Agriculture; ವೃತ್ತಿಪರ ಕೃಷಿಕರನ್ನು ರೂಪಿಸುವ ಯತ್ನ ಶ್ಲಾಘನೀಯ

Team Udayavani, Nov 14, 2023, 6:07 AM IST

1-saddsd

ನಮ್ಮ ಶಿಕ್ಷಣ ವ್ಯವಸ್ಥೆ, ಪಠ್ಯಕ್ರಮಗಳು ನಮ್ಮನ್ನು ದ್ವಿತೀಯ ಮತ್ತು ತೃತೀಯ ವಲಯದ ಔದ್ಯೋಗಿಕ ಪರಿಸರಕ್ಕೆ ತಳ್ಳುತ್ತಿವೆ, ಪ್ರಾಥಮಿಕ ವಲಯ ವಾಗಿರುವ ಕೃಷಿಯಿಂದ ದೂರ ಮಾಡುತ್ತಿವೆ ಎಂಬ ಸ್ಥಿತಿಯ ನಡುವೆಯೇ ಇದೀಗ ರಾಜ್ಯ ಸರ ಕಾ ರ ಪ್ರೌಢಶಾಲಾ ಮಕ್ಕಳಿಗೆ ಕೃಷಿ ಪಾಠ ಮಾಡಲು ಮುಂದಾಗಿ ಗಮನ ಸೆಳೆದಿದೆ. ಈ ನಿಟ್ಟಿನಲ್ಲಿ ಸರ ಕಾರದ ಹೆಜ್ಜೆ ನಿಜಕ್ಕೂ ಸ್ವಾಗತಾರ್ಹ.

ಶಿಕ್ಷಣದಿಂದ ಮೌಲ್ಯಗಳು, ವೈಜ್ಞಾನಿಕ ಮನೋಭಾವ, ಚಿಂತನಶೀಲತೆ, ಜ್ಞಾನ ಸೃಜಿಸಬೇಕು ಎಂಬ ಮೂಲ ಪರಿಕಲ್ಪನೆಗಳಿದ್ದರೂ ಸಹ ಉದ್ಯೋಗವೇ ನಮ್ಮಲ್ಲಿ ಶಿಕ್ಷಣದ ಮಹತ್ವ, ಪ್ರಭಾವ ಮತ್ತು ಯಶಸ್ಸನ್ನು ಅಳೆಯುವ ಮಾನದಂಡವಾಗಿ ಬದಲಾಗಿದೆ. ಕಳೆದ ಐದಾರು ದಶಕಗಳಿಂದ ಆಳವಾಗಿ ಬೇರೂರಿರುವ ಶಿಕ್ಷಣದ ಈ ಯಶಸ್ಸಿನ ಮಾಪಕದಲ್ಲಿ ಕೃಷಿಗೆ ಸ್ಥಾನವೇ ಇರಲಿಲ್ಲ. ಓದಿ ಕೃಷಿಕನಾಗುವುದು ಎಂದರೆ ಶಿಕ್ಷಣದ ವೈಫ‌ಲ್ಯ ಎಂಬ ರೀತಿಯ ಮೂಢನಂಬಿಕೆಯೇ ಸೃಷ್ಟಿಯಾಗಿದೆ. ಇಂತಹ ಕಾಲಘಟ್ಟ ದಲ್ಲಿ ಕೃಷಿಯನ್ನು ಶಿಕ್ಷಣದ ವ್ಯಾಪ್ತಿಗೆ ತರುವ ಮೂಲಕ ವೃತ್ತಿಪರ ಕೃಷಿಕರನ್ನು ರೂಪಿಸಲು ಸರಕಾರ ಮುಂದಾಗುತ್ತಿರುವುದು ಪ್ರಶಂಸನೀಯ.

ಹೇಗೆ ಸೇವಾ ಮತ್ತು ಉತ್ಪಾದನಾ ವಲಯದಲ್ಲಿ ವೃತ್ತಿಪರತೆ ತರುವಲ್ಲಿ ಶಿಕ್ಷಣ ಮಹತ್ವದ ಪಾತ್ರ ನಿರ್ವಹಿಸುತ್ತದೆಯೋ ಅದೇ ರೀತಿ ಕೃಷಿಯಲ್ಲಿಯೂ ವೃತ್ತಿಪರತೆ ಅಗತ್ಯವನ್ನು ಮನಗಂಡಿರುವ ಸರಕಾರ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನಿಡಲು ಸಿದ್ಧತೆ ನಡೆಸಿದೆ.

ಆಧುನಿಕ ಕಾಲದಲ್ಲಿ “ಕೃಷಿಕ’ನ ವ್ಯಾಖ್ಯಾನ ಬದಲಾಗಿದೆ. ಓರ್ವ ಕೃಷಿಕನಿಗೆ ಸಾಂಪ್ರದಾಯಿಕ ಕೃಷಿಯ ಅನುಭವದ ಜತೆಗೆ ನೀರಿನ ನಿರ್ವಹಣೆ, ಮಣ್ಣಿನ ಪೌಷ್ಟಿಕಾಂಶ, ಯಂತ್ರೋಪಕರಣಗಳ ಬಳಕೆ, ಬಿತ್ತನೆ, ಗೊಬ್ಬರದ ಬಳಕೆ, ಹವಾಮಾನದ ಮಾಹಿತಿ ಮತ್ತು ಹವಾಮಾನ ವೈಪರೀತ್ಯದ ಆಗುಹೋಗುಗಳ ಜತೆಗೆ ಮಾರುಕಟ್ಟೆಯ ಅರಿವು ಅತಿ ಮುಖ್ಯವಾಗಿದೆ.

ಈ ಎಲ್ಲ ಅಂಶಗಳನ್ನು ಗಮನಿಸಿ ರಾಜ್ಯದ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ವೃತ್ತಿ ಶಿಕ್ಷಣ ಕೌಶಲ ಚೌಕಟ್ಟು (ಎನ್‌.ಎಸ್‌.ಕ್ಯೂ.ಎಫ್.) ನಡಿ ತೃತೀಯ ಭಾಷೆಯ ಬದಲು ಕೃಷಿಯನ್ನು ಒಂದು ವಿಷಯವನ್ನಾಗಿ ಕಲಿಸಲು ಮುಂದಾಗುವ ಮೂಲಕ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕೃಷಿ ಶಿಕ್ಷಣದ ಮೊದಲ ಬೀಜ ಬಿತ್ತುವ ಪ್ರಯತ್ನ ನಡೆದಿದೆ.

ಈ ಹಿನ್ನೆಲೆಯಲ್ಲಿ ಕೃಷಿ ಪಠ್ಯ ಕ್ರಮನ್ನು ಒಂಬತ್ತರಿಂದ ಹನ್ನೆರಡನೇ ತರಗತಿ ತನಕ ಅಂದರೆ ನಾಲ್ಕು ವರ್ಷಗಳ ಕಾಲ ಬೋಧಿಸಿ ಪ್ರಮಾಣ ಪತ್ರವನ್ನು ನೀಡುವ ಸರ ಕಾ ರದ ಪ್ರಯತ್ನಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕ ವಾಗಿ ಹೆಚ್ಚಿನ ಮಹತ್ವವಿದೆ.

ಆಸಕ್ತ ಮಕ್ಕಳಿಗೆ ಕೈತೋಟ, ಸಾಂಪ್ರದಾಯಿಕ ಕೃಷಿಯ ಜತೆಗೆ ಆಧುನಿಕ ಕೃಷಿ ಪದ್ಧತಿ, ಕೃಷಿ ಪರಿಸರದ ಸುತ್ತಲಿನ ಬೆಳವಣಿಗೆಗಳ ಶಿಕ್ಷಣವು ದೊರೆಯುವಂತೆ ಆಗಲಿ. ಜತೆಗೆ ಮುಂದಿನ ದಿನಗಳಲ್ಲಿ ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಣೆ, ಕೋಳಿಸಾಕಣೆ ಮುಂತಾದ ಗ್ರಾಮೀಣ ಪರಿಸರ ಆಧಾರಿತ ಜೀವನೋಪಾಯ ಸಾಧ್ಯತೆ, ಅವಕಾಶಗಳ ಬಗೆಗಿನ ಶಿಕ್ಷಣವು ಸಹ ದೊರೆಯುವಂತಹ ಪಠ್ಯಕ್ರಮವನ್ನು ರೂಪಿಸುವತ್ತ ಸರಕಾರ ಚಿಂತನೆ ನಡೆಸಬೇಕು.

ಟಾಪ್ ನ್ಯೂಸ್

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.