Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….
Team Udayavani, Jul 14, 2024, 3:08 PM IST
ಪ್ರಕೃತಿಯ ಮಡಿಲಿನಲ್ಲಿ ಅದೆಷ್ಟೋ ಪ್ರವಾಸಿ ತಾಣಗಳಿವೆ. ಕೆಲವೊಂದು ಚಾರಣ ತಾಣಗಳು ಇನ್ನಷ್ಟು ಪ್ರವಾಸಿಗರನ್ನು ಗಮನ ಸೆಳೆಯುತ್ತವೆ. ಹೌದು ಪುಣ್ಯಕ್ಷೇತ್ರವೆಂದೇ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಬಳಿ ಪುಷ್ಪಗಿರಿ ಎಂದು ಕರೆಯಲ್ಪಡುವ ಕುಮಾರ ಪರ್ವತ ಚಾರಣಕ್ಕೆ ಸೂಕ್ತವಾದ ಸ್ಥಳವಾಗಿದೆ ಹಾಗೆ ಹೆಸರುವಾಸಿಯಾದ ಪ್ರವಾಸಿ ತಾಣವಾಗಿದೆ.
ನಾನು ಹಲವಾರು ಕಡೆ ಚಾರಣ ಕೈಗೊಂಡಿದ್ದೇನೆ ಹಾಗೆಯೇ ಅದರ ಅನುಭವ ಪಡೆದಿದ್ದೇನೆ. ಆದರೆ ಕೊನೆತನಕ ಮನಸ್ಸಿನಲ್ಲಿ ಮಾಸಿ ಹೋಗಲಾರದಂತಹ ಚಾರಣವೆಂದರೆ ಅದು ಕುಮಾರ ಪರ್ವತ ಚಾರಣ. ಕರ್ನಾಟಕದ ಅತಿ ಎತ್ತರದ ಹಾಗೂ ಸವಾಲಿನ ಪರ್ವತದಲ್ಲಿ ಕುಮಾರ ಪರ್ವತ ಚಾರಣವೂ ಒಂದು ಇಂತಹ ಕಠಿಣವಾದ ಚಾರಣವನ್ನು ಕೈಗೊಂಡು ಏರಿರುವುದು ನನಗಿನ್ನು ವಿಸ್ಮಯವೆನಿಸುತ್ತದೆ.
ಹೀಗೊಂದು ದಿನ ಕೆಲ ಸಂಬಂಧಿಕರು ಸೇರಿ ಕುಮಾರ ಪರ್ವತ ಚಾರಣಕ್ಕೆ ಹೋಗಲು ಸಿದ್ದರಾದೆವು. ಅಷ್ಟು ದೀರ್ಘವಾದ ಚಾರಣದ ಅನುಭವವಂತು ನನಗಿರಲಿಲ್ಲ. ಅನುಮಾನದಿಂದಲೇ ಚಾರಣವನ್ನು ಪ್ರಾರಂಭಿಸಿದೆವು. ಒಂದೊಂದೇ ಹೆಜ್ಜೆ ಹಾಕುತ್ತಾ ಸುತ್ತಲಿನ ಹಚ್ಚ ಹಸಿರಿನಿಂದ ಕೂಡಿದ ಸುತ್ತಲಿನ ಪರಿಸರವನ್ನು ಕಣ್ತುಂಬಿಕೊಂಡು ಅಲ್ಲೊಂದು ಇಲ್ಲೊಂದು ಸಿಕ್ಕ ಜಿಗಣೆಗಳಿಂದ ತಪ್ಪಿಸಿಕೊಂಡು ಭಯಂಕರವಾದ ಕಠಿಣಕರ ದಾರಿಯನ್ನು ಹಾದು ಹೋಗಿ ಸುಮಾರು 7ಕಿ.ಮೀ ದೂರದ ಗಿರಿಗದ್ದೆ ಎನ್ನುವಂತ ಪ್ರದೇಶವನ್ನು ತಲುಪಿದ್ದು ನಮ್ಮ ಅರಿವಿಗೆ ಬಂದಿರಲಿಲ್ಲ. ನಂತರ ನಾವು ಹೋಗಿರುವ 9 ಮಂದಿ ರಾತ್ರಿ ಟೆಂಟ್ ನ ಮೂಲಕ ಉಳಿದುಕೊಂಡೆವು.
ಮರುದಿನ ಪುನಃ ಬೇಗನೆ ಚಾರಣ ಆರಂಭ ಮಾಡಿದೆವು. ಈ ಹಿಂದೆ ದಟ್ಟ ಅರಣ್ಯದ ಮಧ್ಯೆಯಿಂದ ಕಲ್ಲಿನ ಸಾಹಸದ ದಾರಿ ದಾಟಿದ ನಮಗೆ ನಂತರ ಕಂಡಿದ್ದು ಹಚ್ಚಹಸಿರಿನಿಂದ ಕೂಡಿದ ಹುಲ್ಲುಗಾವಲಿನ ನಡುವೆಯ ದಾರಿ. ಸುತ್ತಲೂ ಸ್ವರ್ಗಮಯವಾದಂತಹ ಪ್ರಕೃತಿಯ ಸುಂದರ ನೋಟ ಇಂಪಾಗಿ ಕೇಳುವ ಪಕ್ಷಿಗಳ ಚಿಲಿಪಿಲಿ ಕಲರವ. ಪ್ರಕೃತಿಯನ್ನು ಬೆಚ್ಚಗೆ ಹೊದ್ದುಕೊಂಡಿರುವ ಮಂಜಿನ ಹನಿಗಳು ಇವೆಲ್ಲವನ್ನು ಸವಿಯುತ್ತಾ ಅಲ್ಲಲ್ಲಿ ಕೆಲವೊಮ್ಮೆ ವಿಶ್ರಾಂತಿ ಪಡೆದು ಒಂದೊಂದೇ ಬೆಟ್ಟವನ್ನು ಹತ್ತಲಾರಂಬಿಸಿದೆವು. ನಮಗೆ ಆಶ್ಚರ್ಯವಾಗುವಂತೆ ಮುಂದೆ ಸಾಗಲು ಪ್ರಾರಂಭಿಸಿದೆವು.
ಹೇಗೂ ಕೊನೆಗೆ ಸವಾಲೆನಿಸಿದ ಪರ್ವತದ ಕೊನೆಯ ಘಟ್ಟವನ್ನು ತಲುಪುತ್ತಿದ್ದಂತೆ ಎಲ್ಲಿಲ್ಲದ ತಂಪಾದ ಗಾಳಿ ನಮ್ಮೆಡೆಗಿ ಬೀಸಿ ನಮ್ಮ ದಣಿವನ್ನು ನೀಗಿಸಿದಂತಾಯಿತು. ಕೊನೆಗೂ ತುತ್ತ ತುದಿಯಿಂದ ಪ್ರಕೃತಿ ನೋಟವನ್ನು ಕಣ್ತುಂಬಿಕೊಳ್ಳುವ ಮಜವೇ ಬೇರೆಯಾಗಿತ್ತು. ಆ ಅನುಭವ ಇನ್ನು ನನ್ನಮನಸಿನಲ್ಲಿ ಅಚ್ಚು ಹೊಡೆದಂತಿದೆ.
ಇದಂತ್ತು ನನ್ನ ಜೀವನದಲ್ಲಿ ಹೊಸ ಅನುಭವವನ್ನು ಕೊಟ್ಟ ಚಾರಣ ಹಾಗೂ ಇನ್ನಷ್ಟು ಹುರುಪನ್ನು ನೀಡಿದ ವಿಶೇಷವಾದ ಚಾರಣವೆಂದರೆ ತಪ್ಪಾಗಲಾರದು.
ಚರಿಷ್ಮ ಕಾನವು
ಎಸ್.ಡಿ.ಎಂ ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.