ವಿತ್ತ ಸವಾಲುಗಳ ನಡುವೆ…ಉತ್ಪಾದನೆಗೆ ಭಾರತ ಪ್ರಶಸ್ತ !


Team Udayavani, Jul 20, 2020, 11:18 AM IST

ವಿತ್ತ ಸವಾಲುಗಳ ನಡುವೆ…ಉತ್ಪಾದನೆಗೆ ಭಾರತ ಪ್ರಶಸ್ತ !

ಸಾಂದರ್ಭಿಕ ಚಿತ್ರ

ಕೋವಿಡ್ ನಿಂದಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳಂತೆ ಭಾರತದ ಆರ್ಥಿಕತೆಗೂ ಪೆಟ್ಟು ಬಿದ್ದಿದೆ. ಮುಂದಿನ ವಿತ್ತ ದಾರಿ ಹೇಗಿರಬಹುದು, ಹೇಗಿರಬೇಕು ಎನ್ನುವುದರ ಬಗ್ಗೆ ಚರ್ಚೆಗಳು, ಪ್ರಯತ್ನಗಳು, ನೀತಿ ನಿರೂಪಣೆಗಳು ಆರಂಭವಾಗಿವೆ. ಭಾರತವನ್ನು ಆತ್ಮನಿರ್ಭರವಾಗಿಸುವ ಜತೆಗೆ ಜಾಗತಿಕ ಉತ್ಪಾದನ ಹಬ್‌ ಆಗಿಸುವ ಗುರಿಯೂ ದೇಶದ ಮುಂದಿದೆ.

ಭಾರತದ ಈ ಆಕಾಂಕ್ಷೆಗಳಿಗೆ ಪೂರಕವಾಗುವಂಥ ವರದಿಯೊಂದು ಈಗ ಹೊರಬಿದ್ದಿದೆ. ಜಾಗತಿಕ ಉತ್ಪಾದನ ವಲಯಗಳಿಗೆ ಅನುಕೂಲಕರವಾಗಿರುವ 48 ರಾಷ್ಟ್ರಗಳ ಪೈಕಿ ಭಾರತ 3ನೇ ಸ್ಥಾನ ಪಡೆದಿದೆ ಎಂದು ಜಾಗತಿಕ ಅಧ್ಯಯನ ವರದಿಯೊಂದು ಹೇಳಿದೆ. ಗ್ಲೋಬಲ್‌ ಮ್ಯಾನುಫ್ಯಾಕ್ಚರಿಂಗ್‌ ರಿಸ್ಕ್ ಇಂಡೆಕ್ಸ್‌ (ಎಂಆರ್‌ಐ) ವರದಿಯು ರಾಷ್ಟ್ರವೊಂದರಲ್ಲಿನ ಉತ್ಪಾದನಾ ವೆಚ್ಚ, ಕಾರ್ಯಾಚರಣೆಯವ್ಯವಸ್ಥೆಯ ಮಾನದಂಡಗಳನ್ನು ಆಧರಿಸಿ ಈ ರ್‍ಯಾಂಕ್‌ಗಳನ್ನು ಸಿದ್ಧಪಡಿಸಿದ್ದು, ಚೀನ ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ಎರಡನೇ ಸ್ಥಾನದಲ್ಲಿದೆ. ದೇಶದ ಆರ್ಥಿಕತೆಗೆ ಕೋವಿಡ್‌-19 ಸವಾಲೊಡ್ಡಿರುವ ಈ ಸಮಯದಲ್ಲೇ ಇಂಥ ವರದಿ ಬಂದಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆಯೇ ಸರಿ.

ಈಗಾಗಲೇ ಚೀನದಿಂದ ನೆಲೆ ಬದಲಿಸಲು ಯೋಚಿಸುತ್ತಿರುವ ಅನೇಕ ಬಹುರಾಷ್ಟ್ರೀಯ ಕಂಪೆನಿಗಳು ಭಾರತದತ್ತ ನೋಡಲಾರಂಭಿಸಿವೆ. ಅವೂ ಸೇರಿದಂತೆ, ಮೇ ತಿಂಗಳಲ್ಲೇ ಸಾವಿರಕ್ಕೂ ಹೆಚ್ಚು ವಿದೇಶಿ ಕಂಪೆನಿಗಳು ಭಾರತ ಸರಕಾರದ ಜತೆ ಈ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದು, ಭಾರತವೂ ಸಹ ಈ ಕಂಪೆನಿಗಳ ನಿರೀಕ್ಷೆಗಳನ್ನು ಅವಲೋಕಿಸುತ್ತಿದೆ.

ಇಂದು ಚೀನದ ಮೇಲಿನ ಅವಲಂಬನೆಯನ್ನು ತಗ್ಗಿಸಿಕೊಳ್ಳಬೇಕಾದ ಅಗತ್ಯ ಭಾರತದ ಮೇಲಷ್ಟೇ ಅಲ್ಲ, ಇಡೀ ಪ್ರಪಂಚದ ಮೇಲೂ ಬಿದ್ದಿದೆ. ಚೀನದೊಂದಿಗೆ ಆರ್ಥಿಕ ವಹಿವಾಟು ಹೆಚ್ಚಾದಷ್ಟೂ, ಡ್ರ್ಯಾಗನ್‌ ರಾಷ್ಟ್ರದಿಂದ ವಿವಿಧ ರೀತಿಯಲ್ಲಿ ತೊಂದರೆಗಳು ಎದುರಾಗುವುದನ್ನು ರಾಷ್ಟ್ರಗಳು ಮನಗಾಣುತ್ತಿವೆ. ಆದಾಗ್ಯೂ, ಉತ್ಪಾದನ ಹಬ್‌ ಆಗಿ ಬೆಳೆಯುವುದಕ್ಕೆ ವಿವಿಧ ಅಗತ್ಯಗಳು ಇರುತ್ತವೆ. ಕಾರ್ಮಿಕ ವೆಚ್ಚ, ನಿರ್ವಹಣ ವೆಚ್ಚ ಕಡಿಮೆಯಿರುವುದು ಹಾಗೂ ಮುಖ್ಯವಾಗಿ ಸಂಚಾರ- ಸಾಗಣೆ, ತೆರಿಗೆ ಪದ್ಧತಿಯು ಕಂಪೆನಿಗಳಿಗೆ ಪೂರಕವಾಗಿದೆಯೇ ಎನ್ನುವುದನ್ನು ಹೂಡಿಕೆದಾರರು ಪರಿಗಣಿಸುತ್ತಾರೆ. ಈ ವಿಚಾರದಲ್ಲಿ ಈಗಲೂ ಚೀನದಲ್ಲಿ ಕಂಪೆನಿಗಳಿಗೆ ಪೂರಕವಾಗುವಂಥ ವ್ಯವಸ್ಥೆ ಇದೆ ಎನ್ನುವುದನ್ನು ಗಮನಿಸಬೇಕು. ಆದರೆ ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ ಮುಂದಿನ ವರ್ಷಗಳಲ್ಲಿ ನಿಸ್ಸಂಶಯವಾಗಿಯೂ ಭಾರತವು ಅಮೆರಿಕ ಮತ್ತು ಚೀನಕ್ಕೆ ಸರಿಸಮನಾಗಿ ಪೈಪೋಟಿ ನೀಡುವಂಥ ಉತ್ಪಾದನ ಕೇಂದ್ರವಾಗಿ ಬದಲಾಗುವ ಸಾಧ್ಯತೆ ಇದೆ.

ಚೀನ ಮತ್ತು ಭಾರತದ ನಡುವಿನ ವ್ಯತ್ಯಾಸವೆಂದರೆ ಚೀನದಲ್ಲಿ ಜಿನ್‌ಪಿಂಗ್‌ ಸರಕಾರದ ನಿರ್ಣಯವೇ ಅಂತಿಮ. ಇನ್ನೊಂದೆಡೆ ಭಾರತದಲ್ಲಿ ಹೂಡಿಕೆ, ಉತ್ಪಾದನ ಘಟಕಗಳಿಗೆ ಜಾಗ ನೀಡುವಿಕೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ರಾಜ್ಯ ಸರಕಾರಗಳ ತೀರ್ಮಾನ ಮುಖ್ಯ. ಈ ನಿಟ್ಟಿನಲ್ಲಿ ಉತ್ಪಾದನ ಹಬ್‌ ಆಗಿ ಬೆಳೆಯುವ ಹಾದಿಯಲ್ಲಿ ಇರುವ ಅಡ್ಡಿ ಆತಂಕಗಳನ್ನು ನಿವಾರಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತ್ವರಿತವಾಗಿ ಮುಂದಾಗಬೇಕಿದೆ. ಇದೇ ವೇಳೆಯಲ್ಲೇ ದೇಶವನ್ನು ಆತ್ಮನಿರ್ಭರಗೊಳಿಸುವ ಪ್ರಯತ್ನಕ್ಕೂ ವೇಗನೀಡಬೇಕಾಗಿದೆ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kannadiga

Editorial: ಕನ್ನಡಿಗರ ನಿಂದನೆಗೆ ಕಠಿನ ಕ್ರಮ: ಸ್ತುತ್ಯರ್ಹ ನಿಲುವು

4-editorial

Editorial: ಸುವರ್ಣ ಕರ್ನಾಟಕ: ವಿಕಾಸಕ್ಕೆ ಕಾರ್ಯಸೂಚಿ ಅಗತ್ಯ

cyber crime

Cyber ​​crime ತಡೆ: ವಿವೇಚನೆಯೇ ಕೀಲಿಕೈ

ಹುಸಿ ಬೆದರಿಕೆ ಸಂದೇಶ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

ಹುಸಿ ಬೆದರಿಕೆ ಸಂದೇಶ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.