ಜನಸಂಖ್ಯೆ ಏರಿದಂತೆಯೇ ಸವಾಲು ಸಹ ಏರಿಕೆ


Team Udayavani, Nov 16, 2022, 6:00 AM IST

ಜನಸಂಖ್ಯೆ ಏರಿದಂತೆಯೇ ಸವಾಲು ಸಹ ಏರಿಕೆ

ಜಗತ್ತಿನ ಜನಸಂಖ್ಯೆ ಮಂಗಳವಾರಕ್ಕೆ ಎಂಟು ನೂರು ಕೋಟಿ ದಾಟಿ ಮುನ್ನಡೆದಿದೆ. ಹೆಚ್ಚುತ್ತಿರುವ ಜನಸಂಖ್ಯೆ ವರವೋ ಶಾಪವೋ ಎಂಬ ಬಗ್ಗೆ ಹಲವು ದಶಕಗಳಿಂದ ಪರ ವಿರೋಧದ ಚರ್ಚೆ ಮುಂದುವರಿದಿದೆ.

ಅದರಲ್ಲೂ ನಮ್ಮ ದೇಶದಲ್ಲಿ 141 ಕೋಟಿ ಮಂದಿ ಜನರು ಇದ್ದಾರೆ. ಮುಂದಿನ ವರ್ಷ ನಾವು ಜನಸಂಖ್ಯೆಯಲ್ಲಿ ಚೀನವನ್ನು ಮೀರಿಸಿ ಮೊದಲ ಸ್ಥಾನಕ್ಕೆ ಏರಲಿದ್ದೇವೆ ಎಂಬ ಬಗ್ಗೆ ವಿಶ್ವಸಂಸ್ಥೆ ಸೇರಿದಂತೆ ಹಲವು ಪರಿಣತ ಸಂಸ್ಥೆಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಪ್ರಕಾರ ನಮ್ಮ ದೇಶದಲ್ಲಿ 2050ರ ವೇಳೆಗೆ 166 ಕೋಟಿಗೆ ಏರಿಕೆಯಾಗಲಿದೆ.

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಹನ್ನೊಂದು ವರ್ಷಗಳ ಅವಧಿಯಲ್ಲಿ ಜಗತ್ತಿನ ಸಂಖ್ಯೆ 700 ಕೋಟಿಯಿಂದ 800 ಕೋಟಿಗೆ ಏರಿಕೆಯಾಗಿದೆ.

ಜಗತ್ತಿನ ವಿವಿಧ ಭಾಗಗಳಲ್ಲಿ ಏರಿಕೆಯಾದ ಜೀವನ ಮಟ್ಟ ಸುಧಾರಣೆ, ಹೊಸ ವೈದ್ಯಕೀಯ ಆವಿಷ್ಕಾರಗಳು, ಪೌಷ್ಟಿಕಾಂಶಯುಕ್ತವಾದ ಆಹಾರದಿಂದಾಗಿ ಭಾರತವೂ ಸೇರಿದಂತೆ ವಿಶ್ವದಲ್ಲಿ ಅನುಕೂಲಕರ ವಾತಾವರಣ ಉಂಟಾಗಿದೆ. ಮುಂದಿನ 15 ವರ್ಷಗಳಲ್ಲಿ ಅದು 900 ಕೋಟಿಗೆ ಹೆಚ್ಚಲಿದೆ.

1800ನೇ ಇಸ್ವಿಯಿಂದ 1900ನೇ ಇಸ್ವಿಯ ವರೆಗೆ 100 ಕೋಟಿಯಿಂದ 200 ಕೋಟಿ ಜನಸಂಖ್ಯೆಯ ಬೆಳವಣಿಗೆ ಆಗಿತ್ತು. ವಿಶ್ವಸಂಸ್ಥೆಯ ವರದಿಯ ಪ್ರಕಾರ 2080ರ ವೇಳೆಗೆ ಈಗಿನದ್ದಕ್ಕಿಂತ ಹೆಚ್ಚಾಗಲಿದೆ. ಅನಂತರದ ವರ್ಷಗಳಲ್ಲಿ ಏರಿಕೆ ಆಗುವ ಬದಲು ಕುಸಿತ ಕಾಣಲಿದೆ ಎಂದು ಅದರಲ್ಲಿ ಅಭಿಪ್ರಾಯಪಡಲಾಗಿದೆ. ನಮ್ಮ ದೇಶದ ಜನಸಂಖ್ಯೆ ಹೆಚ್ಚುತ್ತಿ­ರುವ ಬಗ್ಗೆ ವಿಶ್ವಸಂಸ್ಥೆ ಹೀಗೆ ಉಲ್ಲೇಖಿಸಿದೆ “ದೇಶದಲ್ಲಿನ ಜನಸಂಖ್ಯೆಯ ಬೆಳವಣಿಗೆ ಸ್ಥಿರವಾಗುವತ್ತ ಸಾಗಿದೆ. ಒಟ್ಟಾರೆ ಫ‌ಲವತ್ತತೆ ಪ್ರಮಾಣ 2.2ರಿಂದ 2.0ಕ್ಕೆ ಇಳಿಕೆಯಾಗಿದೆ’ ಎಂದು ಹೇಳಿದೆ. 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಫ‌ಲವತ್ತತೆ ಪ್ರಮಾಣ ಶೇ.2.1ಕ್ಕೆ ಇಳಿದಿದೆ.

ಜನಸಂಖ್ಯೆ 800 ಕೋಟಿ ದಾಟಿದ್ದನ್ನು ವಿಶ್ವಸಂಸ್ಥೆ “ಅತ್ಯುತ್ತಮ ಮೈಲು­ಗಲ್ಲು’ ಎಂದು ಘೋಷಣೆ ಮಾಡಿದೆ ನಿಜ. ಆದರೆ ಅಂಥ ಅವಕಾಶಗಳು ಇವೆಯೇ ಎಂದು ನೋಡಬೇಕಾಗುತ್ತದೆ. ಇದರ ಜತೆಗೆ ಜಗತ್ತಿನಲ್ಲಿ ಜನ­ಸಂಖ್ಯೆಯ ಏರಿಕೆ ನಿಧಾನವಾಗುತ್ತಿದೆ ಎಂದೂ ವಿಶ್ವಸಂಸ್ಥೆ ಹೇಳಿಕೊಂಡಿದೆ.

ಒಟ್ಟಾರೆಯಾಗಿ ಹೇಳಿಕೊಂಡಾಗ ಎಲ್ಲ ವ್ಯವಸ್ಥೆಯೂ ಸುಧಾರಣೆ ಆಗಿರುವುದರಿಂದ ಜನಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ. ಆದರೆ ಸದ್ಯಕ್ಕೆ ಈ ಅಂಶ ಮಾರಕವಾಗಿ ಪರಿಣಮಿಸಲಿದೆ ಎನ್ನುವುದು ಹಗಲಿನಷ್ಟೇ ಸತ್ಯ. ಹಾಗೆಂದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿದರೆ ಅದು ಕಷ್ಟವಾಗಲಾರದು ನಿಜ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಮತ್ತು ಪುರುಷರಲ್ಲಿ ಫ‌ಲವತ್ತತೆ ಕ್ಷೀಣಿಸುತ್ತಿದೆ. ಒಂದು ಅಧ್ಯಯನದ ಪ್ರಕಾರ 1950ರಲ್ಲಿ ಫ‌ಲವತ್ತತೆ ಪ್ರಮಾಣ 4.86 ಇದ್ದದ್ದು 2100ರ ವೇಳೆ 1.84ಕ್ಕೆ ಇಳಿಕೆಯಾಗಿದೆ. ಸಾವಿನ ಪ್ರಮಾಣ 46.46 ಇದ್ದದ್ದು 2100ರ ವೇಳೆಗೆ 82.6ಕ್ಕೆ ಏರಿಕೆಯಾಗಲಿದೆ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಜಗತ್ತಿನ ಸರಕಾರಗಳು ಜನಸಂಖ್ಯೆಯ ನಿಯಂತ್ರಣದತ್ತ ಗಮನ ಹರಿಸಬೇಕಾಗಿದೆ.

ಹೀಗೆ ಉಲ್ಲೇಖಿಸಲು ಕಾರಣವೂ ಇದೆ. ಈಗಿನ ಜನಸಂಖ್ಯೆಗೇ ಮೂಲ ಸೌಕರ್ಯ ಒದಗಿಸಲು ಸರಕಾರಗಳು ಪರದಾಡುತ್ತಿರುವ ಸಂದರ್ಭದಲ್ಲಿ ಇನ್ನು ಹೆಚ್ಚಾಗುತ್ತಿರುವ ಜನರಿಗೆ ಸೌಲಭ್ಯ ಒದಗಿಸಲು ಹೇಗೆ ಸಾಧ್ಯ ಎನ್ನುವುದು ಪ್ರಾಥಮಿಕ ಪ್ರಶ್ನೆಯಾಗುತ್ತದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.