ಮುದ್ದು ಮುದ್ದು ಕಚಗುಳಿ ಪ್ರೀತಿ ನೀಡುವ ನಾಯಿ
Team Udayavani, Jun 27, 2021, 5:48 PM IST
ಪ್ರಾತಿನಿಧಿಕ ಚಿತ್ರ
ನಾಯಿ ಎಂದರೆ ಸಾಕು, ನಿಯತ್ತಿಗೆ ಹೆಸರಾದ ಒಂದು ಪ್ರಾಣಿ ಎಂಬ ಕಲ್ಪನೆ ನಮ್ಮ ಮನದಲ್ಲಿ ಮೂಡುತ್ತದೆ. ಹೌದು, ನಾಯಿಗಳೆಂದರೆ ಹಾಗೆ, ಅವು ಪ್ರಾಮಾಣಿಕತೆಗೆ, ಪ್ರೀತಿಗೆ ಮತ್ತೊಂದು ಹೆಸರು ಪ್ರಾಣಿಗಳು.
ನಾಯಿಗಳನ್ನು ಸಾಕುವುದರ ಕಷ್ಟಗಳೇನೇ ಇರಲಿ, ಅವುಗಳು ಮರಳಿ ನೀಡುವ ಮಮತೆ, ವಾತ್ಸಲ್ಯವಂತೂ ಹತ್ತು ಪಟ್ಟು ಹೆಚ್ಚಿನದು ಹಾಗೂ ಅವುಗಳು ನಿಮ್ಮ ಸಂತೋಷ ಮತ್ತು ದುಃಖಗಳನ್ನು ಸಹ ಹಂಚಿಕೊಳ್ಳುತ್ತವೆ ಎಂಬುದು ಜಗತ್ತಿಗೆ ಗೊತ್ತಿರುವ ಸತ್ಯ.
ನಮ್ಮ ಬಳಿ ಒಂದು ನಾಯಿ ಇದ್ದರೆ ನೀವು ಯಾವತ್ತಿಗೂ ಒಂಟಿ ಎಂಬ ಭಾವನೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲೆಂದು ತಜ್ಞರು ಕೂಡ ಹೇಳುತ್ತಾರೆ. ನಾಯಿಗಳಿಗೆ ಮನುಷ್ಯರ ಭಾವನೆಗಳು ಮತ್ತು ಮೂಡ್ ಚೆನ್ನಾಗಿ ಅರ್ಥವಾಗುತ್ತವೆ. ಅವುಗಳು ನಿಮ್ಮನ್ನು ಖುಷಿಯಾಗಿ ಇರಿಸಲು ಸಾಕಷ್ಟು ಶ್ರಮಪಡುತ್ತವೆ. ಒಮ್ಮೆ ನೀವು ನಾಯಿಯ ಜೊತೆಗೆ ಪಳಗಲು ಅಥವಾ ಅವುಗಳ ಜೊತೆಗೆ ಇರಲು ಆರಂಭಿಸಿದರೆ ಸಾಕು, ನೀವು ಪ್ರೀತಿಯ ಅರ್ಥಕ್ಕೆ ಹೊಸ ವ್ಯಾಖ್ಯಾನವನ್ನು ಬರೆಯಲು ಆರಂಭಿಸುತ್ತೀರಿ.
ಇದನ್ನೂ ಓದಿ : ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!
ನಾಯಿಗಳು ತಮ್ಮ ಯಜಮಾನರಿಂದ ಹೆಚ್ಚಿಗೆ ಏನನ್ನು ಬಯಸುವುದಿಲ್ಲ. ಆದರು ಅವುಗಳು ಅನ್ನ ಹಾಕಿದವನಿಗೆ ಪ್ರಾಮಾಣಿಕವಾಗಿರುತ್ತದೆ. ಪ್ರಪಂಚದಲ್ಲಿ ಮನುಷ್ಯರಿಗೆ ಅತಿ ಹೆಚ್ಚು ಬೆಲೆ ನೀಡುವ ಪ್ರಾಣಿ ಎಂದರೆ ಅದು ನಾಯಿ ಮಾತ್ರ.
ನಾಯಿಗಳಿಗೆ ಒಮ್ಮೆ ಪ್ರೀತಿ ತೋರಿಸಿದರೆ ಸಾಕು, ಅವುಗಳು ಮತ್ತೆ ತಾವಾಗಿಯೇ ಆಪ್ತವಾಗುತ್ತವೆ. ಅವುಗಳಲ್ಲಿ ತನಗೆ ಒಳಿತನ್ನು ಬಯಸುವವರ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ವಿಶೇಷ ಗುಣಗಳಿವೆ. ಹಾಗಾಗಿ ಇತರೆಲ್ಲಾ ಪ್ರಾಣಿಗಳಿಗಿಂತ ನಾಯಿಗಳು ಮನುಷ್ಯನಿಗೆ ಬೇಗ ಹತ್ತರಿವಾಗುತ್ತವೆ.
ಯಾವುದೇ ನಿರೀಕ್ಷೆ ಇಲ್ಲದೆ ತನ್ನವರ ಗಾಗಿ ಎಲ್ಲವನ್ನೂ ಮಾಡುವ ಈ ಶ್ವಾನಕ್ಕೆ ಒಮ್ಮೊಮ್ಮೆ ಎಷ್ಟು ಪ್ರೀತಿ ತೋರಿಸಿದರೂ ಕಮ್ಮಿನೆ ಅಂತ ಅನ್ನಿಸುತ್ತದೆ.
ಸ್ವಲ್ಪ ಪ್ರೀತಿ ತೋರಿಸಿದರೆ ಸಾಕು, ಬೆಟ್ಟದಷ್ಟು ಪ್ರೀತಿ ನೀಡುತ್ತದೆ. ಯಜಮಾನಿಕೆ ಮಾಡಲು ಸಾಧ್ಯ ಎಂದು ತೋರಿದಾಗ ಅವನೂ ಇವನೂ ಇಬ್ಬರೂ ಸಮಾನರು ಎಂದು ಬಿಡುತ್ತೇವೆ. ಒಬ್ಬರು ಮತ್ತೊಬ್ಬರ ಮೇಲೆ ಯಜಮಾನಿಕೆ ಮಾಡಬಾರದೆಂದೇ ಸಮಾನತೆಯನ್ನು ಸಾರುವುದು. ಯಾವತ್ತೂ ನಾಯಿ ತಮ್ಮ ಪ್ರೀತಿಪಾತ್ರರಿಗೆ ಏನಾದರೂ ತೊಂದರೆಯಾದರೇ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಾಪಾಡುವುಕ್ಕೂ ಹಿಂದೆ ಮುಂದೆ ನೋಡಲ್ಲ. ಅದು ನಾಯಿಗಳಿಗೆ ಇರುವ ಕೃತಜ್ಙತ ಗುಣಗಳು.
ಸಂಬಂಧಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಆ ಸಂಬಮಧಗಳಿಗೆ ವಿದೇಯರಾಗಿರುವ ಗುಣ ಮನುಷ್ಯರಿಗಿಂತ ನಾಯಿಗಳಲ್ಲೇ ಹೆಚ್ಚಿದೆ ಎಂದರೇ ತಪ್ಪಿಲ್ಲ.
ಆಕರ್ಷ ಆರಿಗ
ಎಸ್ ಡಿ ಎಮ್ ಕಾಲೇಜು, ಉಜಿರೆ
ಇದನ್ನೂ ಓದಿ : ಕಲಬುರಗಿ: 12 ಅಡಿ ಉದ್ದದ ಬೃಹತ್ ಹೆಬ್ಬಾವು ರಕ್ಷಣೆ ಮಾಡಿದ ಉರಗ ತಜ್ಞ ಪ್ರಶಾಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.