ಮರೆತು ಹೋ(ಗ)ದ ಮೈಸೂರಿನ ಪುಟಗಳನ್ನು ತಿರುವುತ್ತಾ…


Team Udayavani, Apr 25, 2021, 1:21 PM IST

Book Review, College Campus

ಮೈಸೂರು ಎಂಬುದು ಒಂದು ಸೋಜಿಗ ನನಗೆ‌. ಹುಟ್ಟಿದ ಊರು ಅಲ್ಲದಿದ್ದರು, ಬದುಕಿನ ಸಂಭ್ರಮವನ್ನು ಕಲಿಸಿಕೊಟ್ಟ ನೆಲ. ಬುದ್ಧಿ ಬೆಳೆದು, ನಾನು ಬೆಳೆಯುತ್ತಿರುವಾಗಿಂದಲೂ ಈಗಿನವರೆಗೂ ಮೈಸೂರಿಗೆ, ನನ್ನವರ ಮನೆಗೆ ಪ್ರತಿ ವರ್ಷ ಹಾಜರಿಯಿದ್ದದ್ದೆ. ಕಾಲ ಮುಂದೆ ಹೋದ ಹಾಗೆ ಮೈಸೂರು ಅಮ್ಮನ ತವರೂರಾಗಿ, ಅವಳ ಒಡಹುಟ್ಟಿದವರ ನೆಲೆಯಾಯಿತು. ಹಾಗಾಗಿ ಮೈಸೂರಿಗೆ ಪ್ರತಿ ಬಾರಿ ಕಾಲಿಡಲು ಅಜ್ಜಿ ಮನೆ ನೆಪವಾಯಿತು.

ಈ ಊರು ಇಷ್ಟವಾಗುವುದು ಅಲ್ಲಿರುವ ಶಬ್ದದೊಳಗಿನ ನಿಶ್ಯಬ್ದತೆಗೆ, ಜೀವನ ಪ್ರೀತಿಗೆ. ಮೈಸೂರಿನ ಅರಮನೆ, ಕೆ. ಆರ್‌.ಎಸ್ ಕಾರಂಜಿ, ಅಲ್ಲಿನ ಹಬ್ಬ, ಅದರ ಸಂಭ್ರಮ, ತಿಂಡಿಗಳು ಇವೆಲ್ಲವೂ ನನಗೆ ಪ್ರತಿಬಾರಿಯೂ ಹೊಸತಾಗೇ ಕಾಣಿಸುತ್ತದೆ.

ಈ ಸುಂದರ ಮೈಸೂರಿನ ಇತಿಹಾಸದ ಪುಟಗಳನ್ನು ತೆಗೆದಾಗ ಓದಲು ಸಿಗುವ ಅದೆಷ್ಟೋ ಅರಿಯದ ವಿಷಯಗಳಿವೆ  ವಿಸ್ಮಯದ ಸಂಗತಿಗಳಿವೆ. ಇವೆಲ್ಲವನ್ನೂ ತೆರೆದಿಡುವ ಪುಸ್ತಕವೇ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರ ‘ಮರೆತು ಹೋದ ಮೈಸೂರಿನ ಪುಟಗಳು’.

ಓದಿ : ಮೂಲ ಕಸ್ಟಮ್ಸ್‌ ಸುಂಕ-ಆರೋಗ್ಯ ಸೆಸ್‌ ಮನ್ನಾ ಸ್ವಾಗತಾರ್ಹ: ಜೋಶಿ

ಮೈಸೂರು ಮಹಾರಾಜರ ವಂಶಾವಳಿಯಿಂದ ಹಿಡಿದು, ರಾಜನಿಷ್ಠೆಯವರೆಗೆ ಇತಿಹಾಸದ ಸುಮಾರು 50 ಸಂಗತಿಗಳನ್ನು, ವಿಚಾರಗಳನ್ನು ಈ ಪುಸ್ತಕ ತೆರೆದಿಡುತ್ತದೆ.

ಮೈಸೂರಿನ ಗುರುತಾದ ಮೈಸೂರು ಪಾಕ್ ನ ಹುಟ್ಟು, ಜೋರು ಮಳೆಯ ಚಳಿ ಹುಟ್ಟಿಸುವ ಸಮಯದಲ್ಲಿ ನಾಲಿಗೆ ಬಯಸುವ ಹುರುಳಿ ಕಟ್ಟಿನ ಸಾರು ಮಹರಾಜರಿಗೆ ರುಚಿ ಹಿಡಿಸಿದ್ದು, ಮಹಾರಾಜರ ವಂಶಕ್ಕೆ ಶಾಪ ನೀಡಿ ಕಾವೇರಿಯಲ್ಲಿ ವಿಲೀನಳಾದ ಅಲಮೇಲಮ್ಮನ ಕಥೆ, ನಾಲ್ವಡಿ ಕೃಷ್ಣರಾಜರ ಸಂಗೀತ ವಿದ್ವತ್ತ್, ಶಿವಮೊಗ್ಗದ ಮೆಗಾನ್ ಆಸ್ಪತ್ರೆ, ಬೆಂಗಳೂರಿನ ಲಾಲ್ ಬಾಗ್, ಮೈಸೂರಿನ ಜಗನ್ಮೋಹನ ಪ್ಯಾಲೇಸ್ ಹೆಸರುಗಳ ನಾಂದಿಯ ಹಿಂದಿನ ಕಾರಣವನ್ನು ಈ ಕೃತಿ ಎಳೆಎಳೆಯಾಗಿ ತಿಳಿಸುತ್ತದೆ.

ಇವೆಲ್ಲದರ ಜೊತೆಗೆ ವೀಣೆಯ ಬೆಡಗಾದ ಮೈಸೂರಿನ ಸಯ್ಯಾಜಿ ರಾವ್ ರಸ್ತೆ, ಅಲ್ಲಿನ ಅರಮನೆ ಬ್ಯಾಂಡ್ ನ ನಾದ ದಿಲ್ಲಿಯವರೆಗೂ ಕೇಳಿಸಿದ್ದು, ಝಾನ್ಸೀ ರಾಣಿಗೆ ಸಹಾಯ ಹಸ್ತ ಚಾಚಿದ್ದು, ಮೈಸೂರಿನಲ್ಲಿ ಎದ್ದು ನಿಂದಿರುವ ಅಂಚೆ ಬಸಪ್ಪ, ಜೇಮ್ಸ್ ಗೋರ್ಡಾನ್ ಹಾಗೂ ದೊಡ್ಡ – ಚಿಕ್ಕ ಗಡಿಯಾರದ ನಡುವೆ ಇರುವ ಅಪ್ಪ – ಮಗನ ನಂಟು, ಮಹಾರಾಣಿ ಕಾಲೇಜಿನ ಸ್ಥಾಪನೆಗೆ ಕಾರಣರಾದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು, ತಮ್ಮ ತೊಂಭತ್ತರ ಇಳಿ ವಯಸ್ಸಿನಲ್ಲೂ ಸರಳತೆಯನ್ನು ತೋರಿದ ಸರ್.ಎಮ್. ವಿಶ್ವೇಶ್ವರಯ್ಯನವರು ಮತ್ತು ಕೊನೆಯುಸಿರವರೆಗೂ ರಾಜನಿಷ್ಠೆ ಪಾಲಿಸಿದ ನರ್ತಕಿ.

ಇಂತಹದ್ದೇ ಸೋಜಿಗದಿಂದ ಕೂಡಿದ ಮೈಸೂರಿನ ಪುಟಗಳನ್ನು ಈ ಪುಸ್ತಕದಲ್ಲಿ ತೆರೆದಷ್ಟು ಖುಷಿ ಕೊಡುತ್ತದೆ. ಮೈಸೂರೇ ಸುಂದರ ಅದರ ಇತಿಹಾಸವೂ ಅಷ್ಟೇ ವೈಭವಯುತವಾಗಿದೆ.

ವಿಧಾತ್ರಿ ಭಟ್

ಎಸ್.ಡಿ.ಎಮ್. ಕಾಲೇಜು ಉಜಿರೆ.

ಓದಿ : ಕರ್ಫ್ಯೂ ಇದ್ದರೂ ಹುಟ್ಟುಹಬ್ಬ ಆಚರಿಸಿ ಪಟಾಕಿ ಸಿಡಿಸಿದ ಪೊಲೀಸ್ ಮಗ : 14 ಮಂದಿ ಬಂಧನ

ಟಾಪ್ ನ್ಯೂಸ್

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jagadambika-Pal-(JPC)

Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.