ಕಾಶ್ಮೀರದಲ್ಲಿ ಬದಲಾವಣೆ ಗಾಳಿ


Team Udayavani, Dec 7, 2017, 7:30 AM IST

kashmir.jpg

“ಕಾಶ್ಮೀರದಲ್ಲಿ ಶಾಂತಿಯ ಮರವಿನ್ನು ಸತ್ತಿಲ್ಲ, ಅದರ ಬೇರುಗಳು ಜೀವಂತವಾಗಿರುವುದರಿಂದ ಹಸಿರು ಚಿಗುರುವುದನ್ನು ಕಾಣಬಯಸುತ್ತೇವೆ’ ಇದು ಗೃಹ ಸಚಿವ ರಾಜನಾಥ್‌ ಸಿಂಗ್‌ ಕೆಲ ಸಮಯದ ಹಿಂದೆ ಶ್ರೀನಗರದಲ್ಲಿ ಹೇಳಿದ ಮಾತು. ಇದೀಗ ಈ ಮಾತು ನಿಜವಾಗುವ ಒಂದೊಂದೇ ಸಾಧ್ಯತೆಗಳು ಗೋಚರಿಸುತ್ತಿವೆ. ಮುಖ್ಯವಾಗಿ ಕಾಶ್ಮೀರದ ಯುವ ಜನತೆಗೆ ಕಲ್ಲೆಸೆಯುವುದರಿಂದ ಮತ್ತು ಹಿಂಸಾಚಾರದಿಂದ ಏನನ್ನೂ ಸಾಧಿಸಲು ಆಗದು ಎಂದು ಅರ್ಥವಾಗಿರುವಂತೆ ಕಾಣಿಸುತ್ತದೆ. ಮುಖ್ಯವಾಹಿನಿಯಲ್ಲಿ ಬೆರೆಯಲು ಅವರಲ್ಲಿ ಹುಟ್ಟಿಕೊಂಡಿರುವ ಹಂಬಲವೇ ಇದನ್ನು ಸ್ಪಷ್ಟಪಡಿಸುತ್ತದೆ.

ಕೆಲವು ದಿನಗಳ ಹಿಂದೆ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೂಲಕ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವುದನ್ನೇ ಮುಖ್ಯ ಕಾರ್ಯಸೂಚಿಯನ್ನಾಗಿ ಮಾಡಿಕೊಂಡಿರುವ ಪಾಕಿಸ್ಥಾನದ ಲಷ್ಕರ್‌ ಎ ತಯ್ಯಬ ಸೇರಲು ಹೋದ ಯುವಕನೊಬ್ಬ ಒಂದೇ ವಾರದಲ್ಲಿ ಮರಳಿ ಬಂದಿದ್ದರೆ , ಇದೀಗ ಇಲ್ಲಿನ ಯುವತಿಯರ ಫ‌ುಟ್ಬಾಲ್‌ ತಂಡವೊಂದು ಆಟದ ಅಂಗಳಕ್ಕಳಿಯಲು ತಯಾರಾಗಿರುವುದು ಕಾಶ್ಮೀರದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ ಎನ್ನುವುದಕ್ಕೆ ಸಾಕ್ಷಿ. ಭದ್ರತಾ ಪಡೆಗಳ ಮೇಲೆ ಕಲ್ಲೆಸೆಯುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಅಫಾÏನ್‌ ಆಶಿಕ್‌ ಎಂಬಾಕೆಯೇ ಈ ಫ‌ುಟ್ಬಾಲ್‌ ತಂಡದ ನಾಯಕಿ ಎನ್ನುವುದು ಗಮನಾರ್ಹ ಅಂಶ. ಮಹಿಳಾ ಫ‌ುಟ್ಬಾಲ್‌ ತಂಡದವರು ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡಲು ಮನವಿ ಮಾಡಿದ್ದಾರೆ. ಮಹಿಳಾ ಕ್ರೀಡಾಪಟುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದಾರೆ. ಈ ಬೆಳವಣಿಗೆ ಕಾಶ್ಮೀರ ಸಮಸ್ಯೆ ಬಗೆಹರಿಯುವ ನಿರೀಕ್ಷೆಯನ್ನು ಹುಟ್ಟಿಸಿದೆ. 

ಕಳೆದ ವರ್ಷ ಬುರ್ಹಾನ್‌ ವಾನಿಯ ಹತ್ಯೆಯಾದ ಬಳಿಕ ಸುಮಾರು ಒಂದು ವರ್ಷ ಕಾಶ್ಮೀರ ಹೊತ್ತಿ ಉರಿಯುತ್ತಿತ್ತು. ಭದ್ರತಾ ಪಡೆಗಳು ಕಲ್ಲೆಸೆತ ಮತ್ತು ಉಗ್ರರ ಅಟ್ಟಹಾಸ ನಿತ್ಯದ ಸುದ್ದಿಯಾಗಿತ್ತು. ಈ ಸಮಯದಲ್ಲಿ ಒಂದೆಡೆ ಉಗ್ರರನ್ನು ಮಟ್ಟಹಾಕುವ ಕಠಿಣ ನಿರ್ಧಾರ ಕೈಗೊಂಡ ಸರಕಾರ ಜತೆಗೆ ಕಾಶ್ಮೀರದ ಯುವ ಜನತೆಯ ಮನವೊಲಿಕೆಗೆ ಮುಂದಾಯಿತು. ಹಾಫಿಜ್‌ ಸಯೀದ್‌, ಅಜರ್‌ ಮೆಹಮೂದ್‌ ಮತ್ತಿತರ ಪಾಕಿಸ್ಥಾನಿ ಉಗ್ರ ಮುಖಂಡರ ಮಾತು ಕೇಳಿ ದಾರಿತಪ್ಪಿದ್ದ ಯುವಕರೇ ಕಲ್ಲೆಸೆಯುವ ಪ್ರಕರಣಗಳ ಮುಂಚೂಣಿಯಲ್ಲಿದ್ದರು. ಯುವಜನತೆಯನ್ನು ಇದೇ ಹಾದಿಯಲ್ಲಿ ಮುಂದುವರಿಯಲು ಬಿಟ್ಟರೆ ಪರಿಸ್ಥಿತಿ ಇನ್ನಷ್ಟು ಹದಗೆಡುವುದನ್ನು ಮನಗಂಡ ಸರಕಾರ ತಕ್ಷಣ ಕಾರ್ಯಪ್ರವೃತ್ತವಾದ ಪರಿಣಾಮವಾಗಿ ಈಗ ಯುವಕರು ಸರಕಾರದ ಮಾತುಗಳನ್ನು ಕೇಳುತ್ತಿದ್ದಾರೆ. ಅವಕಾಶ ಸಿಕ್ಕಿದರೆ ತಾವು ಕೂಡ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಿಂಚಬಲ್ಲೆವು ಎನ್ನುವುದನ್ನು ಕಾಶ್ಮೀರದ ಹಲವು ಯುವಕರು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ದಂಗಲ್‌ ಚಿತ್ರದ ನಾಯಕಿ ಝೈರಾ ವಾಸಿಮ್‌ಳಂತಹ ಯುವತಿಯರು ಸಂಪ್ರದಾಯದ ಕಟ್ಟುಗಳಿಂದ ಬಿಡಿಸಿಕೊಂಡು ಸಿನೆಮಾ ಕ್ಷೇತ್ರದಲ್ಲಿ ಮಿಂಚಲು ಮುಂದಾಗಿರುವುದನ್ನು ಕೂಡ ಸಕಾರಾತ್ಮಕವಾದ ಬೆಳವಣಿಗೆ ಎಂದು ಪರಿಗಣಿಸಬಹುದು. ಹಲವು ಯುವತಿಯರಿಗೆ ಝೈರಾ ಪ್ರೇರಣೆಯಾಗಿದ್ದಾರೆ. 

ಕಾಶ್ಮೀರದಲ್ಲಿ ಕಳೆದ ಕೆಲವು ತಿಂಗಳಿಂದೀಚೆಗೆ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಗಣನೀಯವಾಗಿ ಸುಧಾರಣೆಯಾಗಿರುವುದು ಕಂಡುಬರುತ್ತದೆ. ಆಜಾದಿ ಬೇಡಿಕೆಯ ಬೃಹತ್‌ ಮೆರವಣಿಗೆಗಳು ನಡೆಯದೆ ತಿಂಗಳುಗಳೇ ಕಳೆದಿವೆ. ಪೆಲ್ಲೆಟ್‌ ಗನ್‌ಗಳಿಂದ ಗುಂಡುಗಳು ಹಾರುವುದು ನಿಂತಿದೆ. ಜನಜೀವನವೂ ಸಹಜ ಸ್ಥಿತಿಗೆ ಬಂದಿದ್ದು ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ. ವಾಣಿಜ್ಯ, ಕ್ರೀಡೆ ಮತ್ತಿತರ ಚಟುವಟಿಕೆಗಳು ಮಾಮೂಲಿನಂತೆ ನಡೆಯುತ್ತಿವೆ. ಮುಖ್ಯವಾಗಿ ಜನರನ್ನು ಆಡಳಿತದ ವಿರುದ್ಧ ಎತ್ತಿಕಟ್ಟುವ ಪ್ರತ್ಯೇಕತಾವಾದಿಗಳ ಸದ್ದಡಗಿದೆ. ಭದ್ರತಾ ಪಡೆಗಳು ನಡೆಸುತ್ತಿರುವ ನಿರಂತರ ಕಾರ್ಯಾಚರಣೆ ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಈ ವರ್ಷ ಈಗಾಗಲೇ 200ಕ್ಕೂ ಹೆಚ್ಚು ಉಗ್ರರನ್ನು ಸದೆಬಡಿಯಲಾಗಿದೆ. ಹಾಗೆಂದು ಕಾಶ್ಮೀರದಲ್ಲಿ ಬರೀ ಭಯೋತ್ಪಾದನೆಯೊಂದೇ ಸಮಸ್ಯೆಯಲ್ಲ. ಈಗ ಇದರ ಜತೆಗೆ ಮಾದಕವಸ್ತುವಿನ ಸಮಸ್ಯೆಯೂ ಬೃಹದಾಕಾರವಾಗಿ ಬೆಳೆದು ನಿಂತಿದೆ. ಈ ವರ್ಷ 500ಕ್ಕೂ ಅಧಿಕ ಮಾದಕ ವಸ್ತು ಪ್ರಕರಣಗಳು ದಾಖಲಾಗಿವೆ ಮತ್ತು ಸುಮಾರು 19,000 ಮಂದಿ ಡ್ರಗ್‌ ವ್ಯವಸನ ಮುಕ್ತಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಿತ್ತು ತಿನ್ನುವ ಬಡತನ ಮತ್ತು ನಿರುದ್ಯೋಗ ಜನರನ್ನು ಮಾದಕವಸ್ತು ವ್ಯಾಪಾರಕ್ಕಿಳಿಯುವಂತೆ ಮಾಡುತ್ತಿದೆ. ಕಣಿವೆಯ ಹಲವೆಡೆ ರಾಜಾರೋಷವಾಗಿ ಗಾಂಜಾ ಬೆಳೆಯಲಾಗುತ್ತಿದ್ದರೂ ಅಧಿಕಾರಿಗಳು ನೋಡಿಯೂ ನೋಡದವರಂತೆ ವರ್ತಿಸುತ್ತಿರುವುದು ಅಪಾಯಕಾರಿ. ಭಯೋತ್ಪಾದನೆಯಿಂದ ವಿಮುಖರಾದ ಯುವ ಜನತೆ ಡ್ರಗ್ಸ್‌ ದಾಸರಾಗದಂತೆ ನೋಡಿಕೊಳ್ಳುವ ಕೆಲಸವೂ ಆಗಬೇಕಿದೆ. ಇದಕ್ಕೆ ಮುಖ್ಯವಾಗಿ ನಿರುದ್ಯೋಗ ನಿವಾರಿಸುವ ಮಾರ್ಗೋಪಾಯಗಳನ್ನು ತ್ವರಿತವಾಗಿ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಮುಖ್ಯವಾಹಿನಿಗೆ ಬಂದ ಯುವ ಜನತೆ ಕೆಲವೇ ಸಮಯದಲ್ಲಿ ಭ್ರಮೆನಿರಸನ ಹೊಂದಿ ಮತ್ತೆ ಭಯೋತ್ಪಾದನೆಯತ್ತ ಆಕರ್ಷಿತರಾಗುವ ಅಪಾಯವಿದೆ. 

ಟಾಪ್ ನ್ಯೂಸ್

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್‌ ನೇಮಕ: ಚಿನ್ನದ ಪದಕ ವಿಜೇತ VN  ಪರಿಚಯ…

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

6

Editorial: ಸಂಚಾರ, ಪಾರ್ಕಿಂಗ್‌; ಸಮನ್ವಯದ ಕ್ರಮ ಆಗಬೇಕು

1

Editorial: ಕಾಳ್ಗಿಚ್ಚು ಸಂಭವಿಸುವ ಮುನ್ನವೇ ಇರಲಿ ಎಚ್ಚರಿಕೆ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್

6

VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್

4-dandeli

Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ

naksal (2)

Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು

3-naxal

Naxalites ಶರಣಾಗತಿಯಲ್ಲಿ ಟ್ವಿಸ್ಟ್‌; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.