ಯಶಸ್ವಿಯಾಗಿ ಅನುಷ್ಠಾನವಾಗಲಿ ಆಯುಷ್ಮಾನ್‌ ಭಾರತ 

Team Udayavani, Sep 25, 2018, 1:01 AM IST

ayushman-bharath-600.jpg

ಬಡವರೂ ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೂ ಉತ್ತಮವಾದ ಆರೋಗ್ಯ ಸೇವೆ ದೊರಕಬೇಕೆನ್ನುವ ಮಹದಾಶಯ ಹೊಂದಿರುವ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಥವಾ ಆಯುಷ್ಮಾನ್‌ ಭಾರತಕ್ಕೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಿದ್ದಾರೆ. ಅಮೆರಿಕದ ಒಬಾಮ ಕೇರ್‌ ಮಾದರಿಯಲ್ಲೇ ಮೋದಿ ಕೇರ್‌ ಎಂದು ಬಣ್ಣಿಸಲ್ಪಟ್ಟಿರುವ ಈ ಆರೋಗ್ಯ ವಿಮೆ ಯೋಜನೆ ಜಗತ್ತಿನಲ್ಲೇ ಅತಿ ದೊಡ್ಡದು ಎನ್ನುವ ಹಿರಿಮೆಗೆ ಪಾತ್ರವಾಗಿದೆ. ಸುಮಾರು 10 ಕೋಟಿ ಕುಟುಂಬಗಳು ಅಥವಾ 50 ಕೋಟಿ ಜನರಿಗೆ ಉಚಿತ ವೈದ್ಯಕೀಯ ಶುಶ್ರೂಷೆ ಕಲ್ಪಿಸುವುದು ಈ ಯೋಜನೆಯ ಗುರಿ. ಕಳೆದ ವರ್ಷ ರೂಪುಗೊಂಡ ರಾಷ್ಟ್ರೀಯ ಆರೋಗ್ಯ ನೀತಿಯಡಿಯಲ್ಲಿ ಪ್ರಸ್ತಾವಿಸಲಾಗಿದ್ದ ಈ ಯೋಜನೆಯ ಘೋಷಣೆಯನ್ನು ಮೋದಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಾಡಿದ್ದರು. ಇಡೀ ಯುರೋಪಿನ ಜನಸಂಖ್ಯೆಗೂ ಹೆಚ್ಚಿನ ಜನರಿಗೆ ಉಚಿತವಾಗಿ ಆರೋಗ್ಯ ವಿಮೆ ಒದಗಿಸುವ ಯೋಜನೆ ಸಮರ್ಪಕವಾಗಿ ಜಾರಿಗೊಂಡರೆ ಸಮಾಜಕ್ಕೆ ಉಪಯೋಗಿಯಾಗುವುದರಲ್ಲಿ ಅನುಮಾನವಿಲ್ಲ. ಇದೇ ವೇಳೆ ಬಿಜೆಪಿಗೆ ರಾಜಕೀಯವಾಗಿಯೂ ಪ್ರಯೋಜನಕಾರಿಯಾದೀತು.

ಒಂದು ಕುಟುಂಬಕ್ಕೆ ಎಷ್ಟೇ ಸದಸ್ಯರಿದ್ದರೂ ವಯಸ್ಸಿನ ಬೇಧವಿಲ್ಲದೆ 5 ಲ. ರೂ. ತನಕ ಆರೋಗ್ಯ ವಿಮೆ ಒದಗಿಸುವುದೇ ಆಯುಷ್ಮಾನ್‌ ಭಾರತ ಯೋಜನೆ. ವಿಮೆ ಕಂತನ್ನು ಕೇಂದ್ರ ಮತ್ತು ರಾಜ್ಯ 60 : 40 ಅನುಪಾತದಲ್ಲಿ ಭರಿಸಲಿರುವುದರಿಂದ ಜನರಿಗೆ ಯಾವುದೇ ಹಣಕಾಸಿನ ಹೊರೆ ಬೀಳುವುದಿಲ್ಲ. ಇತ್ತೀಚೆಗೆ ನಡೆಸಿದ ಸಾಮಾಜಿಕ-ಆರ್ಥಿಕ ಜಾತಿ ಗಣತಿಯ ದತ್ತಾಂಶಗಳನ್ನು ಆಧರಿಸಿ ಯೋಜನೆಯ ಫ‌ಲಾನುಭವಿಗಳನ್ನು ಗುರುತಿಸಲಾಗಿದೆ. ಈ ಪ್ರಕಾರ ಹಳ್ಳಿಗಳ 8.03 ಮತ್ತು ಪಟ್ಟಣ, ನಗರಗಳ 2.33 ಕೋಟಿ ಕುಟುಂಬಗಳು ಇದರ ವ್ಯಾಪ್ತಿಗೊಳಪಡಲಿವೆ. 

ಬೈಪಾಸ್‌, ಮಂಡಿಚಿಪ್ಪು ಜೋಡಣೆ ಸೇರಿದಂತೆ ಕೆಲವು ದುಬಾರಿ ಚಿಕಿತ್ಸೆಗಳೂ ಈ ಯೋಜನೆಯ ವ್ಯಾಪ್ತಿಯಲ್ಲಿರುವುದು ಒಂದು ಧನಾತ್ಮಕ ಅಂಶ. ಸರಕಾರಿ ಆಸ್ಪತ್ರೆಗಳ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಆಯುಷ್ಮಾನ್‌ ಭಾರತದಡಿಯಲ್ಲಿ ಚಿಕಿತ್ಸೆ ದೊರೆಯಲಿದೆ.ಆಯುಷ್ಮಾನ್‌ ಭಾರತ ವ್ಯಾಪ್ತಿಗೆ ಸೇರುವ ಆಸ್ಪತ್ರೆಗಳಲ್ಲಿ ಇದಕ್ಕಾಗಿಯೇ ಪ್ರತ್ಯೆಕ ಕೌಂಟರ್‌ ಸ್ಥಾಪಿಸುವ ಉತ್ತಮ ಪ್ರಸ್ತಾವವೂ ಇದೆ. ಜನರಿಗೆ ಕಾಗದಪತ್ರಗಳ ಕಿರಿಕಿರಿಯಿಲ್ಲದೆ ಆದಷ್ಟು ಸುಲಭವಾಗಿ ಚಿಕಿತ್ಸೆ ದೊರಕಬೇಕೆನ್ನುವ ಕಾಳಜಿ ಮೆಚ್ಚುವಂತದ್ದು. ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚಿಕಿತ್ಸೆಗೆ ಈಗಾಗಲೇ ಈ ಮಾದರಿಯ ಸರಕಾರಿ ನೆರವು ಇದ್ದರೂ ಅದಕ್ಕೆ ದಾಖಲೆಪತ್ರಗಳನ್ನು ಹೊಂದಿಸುವುದೇ ದೊಡ್ಡ ಹೊರೆಯಾಗುತ್ತಿತ್ತು. ಈ ಕಷ್ಟವನ್ನು ನೋಡಿಯೇ ಹೆಚ್ಚಿನವರು ಇದರ ಉಸಾಬರಿ ಬೇಡ ಎಂದು ದೂರವುಳಿಯುತ್ತಿದ್ದರು. ಈ ಅಂಶಕ್ಕೆ ಕೇಂದ್ರ ಗಮನ ಹರಿಸಿರುವುದು ಉತ್ತಮ ಅಂಶ. 

ಹತ್ತು ವರ್ಷಗಳಲ್ಲಿ ಭಾರತದ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚದಲ್ಲಿ ಶೇ. 300ರಷ್ಟು ಹೆಚ್ಚಳವಾಗಿದೆ.ಶೇ.80ಕ್ಕೂ ಅಧಿಕ ವೆಚ್ಚವನ್ನು ಜನರು ತಮ್ಮ ಉಳಿತಾಯದಿಂದಲೇ ಭರಿಸುತ್ತಿದ್ದಾರೆ. ತೀರಾ ಬಡವರಾದರೆ ಒಂದೋ ಏನೇನೂ ಸೌಲಭ್ಯಗಳಿಲ್ಲದ ಸರಕಾರಿ ಆಸ್ಪತ್ರೆಗೆ ಹೋಗಬೇಕು ಇಲ್ಲವೇ ಸಾಲ ಪಡೆದು ಆಸ್ಪತ್ರೆ ಶುಲ್ಕ ಕಟ್ಟಬೇಕು. ಅನೇಕ ಕುಟುಂಬಗಳಿಗೆ ಆರೋಗ್ಯ ಸಂಬಂಧಿ ಖರ್ಚುವೆಚ್ಚಗಳೇ ದೊಡ್ಡ ಹೊರೆಯಾಗಿದ್ದು, ಸುಮಾರು 6 ಕೋಟಿ ಕುಟುಂಬಗಳು ಇದರಿಂದಾಗಿ ಬಡತನ ರೇಖೆಗಿಂತ ಕೆಳಗಿವೆ ಎನ್ನುವ ವರದಿಯನ್ನು ಭಾರತ್‌ ಪಬ್ಲಿಕ್‌ ಹೆಲ್ತ್‌ ಫೌಂಡೇಶನ್‌ ಎಂಬ ಸಂಸ್ಥೆ ಇತ್ತೀಚೆಗೆ ಬಹಿರಂಗಪಡಿಸಿದೆ. ಬಡತನಕ್ಕೂ ಜನರ ಆರೋಗ್ಯಕ್ಕೂ ನೇರ ಸಂಬಂಧವಿದೆ ಎನ್ನುವುದು ಈ ವರದಿಯಿಂದ ಸ್ಪಷ್ಟವಾಗಿದೆ. ಇವರಿಗೆಲ್ಲ ನೆರವಾಗುವುದೇ ಆಯುಷ್ಮಾನ್‌ ಭಾರತದ ಉದ್ದೇಶ. ಹೀಗಾಗಿ ಇದು ದೊಡ್ಡ ಮಟ್ಟದ ಸಾಮಾಜಿಕ ಪರಿವರ್ತನೆಗೂ ಕಾರಣವಾದೀತು ಎಂಬ ನಿರೀಕ್ಷೆಯಿದೆ. ಉತ್ತಮ ಚಿಕಿತ್ಸೆ ಉಚಿತವಾಗಿ ಸಿಕ್ಕಿದರೆ ಜನರ ಆರೋಗ್ಯ ಉತ್ತಮವಾಗುವುದು ಮಾತ್ರವಲ್ಲದೆ ಉತ್ಪಾದಕತೆಯೂ ಹೆಚ್ಚುತ್ತದೆ. ಈ ಮೂಲಕ ಜನರ ಆರ್ಥಿಕ ಮಟ್ಟವೂ ಸುಧಾರಣೆಯಾಗಲಿದೆ ಎನ್ನುವ ನಿರೀಕ್ಷೆ ಕೇಂದ್ರದ್ದು. 

ಆಯುಷ್ಮಾನ್‌ ಭಾರತದ ಅನುಷ್ಠಾನ ಯಶಸ್ವಿಯಾಗಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಮನ್ವಯ ಇರುವುದು ಅಗತ್ಯ. 30 ರಾಜ್ಯಗಳು ಈ ಯೋಜನೆಯಲ್ಲಿ ಸಹಭಾಗಿಯಾಗಲು ಒಪ್ಪಿಕೊಂಡಿರುವುದರಿಂದ ಅನುಷ್ಠಾನಕ್ಕೆ ಹೆಚ್ಚಿನ ಅಡ್ಡಿ ಉಂಟಾಗದು. ತೆಲಂಗಾಣ, ಒಡಿಶಾ, ದಿಲ್ಲಿ, ಕೇರಳ ಮತ್ತು ಪಂಜಾಬ್‌ ರಾಜ್ಯಗಳು ಮಾತ್ರ ಇನ್ನೂ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿಯೇತರ ಸರಕಾರಗಳು ಆಡಳಿತ ನಡೆಸುತ್ತಿವೆ ಎನ್ನುವುದು ಗಮನಾರ್ಹ ಅಂಶ. ಆಯುಷ್ಮಾನ್‌ ಭಾರತದಂಥ ಉತ್ತಮ ಯೋಜನೆಗೆ ರಾಜಕೀಯ ಬೇಧಗಳು ಯಾವುದೇ ರೀತಿಯಲ್ಲಿ ಅಡಚಣೆಯಾಗಬಾರದು. ಅಂತಿಮವಾಗಿ ಇದು ಜನರ ಒಳಿತನ್ನು ಗುರಿಯಾಗಿಸಿಕೊಂಡಿರುವ ಯೋಜನೆ. ಹೀಗಾಗಿ ಎಲ್ಲ ರಾಜ್ಯಗಳಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳುವುದು ಸರಕಾರಗಳ ಹೊಣೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

Protest: ಕಾಶ್ಮೀರ ಚರ್ಚೆ: ಆಕ್ಸ್‌ಫ‌ರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

school

Karnataka; ಶಾಲಾ ಆಸ್ತಿ ಸಂರಕ್ಷಣೆ ಅಭಿಯಾನ ಎಲ್ಲ ಇಲಾಖೆಗಳಿಗೂ ಮಾದರಿ

Forest

Forest: ಅರಣ್ಯದಲ್ಲಿ ನಿರಂತರ ಗಣಿಗಾರಿಕೆ: ಸರಕಾರ ಚರ್ಚಿಸಿ ನಿರ್ಧರಿಸಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

CID

CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.