ಮೋದಿ ಅಮೆರಿಕ ಭೇಟಿ ಅನುಕೂಲಕರ ಫ‌ಲಿತವಿರಲಿ


Team Udayavani, Jun 24, 2017, 7:09 AM IST

24-ankana-3.jpg

ಮೋದಿ-ಟ್ರಂಪ್‌ ಭೇಟಿಯನ್ನು ಪಾಕ್‌ ಆತಂಕದಿಂದಲೇ ಗಮನಿಸುತ್ತದೆ. ಭಾರತ ಮತ್ತು ಅಮೆರಿಕ ನಿಕಟ
ವಾದಷ್ಟೂ ತನಗೆ ಗಂಡಾಂತರ ಎನ್ನುವುದು ಚೆನ್ನಾಗಿ ಅರ್ಥವಾಗಿದೆ.

ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಕೈಗೊಳ್ಳಲಿರುವ ಅಮೆರಿಕ ಪ್ರವಾಸ ಬಹಳಷ್ಟು ಕುತೂಹಲ ಕೆರಳಿಸಿದೆ. ಜೂ.26ರಂದು ಶ್ವೇತ ಭವನದಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗೆ ಮೋದಿ ನಡೆಸಲಿರುವ ಮಾತುಕತೆಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಪ್ರಧಾನಿಯಾದ ಬಳಿಕ ಮೋದಿ ಕೈಗೊಳ್ಳುತ್ತಿರುವ ಐದನೇ ಅಮೆರಿಕ ಪ್ರವಾಸವಿದು. ಅಂತೆಯೇ ಮೋದಿ ಮತ್ತು ಟ್ರಂಪ್‌ ನಡುವಿನ ಮೊದಲ ದ್ವಿಪಕ್ಷೀಯ ಮಾತುಕತೆಯೂ ಹೌದು. 2014ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ನೀಡಿದ ಭೇಟಿಯಲ್ಲಿ ದ್ವಿಪಕ್ಷೀಯ ಸಂಬಂಧ ವರ್ಧನೆಯ ಜತೆಗೆ ಅಮೆರಿಕದಲ್ಲಿರುವ ಭಾರತೀಯ ಮೂಲದವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶ ಇತ್ತು. ಮ್ಯಾಡಿಸನ್‌ ಸ್ಕ್ವೇರ್‌ನಲ್ಲಿ ಈ ಉದ್ದೇಶಕ್ಕಾಗಿಯೇ ಅನಿವಾಸಿ ಭಾರತೀಯರ ಸಮಾವೇಶನ್ನು ಏರ್ಪಡಿಸಲಾಗಿತ್ತು. ಎರಡನೇ ಭೇಟಿಯಲ್ಲಿ ಆ್ಯಪಲ್‌, ಮೈಕ್ರೋಸಾಫ್ಟ್, ಫೇಸ್‌ಬುಕ್‌, ಗೂಗಲ್‌, ಕ್ವಾಲ್ಕಮ್‌, ಸಿಸ್ಕೊ, ಅಡೋಬ್‌, ಟೆಸ್ಲಾ ಮತ್ತಿತರ ಜಾಗತಿಕ ಸಂಸ್ಥೆಗಳ ಸಿಇಒಗಳನ್ನು ಭೇಟಿ ಮಾಡುವ ಮೂಲಕ ಡಿಜಿಟಲ್‌ ವಾಣಿಜ್ಯ ವ್ಯವಹಾರಗಳ ಉತ್ತೇಜನಕ್ಕೆ ಪ್ರಯತ್ನ ನಡೆಯಿತು. ಕಳೆದ ವರ್ಷ ಮಾರ್ಚ್‌ನಲ್ಲಿ ಪರಮಾಣು ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ಮೋದಿ ಅಮೆರಿಕಕ್ಕೆ ಹೋಗಿದ್ದರು. ನಾಲ್ಕನೇ ಭೇಟಿಯಲ್ಲಿ ಪೂರ್ಣ ಪ್ರಮಾಣದ ದ್ವಿಪಕ್ಷೀಯ ಮಾತುಕತೆ ನಡೆಸಲಾಯಿತು. ಈ ಎಲ್ಲ ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದವರು ಬರಾಕ್‌ ಒಬಾಮಾ. ಆದರೆ ಈ ಐದನೇ ಭೇಟಿಯ ಸಂದರ್ಭದಲ್ಲಿ ಅಮೆರಿಕದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ ಹಾಗೂ ಈ ಬದಲಾವಣೆ ಜಾಗತಿಕ ಪರಿಣಾಮಗಳನ್ನು ಬೀರಿದೆ. ಹೀಗಾಗಿ ಟ್ರಂಪ್‌ ಮತ್ತು ಮೋದಿ ಭೇಟಿಯನ್ನು ಇಡೀ ವಿಶ್ವ ಎದುರು ನೋಡುತ್ತಿದೆ. 

ಟ್ರಂಪ್‌-ಮೋದಿ ಮಾತುಕತೆಯ ಅಜೆಂಡಾ ಏನು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಇದು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಆಯಾಮಗಳಿರುವ ಭೇಟಿ ಎನ್ನಲಾಗುತ್ತಿದೆ. ಹೂಡಿಕೆಯ ಹರಿವು, ತಂತ್ರಜ್ಞಾನ ಮತ್ತು ಅನ್ವೇಷಣೆಗಳ ಸಹಭಾಗಿತ್ವ, ಭಯೋತ್ಪಾದನೆ ನಿಗ್ರಹ, ಸೈಬರ್‌ ಭದ್ರತೆ ಸಹಕಾರ, ರಕ್ಷಣಾ ಸಹಕಾರ ಇತ್ಯಾದಿ ಮಾಮೂಲು ದ್ವಿಪಕ್ಷೀಯ ವಿಚಾರಗಳು ಚರ್ಚೆಗೆ ಬರಲಿವೆ. ಪಾಕಿಸ್ತಾ ನಕ್ಕೆ ಸಂಬಂಧಿಸಿದಂತೆ ಟ್ರಂಪ್‌ ಸರಕಾರ ಬಿಗಿ ನಿಲುವು ತಳೆದಿದೆ. ಪಾಕ್‌ಗೆ ನೀಡುವ ನೆರವನ್ನು ಕಡಿತಗೊಳಿಸುವ ಪ್ರಸ್ತಾವವೂ ಅವರ ಬಳಿಯಿದೆ. ಜತೆಗೆ ಪಾಕ್‌ನ ಉಗ್ರರ ಅಡಗುತಾಣಗಳಿಗೆ ಡ್ರೋನ್‌ ದಾಳಿ ಮಾಡುವ ಸಾಧ್ಯತೆಯನ್ನೂ ಅಮೆರಿಕ ಪರಿಶೀಲಿಸುತ್ತಿದೆ. ಭಯೋತ್ಪಾದನೆ ವಿಚಾರದಲ್ಲಿ ಅಮೆರಿಕ ಕೈಗೊಳ್ಳುವ ಯಾವುದೇ ನಿರ್ಧಾರ ಭಾರತಕ್ಕೆ ಅನುಕೂಲಕರವಾಗಿರುತ್ತದೆ ಎಂದು ನಿರೀಕ್ಷಿಸಬಹುದು. ಭಾರತ ಬಹುಕಾಲದಿಂದ ನಿರೀಕ್ಷಿಸುತ್ತಿದ್ದ 22 ಗಾರ್ಡಿಯನ್‌ ಡ್ರೋನ್‌ಗಳನ್ನು ನೀಡಲು ಅಮೆರಿಕ ಒಪ್ಪಿಕೊಂಡಿರುವುದು ಸಕಾರಾತ್ಮಕವಾದ ಬೆಳವಣಿಗೆ. 

ಇದೇ ವೇಳೆ ಚೀನಕ್ಕೆ ಮೋದಿ-ಟ್ರಂಪ್‌ ಮಾತುಕತೆ ಮೇಲೆ ಮಿತಿಮೀರಿದ ಕುತೂಹಲ ಇರುವಂತೆ ಕಾಣಿಸುತ್ತದೆ. ಏಶ್ಯಾ ಫೆಸಿಫಿಕ್‌ ವಲಯದಲ್ಲಿ ಸೇನಾ ಸಂಬಂಧವನ್ನು ಗಟ್ಟಿಗೊಳಿಸುವ ಯಾವುದೇ ಕ್ರಮ ದಕ್ಷಿಣ ಚೀನ ಸಾಗರದ ಮೇಲಿನ ಶಾಂತಿಯನ್ನು ಕದಡುವ ಸಾಧ್ಯತೆಯಿದೆ ಎಂದು ಚೀನ ಬಹಿರಂಗವಾಗಿ ಎಚ್ಚರಿಸಿದೆ. ದಕ್ಷಿಣ ಚೀನ ಸಮುದ್ರದ ಮೇಲಿನ ತನ್ನ ಸಾರ್ವಭೌಮತ್ವಕ್ಕೆ ಎದುರಾಗುವ ಯಾವ ಸವಾಲನ್ನು ಕೂಡ ಸಹಿಸಲು ಚೀನ ತಯಾರಿಲ್ಲ. ತನ್ನದೇ ಪ್ರಯತ್ನದಿಂದ ಇಲ್ಲಿ ಶಾಂತಿ ನೆಲೆಯಾಗಿದೆ ಎಂದು ಹೇಳಿಕೊಳ್ಳುತ್ತಿರುವ ಚೀನ, ಭಾರತ ಮತ್ತು ಅಮೆರಿಕ ಶಾಂತಿಗೆ ಅಪಾಯಕಾರಿ ಎಂದು ಭಾವಿಸಿದೆ. 

ಇದೇ ವೇಳೆ ಟ್ರಂಪ್‌ ಸರಕಾರದ ಎಚ್‌1ಬಿ ವೀಸಾ ನೀತಿಯ ಕುರಿತು ಮೋದಿ ನಡೆಸಬಹುದಾದ ಮಾತುಕತೆಯ ಮೇಲೂ ಚೀನಕ್ಕೆ ಆಸಕ್ತಿಯಿದೆ. ಏಕೆಂದರೆ ಟ್ರಂಪ್‌ ವೀಸಾ ನೀತಿಯಿಂದ ಹೆಚ್ಚು ನಷ್ಟವಾಗಿರುವುದು ಚೀನ ಮತ್ತು ಭಾರತಕ್ಕೆ. ಮೋದಿ ಭೇಟಿಯಿಂದ ವೀಸಾ ವಿಚಾರದಲ್ಲಿ ಟ್ರಂಪ್‌ ಮೆದುವಾದರೆ ಅದರ ಲಾಭ ತನಗೂ ಸಿಗಬಹುದು ಎನ್ನುವುದು ಚೀನದ ಲೆಕ್ಕಾಚಾರ. ಪಾಕ್‌ ಈ ಭೇಟಿಯನ್ನು ಆತಂಕದಿಂದಲೇ ಗಮನಿಸುತ್ತದೆ. ಭಾರತ ಮತ್ತು ಅಮೆರಿಕ ನಿಕಟವಾದಷ್ಟೂ ತನಗೆ ಗಂಡಾಂತರ ಎನ್ನುವುದು ಅದಕ್ಕೆ  ಚೆನ್ನಾಗಿ ಅರ್ಥವಾಗಿದೆ. ಪ್ರಧಾನಿ ಮೋದಿಯವರ ಅಮೆರಿಕ ಭೇಟಿ, ಟ್ರಂಪ್‌ ಅವರ ಕೆಲವು ಕಠಿಣ, ಹಠಮಾರಿ ಧೋರಣೆ  ಹೊರತಾಗಿ  ಭಾರತಕ್ಕೆ ಅನುಕೂಲವಾಗಲಿ ಎಂಬುದೇ ಹಾರೈಕೆ. 

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.