ಕರಾವಳಿಯ ಪ್ರಮುಖ ವಾಣಿಜ್ಯ ಕೃಷಿ – ಮಲ್ಲಿಗೆ ಕೃಷಿ
Team Udayavani, Jul 18, 2021, 7:09 PM IST
ಹೂವು ಇವತ್ತು ಅರಳಿ ನಾಳೆ ಬಾಡುತ್ತದಾದರೂ ಅದು ಮಾನವನ ಜೀವನದಲ್ಲಿ ಹುಟ್ಟಿನಿಂದ ಹಿಡಿದು ಸಾವಿನ ನಂತರವೂ ತನ್ನ ಉನ್ನತ ಸ್ಥಾನವನ್ನು ಇಟ್ಟುಕೊಂಡಿದೆ. ಪುಷ್ಪ ಕೃಷಿಯಲ್ಲಿ ಹೆಚ್ಚು ಹೆಸರುವಾಸಿ ಹಾಗೂ ಪ್ರಮುಖ ವಾಣಿಜ್ಯ ಕೃಷಿ ಯಾವುದೆಂದರೆ ಅದುವೇ ಮಲ್ಲಿಗೆ ಕೃಷಿ. ನಮ್ಮ ಕರಾವಳಿ ಪ್ರದೇಶದಲ್ಲಿ ಅದು ನಮ್ಮ ದಕ್ಷಿಣ ಕನ್ನಡದಲ್ಲಿ ಹೆಚ್ಚಿನ ಮಟ್ಟದಲ್ಲಿ ಹೆಸರು ಮಾಡಿರುವಂತಹ ಹಾಗೂ ಸರ್ವರನ್ನು ಆಕರ್ಷಿಸುವಂತಹ ಕೃಷಿಯೆಂದರೆ ಮಲ್ಲಿಗೆ ಕೃಷಿ.ಈ ನಮ್ಮ ಪ್ರದೇಶದಲ್ಲಿ ಪ್ರಚಲಿತವಾಗಿರುವಂತಹದ್ದು ಉಡುಪಿ ಮಲ್ಲಿಗೆ.
ಇದನ್ನೂ ಓದಿ : ಷರತ್ತಿಗೊಳಪಟ್ಟು ನಾಳೆಯಿಂದ ಕಾಸರಗೋಡು ಬಸ್ ಸಂಚಾರ ಆರಂಭ
ಉಡುಪಿ ಮಲ್ಲಿಗೆ ಸಾಧಾರಣವಾಗಿ ಪೊದೆಯಾಕಾರದಲ್ಲಿ ಬೆಳೆದು ಹೆಚ್ಚಿನ ಪರಿಮಳವನ್ನು ಹೊಂದಿರುತ್ತದೆ.. ಹೀಗಾಗಿ ಉಡುಪಿ ಮಲ್ಲಿಗೆಗೆ ಸ್ಥಳೀಯ ಹಾಗೂ ಬೇರೆ ರಾಜ್ಯಗಳ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ, ಹಾಗೂ ಇನ್ನೂ ಹೊರದೇಶದಲ್ಲಿ ಸುಗಂಧದ್ರವ್ಯದ ಉಪಯೋಗಕ್ಕಾಗಿ ಆಮದು ಮಾಡಿಕೊಳ್ಳುತ್ತಾರೆ. ಈ ಮಲ್ಲಿಗೆ ಗಿಡಗಳು ವರ್ಷಾದ್ಯಂತ ಹೂ ಬಿಟ್ಟರು ಅತಿ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಹೂಬಿಡುವ ಪ್ರಮಾಣ ಕಡಿಮೆ. ನಮ್ಮ ಈ ಪ್ರದೇಶದಲ್ಲಿ ಅತಿ ಹೆಚ್ಚು ಮಲ್ಲಿಗೆ ಬೆಳೆಯುವಂತದ್ದು ಶಂಕರಪುರ ಪ್ರದೇಶದಲ್ಲಿ. ಇಲ್ಲಿ ನಾವು ಅತಿ ಹೆಚ್ಚು ಜನರ ಮನೆಯ ವಠಾರದಲ್ಲಿ ಸದಾ ಹಸನ್ಮುಖಿಯಾಗಿ ಇರುವಂತಹ ಮಲ್ಲಿಗೆಯ ಗಿಡಗಳನ್ನು ಕಾಣಬಹುದು.
ಹವಾಗುಣ ಮತ್ತು ಮಣ್ಣು:
ಮಲ್ಲಿಗೆ ಕೃಷಿಗೆ ದಿನಪೂರ್ತಿ ಬಿಸಿಲು ಹಾಗೂ ವಾತಾವರಣದಲ್ಲಿ ತೇವಾಂಶದಿಂದ ಕೂಡಿದ ಹವಾಗುಣ ಅನುಕೂಲ. ನೆರಳು ಇರುವ ಜಾಗದಲ್ಲಿ ಗಿಡ ಚೆನ್ನಾಗಿ ಬೆಳೆದರು ಹೂವಿನ ಇಳುವರಿ ಕಡಿಮೆ. ಮಲ್ಲಿಗೆಯನ್ನು ನೆಡಲು ಚೆನ್ನಾಗಿ ಬಿಸಿಲು ಬೀಳುವ ಹಾಗೂ ಮಳೆಗಾಲದಲ್ಲಿ ನೀರು ನಿಲ್ಲದಂತಹ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ನೀರು ಚೆನ್ನಾಗಿ ಬಸಿದು ಹೋಗುವಂತಹ ಮರಳು ಮಿಶ್ರಿತ ಕೆಂಪು ಮಣ್ಣು ಈ ಬೆಳೆಗೆ ಸೂಕ್ತ. ಉಡುಪಿ ಮಲ್ಲಿಗೆ ಇದು ಪೊದೆಯಾಕಾರದಲ್ಲಿ ಬೆಳೆಯುವ ತಳಿ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶೇ.85 ಪ್ರದೇಶದಲ್ಲಿ ಈ ತಳಿಯನ್ನು ಬೆಳೆಯಲಾಗುತ್ತದೆ.
ನಾಟಿ:
ಕರಾವಳಿ ಪ್ರದೇಶದಲ್ಲಿ ಮಲ್ಲಿಗೆ ಗಿಡಗಳನ್ನು ನಾಟಿ ಮಾಡಲು ಸೂಕ್ತ ಕಾಲ ಆಗಸ್ಟ್ -ಸೆಪ್ಟೆಂಬರ್ ತಿಂಗಳು. ಜೂನ್ ತಿಂಗಳಲ್ಲಿ ಅಧಿಕ ಮಳೆ ಬೀಳುವುದರಿಂದ ಗಿಡಕ್ಕೆ ಹಾನಿಯಾಗುವ ಸಂಭವ ಜಾಸ್ತಿ ಇರುತ್ತದೆ. ಮಲ್ಲಿಗೆ ಗಿಡಗಳನ್ನು ಬೆಳೆಯಲು ಸಾಧಾರಣವಾಗಿ 2×2×2 ಅಗಲ, ಉದ್ದ, ಮತ್ತು ಆಳದ ಹೊಂಡ ಸಾಕಾಗುತ್ತದೆ. ಹೊಂಡದಿಂದ ಹೊಂಡಕ್ಕೆ ಆರರಿಂದ ಎಂಟು ಅಡಿ ಅಂತರವಿರಬೇಕು ಆಗುತ್ತದೆ. ಹೀಗೆ ತೆಗೆದ ಹೊಂಡಗಳನ್ನು ಕನಿಷ್ಠ 20 ದಿನಗಳ ಕಾಲ ಬಿಸಿಲಿಗೆ ಒಣಗಲು ಬಿಡುವುದು ಒಳ್ಳೆಯದು. ನಂತರ ಚೆನ್ನಾಗಿ ಕೊಳೆತ 20 ಕೆ.ಜಿ. ಹಟ್ಟಿ ಗೊಬ್ಬರ ಮತ್ತು ಭೂಮಿಯ ಮೇಲ್ಮಣ್ಣಿನ ಜೊತೆ ಮಿಶ್ರಣ ಮಾಡಿ ಕಹಿಬೇವಿನ ಹಿಂಡಿಯನ್ನು ಸೇರಿಸಿ ಅದರ ಮೇಲೆ 20 ಗ್ರಾಂ ಕಾರ್ಬೋಫ್ಯೂರಾನ್ ಹರಳುಗಳನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಮಧ್ಯಭಾಗದಲ್ಲಿ ಸಣ್ಣ ಗುಳಿ ತೆಗೆದು ಗಿಡಗಳನ್ನು ನೆಡಬೇಕು. ಮಲ್ಲಿಗೆ ಗಿಡಗಳನ್ನು ಸರಿಯಾಗಿ ಬೆಳೆಯಲು ಉತ್ತೇಜಿಸಬೇಕು ಕೊಡೆಯ ಆಕಾರದಲ್ಲಿ ಬೆಳೆಯುವಂತೆ ಮಾಡಬೇಕು. ಏಕೆಂದರೆ ಕೊಡೆಯಾಕಾರದ ಗಿಡದ ಮೇಲೆ ಬಿಸಿಲು ಒಂದೇ ರೀತಿಯಲ್ಲಿ ಸಮನಾಗಿ ಬೀಳುತ್ತದೆ. ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಹಾಗೂ ರೋಗ ಮತ್ತು ಕೀಟಗಳ ಬಾಧೆಯಿಂದ ರಕ್ಷಿಸಿದಂತಾಗುತ್ತದೆ.
ಮಲ್ಲಿಗೆ ಬೆಳೆಯಲ್ಲಿ ಕಂಡುಬರುವ ಮುಖ್ಯ ಕೀಟಗಳು ರೋಗಗಳು-
*ಕೀಟಗಳು
- ನುಸಿ ಮತ್ತು ಬಿಳಿ ನೊಣಗಳು
- ಎಲೆ ತಿನ್ನುವ ಹುಳು, ಬೂಸ್ಟ್ ತಿಗಣೆ, ಮೊಗ್ಗನ್ನು ಕೊರೆಯುವ ಹುಳು
*ರೋಗಗಳು
1 ಎಲೆ ಚುಕ್ಕಿ ರೋಗ
2 ಸೊರಗು ರೋಗ
ಕೊಯ್ಲು ಮತ್ತು ಇಳುವರಿ
ಗಿಡಗಳನ್ನು ನೆಟ್ಟ ವರ್ಷವೇ ಹೂ ಬಿಡಲು ಪ್ರಾರಂಭವಾಗುತ್ತದೆ. ಪ್ರಾರಂಭದ ದಿನಗಳಲ್ಲಿ ಕಡಿಮೆ ಪ್ರಮಾಣದ ಹೂವು ಸಿಗುತ್ತದೆ. ದಿನಕಳೆದಂತೆ ಇಳುವರಿ ಹೆಚ್ಚಾಗುತ್ತದೆ. ನಾಟಿಯ 15 ರಿಂದ 20 ವರ್ಷಗಳವರೆಗೆ ಅತಿ ಹೆಚ್ಚು ಇಳುವರಿಯನ್ನು ಪಡೆಯಬಹುದು.
– ವೆನಿಶಾ ರವೀನಾ ರೋಡ್ರಿಗಸ್
ಇದನ್ನೂ ಓದಿ : ದೇಶದ ಎಲ್ಲಾ ಪೋಸ್ಟ್ ಆಫೀಸ್ ಗಳಲ್ಲಿ ಐಟಿಆರ್ ಫೈಲಿಂಗ್ ಗೆ ಅವಕಾಶ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.