ಷೇರುಪೇಟೆ ಮಹಾಕುಸಿತ ಆಳುವವರಿಗೆ ಅಗ್ನಿಪರೀಕ್ಷೆ


Team Udayavani, Mar 10, 2020, 6:50 AM IST

ಷೇರುಪೇಟೆ ಮಹಾಕುಸಿತ ಆಳುವವರಿಗೆ ಅಗ್ನಿಪರೀಕ್ಷೆ

ಬಾಂಬೆ ಷೇರು ಮಾರುಕಟ್ಟೆ ದಾಖಲೆ ಕುಸಿತ ಕಂಡು, ಹೂಡಿಕೆದಾರರು ಸುಮಾರು 6 ಲಕ್ಷ ಕೋ. ರೂ. ಕಳೆದುಕೊಂಡಿದ್ದಾರೆ. ಈ ಮಾದರಿ ಕುಸಿತ ಇಡೀ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲ ಮಾಡಿಬಿಡುತ್ತದೆ. ಹಾಗೆಂದು ಈ ಮಹಾಕುಸಿತ ಭಾರತಕ್ಕೆ ಮಾತ್ರ ಸೀಮಿತವಲ್ಲ. ಬಹುತೇಕ ದೇಶಗಳು ಈ ಕುಸಿತವನ್ನು ಅನುಭವಿಸಿವೆ.

ಷೇರು ಪೇಟೆ ಪಾಲಿಗೆ ಸೋಮವಾರ ಕರಾಳ ದಿನ. ನಾಲ್ಕು ವರ್ಷಗಳ ಬಳಿಕ ಬಾಂಬೆ ಷೇರು ಮಾರುಕಟ್ಟೆ ದಾಖಲೆ ಕುಸಿತ ಕಂಡು, ಹೂಡಿಕೆದಾರರು ಸುಮಾರು 6 ಲಕ್ಷ ಕೋ. ರೂ. ಕಳೆದುಕೊಂಡಿದ್ದಾರೆ. ಇಂಥ ಮಹಾ ಕುಸಿತವನ್ನು ರಕ್ತದೋಕುಳಿ, ರಕ್ತಪಾತ ಎಂಬಿತ್ಯಾದಿಯಾಗಿ ವರ್ಣಿಸುವುದುಂಟು. ಷೇರು ವಹಿವಾಟಿನಲ್ಲಿ ಏರುಪೇರು ಇರುವುದು ಸಾಮಾನ್ಯವಾದರೂ ಈ ಮಾದರಿಯ ಕುಸಿತ ಮಾತ್ರ ಇಡೀ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲ ಮಾಡಿ ಬಿಡುತ್ತದೆ. ಹಾಗೆಂದು ಈ ಮಹಾಕುಸಿತ ಭಾರತಕ್ಕೆ ಮಾತ್ರ ಸೀಮಿತವಲ್ಲ. ಬಹುತೇಕ ದೇಶಗಳು ಈ ಕುಸಿತವನ್ನು ಅನುಭವಿಸಿವೆ.
ಕುಸಿತಕ್ಕೆ ಮುಖ್ಯ ಕಾರಣ ಜಗತ್ತನ್ನು ಹೈರಾಣಾಗಿಸಿರುವ ಕೊರೊನಾ ವೈರಸ್‌ ಕಾಟ. ಜಾಗತಿಕವಾಗಿ 1 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ವೈರಸ್‌ ಬಾಧಿತರಾಗಿರುವುದು ದೃಢಪಟ್ಟಿದೆ ಹಾಗೂ ಸಾವಿನ ಸಂಖ್ಯೆ 4000 ಸಮೀಪಿಸಿದೆ. ಭಾರತದಲ್ಲೂ 40ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್‌ ಸೋಂಕು ತಟ್ಟಿರುವುದು ದೃಢಪಟ್ಟಿದೆ. ಕೊರೊನಾದಿಂದಾಗಿ ಪ್ರವಾಸೋದ್ಯಮ, ವಾಣಿಜ್ಯ, ರಫ್ತು ಮತ್ತು ವಾಯುಯಾನ ಕ್ಷೇತ್ರಗಳು ಇನ್ನಿಲ್ಲದ ರೀತಿಯಲ್ಲಿ ಬಾಧಿತವಾಗಿವೆ. ಇದು ಜಾಗತಿಕ ಆರ್ಥಿಕತೆಯ ಮೇಲೆ ಭಾರೀ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ. ಕೆಲವು ಅಭಿವೃದ್ಧಿ ಹೊಂದಿದ ದೇಶಗಳು ಪರಿಸ್ಥಿತಿ ಕೈಮೀರುವ ಮೊದಲೇ ಎಚ್ಚೆತ್ತುಕೊಂಡ ಕಾರಣ ತುಸು ನೆಮ್ಮದಿಯಿಂದಿವೆ. ಆದರೆ ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಮಾತ್ರ ಆರ್ಥಿಕ ಕ್ಷೇತ್ರವನ್ನು ನಿಯಂತ್ರಣಕ್ಕೆ ತರಲು ಪರದಾಡುತ್ತಿವೆ.
ಇದರ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ದಿಢೀರ್‌ ಎಂದು ಕುಸಿದಿರುವದು ಕೂಡ ಷೇರುಗಳ ಮೇಲೆ ಪರಿಣಾಮ ಬೀರಿದೆ. ಸೌದಿ ಅರೇಬಿಯ ಮತ್ತು ರಷ್ಯಾ ನಡುವಿನ ತೈಲದರ ಸಮರದ ಪರಿಣಾಮವಾಗಿ ಕಚ್ಚಾತೈಲ ಬೆಲೆ 1991ರ ಮಟ್ಟಕ್ಕೆ ತಲುಪಿದೆ. ಶೇ.85ರಷ್ಟು ತೈಲವನ್ನು ಆಮದುಗೊಳಿಸುತ್ತಿರುವ ನಮಗೆ ಇದು ಶುಭ ಸುದ್ದಿಯೇ ಆಗಿದ್ದರೂ ಅದರ ಜಾಗತಿಕ ಪರಿಣಾಮವನ್ನು ನಾವೂ ಅನುಭವಿಸಬೇಕಾಗಿದೆ. ದೀರ್ಘಾವಧಿಗೆ ಕಚ್ಚಾತೈಲ ಬೆಲೆ ಕುಸಿದರೆ ತೈಲ ಆಮದು ಮಾಡಿಕೊಳ್ಳುವ ದೇಶಗಳು ಅದರ ಭರಪೂರ ಲಾಭ ಎತ್ತಿಕೊಳ್ಳುತ್ತವೆ. ಧಾರಾಳ ತೈಲ ಆಮದು ಮಾಡಿಕೊಂಡು ದಾಸ್ತಾನು ಇಡಲು ಉತ್ತಮ ಅವಕಾಶ. ಆದರೆ ಇದೇ ವೇಳೆ ತೈಲ ಕಂಪೆನಿಗಳು ಬೆಲೆ ಕುಸಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಕೆಲಸವನ್ನೂ ಮಾಡಬೇಕು.

ಯೆಸ್‌ ಬ್ಯಾಂಕ್‌ ದಿವಾಳಿಯಾಗಿರುವುದು ಕೂಡ ಷೇರು ಮಾರುಕಟ್ಟೆಯ ಕುಸಿತಕ್ಕೆ ಆಂಶಿಕವಾಗಿ ಕಾರಣವಾಗಿದೆ. ಬ್ಯಾಂಕ್‌ಗಳ ಹಣಕಾಸು ಸ್ಥಿರತೆಯ ಕುರಿತಾಗಿ ಹೂಡಿಕೆದಾರರಲ್ಲಿ ಆತಂಕವಿರುವ ಕಾರಣ ಷೇರುಗಳ ಮೇಲೆ ದೊಡ್ಡ ಮಟ್ಟದ ಹೂಡಿಕೆಗಳು ಆಗದೇ ಇರುವುದು ಕುಸಿತಕ್ಕೆ ತಮ್ಮದೇ ಪಾಲು ನೀಡಿವೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಷೇರು ಮಾರುಕಟ್ಟೆಯ ಕುಸಿತವನ್ನು ತಡೆಯುವ ಮಂತ್ರ ದಂಡ ಸರಕಾರದ ಕೈಯಲ್ಲಿ ಇಲ್ಲ ಎನ್ನುವುದು ನಿಜ. ಅಲ್ಲದೆ ಕುಸಿತ ಮತ್ತು ಏರಿಕೆಗಳು ಈ ವ್ಯವಹಾರದ ಅವಿಭಾಜ್ಯ ಅಂಶಗಳು. ಆದರೆ ಇಂಥ ಪರಿಸ್ಥಿತಿ ನಿರ್ಮಾಣವಾದಾಗೂ ಹೂಡಿಕೆದಾರರ ಆತ್ಮವಿಶ್ವಾಸ ವರ್ಧಿಸುವಂಥ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಂದರ್ಭವನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು ಆಳುವವರ ಆರ್ಥಿಕ ಸಂಕಷ್ಟವನ್ನು ಎದುರಿಸುವ ಸಾಮರ್ಥ್ಯವನ್ನು ನಿರೂಪಿಸುತ್ತದೆ.

ಟಾಪ್ ನ್ಯೂಸ್

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

bellad

Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

15-mandya

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-national-emblem

National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ

MM-Singh

ದೇಶದ ಆರ್ಥಿಕತೆಗೆ ಹೊಸ ಭಾಷ್ಯ ಬರೆದ ಡಾ. ಮನಮೋಹನ್‌ ಸಿಂಗ್‌

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್‌ ನಕಾರ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

19-health

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

6

Karkala: ಲೈಸೆನ್ಸ್‌ ಇಲ್ಲದ ವ್ಯಾಪಾರಕ್ಕೆ ಕಡಿವಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.