ಸಣ್ಣ ಮತ್ತು ಮಧ್ಯಮ ಉದ್ದಿಮೆಗೆ ಅನುಕೂಲ ಸಕಾಲಿಕ ಜಿಎಸ್‌ಟಿ ಸುಧಾರಣೆ


Team Udayavani, Oct 9, 2017, 1:03 PM IST

09-21.jpg

ಪ್ರಧಾನಿ ನರೇಂದ್ರ ಮೋದಿ ಅವಧಿಗಿಂತ ಮುಂಚಿತವಾಗಿ ಬಂದ ದೀಪಾವಳಿ ಹಬ್ಬ ಎಂದು ಬಣ್ಣಿಸಿರುವ ಜಿಎಸ್‌ಟಿ ಸುಧಾರಣೆ ಕುಸಿಯುತ್ತಿರುವ ಆರ್ಥಿಕತೆ ಮೇಲೆತ್ತಲು ತುಸು ಸಹಕಾರಿಯಾಗುವ ನಿರೀಕ್ಷೆಯಿಟ್ಟುಕೊಳ್ಳಲಾಗಿದೆ. ಕಳೆದ ವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ 27 ವಸ್ತುಗಳು ಮತ್ತು ಸೇವೆಗಳ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಇದರಲ್ಲಿ ಡೀಸೆಲ್‌ ಎಂಜಿನ್‌     ಬಿಡಿ ಭಾಗಗಳು, ಬ್ರ್ಯಾಂಡ್‌ ರಹಿತ ಆಯುರ್ವೇದ ಔಷಧ, ಬ್ರ್ಯಾಂಡ್‌ ರಹಿತ ಕುರುಕಲು ತಿಂಡಿಗಳು ಮತ್ತು ಎಸಿ ರಹಿತ ಹೊಟೇಲ್‌ ಊಟ ಸೇರಿವೆ. 1.5 ಕೋ. ರೂ. ತನಕ ವಹಿವಾಟು ನಡೆಸುವ ಉದ್ಯಮಗಳು ಪ್ರತಿ ತಿಂಗಳು ಬದಲಾಗಿ ಮೂರು ತಿಂಗಳಿಗೊಮ್ಮೆ ತೆರಿಗೆ ವಿವರ ಸಲ್ಲಿಸಲು ಅವಕಾಶ ನೀಡಿರುವುದು ಮತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆದಾರರಿಗೆ ಪರಿಹಾರ ಕೋರಲು ಇರುವ ಮಿತಿಯನ್ನು 75 ಲಕ್ಷದಿಂದ‌ 1 ಕೋ.ರೂ.ಗೇರಿಸುವುದು ಶುಕ್ರವಾರ ಸಭೆಯಲ್ಲಿ ಕೈಗೊಂಡಿರುವ ಎರಡು ಪ್ರಮುಖ ನಿರ್ಧಾರಗಳು. ಇದರ ಜತೆಗೆ  50,000 ರೂ. ಮೇಲ್ಪಟ್ಟ ಆಭರಣ ಖರೀದಿಗೆ ಪ್ಯಾನ್‌ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಿದ ನಿಯಮ ರದ್ದು ಮಾಡುವ ಮೂಲಕ ಚಿನ್ನಾಭರಣ ವ್ಯಾಪಾರಿಗಳ ಪ್ರಮುಖ ಬೇಡಿಕೆಯೊಂದನ್ನು ಈಡೇರಿಸಿದಂತಾಗಿದೆ. 

ಮೂರು ತಿಂಗಳಿಗೊಮ್ಮೆ ತೆರಿಗೆ ವಿವರ ಸಲ್ಲಿಸುವ ನಿಯಮದಿಂದಾಗಿ ದೇಶದ ಸಣ್ಣ ಉದ್ದಿಮೆ ವಲಯಕ್ಕೆ ಪ್ರಯೋಜನವಾಗಲಿದೆ. ಶೇ. 90 ಉದ್ಯಮಗಳು ಹಾಗೂ ಇತರ ವಹಿವಾಟುಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ. ಅರ್ಥಾತ್‌ ಇನ್ನು ಶೇ. 10 ಉದ್ಯಮಗಳು ಮಾತ್ರ ಪ್ರತಿ ತಿಂಗಳು ತೆರಿಗೆ ವಿವರ ಸಲ್ಲಿಸಬೇಕಾಗುತ್ತದೆ. ಜಿಎಸ್‌ಟಿಯಿಂದ ಹೆಚ್ಚು ಸಮಸ್ಯೆಯಾಗಿದ್ದೇ ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳಿಗೆ. ಇವುಗಳಿಗೆ ಬಿದ್ದ ಹೊಡೆತದ ಪರಿಣಾಮವಾಗಿಯೇ ದೇಶದ ಆರ್ಥಿಕತೆ ಕುಸಿಯಲು ತೊಡಗಿತ್ತು. ದೇಶದ ಜಿಡಿಪಿ ದರಕ್ಕೆ ಹೆಚ್ಚಿನ ಕೊಡುಗೆ ಸಲ್ಲುವುದು ಕೂಡ ಈ ವಲಯದಿಂದ. ಅಸಂಘಟಿತ ವಲಯದ ಕೋಟಿಗಟ್ಟಲೆ ಜನರಿಗೆ ಉದ್ಯೋಗ ಸಿಗುವುದು ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ. ಮೂರು ತಿಂಗಳಿಗೊಮ್ಮೆ ತೆರಿಗೆ ವಿವರ ಸಲ್ಲಿಸುವ ಅನುಕೂಲದಿಂದಾಗಿ ತೆರಿಗೆ ಪದ್ಧತಿ ಜಿಎಸ್‌ಟಿ ಪೂರ್ವ ವ್ಯವಸ್ಥೆಯಂತೆಯೇ  ಆಗಿದೆ ಎಂಬ ಟೀಕೆಯನ್ನು ಸರಕಾರ ಆವಗಣಿಸುವಂತಿಲ್ಲ. 

ಹಿಂದೆ ದೊಡ್ಡ ಉದ್ಯಮ ಸಂಸ್ಥೆಗಳು ತಾವು ವ್ಯವಹಾರ ನಡೆಸುವ ಜಿಎಸ್‌ಟಿಯಡಿಯಲ್ಲಿ ನೋಂದಾಯಿಸ್ಪಡದ ಸಂಸ್ಥೆಗಳ  ಪರವಾಗಿ ತಾವೇ ತೆರಿಗೆ ಪಾವತಿಸಬೇಕಿತ್ತು. ರಿವರ್ಸ್‌ ಚಾರ್ಜ್‌ ಮೆಕಾನಿಸಂ ಪದ್ಧತಿಯಿಂದ ದೊಡ್ಡ ಉದ್ಯಮಗಳಿಗೆ ಹೆಚ್ಚುವರಿ ತೆರಿಗೆ ಹೊರೆ ಬೀಳುತ್ತಿತ್ತು. ಇದನ್ನು ತಪ್ಪಿಸಲು ದೊಡ್ಡ ಸಂಸ್ಥೆಗಳು ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದ ಸಂಸ್ಥೆಗಳ ಜತೆಗೆ ವ್ಯವಹಾರ ತಪ್ಪಿಸಿಕೊಳ್ಳುತ್ತಿದ್ದವು. ಇದರಿಂದಾಗಿ ದೊಡ್ಡ ಮತ್ತು ಸಣ್ಣ ಉದ್ದಿಮೆಗಳ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿರುವುದನ್ನು ಗಮನಿಸಿದ ಸರಕಾರ ಮುಂಬರುವ ಮಾರ್ಚ್‌ ತನಕ ಅದಕ್ಕೆ ವಿನಾಯಿತಿ ನೀಡಿದೆ. ಇದರಿಂದಾಗಿ ದೊಡ್ಡ ಉದ್ದಿಮೆಗಳಿಗೆ ಸಣ್ಣ ಮಟ್ಟದ ನೆಮ್ಮದಿ ನೀಡಿದಂತಾಗಿದೆ. ರಫ್ತು ಉದ್ಯಮಿಗಳಿಗೆ ಜಿಎಸ್‌ಟಿ ಲೆವಿಯಿಂದ 6ತಿಂಗಳ ಮಟ್ಟಿಗೆ ವಿನಾಯಿತಿ ನೀಡಿರುವಂತಹ ಕ್ರಮದಿಂದ ರಫ್ತು ಚಟುವಟಿಕೆಗಳು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.

ಜಿಡಿಪಿ ಜಾರಿಯಾದ ಮೂರು ತಿಂಗಳಲ್ಲಿ ಕಂಡು ಬಂದ ತೀವ್ರ ಆರ್ಥಿಕ ಕುಸಿತ ಮತ್ತು ಇದರ ಪರಿಣಾಮವಾಗಿ ಜಿಡಿಪಿ ಕುಸಿತವಾಗಿರುವುದು ಜಿಎಸ್‌ಟಿ ಪರಿಷ್ಕರಣೆಯನ್ನು ಅನಿವಾರ್ಯವಾಗಿಸಿತು. ಜಿಡಿಪಿಯಿಂದ ಭಾರತ ಜಗತ್ತಿನಲ್ಲೇ ಅತಿ ಕಡಿಮೆ ಬೆಲೆಗಳನ್ನು ಹೊಂದಿರುವ ದೇಶ ಎಂಬ ಕನಸುಗಳನ್ನು ಬಿತ್ತಲಾಗಿತ್ತು. ಆದರೆ ಈ ಮೂರು ತಿಂಗಳಲ್ಲಿ ಅಂತಹ ಯಾವುದೇ ಬೆಲೆ ಇಳಿಕೆ ಕಾಣಿಸಿಲ್ಲ. ತೆರಿಗೆ ವಂಚನೆ ತಡೆದು ದೇಶದ ಬೊಕ್ಕಸ ಸಮೃದ್ಧವಾಗಿ ನಮ್ಮ ಬದುಕು ಹಸನಾಗುತ್ತದೆ ಎಂಬ ಜನಸಾಮಾನ್ಯರ ಕಲ್ಪನೆಗಳು ಹುಸಿಯಾಗಿವೆ. ಸ್ವತಂತ್ರ ಭಾರತದ ಕ್ರಾಂತಿಕಾರಿ ನಿರ್ಧಾರವೊಂದು ಈ ರೀತಿಯಾಗಿ ಉಲ್ಟಾ ಹೊಡೆಯುವ ಸಾಧ್ಯತೆಯನ್ನು ಸರಕಾರ ನಿರೀಕ್ಷಿಸಿರಲಿಲ್ಲ. ಜನರ ಅಸಂತೋಷ ಚುನಾವಣೆ ಫ‌ಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ತುರ್ತಾಗೆ ಏನಾದರೂ ಮಾಡುವ ಅನಿವಾರ್ಯತೆ ಎದುರಾದ ಕಾರಣ ಸದ್ಯಕ್ಕೆ ಸರಕಾರ ಭಾರೀ ಪ್ರಮಾಣದ ವಿನಾಯಿತಿಗಳನು ನೀಡಿದೆ. ಆದರೆ ಇದರಿಂದ ಒಟ್ಟಾರೆ ಜಿಎಸ್‌ಟಿಯ ಆಶಯವೇ ವಿಫ‌ಲವಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸುತ್ತಿದ್ದಾರೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.