ಬದುಕು ಕ್ಲಿಷ್ಟವೆಂಬಷ್ಟು ಕ್ಲಿಷ್ಟವಲ್ಲ..!


Team Udayavani, Mar 28, 2021, 5:30 PM IST

College Campus Article

ಕಷ್ಟ ಮನುಷ್ಯನಿಗೆ ಬಾರದೆ ಕಲ್ಲಿಗೆ ಬಂದೀತೆ..? ಹಿರಿಯರು ಆಡಿಕೊಳ್ಳುವ ಮಾತಿದು. ಹೌದು, ಕಷ್ಟ ಮನುಷ್ಯನಾದವನಿಗೆ ಯಾರಿಗಿಲ್ಲ ಹೇಳಿ. ಬದುಕು ಬದುಕಿಸಿಕೊಳ್ಳುವಾಗ ಕಷ್ಟುಗಳನ್ನು ದುಃಖಗಳನ್ನು ಎದುರಿಸಲೇ ಬೇಕು. ಈ ಎಲ್ಲಾ ಭಾವನೆಗಳನ್ನು ಎದುರಿಸಿ ಮುನ್ನೆಡೆದಾಗಲೇ ಬದುಕಿಗೊಂದು ಸ್ಪಷ್ಟ ಉತ್ತರ ಸಿಗುತ್ತದೆ.

ಶಿಲ್ಪಿಯ ಉಳಿಯೇಟು ಸಹಿಸಿಕೊಂಡ ಕಲ್ಪು ಶಿಲೆಯಾಗದೇ ಉಳಿಯುವುದೇ..? ಸಹಿಸಿಕೊಳ್ಳುವ ಮನಸ್ಥಿತಿ ಬದುಕಿನಲ್ಲಿ ಬಹಳ  ಮುಖ್ಯ. ಹಾಗಂತ ಸಹಿಸುವಿಕೆಗೆ ಮಿತಿ ಇಲ್ಲ ಅಂತರ್ಥವಲ್ಲ.

ಓದಿ : ಬಣ್ಣದ ಹಬ್ಬಕ್ಕೆ ದಾಸನ ವಿಶ್ : ಹೋಳಿ ಸಡಗರದಲ್ಲಿ ಶಿವಣ್ಣ

ಕಷ್ಟ ಎಂದು ನಾಲ್ಕುಗೋಡೆಯೊಳಗೆ ಬಂಧಿಯಾಗಿ ಗೋಡೆ ನೋಡುತ್ತಾ ಕಣ್ಣೀರು ಸುರಿಸುವುದು, ಯಾರೊಂದಿಗೋ  ದುಃಖವನ್ನು ಅವಲತ್ತುಕೊಳ್ಳುವುದಷ್ಟೇ ಅಲ್ಲ ಬದುಕು. ಅದರಾಚೆಗೂ ಇದೆ. ನಮಗೆ ಬಹಳ ಬಹಳ ಖುಷಿ ಕೊಡುವ, ಹಿತ ಉಣಿಸುವ, ನಮ್ಮೆದೆಗೆ ಕಚಗುಳಿ ಇಡುವ ಲೋಕವೊಂದು ಇದೆ. ಅದನ್ನು ನೋಡುವುದಕ್ಕೆ ಕೋಟಿ ಕೋಟಿ ಸುರಿಯಬೇಕೆಂದಿಲ್ಲ. ಎಡ ಮುಷ್ಟಿ ಗಾತ್ರದ ಮನಸ್ಸಿನ ಒಂದು ಒಳ್ಳೆಯ ನಿರ್ದಾರವಿದ್ದರೆ ಸಾಕು. ಬದುಕು ನಮ್ಮದಾಗುತ್ತದೆ.

ಸುಖ ದುಃಖಗಳು ಮಾನವನ ಪಾಲ್ಪಡೆಯುವ ಸಹಜ ಅನುಭವಗಳು. ಅವು ಒಂದರ ಹಿಂದೆ ಮತ್ತೊಂದು ಬರುತ್ತಲೆ ಇರುತ್ತವೆ. ಕಷ್ಟ ಸುಖಗಳ ಸಮ್ಮಿಲನವೇ ಬದುಕು. ಯಾವುದೂ ಶಾಶ್ವತವಲ್ಲ. ಯಾವುದಕ್ಕೂ ಇಲ್ಲಿ ಶಾಶ್ವತ ಬದುಕಿಲ್ಲ.

ಬಂಗಾರ ಬೆಂಕಿ ನೋಡಿ ಹೆದರದು, ಬದಲಾಗಿ ಅದರಲ್ಲಿ ಬಿಸಿಯಾಗಿ, ಕರಗಿ  ಹೊಳಪು ಹೆಚ್ಚಿಸಿಕೊಳ್ಳುತ್ತದೆ. ಮೌಲ್ಯ ಪಡೆದುಕೊಳ್ಳುತ್ತದೆ.

ರಸ್ತೆ ಮೇಲೆ ನಡೆಯುವಾಗ ನಾಯಿಗಳು ಹಿಂಬಾಲಿಸಿದಾಗ ನೀವು ಓಡಲು ಆರಂಭಿಸಿದರೆ ಅವುಗಳು ನಿಮ್ಮ ಹಿಂದೆ ಬರುತ್ತದೆ. ಆದರೆ ನೀವು ಅವುಗಳನ್ನು ಹೆದರಿಸಿದರೆ ಬೆದರಿ ಓಡಿ ಹೋಗುತ್ತದೆ. ಏನೆ ಆದರೂ ಧೈರ್ಯದಿಂದ ಎದುರಿಸಬೇಕು. ಆಗ ಬಯಸಿದ್ದು, ಸಾಧಿಸಬಹುದು. ಜೀವನವನ್ನು ಖುಷಿಯಾಗಿ ಕಳೆಯಬಹುದು.

ಓದಿ : ಭಾವನಾತ್ಮಕತೆಯ ಬದುಕನ್ನು ತೇಲಿಸಿದ ‘ಹಿನ್ನೀರ ಅಲೆಗಳು’

ಪ್ರತಿಯೊಬ್ಬರ ಬದುಕು ಹೂವಿನ ಹಾಸಿಗೆಯಲ್ಲ, ಅಲೆಗಳಿಲ್ಲದೆ ಸಮುದ್ರವಿಲ್ಲ, ಮುಳ್ಳಿಲ್ಲದ ಗುಲಾಬಿಯಲ್ಲ,ಅದೇ ರೀತಿ ಸಮಸ್ಯೆಗಳಿಲ್ಲದೆ ಬದುಕಿಲ್ಲ ಜೀವನದಲ್ಲಿ ಸುಖ ಸಂತೋಷಗಳು ಮಾತ್ರವಲ್ಲ ದುಃಖ ಕಷ್ಟಗಳನ್ನು ಸಹಿತ ಆನಂದದಿಂದ ಸಹಿಸುವುದನ್ನು, ಭರಿಸುವುದನ್ನು ಕಲಿತುಕೊಳ್ಳಬೇಕು. ಬದುಕು ಬಂದ ಹಾಗೆ ಸ್ವಿಕರಿಸುವುದನ್ನು ಕಲಿತುಕೊಂಡಾಗ ಬದುಕು ಬದುಕೆನ್ನಿಸಿಕೊಳ್ಳುತ್ತದೆ.

ಕತ್ತಲು ಶಾಶ್ವತವಲ್ಲ ಬೆಳಕು ಬಂದೇ ಬರುತ್ತದೆ. ಕಷ್ಟದಲ್ಲಿ ಸುಖವಿದೆ. ಕಷ್ಟವಿಲ್ಲದೆ ಲಾಭಗಳಿಲ್ಲ.

ಕಲ್ಲು ವರ್ಷಾನುಗಟ್ಟಲೆ ನೀರಿನಲ್ಲಿದ್ದರೂ ಸಹಿತ ಅದು ಮೆತ್ತಗೆ ಆಗುವುದೇ ಇಲ್ಲ, ಅದೇ ರೀತಿ ಕಷ್ಟಗಳೆಷ್ಟೆ ಬಂದರೂ ಸಹಿತ ಎದುರಿಸಿ ನಿಲ್ಲುವ ಧಯರ್ಯ ಮಾಡುವವರಿಗೆ ಯಾವ ತೊಮದರೆಯೂ ಆಗುವುದಿಲ್ಲ. ಬದುಕಿಗೆ ಧೈರ್ಯವೊಂದೆ ಮುಖ್ಯ ಸಾಧನ.

ಯಾರು ಕಷ್ಟ-ಸುಖ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುತ್ತಾರೋ ಅವರೇ ಸ್ಥಿತ ಪ್ರಜ್ಞರು.  ಬದುಕೆಂದರೆ ಕಲಿಯುವುದರ ಬದಲಾವಣೆ ಮಾಡಿಕೊಳ್ಳುವುದು. ನಾವು ಈ ಪ್ರಪಂಚವನ್ನು ಸ್ವರ್ಗವನ್ನಾಗಲಿ ನರಕವನ್ನಾಗಲಿ ಮಾಡಿಕೊಳ್ಳಬಹುದು. ಒಂದು ವೇಳೆ ಬದುಕು ಮುಳ್ಳಿನ ಹಾದಿ ಆದರೂ ಸಹಿತ ಸಹನೆಯಿಂದ ಸಾಗಿದರೆ ಅದು ಹೂವಿನ ಹಾದಿ ಆಗುತ್ತದೆ. ಎಲ್ಲವೂ ನಮ್ಮ ಕೈಯಲ್ಲೇ ಇವೆ. ಬದುಕು ಹೇಳಿದಷ್ಟು ಸುಲಭವೂ ಅಲ್ಲ. ಕ್ಲಿಷ್ಟ ಎಂಬಷ್ಟು ಕ್ಲಿಷ್ಟವೂ ಅಲ್ಲ.

ಪ್ರಥ್ವಿನಿ ಡಿಸೋಜ

ಆಳ್ವಾಸ್ ಕಾಲೇಜು, ಮೂಡುಬಿದಿರೆ

ಓದಿ : ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಸೇವನೆ ವಿರುದ್ಧ ಕ್ರಮ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

Sanathan Dharma Bhojan Vidhi Also has scientific reason

ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.