ಜನಮಾನಸದಲ್ಲಿ ನೆಲೆಯಾಗಿರುವ ದಕ್ಷ ಅಧಿಕಾರಿ
Team Udayavani, Nov 12, 2019, 5:53 AM IST
ತಿರುನೆಲ್ಲೈ ನಾರಾಯಣ ಅಯ್ಯರ್ ಶೇಷನ್ ಎಂದರೆ ಯಾರೆಂದು ಹೆಚ್ಚಿನವರಿಗೆ ತಿಳಿಯದು. ಆದರೆ ಟಿ.ಎನ್. ಶೇಷನ್ ಜನಸಾಮಾನ್ಯರೂ ಒಂದು ಕ್ಷಣ ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳುವ ಹೆಸರು. ಅನಾರೋಗ್ಯದಿಂದಾಗಿ ಭಾನುವಾರ ರಾತ್ರಿ ತೀರಿಕೊಂಡ ಟಿ.ಎನ್.ಶೇಷನ್ ಹೆಸರು ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಬಹುಕಾಲ ನೆನಪಿಟ್ಟುಕೊಳ್ಳುವಂಥದ್ದು. ಜಡ್ಡುಗಟ್ಟಿದ ಚುನಾವಣಾ ವ್ಯವಸ್ಥೆಯನ್ನು ದಕ್ಷತೆ ಮತ್ತು ಕಠಿಣ ನಿಲುವುಗಳಿಂದ ಬದಲಾಯಿಸಿ ಅದರ ಸಾಂವಿಧಾನಿಕ ಮಹತ್ವವನ್ನು ಎತ್ತಿಹಿಡಿದ ಅಧಿಕಾರಿ ಎಂಬ ಕಾರಣಕ್ಕೆ ಶೇಷನ್ ಈಗಲೂ ಜನಮಾನಸದಲ್ಲೊಂದು ಅಭಿಮಾನದ ಸ್ಥಾನಗಳಿಸಿದ್ದಾರೆ.
ಶೇಷನ್ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾಗುವ ತನಕ ಚುನಾವಣಾ ಆಯೋಗಕ್ಕೆ ಅಷ್ಟೊಂದು ಅಧಿಕಾರ ಮತ್ತು ಶಕ್ತಿ ಇದೆ ಎನ್ನುವುದು ಜನಸಾಮಾನ್ಯರಿಗೆ ಬಿಡಿ, ಹಲವು ರಾಜಕೀಯ ನಾಯಕರಿಗೂ ತಿಳಿದಿರಲಿಲ್ಲ. 1990ರಿಂದ 96ರ ತನಕ ಅಧಿಕಾರವಧಿಯಲ್ಲಿ ಶೇಷನ್ ಮಾಡಿದ ಸುಧಾರಣೆಗಳ ಫಲವನ್ನು ನಾವು ಈಗಲೂ ಉಣ್ಣುತ್ತಿದ್ದೇವೆ. ಒಂದು ವೇಳೆ ಶೇಷನ್ ಮುಖ್ಯ ಚುನಾವಣಾ ಆಯುಕ್ತರಾಗದೆ ಹೋಗುತ್ತಿದ್ದರೆ ಇಂದಿಗೂ ಚುನಾವಣಾ ಆಯೋಗ ಆಳುವ ಪಕ್ಷದ ಅಡಿಯಾಳಾಗಿಯೇ ಇರುತ್ತಿತ್ತು ಎನ್ನುವ ಅಭಿಪ್ರಾಯ ಸಂಪೂರ್ಣ ಉತ್ಪ್ರೇಕ್ಷಿತವಲ್ಲ. ಶೇಷನ್ ಮುಖ್ಯ ಚುನಾವಣಾ ಆಯುಕ್ತರಾಗುವ ತನಕ ಮತಗಟ್ಟೆ ವಶೀಕರಣ, ಸರಕಾರಿ ಯಂತ್ರದ ದುರುಪಯೋಗ, ಹಿಂಸಾಚಾರದಂಥ ಅಪಸವ್ಯಗಳೆಲ್ಲ ಚುನಾವಣಾ ಪ್ರಕ್ರಿಯೆಯ ಅವಿಭಾಜ್ಯ ಅಂಗ ಎಂಬ ಪರಿಸ್ಥಿತಿಯಿತ್ತು. ಇದನ್ನೆಲ್ಲ ನಿವಾರಿಸಿ ಪಾರದರ್ಶಕ ಮತ್ತು ಮುಕ್ತವಾದ ಚುನಾವಣೆ ನಡೆಸುವ ವಾತಾವರಣವನ್ನು ಕಲ್ಪಿಸಿಕೊಟ್ಟದ್ದು ಶೇಷನ್. ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟಾದ ಜಾರಿ, ಮತದಾರರ ಗುರುತಿನ ಚೀಟಿ, ಚುನಾವಣಾ ವೆಚ್ಚಕ್ಕೆ ಮಿತಿ, ಅನ್ಯ ರಾಜ್ಯಗಳ ಅಧಿಕಾರಿಗಳನ್ನು ಚುನಾವಣಾ ಅಧಿಕಾರಿಗಳಾಗಿ ನೇಮಿಸುವುದು ಹೀಗೆ ಸಾಲು ಸಾಲು ಸುಧಾರಣೆಗಳನ್ನು ಜಾರಿಗೆ ತಂದ ಹಿರಿಮೆ ಶೇಷನ್‌ಗೆ ಸಲ್ಲುತ್ತದೆ.
ನೂರಕ್ಕೂ ಹೆಚ್ಚು ಚುನಾವಣಾ ಅಕ್ರಮಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಿದ್ದರು. ಮತದಾರರಿಗೆ ಆಮಿಷವೊಡ್ಡುವುದು ಅಥವಾ ಬೆದರಿಕೆಯೊಡ್ಡುವುದು, ಶರಾಬು ಹಂಚುವುದು, ಧರ್ಮ ಅಥವಾ ಜಾತಿಯ ಹೆಸರಿನಲ್ಲಿ ಮತ ಕೇಳುವುದು, ಧಾರ್ಮಿಕ ಸ್ಥಳಗಳಲ್ಲಿ ಚುನಾವಣೆ ಪ್ರಚಾರ ನಡೆಸುವುದು, ಅನುಮತಿಯಿಲ್ಲದೆ ಧ್ವನಿವರ್ಧಕ ಬಳಸುವುದನ್ನು ತಡೆಯುವಂಥ ನಿಯಮಗಳನ್ನು ಜಾರಿಗೆ ತರುವ ಮೂಲಕ ಚುನಾವಣೆಯಲ್ಲಿ ಪಾರದರ್ಶಕತೆಯನ್ನು ತಂದ ಹಿರಿಮೆ ಅವರಿಗೆ ಸಲ್ಲಬೇಕು.
ಈ ಸುಧಾರಣೆಗಳು ಯಾವ ರೀತಿ ಪರಿಣಾಮ ಬೀರಿದವು ಎನ್ನುವುದಕ್ಕೆ 1993ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ನಡೆದ ಚುನಾವಣೆಯೇ ಸಾಕ್ಷಿ. ಚುನಾವಣಾ ಆಯೋಗದ ನೈಜ ಸಾಮರ್ಥ್ಯದ ಪರಿಚಯ ಜನರಿಗಾದದ್ದು ಈ ಚುನಾವಣೆಯಲ್ಲೇ. ಮತದಾರರ ಮೇಲೆ ಪ್ರಭಾವ ಬೀರಿದ ಆಗಿನ ಸಮಾಜ ಕಲ್ಯಾಣ ಸಚಿವ ಸೀತಾರಾಮ್ ಕೇಸರಿ ಮತ್ತು ಆಹಾರ ಸಚಿವ ಕಲ್ಪನಾಥ್ ರಾಯ್ ತರಾಟೆಗೆ ತೆಗೆದುಕೊಂಡದ್ದಲ್ಲದೆ ಸಂಪುಟದಿಂದ ಅವರನ್ನು ಕೈಬಿಡುವಂತೆ ಪ್ರಧಾನಿಯನ್ನು ಆಗ್ರಹಿಸಿದ ಘಟನೆಯೇ ಸಾಕು ಶೇಷನ್ ಎಷ್ಟು ನಿರ್ಬಿಢೆಯ ಅಧಿಕಾರಿ ಎನ್ನಲು. ರಾಜಕೀಯ ಪಕ್ಷಗಳು ಮತ್ತು ನಾಯಕರು ಚುನಾವಣೆ ಗೆಲ್ಲಲು ಬಳಸುತ್ತಿದ್ದ ಕುತಂತ್ರಗಳನ್ನೆಲ್ಲ ವಿಫಲಗೊಳಿಸಿದ ಶೇಷನ್ ಸಹಜವಾಗಿಯೇ ಜನರ ಅಪಾರ ಅಭಿಮಾನಕ್ಕೆ ಪಾತ್ರರಾದರು. ಆದರೆ ಇದೇ ವೇಳೆ ಅನೇಕ ರಾಜಕಾರಣಿಗಳ ದ್ವೇಷವನ್ನು ಅವರು ಕಟ್ಟಿಕೊಳ್ಳಬೇಕಾಯಿತು.
ರಾಜಕೀಯದವರು ಅವರನ್ನು ಅಲ್ಸೇಷನ್ ಎಂದು ಕರೆಯುತ್ತಿದ್ದರು. ಶೂನ್ಯ ವಿಳಂಬ , ಶೂನ್ಯ ಲೋಪ ಇದು ಶೇಷನ್ ಮಂತ್ರವಾಗಿತ್ತು. ಒಬ್ಬ ದಕ್ಷ ಅಧಿಕಾರಿ ಮನಸು ಮಾಡಿದರೆ ವ್ಯವಸ್ಥೆಯನ್ನು ಹೇಗೆ ಸಮಗ್ರವಾಗಿ ಬದಲಾಯಿಸಬಹುದು ಎನ್ನುವುದನ್ನು ಶೇಷನ್ ತೋರಿಸಿಕೊಟ್ಟಿದ್ದರು. ಶೇಷನ್ ಹೊಸ ಕಾನೂನು ಗಳನ್ನೇನೂ ತರಲಿಲ್ಲ. ಇದ್ದ ಕಾನೂನುಗಳನ್ನೇ ಕಟ್ಟುನಿಟ್ಟಾಗಿ ಜಾರಿಗೊಳಿಸಿದರು.
ಆದರೆ ಇಷ್ಟೆಲ್ಲ ಸಾಧನೆ ಮಾಡಿದ ಶೇಷನ್‌ಗೆ ರಾಷ್ಟ್ರಪತಿಯಾಗುವ ಅವಕಾಶ ಸಿಗಲಿಲ್ಲ. 1997ರಲ್ಲಿ ಕೆ.ಆರ್.ನಾರಾಯಣನ್ ವಿರುದ್ಧ ಅವರು ಸೋಲೊಪ್ಪಿಕೊಳ್ಳಬೇಕಾಯಿತು. ಶೇಷನ್ ರಾಷ್ಟ್ರಪತಿಯಾಗಬೇಕು, ಆ ಮೂಲಕ ಆ ಹುದ್ದೆಯ ಮಹತ್ವ ಜಗತ್ತಿಗೆ ತಿಳಿಯಬೇಕು ಎನ್ನುವುದು ಬಹುಜನರ ಮನದಾಳದ ಆಸೆಯಾಗಿತ್ತು. ರಾಷ್ಟ್ರಪತಿಯಾಗದೆ ಇದ್ದದ್ದು ದೇಶಕ್ಕಾದ ದೊಡ್ಡ ನಷ್ಟ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.