ವಿಭಿನ್ನ ಶೈಲಿಯ ಕಥಾ ಹಂದರವನ್ನು ಹೊಂದಿರುವ ಸಿನೆಮಾ ‘ಜೋಜಿ’
Team Udayavani, Apr 11, 2021, 10:58 AM IST
ಮಲಯಾಳಂ ಚಲನ ಚಿತ್ರಗಳೇ ಹಾಗೆ, ವಿಶೇಷಗಳ ಸಂಕಲನ. ವಿಭಿನ್ನ ರೀತಿಯ ಕಥೆ ಹಾಗೂ ಸರಳ ಸಂಭಾಷಣೆ, ಸಾಹಿತ್ಯ ಅಲ್ಲಿನ ಜನರ ಅಭಿರುಚಿಗೆ ಬೇಕಾದ ಹಾಗೆ ಇರುತ್ತದೆ. ಈ ಕೋವಿಡ್ ಸಂಕಷ್ಟದ ಸಮಯದಲ್ಲಿ ಬಹಳಷ್ಟು ಮಲಯಾಳಂ ಚಲನ ಚಿತ್ರಗಳು ಕೇರಳದ ಸುತ್ತ ಮುತ್ತ ಚಿತ್ರೀಕರಣ ಪೂರ್ತಿಗೊಳಿಸಿ ವಿವಿಧ ಓ ಟಿ ಟಿ ಪ್ಲಾಟ್ ಫಾರ್ಮ ಗಳಲ್ಲಿ ಬಿಡುಗಡೆ ಕಂಡಿದ್ದವು . ಅಚ್ಚರಿಯ ಸಂಗತಿಯೆಂದರೆ ಬಹುತೇಕ ಎಲ್ಲಾ ಸಿನೆಮಾಗಳೂ ಹಿಟ್ ಆಗಿವೆ.
ಈ ಸಾಲಿಗೆ ಹೊಸ ಸೇರ್ಪಡೆ ಏಪ್ರಿಲ್ 7 ರಂದು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆಗೊಂಡ ದಿಲೀಶ ಪೋತ್ತನ್ ನಿರ್ದೇಶನದ ಜೋಜಿ ಸಿನೆಮಾ.
ಈ ಚಿತ್ರವು ನಾಟಕ ರಂಗದ ದೈತ್ಯ ವಿಲಿಯಂ ಷೇಕ್ಸ್ ಪಿಯರ್ ನ ಮ್ಯಾಕ್ಬೆತ್ ನಾಟಕವನ್ನು ಆಧಾರಿಸಿಕೊಂಡು ತೆರೆಕಂಡ ಚಿತ್ರ. ಹಾಸ್ಯ, ನಾಟಕ, ಮನರಂಜನೆ ಹಾಗೂ ಕ್ರೈಂ ವಿಷಯಗಳ ಸುತ್ತ ಹೆಣೆದುಕೊಂಡಿರುವ ಚಿತ್ರ ಎಲ್ಲಾ ತರಹದ ಪ್ರೇಕ್ಷಕ ವರ್ಗದವರಿಗೆ ಇಷ್ಟವಾಗುತ್ತದೆ ಎನ್ನುವುದರಲ್ಲಿ ಅನುಮಾನ ಬೇಕಾಗಿಲ್ಲ.
ಓದಿ : ಮೊದಲ ಪಂದ್ಯ ಸೋತ ಧೋನಿಗೆ ಮತ್ತೊಂದು ಆಘಾತ: 12 ಲಕ್ಷ ರೂ. ದಂಡ!
ನಾಯಕ ಪ್ರಧಾನ ಚಿತ್ರ ಇದಾಗಿದ್ದು, ಫಹದ್ ಫಾಸಿಲ್ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈಗಾಗಲೇ ಮಹೇಶಿಂದೆ ಪ್ರತೀಕಾರ, ಕುಂಬಳಂಗಿ ನೈಟ್ ಮೂಲಕ ತಮ್ಮ ನೈಜ ಅಭಿನಯ ತೋರಿಸಿ ಕೊಟ್ಟಿರುವ ಇವರು, ಈ ಚಿತ್ರದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಇನ್ನು, ಕಥೆ ಹಾಗೂ ಸಂಭಾಷಣೆ ಬಗ್ಗೆ ಎರಡನೇ ಮಾತಿಲ್ಲ. ಚಿತ್ರದಲ್ಲಿ ಆಗಾಗ ಕಾಣಿಸಿಕೊಳ್ಳುವ ಹಾಸ್ಯ, ಚಿತ್ರ ಎಲ್ಲೂ ಬೋರ್ ಆಗದಂತೆ ನೋಡಿಕೊಳ್ಳುತ್ತದೆ.
ಒಬ್ಬ ತಂದೆ ಹಾಗೂ 3 ಮಕ್ಕಳ ಕಥೆ ಇದಾಗಿದ್ದು, ಕಿರಿಯ ಮಗ ಜೋಜಿ ವಿಚಿತ್ರ ಸ್ವಭಾವ ಹೊಂದಿರುತ್ತಾರೆ. ಯಾವುದೇ ಕೆಲಸ ಇಲ್ಲದೆ, ದಿನ ಪೂರ್ತಿ ತನ್ನ ಕೋಣೆಯಲ್ಲಿ ಸಮಯ ವ್ಯರ್ಥ ಮಾಡುವ ಈತ ಮುಂದೆ ಮಾಡುವ ಒಂದೊಂದು ಕೆಲಸವೂ ವೀಕ್ಷಕರಿಗೆ ಅಚ್ಚರಿ ಹುಟ್ಟಿಸುತ್ತದೆ. ನಾಯಕ ಫಹದ್ ಎಂದಿನಂತೆ ಸರಳವಾಗಿ, ಆದರೆ ನೈಜವಾಗಿ ಅಭಿನಯಿಸಿದ್ದಾರೆ.
ಇಂದಿನ ಸಮಾಜದಲ್ಲಿ ಸಾಮಾನ್ಯವಾಗಿರುವ ತಂದೆ-ಮಕ್ಕಳ ಬಾಂಧವ್ಯದ ಜೊತೆ ಜೊತೆಗೆ ಆಸ್ತಿಯ ವ್ಯಾಮೋಹ, ಹುಚ್ಚು ಈ ಚಲನ ಚಿತ್ರದಲ್ಲಿ ಸಮಾಜವನ್ನು ದರ್ಶಿಸುವಂತೆ ನಿರ್ದೇಶಕರು ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಮೊದಲರ್ಧ ಕೊಂಚ ನಿಧಾನವಾಗಿ ಸಾಗುವ ಚಿತ್ರ, ಮಧ್ಯದಲ್ಲಿ ತಿರುವು ಪಡೆದು ಕೊಳ್ಳುತ್ತದೆ . ಒಟ್ಟು 1.53 ಗಂಟೆಯ ಚಿತ್ರದ ಪ್ರತಿಯೊಂದು ಸನ್ನಿವೇಶ ಕೂಡ ವಿಶೇಷ ಹಾಗೂ ವಿಶಿಷ್ಟ ಆಗಿದೆ.
ಇನ್ನೊಂದು ವಿಶೇಷ ಎಂದರೆ ಈ ಚಿತ್ರ ಪೂರ್ತಿ ಲಾಕ್ ಡೌನ್ ನಲ್ಲಿ ಚಿತ್ರೀಕರಣ ಪೂರ್ತಿಗೊಳಿಸಿ ದ್ದು, ಯಾವುದೇ ರೀತಿಯ ಅತಿರೇಕ ಅನ್ನಿಸುವಂತಹ ದೃಶ್ಯಗಳಿಲ್ಲ. ಹಾಗಾಗಿ ಈ ಚಿತ್ರವನ್ನು ಕುಟುಂಬ ಸಮೇತ ಕೂತು ನೋಡಿ ಆನಂದಿಸಲು ಯೋಗ್ಯವಾಗಿದೆ ಎಂದು ಹೇಳಬಹುದು.
ಓದಿ : ‘ಸಿದ್ದ ಹಂಡಿ ಬಡಗನಾಥ’ ಮಠಕ್ಕೆ ಬೇಕು ಕಾಯಕಲ್ಪ
ಕ್ರೈಂ ಹಾಗೂ ಥ್ರಿಲ್ಲರ್ ಚಿತ್ರ ಇಷ್ಟ ಪಡುವ ಎಲ್ಲರೂ ನೋಡಬೇಕಾದ ಸಿನೆಮಾ. ಸ್ಕ್ರಿಪ್ಟ್, ಡೈಲಾಗ್, ಹಿನ್ನೆಲೆ ಧ್ವನಿ ಹೀಗೆ ಎಲ್ಲದರಲ್ಲೂ ನಿರ್ದೇಶಕರು ಪ್ರೇಕ್ಷಕರಿಗೆ ದಿ ಬೆಸ್ಟ್ ನೀಡಿದ್ದಾರೆ.
ತೇಜಸ್ವಿನಿ ಆರ್. ಕೆ
ಎಸ್ ಡಿ ಎಂ ಕಾಲೇಜು, ಉಜಿರೆ
ಓದಿ : ನೀವು ಹಣ ವರ್ಗಾಯಿಸುತ್ತಿರುವ ಯುಪಿಐ ವ್ಯವಸ್ಥೆಯ ಬಗ್ಗೆ ನಿಮಗೆಷ್ಟು ಗೊತ್ತು.? ಈ ಲೇಖನ ಓದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.