ಅರಗಿಸಿಕೊಳ್ಳಲಾಗದ ದುರಂತ


Team Udayavani, Dec 9, 2021, 6:00 AM IST

ಅರಗಿಸಿಕೊಳ್ಳಲಾಗದ ದುರಂತ

ಮೂರು ಸಶಸ್ತ್ರ ಪಡೆಗಳ ಮೊಟ್ಟ ಮೊದಲ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಅವರ ನಿಧನ ದೇಶ ಅಷ್ಟು ಸುಲಭದಲ್ಲಿ ಅರಗಿಸಿಕೊಳ್ಳಲಾಗದ ದುರಂತ. ರಕ್ಷಣ ಕ್ಷೇತ್ರದಲ್ಲಿ ಸುಧಾರಣೆಯ ಬೀಜ ಬಿತ್ತಿದ್ದ ಜ| ಬಿಪಿನ್‌ ರಾವತ್‌ ಅವರು, ಕರ್ತವ್ಯದಲ್ಲಿದ್ದಾಗಲೇ ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇವರ ಜತೆಗೆ ಪತ್ನಿ ಮಧುಲಿಕಾ ರಾವತ್‌ ಮತ್ತು ಕಾಪ್ಟರ್‌ ಸಿಬಂದಿಯೂ ಸೇರಿ ಒಟ್ಟು 14 ಮಂದಿಯಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಜ| ಬಿಪಿನ್‌ ರಾವತ್‌ ಅವರಿದ್ದ ಹೆಲಿಕಾಪ್ಟರ್‌ ದುರಂತ ಹಲವು ಆತಂಕಕಾರಿ ಪ್ರಶ್ನೆಗಳನ್ನು ಎದುರಿಟ್ಟಿದೆ. ಸೇನಾ ಮುಖ್ಯಸ್ಥರು, ಪ್ರಧಾನಿ, ರಾಷ್ಟ್ರಪತಿ ಅವರನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯದ ಅತ್ಯಂತ ಸುರಕ್ಷಿತ ಎಂದೇ ಪರಿಗಣಿಸಲ್ಪಡುವ ಈ ಹೆಲಿಕಾಪ್ಟರ್‌ ದುರಂತಕ್ಕೀಡಾಗಿದ್ದು, ಸಾಮಾನ್ಯ ಸಂಗತಿಯಲ್ಲ. ಈ ಘಟನೆಗೆ ಏನು ಕಾರಣ ಎಂಬ ಲೆಕ್ಕಾಚಾರಗಳು, ಊಹೆಗಳು ಈಗ ಮೇಲುಗೈ ಸಾಧಿಸುತ್ತಿವೆ. ಈ ಕುರಿತು ಭಾರತೀಯ ವಾಯುದಳ ತನಿಖೆಗೆ ಆದೇಶಿಸಿದ್ದು, ಈ ದುರ್ಘ‌ಟನೆ ಹಿಂದಿನ ಸತ್ಯ ಹೊರಬೀಳುವವರೆಗೆ ದೇಶಕ್ಕೆ  ನೆಮ್ಮದಿ ಇಲ್ಲ. ಘಟನೆ ಹಿಂದೆ ವಿದ್ರೋಹಿಗಳ ಸಂಚು ಇದೆ ಎಂಬ ವ್ಯಾಖ್ಯಾನಗಳೂ ಕೇಳಿಬಂದವಾದರೂ, ಸತ್ಯಾಸತ್ಯತೆ ಹೊರಬೀಳುವ ತನಕ ಕಾಯಲೇಬೇಕು.

ಭಾರತೀಯ ಸೇನೆಯಲ್ಲಿ ಹೊಸ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ  ಜ| ಬಿಪಿನ್‌ ರಾವತ್‌ ಅವರ ದುರಂತ ಸಾವು ಈ ದೇಶ ಇತಿಹಾಸದುದ್ದಕ್ಕೂ ಮರೆಯಲಾಗದ ಸಂಗತಿ. ಸೇನೆಗೆ ಬೇಕಾಗಿರುವ ಶಸ್ತ್ರಾಸ್ತ್ರಗಳಿಗಾಗಿ ವಿದೇಶಿ ಅವಲಂಬನೆ ಬಿಟ್ಟು, ಸ್ವದೇಶಿಯಾಗಿಯೇ ತಯಾರಿಸಬೇಕು ಎಂಬುದು ಇವರ ಮಹದಾಸೆಯಾಗಿತ್ತು. ಅಲ್ಲದೇ, ಸ್ವತಂತ್ರ ಭಾರತದಲ್ಲಿಯೇ ಮೊದಲ ಬಾರಿಗೆ ಇಂಥ ಸುಧಾರಣೆಗೆ ಜ|ರಾವತ್‌ ಅವರು ಕೈಹಾಕಿದ್ದರು.

ಇದನ್ನೂ ಓದಿ:ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿ

2019ರ ಆರಂಭದಲ್ಲೇ ಸಿಡಿಎಸ್‌ ಅಧಿಕಾರ ವಹಿಸಿಕೊಂಡಿದ್ದ ಜ|ರಾವತ್‌ ಅವರು, ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ನಡುವಿನ ಸಮನ್ವಯಕ್ಕಾಗಿ ಶ್ರಮಿಸುತ್ತಿದ್ದರು. ಅಲ್ಲದೆ, ಈ ಮೂರು ದಳಗಳನ್ನು ಒಳಗೊಂಡ ಕಮಾಂಡ್‌ವೊಂದನ್ನು ರಚಿಸಲು ಯೋಜನೆ ರೂಪಿಸಿದ್ದರು. ಇದನ್ನು ಪೂರ್ವ ಮತ್ತು ಪಶ್ಚಿಮದ ಮುಂಚೂಣಿ ನೆಲೆಗಳಲ್ಲಿ ಸ್ಥಾಪಿಸಲು ಮುಂದಾಗಿದ್ದರು. ಅಂದರೆ, ಪಾಕಿಸ್ತಾನ ಮತ್ತು ಚೀನಾದ ಯಾವುದೇ ಚಿತಾವಣೆಗೆ ತಕ್ಕ ಎದಿರೇಟು ನೀಡುವುದು ಇವರ ಆಲೋಚನೆಯಾಗಿತ್ತು. ಸದ್ಯ ದೇಶದಲ್ಲಿ 17 ಕಮಾಂಡ್‌ಗಳಿದ್ದು, ಭಾರತೀಯ ಸೇನೆ ಮತ್ತು ವಾಯುಸೇನೆಗೆ ತಲಾ 7 ಕಮಾಂಡ್‌ಗಳು ಮತ್ತು ನೌಕಾದಳಕ್ಕೆ ಮೂರು ಕಮಾಂಡ್‌ಗಳಿವೆ.

ಇದರ ಜತೆಗೆ ಮೂರು ದಳಗಳನ್ನು ಒಳಗೊಂಡ ಥಿಯೇಟರ್‌ ಕಮಾಂಡ್‌ ರಚನೆಗೂ ಜ|ರಾವತ್‌ ಅವರು ಮುಂದಾಗಿದ್ದರು. ಅಂದರೆ ನೌಕಾದಳ ಮತ್ತು ವಾಯು ಸೇನೆಗೆ ಸಮ್ಮಿಳಿತ ಕಮಾಂಡ್‌ಗಳನ್ನು ರಚಿಸುವ ಯೋಜನೆ ರೂಪಿಸಿದ್ದರು. ಇದಕ್ಕೆ ವಾಯುಸೇನೆಯ ಒಳಗೆ ಟೀಕೆಯೂ ವ್ಯಕ್ತವಾಗಿತ್ತು. ಆದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಜ|ರಾವತ್‌ ಅವರು, ನೌಕಾದಳಕ್ಕಾಗಿ ಮೊದಲ ಸಮ್ಮಿಳಿತ ಕಮಾಂಡ್‌ ರಚನೆಯ ನಿರ್ಧಾರ ಮಾಡಿದ್ದರು. ಇದು 2022ರ ಮಧ್ಯಭಾಗದಲ್ಲಿ ಜಾರಿಗೆ ಬರಬೇಕಾಗಿತ್ತು.

2016ರಲ್ಲಿ ಭಾರತ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್‌ ದಾಳಿ ನಡೆಸಿದಾಗ, ಇದರ ಯೋಜನೆ ರೂಪಿಸಿದ್ದವರು ಜ|ರಾವತ್‌ ಅವರು. ಅಲ್ಲದೆ ಈಶಾನ್ಯ ಭಾರತದಲ್ಲಿನ ಉಗ್ರವಾದ ಮಟ್ಟಹಾಕುವಲ್ಲಿಯೂ ಇವರ ಪಾತ್ರ ಗಣನೀಯವಾಗಿದೆ. ಯುದ್ಧತಂತ್ರ ವಿಚಾರದಲ್ಲಿ ನಿಪುಣರಾಗಿದ್ದ ಜ|ರಾವತ್‌ ಅವರು, ಸದಾ ಹಸನ್ಮುಖೀ. ಅಂದ ಹಾಗೆ, ಇವರು ಮಾಧ್ಯಮ ಮತ್ತು ಸಂವಹನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.