ್ವರ್ಡ್ ಗಳ ಸುಳಿಯಲ್ಲಿ ಸಿಲುಕಿದ ಅರೆ ಬೆಂದ ಅಕ್ಕಿಯಂತಷ್ಟೇ. ದಿನ ಆರಮಭವಾದರೇ ಸಾಕು, ಚಾಟಿಂಗ್, ಫಾರ್ವರ್ಡಿಂಗ್, ಹೀಗೆ ಎಲ್ಲಾ ‘ಇಂಗ್’ ಗಳ ನಡುವೆ ಕಳೆದು ಹೋಗುವ ಅಮೂಲ್ಯಗಳ ನಡುವೆ ಬದುಕು ಕಾಣುತ್ತಿದ್ದೇವೆ ಅನ್ನಿಸುತ್ತದೆ. ವಿಸ್ತಾರವಿಲ್ಲದೆ ಆಳ ಹುಡುಕುವ ಖಯಾಲಿ ಈಗಿನವರಲ್ಲಿ ಹೆಚ್ಚು.
ದಿನದ ವಿಶೇಷಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದು ಅದನ್ನು ನಮ್ಮ ಖಾತೆಯಲ್ಲಿರುವವರಿಗೆ ಫಾರ್ವಾರ್ಡ್ ಮಾಡುತ್ತೇವೆ. ವಿಶೇಷ ದಿನಗಳ ವಿಶೇಷತೆಗಳನ್ನು ವಿಶೇಷವಾದವರಿಗೆ ಹಂಚುವ ನಾವು ,ಅದರ ಆಚರಣೆ ಮತ್ತು ಅನುಸರಣೆ ಮಾಡುತ್ತೇವೆಯೋ ಇಲ್ಲವೋ ಎಂಬುದನ್ನು ನಾವು ಅರಿತಿರಬೇಕು.
ಈ ಆಚರಣೆ ಮತ್ತು ಅನುಸರಣೆಯ ನಡುವಿನ ನಮ್ಮ ಬದುಕು ಹೇಗಿದೆಯೆಂದರೆ ಎಲ್ಲರಿಗೂ ವಿಶ್ವ ಆಹಾರ ದಿನಾಚರಣೆ ಶುಭಾಶಯಗಳನ್ನು ಫಾರ್ವರ್ಡ್ ಮಾಡುವ ನಾವು ಊಟ ಚೆನ್ನಾಗಿಲ್ಲ, ನನಗೆ ಇಷ್ಟ ಆಗ್ತಿಲ್ಲ, ಬಿಸಾಡಿದರೆ ಏನಾಗುತ್ತೆ ಸ್ವಲ್ಪ ತಾನೇ ಎನ್ನುತ್ತೇವೆ.ನಾವು ಕಳಿಸುವ ಸಂದೇಶಕ್ಕೂ ನಾವು ನಡೆದುಕೊಳ್ಳುವುದಕ್ಕೂ ಕೆಲವೊಮ್ಮೆ ಸಂಬಂಧವೇ ಇರುವುದಿಲ್ಲ. ಇದು ಕೇವಲ ಆಹಾರದ ವಿಷಯ ಮಾತ್ರವಲ್ಲ ಸ್ವಚ್ಛ ಭಾರತದ ಹೆಸರಿನಲ್ಲಿ ವರುಷಕ್ಕೊಮ್ಮೆ ಕಸದ ರಾಶಿಯ ಮುಂದೆ ಪೊರಕೆ ಹಿಡಿದು ಅದನ್ನು ಫೋಟೋ ತೆಗೆದು ಎಲ್ಲರಿಗೂ ಶೇರ್ ಮಾಡುವ ಜನರಿಗೆ ಬಾಕಿಯ ದಿನಗಳಲ್ಲಿ ಬೇಕಾದದ್ದನ್ನು ತಿಂದು ಕವರ್ ಗಳನ್ನು ರಸ್ತೆಬದಿಯಲ್ಲಿ ಬಿಸಾಕುವುದನ್ನು ಮಾಡಬಾರದೆಂಬ ಕಿಂಚಿತ್ತು ಪರಿಜ್ಞಾನ ಇಲ್ಲದಂತಾಗಿರುತ್ತದೆ. ನುಡಿದರೆ, ನಡೆಯಬೇಕು. ಆಚಾರವಿಲ್ಲದ ಆಚರಣೆಗಳಾಗಬಾರದು.
ಯಾವುದೇ ಆಚರಣೆಗಳಿಗೂ ಅಡಚಣೆ ಇರುವುದಿಲ್ಲ. ಆದರೆ ನಾವು ಅದನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಾವು ಕಳಿಸುವ ವಿಶೇಷ ಸಂದೇಶಗಳ ಆಚರಣೆಗಳನ್ನು ಕಿಂಚಿತ್ತಾದರೂ ಅನುಸರಿಸಿ ನೋಡೋಣ ಆಗ ನಮ್ಮ ಆಚರಣೆಗಳಿಗೂ ಒಂದು ತೂಕ ಸಿಗುತ್ತದೆ. ಬದುಕು ಬೇರೆ ಕೃತಿ ಬೇರೆ ಎನ್ನುವಂತಾಗಬಾರದು ನಮ್ಮ ನಡೆಗಳು.
ಕೀರ್ತನ ಶೆಟ್ಟಿ
ಆಳ್ವಾಸ್ ಕಾಲೇಜು, ಮೂಡುಬಿದರೆ.
ಓದಿ : ಮೋದಿ ಬೆಳೆಸಿದ್ದು ಗಡ್ಡ ಮಾತ್ರ, ಸಾಧನೆ ಶೂನ್ಯ : ಮೋದಿ ವಿರುದ್ಧ ಮಮತಾ ಕಿಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.