ಉಪಚುನಾವಣೆ ಫ‌ಲಿತಾಂಶ: ರಾಷ್ಟ್ರ ರಾಜಕಾರಣಕ್ಕೂ ಸಂದೇಶ 


Team Udayavani, Nov 8, 2018, 6:00 AM IST

jds-bjp-congress.jpg

ರಾಜ್ಯದಲ್ಲಿ ಮೂರು ವಿಧಾನಸಭೆ ಮತ್ತು ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫ‌ಲಿತಾಂಶ ವಿಶೇಷ ಅಚ್ಚರಿಗೇ ಕಾರಣವಾಗದಿದ್ದರೂ ಸ್ಪಷ್ಟ ಸಂದೇಶವನ್ನು ನೀಡಿದೆ. ಸಾಮಾನ್ಯವಾಗಿ ಉಪಚುನಾವಣೆ ನಡೆದಾಗ ಆಡಳಿತ ಪಕ್ಷದ ಅಭ್ಯರ್ಥಿಗಳೇ ಗೆಲ್ಲುವುದು ಮಾಮೂಲು ವಿಚಾರ. ಹೀಗಾಗಿ ಈ ಫ‌ಲಿತಾಂಶ ಅಚ್ಚರಿ ಎನ್ನುವಂತಿಲ್ಲ. ಆದರೆ ರಾಜ್ಯ ಮತ್ತು ರಾಷ್ಟ್ರ ರಾಜಕೀಯಕ್ಕೆ ಫ‌ಲಿತಾಂಶದಿಂದ ಹೋಗಿರುವ ಸಂದೇಶ ಮಾತ್ರ ಬಹಳ ಸ್ಪಷ್ಟವಾಗಿದೆ. 

ಅದೆಂದರೆ ಬಿಜೆಪಿಯನ್ನು ಮಣಿಸಬೇಕಾದರೆ ಮೈತ್ರಿ ಮಾಡಿಕೊಳ್ಳಬೇಕು ಎನ್ನುವುದು. ಫ‌ಲಿತಾಂಶದಿಂದ ರಾಜ್ಯದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ಇನ್ನಷ್ಟು ಗಟ್ಟಿಯಾಗಿದೆ. ಕನಿಷ್ಠ 2019ರ ಮಹಾಚುನಾವಣೆ ತನಕ ಸರಕಾರದ ಸ್ಥಿರತೆಗೆ ಯಾವುದೇ ತೊಂದರೆಯಾಗಲಾರದು. ಅಂತೆಯೇ ಲೋಕಸಭೆ ಚುನಾವಣೆಗೆ ಮೈತ್ರಿ ಮುಂದುವರಿಸಲು ಜನಾದೇಶ ಸಿಕ್ಕಿದೆ ಎಂದು ಭಾವಿಸಬಹುದು. 

ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದು ನಿಜ. ಆದರೆ ಅದಕ್ಕೆ ಮುಖ್ಯ ಕಾರಣ ರಾಜ್ಯದ ನಾಯಕರ ಬೇಜವಾಬ್ದಾರಿ ಮತ್ತು ತಂತ್ರಗಾರಿಕೆಯಿ ಲ್ಲದ ರಾಜಕಾರಣ. ಮಹಾಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿರುವಾಗ ಯಾರಿಗೂ ಈ ಉಪಚುನಾವಣೆ ಬೇಕಾಗಿರಲಿಲ್ಲ. ಹಾಗೆಂದು ಅನಿವಾರ್ಯವಾಗಿ ಬಂದ ಚುನಾವಣೆಯನ್ನು ಎದುರಿಸದೆ ಸುಮ್ಮನಿರು ವಂತೆಯೂ ಇರಲಿಲ್ಲ. ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದರೆ ಬಿಜೆಪಿ ನಾಯಕರು ಮಾತ್ರ ತಮ್ಮ ಗುಂಪುಗಾರಿಕೆಯನ್ನು ಬಿಡದೆ ಕೊನೆಯ ತನಕವೂ ಗೊಂದಲದಲ್ಲಿಯೇ ಕಳೆದರು. ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಗ ಸ್ಪರ್ಧಿಸಿದ ಶಿವಮೊಗ್ಗಕ್ಕೆ ಹೆಚ್ಚಿನ ಗಮನ ಹರಿಸಿದರು. ಬಳ್ಳಾರಿಯಲ್ಲಿ ಶ್ರೀರಾಮುಲು ಒಬ್ಬರೇ ಕಾದಾಡಬೇಕಾಯಿತು. ಒಟ್ಟಾರೆ ಸಮನ್ವಯತೆಯ ಕೊರತೆ ಬಿಜೆಪಿಯ ಹಿನ್ನಡೆಗೆ ಕಾರಣವಾಯಿತು. 

ಆಪರೇಶನ್‌ ಕಮಲ ಎಲ್ಲ ಸಂದರ್ಭಗಳಲ್ಲಿ ನಡೆಯುವುದಿಲ್ಲ ಎನ್ನುವ ಪಾಠವನ್ನು ಬಿಜೆಪಿಗೆ ಈ ಚುನಾವಣೆ ಕಲಿಸಿರಬಹುದು. ಬೇರೆ ಪಕ್ಷಗಳಿಂದ ಕರೆತಂದ ಎರವಲು ಅಭ್ಯರ್ಥಿಗಳು ಮತ್ತು ನಾಯಕರು ನಂಬಿಕಾರ್ಹರಲ್ಲ ಎನ್ನುವುದನ್ನು ರಾಮನಗರ ಕ್ಷೇತ್ರದಲ್ಲಾದ ಬೆಳವಣಿಗೆಯಿಂದ ಬಿಜೆಪಿ ಕಲಿತುಕೊಳ್ಳಬೇಕು.ಇದೇ ವೇಳೆ ಜೆಡಿಎಸ್‌ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿ ತಳಮಟ್ಟದಿಂದ ಬಲವರ್ಧಿಸಿಕೊಳ್ಳುತ್ತಿದೆ ಎನ್ನುವುದು ಅದು ಗಳಿಸಿರುವ ಮತದಿಂದ ಅರಿವಾಗುತ್ತದೆ. ಇನ್ನಷ್ಟು ಪ್ರಯತ್ನ ಪಟ್ಟಿದ್ದರೆ ಈ ಕ್ಷೇತ್ರಗಳಲ್ಲಿ ಪ್ರಬಲ ಸ್ಪರ್ಧೆ ನೀಡಲು ಸಾಧ್ಯವಿದೆ. ರಾಷ್ಟ್ರಮಟ್ಟದ ಮಹಾಘಟಬಂಧನ್‌ ರಚನೆಗೆ ಕುಮಾರಸ್ವಾಮಿ ಪದಗ್ರಹಣ ಸಮಾರಂಭವೇ ವೇದಿಕೆಯಾಗಿತ್ತು. ಇದೀಗ ಕರ್ನಾಟಕದ ಉಪಚುನಾವಣೆ ಮಹಾಘಟಬಂಧನ್‌ಗೆ ಉತ್ತೇಜನಕಾರಿಯಾದ ಫ‌ಲಿತಾಂಶ ನೀಡಿರುವುದು ಕಾಕತಾಳೀಯ ಎನ್ನಬಹುದೇನೋ. ಇನ್ನುಳಿದ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳಲ್ಲಿ ಕರ್ನಾಟಕ ಮಾದರಿಯ ಮೈತ್ರಿ ಮಾಡಿಕೊಳ್ಳಲು ಈ ಫ‌ಲಿತಾಂಶ ಪ್ರೇರಕದಂತೆ ಕೆಲಸ ಮಾಡಬಹುದು. 

ಈ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ, ಶ್ರೀರಾಮುಲು ಸೇರಿದಂತೆ ಕೆಲವು ನಾಯಕರ ನೈಜ ಸಾಮರ್ಥ್ಯವೂ ಅನಾವರಣಗೊಂಡಿದೆ. ಬಳ್ಳಾರಿಯಲ್ಲಿ ಹೊರಗಿನವರಾದ ಉಗ್ರಪ್ಪ ಅವರನ್ನು ನಿಲ್ಲಿಸಿಯೂ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಿರುವುದು ಶಿವಕುಮಾರ್‌ ಮತ್ತು ಸಿದ್ದರಾಮಯ್ಯನವರ ರಾಜಕೀಯ ತಂತ್ರಗಾರಿಕೆಗೆ ಸಂದ ಗೆಲುವು. ಇಲ್ಲಿ ಬಿಜೆಪಿ ಮತ್ತು ವೈಯಕ್ತಿಕವಾಗಿ ರಾಮುಲು ದಯನೀಯ ವೈಫ‌ಲ್ಯ ಕಂಡಿದ್ದಾರೆ. ಅಂತೆಯೇ ಶಿವಮೊಗ್ಗದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಒಟ್ಟಾದರೂ ಗೆಲುವು ದಕ್ಕಲಿಲ್ಲ. ಇದು ಈಗಲೂ ಬಿಜೆಪಿ ಕೋಟೆಯಾಗಿಯೇ ಉಳಿದಿದೆ ಎನ್ನುವುದು ಸ್ಪಷ್ಟವಾಗಿದೆ. ವಿಧಾನಸಭೆ ಕ್ಷೇತ್ರಗಳ ಪೈಕಿ ರಾಮನಗರ ಮತ್ತು ಜಮಖಂಡಿಯ ಫ‌ಲಿತಾಂಶ ನಿರೀಕ್ಷತವೇ ಆಗಿತ್ತು. ಗೆಲುವಿನ ಅಂತರ ಎಷ್ಟು ಎನ್ನುವುದಷ್ಟೇ ಉಳಿದಿದ್ದ ಕುತೂಹಲ. 

ಗೆಲುವಿನ ಅಂತರ ಸಾಕಷ್ಟು ಹೆಚ್ಚಿರುವುದರಿಂದ ಸಮ್ಮಿಶ್ರ ಸರಕಾರಕ್ಕೆ ಜನರ ಸಮ್ಮತಿಯಿದೆ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಹೇಳಿಕೊಳ್ಳಬಹುದು. ವಿಧಾನಸಭೆ ಚುನಾವಣೆಯಲ್ಲಿ 100ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಮೂಡಿಬಂದಿದ್ದ ಬಿಜೆಪಿ ಇದೀಗ ಮುಂದಿನ ಚುನಾವಣೆಯನ್ನು ಎದುರಿಸಲು ತನ್ನ ಕಾರ್ಯತಂತ್ರವನ್ನು ಆಮೂಲಾಗ್ರವಾಗಿ ಬದಲಿಸುವ ಅಗತ್ಯವನ್ನು ಈ ಫ‌ಲಿತಾಂಶ ಒತ್ತಿ ಹೇಳಿದೆ. ಮೋದಿ ಮತ್ತು ಅಮಿತ್‌ ಶಾ ಬಂದರೆ ಮಾತ್ರ ಚುನಾವಣೆ ಗೆಲ್ಲಬಹುದು ಎಂಬ ಮನಸ್ಥಿತಿಯಿಂದ ಬಿಜೆಪಿ ಹೊರಬರಬೇಕಾದ ಅಗತ್ಯವಿದೆ.
 
ವಿಧಾನಸಭೆ ಚುನಾವಣೆಗೆ ಮುನ್ನ ನಡೆಸಿದ ಸಮೀಕ್ಷೆಯೊಂದರಲ್ಲಿ ಒಂದು ವೇಳೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜತೆಯಾಗಿ ಸ್ಪರ್ಧಿಸಿದರೆ ಯಾವ ರೀತಿಯ ಫ‌ಲಿತಾಂಶ ಬರಬಹುದು ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ನಡೆಸಲಾಗಿತ್ತು. ಈ ಸಮೀಕ್ಷೆ ಪ್ರಕಾರ ಮೈತ್ರಿಕೂಟ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿತ್ತು. ಆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆಯಿತ್ತು. ಹೀಗಾಗಿ ಮತ ವಿಭಜನೆಯಾಗಿ ಬಿಜೆಪಿ ದೊಡ್ಡ ಪಕ್ಷವಾಯಿತು. ಆದರೆ ಮುಂಬರುವ ಚುನಾವಣೆಯಲ್ಲಿ ದ್ವಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯೇ ಹೆಚ್ಚು. ಹೀಗಾಗಿ, ಬದಲಾಗುತ್ತಿರುವ ರಾಜಕೀಯ ಸಮೀಕರಣಕ್ಕೆ ತಕ್ಕಂತೆ ತಂತ್ರ ರಚನೆಯೂ ಅಗತ್ಯ ಎನ್ನುವುದು ಫ‌ಲಿತಾಂಶ ಕಲಿಸಿದ ಪಾಠ.

ಟಾಪ್ ನ್ಯೂಸ್

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.