ನಾನು ವೆಜ್, ನಾನ್ ವೆಜ್..!
Team Udayavani, Mar 12, 2021, 4:53 PM IST
ನಾನೊಬ್ಬಳು ಪ್ಯೂರ್ ವೆಜ್ ಪಾರ್ಟಿ ಅಂದ ಕೂಡಲೇ ನೀವು ಮೊಟ್ಟೆ ತಿನ್ನುದಿಲ್ವಾ? ಎಂಬ ಪ್ರಶ್ನೆ ಬರ್ತದೆ. ಅಯ್ಯೋ ಮೊಟ್ಟೆ ವೆಜ್ ಮಾರ್ರೆ ಅದನ್ನು ತಿನ್ನಿ ಅಂತ ಸಜೆಶನ್ ಕೊಡುವ ಕೆಲವರು, ಆ ವೆಜ್ ಊಟದಲ್ಲಿ ಎಂತ ಇರ್ತದೆ ಒಮ್ಮೆ ಮಾಂಸದೂಟ ಮಾಡಿ ನೋಡಿ ಆಮೇಲೆ ಬೇಡ ಅಂದ್ರು ಬಿಡುದಿಲ್ಲ ಅಂತ ಹೇಳುವವರು ಮತ್ತೆ ಒಂದಷ್ಟು ಜನ ನಮ್ಮ ನಡುವೆ ಇರ್ತಾರೆ.
ವೆಜ್ ಆಗ್ಲಿ ನಾನ್ವೆಜ್ ಆಗ್ಲಿ ಹೊಟ್ಟೆ ಪೂಜೆ ಅಷ್ಟೇ ಮೈನ್ ಇಂಟೆನ್ಶನ್. ಹೀಗಿರುವಾಗ ಇನ್ನು ಕೆಲವರಿಗೆ ನಾನು ಈ ಜನ್ಮದಲ್ಲಿ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದೇನೆ ಹಾಗಾಗಿ ವೆಜ್ ನ್ನೇ ಪಾಲಿಸುತ್ತೇನೆ ಎಂದು ಹೇಳುವುದುಂಟು.
ಓದಿ : ಕೆಲವೊಂದು ಸನ್ನಿವೇಶಗಳು ಆಯಾಸವಾದರೂ ಸಂತಸವ ಹೊತ್ತು ತರುತ್ತವೆ…
ಇನ್ನು, ನನ್ನ ಹಲವು ನಾನ್ವೆಜ್ ಅಂದ್ರೆ ಜೊಲ್ಲು ಕಾಲಿಗಿಳಿಸಿಕೊಳ್ಳುವ ನಾನ್ವೆಜ್ ಪ್ರಿಯ ಗೆಳೆಯರೆಲ್ಲ ಕೇಳುವುದುಂಟು ವೆಜ್ ಅಲ್ಲಿ ಏನ್ ವೆರೈಟಿ ಸಿಗುತ್ತೆ..? ಆದರೆ ಅವರಿಗೆ ಬಹುಶಃ ತಿಳಿದಿಲ್ಲ ಸಸ್ಯಾಹಾರಿಗಳು ಅದರಲ್ಲೂ ಬ್ರಾಹ್ಮಣರ ಮನೆಯಲ್ಲಿ ಮಾಡದ ಸೊಪ್ಪಿಲ್ಲ. ತಿನ್ನದೇ ಇರುವ ಬಳ್ಳಿಗಳೂ ವಿರಳ. ಹಾಗಂದಾದಲ್ಲಿ, ನಾವು ದನ ಆಡುಗಳಂತೂ ಖಂಡಿತಾ ಅಲ್ಲ. ದೇಹಕ್ಕೆ ತಂಪಾಗಿರುವ ಉಷ್ಣ ಶೀತಗಳನ್ನು ಬ್ಯಾಲೆನ್ಸ್ ಮಾಡುವ ಋತುಗಳಿಗೆ ತಕ್ಕ ಆಹಾರ ವ್ಯವಸ್ಥೆ ನಮ್ಮದು. ಬಗೆ ಬಗೆಗೆ, ಬಗೆ ಬಗೆಯಾಗಿ ಹೇಳುವಷ್ಟಿದೆ.
(ಸಾಂದರ್ಭಿಕ ಚಿತ್ರ)
ಊಟಕ್ಕೇನು ಇಲ್ಲವೆಂದಾಗ ತಂಬುಳಿ ಊಟಕ್ಕೂ ನಾವು ರೆಡಿ. ತಂಬುಳಿ ಎಂದರೆ ಆಹಾರಕ್ಕೆ ಬಳಸುವ ಎಲೆ, ಸೊಪ್ಪು ಅಥವಾ ಕಾಳುಗಳನ್ನು ಜೀರಿಗೆ ಅಥವಾ ಒಣಮೆಣಸಿನ ಜೊತೆಗೆ ಹುರಿದು ಒಂದು ಸ್ವಲ್ಪ ತೆಂಗಿನಕಾಯಿ ಸೇರಿಸಿ ಅರೆದು ಮಜ್ಜಿಗೆ ಸೇರಿಸಿದ ಒಂದು ಬಗೆ. ತಂಬುಳಿ ತಿನ್ನಲೂ ರುಚಿ, ದೇಹಕ್ಕೂ ತಂಪು. ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ವೆರೈಟಿ ವೆಜ್ ಅಡುಗೆಯನ್ನು ಸವಿಯಬಹುದು. ಬಾಳೆಎಳೆಯಲ್ಲಿ ಇಂತಿಂತ ಭಕ್ಷ್ಯಗಳು ಅಲ್ಲಲ್ಲೇ ಹಾಕಿಕೊಳ್ಳಬೇಕೆಂಬ ರೂಢಿಯು ಇದೆ. ಎಲೆಯ ತುದಿಯಲ್ಲಿ ಬಡಿಸಿದ ಸ್ವಲ್ಪ ಪಾಯಸ ತಿಂದು ಊಟ ಆರಂಭವಾಗುತ್ತದೆ. ಅನ್ನದ ಮೇಲೆ ತುಪ್ಪ ಹಾಕಿ ಎರಡು ಬಗೆಯ ಪಲ್ಯದಲ್ಲಿ ಉಂಡ ಬಳಿಕ ತಂಬುಳಿ ನಂತರ ತೋವೆ ಅದರ ಹಿಂದೆಯೇ ಕಟಕ್ ಸಾರು ಬರುತ್ತದೆ. ಆ ಸಾರಿನ ಘಮ…
ಓದಿ : ಬದುಕು, ಕೊರಗಿಗಷ್ಟೇ ಮೀಸಲಿಟ್ಟ ಕತ್ತಲೆ ಕೋಣೆಯಲ್ಲ..!
ಜೊತೆ ಜೊತೆಯಲ್ಲಿ ಅನ್ನವೂ ಬರುತ್ತದೆ. ಸಾರಿನ ನಂತರ ಅನನಾಸು, ಮಾವು ಮುಂತಾದ ಹಣ್ಣುಗಳಿಂದ ಮಾಡುವ ಸಿಹಿ ಖಾರ ಮಿಶ್ರಿತ ಮೆಣಸ್ಕಾಯಿ ರೆಡಿ. ಅದಾದ ಮೇಲೆ ವಿವಿಧ ತರಕಾರಿಗಳ ಸಾಂಬಾರಿನ ಆಗಮನ. ಇಷ್ಟೆಲ್ಲ ತಿಂದು ಖಾರ ಖಾರ ಎಂದೆನಿಸುವಾಗ ವಿವಿಧ ಬಗೆಯ ಸ್ವೀಟ್ ಗಳು, ಪಾಯಸ, ಹೋಳಿಗೆ, ಲಾಡು, ಜಿಲೇಬಿ ಮುಂತಾದವು. ಅದರ ಜೊತೆಗೆ ಖಾರ ಬೂನ್ದಿ, ಮೆಣಸಿನ ಪೋಡಿ, ಚಟ್ಟಂಬಡೆ ಮುಂತಾದ ಖಾರ ಖಾದ್ಯಗಳು ಇರುತ್ತವೆ. ಕೆಲವು ಕಡೆಗಳಲ್ಲಿ ಪೂರಿ, ಗೀ ರೈಸ್, ಚಪಾತಿ, ಕೂರ್ಮ, ಗಸಿ, ಪುಲಾವ್ ಕೂಡ ಇರುತ್ತದೆ. ಇದೆಲ್ಲ ಹೊಟ್ಟೆಯೊಳಗೆ ಇಳಿಸಿದ ಕೂಡಲೇ ಕಾಯಿಹುಳಿಯ ಸರದಿ.
ಬ್ರಾಹ್ಮಣರಿಗೆ ಪ್ರಿಯವಾದ ಪದಾರ್ಥವೆಂದರೆ ಕಾಯಿಹುಳಿ ಅರ್ಥಾತ್ ಮಜ್ಜಿಗೆಹುಳಿ. ಇದಕ್ಕೆ ಏನೋ ಕೆಲವರು ಪುಳ್ಚರ್ ಎಂದು ಗೋಳು ಹೋಯ್ದುಕೊಳ್ಳುತ್ತಾರೆ.
ಇಷ್ಟೆಲ್ಲಾ ಬಗ್ಗೆ ಬಗೆಯ ಅಉಗೆಗಳು ಎಲೆಯನ್ನಪ್ಪಿ, ಆಮೇಲೆ ನನ್ನನ್ನಪ್ಪಿ ಹೊಟ್ಟೆ ಧಿಮ್ಮೆನಿಸಿದಾಗ ಒಂದು ಸ್ವಲ್ಪ ಮಜ್ಜಿಗೆಯಲ್ಲಿ ಉಣ್ಣದಿದ್ದರೆ ನಮ್ಮ ಊಟ ಸಂಪೂರ್ಣವಾಗುವುದೇ ಇಲ್ಲ. ದರ್ ಬುರ್ ಎಂದು ಮಜ್ಜಿಗೆಯನ್ನ ತಿಂದು ಕೈತೊಳೆದರೆ ಹೊಟ್ಟೆ ಪೂಜೆಗೆ ಪೂರ್ಣ ಫಲ ಸಿಗುವುದು ಗ್ಯಾರಂಟಿ.
ಸಸ್ಯಾಹಾರ ಮಾತ್ರವೇ ತಿನ್ನಬೇಕೆಂಬುವುದು ನನ್ನ ವಾದವಲ್ಲ. ನಾ ನೋಡಿದಂತೆ ಸಸ್ಯಾಹಾರ ಸಾತ್ವಿಕ ಗುಣಗಳನ್ನು ಬೆಳೆಸುತ್ತದೆ. ಆರೋಗ್ಯವೂ ಸುಸ್ಥಿತಿಯಲ್ಲಿರುತ್ತದೆ. ಪ್ರಕೃತಿ ದತ್ತವಾದ ಆಹಾರಗಳಿಂದ ದೇಹದಲ್ಲಿ ಉಷ್ಣ ಶೀತಗಳನ್ನು ಕ್ರಮವಾಗಿ ಬ್ಯಾಲೆನ್ಸ್ ಮಾಡಬಹುದು. ಕಾಲಕ್ಕೆ ತಕ್ಕಂತ ಸಾಂಪ್ರಾದಾಯಿಕ ಅಡುಗೆಗಳು ಸಸ್ಯಾಹಾರದಲ್ಲಿ ಸಾಕಷ್ಟಿವೆ. ಆರೋಗ್ಯವಾಗಿರಲು, ಹೃದಯ ಸ್ವಾಸ್ಥ್ಯಕ್ಕೆ, ಶಕ್ತಿಯುತವಾಗಿರಲು, ನಮ್ಮ ಮನಸ್ಸು, ದೇಹ ಸಮತೋಲನದಲ್ಲಿಟ್ಟುಕೊಳ್ಳಲು ದಿ ಬೆಸ್ಟ್ ಸಸ್ಯಹಾರ.
ದುರ್ಗಾ ಭಟ್ ಕೆದುಕೋಡಿ
ಆಳ್ವಾಸ್ ಕಾಲೇಜು, ಮೂಡುಬಿದಿರೆ
ಓದಿ : ತೆರಿಗೆ ಪಡೆದ ಇಲಾಖೆಗಳು ಕಲ್ಪಿಸಿದ ಸೌಲಭ್ಯದ ಪರಿಶೀಲನೆ ಆಗಲಿ : ಶೆಟ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.