Amit Shah ಅರುಣಾಚಲ ಭೇಟಿ ಚೀನ ವಿರೋಧಕ್ಕೆ ಬೆಲೆ ಇಲ್ಲ
Team Udayavani, Apr 11, 2023, 6:00 AM IST
ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದ ಕೆಲವು ಪ್ರದೇಶಗಳ ಹೆಸರು ಬದಲಾವಣೆಯಂಥ ಕೀಳು ಮಟ್ಟಕ್ಕೆ ಇಳಿದಿದ್ದ ಚೀನ, ಸೋಮವಾರ ಒಂದು ಹೆಜ್ಜೆ ಮುಂದೆ ಹೋಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅರುಣಾಚಲ ಪ್ರದೇಶ ಭೇಟಿಗೂ ವಿರೋಧ ವ್ಯಕ್ತಪಡಿಸಿದೆ. ಅಮಿತ್ ಶಾ ಅವರು ಸೋಮ
ವಾರದಿಂದ ಎರಡು ದಿನಗಳ ಕಾಲ ಅರುಣಾಚಲ ಪ್ರದೇಶದ ಭೇಟಿಯಲ್ಲಿರಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಇದರ ಮಧ್ಯೆಯೇ ಚೀನದ ವಿದೇಶಾಂಗ ಸಚಿವಾಲಯ ಅಮಿತ್ ಶಾ ಅವರ ಭೇಟಿಗೆ ಆಕ್ಷೇಪ ಎತ್ತಿದ್ದು, ಇದು ಭಾರತದ ಆಕ್ರೋಶಕ್ಕೂ ಕಾರಣವಾಗಿದೆ. ಅರುಣಾಚಲ ಪ್ರದೇಶ ಚೀನಕ್ಕೆ ಸೇರಿದ್ದಾಗಿದ್ದು, ಇಲ್ಲಿ ಭಾರತೀಯ ಸರಕಾರದ ಪ್ರತಿನಿಧಿಯೊಬ್ಬರು ಭೇಟಿ ನೀಡುವುದು ತರವಲ್ಲ ಎಂದೂ ಹೇಳಿಕೊಂಡಿದೆ. ಅಷ್ಟೇ ಅಲ್ಲ, ಇದರಿಂದ ಗಡಿಯಲ್ಲಿನ ಶಾಂತಿ ಭಂಗಕ್ಕೂ ಕಾರಣವಾಗುತ್ತದೆ ಎಂದೂ ಬೊಬ್ಬಿಟ್ಟಿದೆ.
ವಿಚಿತ್ರವೆಂದರೆ ಬಹುಹಿಂದಿನಿಂದಲೂ ಅರುಣಾಚಲ ಪ್ರದೇಶದ ಮೇಲೆ ಚೀನ ಕಣ್ಣಿರಿಸಿಕೊಂಡು ಕುಳಿತಿದೆ. ಆದರೆ ಅರುಣಾಚಲ ಪ್ರದೇಶ ನಮ್ಮದೇ ಅಂಗ ಭಾರತವೂ ಸಾರಿ ಸಾರಿ ಹೇಳಿದೆ. ಆದರೂ ಚೀನ ತನ್ನ ದುಬುìದ್ಧಿಯನ್ನು ಬಿಡುತ್ತಲೇ ಇಲ್ಲ. ಇದಾದ ಮೇಲೂ ಅರುಣಾಚಲ ಪ್ರದೇಶದ ಮೇಲೆ ಕಣ್ಣಿರಿಸಿಕೊಂಡು ಕುಳಿತೇ ಇದೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅರುಣಾಚಲ ಪ್ರದೇಶವನ್ನು ಭಾರತದ ಭಾಗ ಎಂದು ಗುರುತಿಸಲಾಗಿದೆ. ಇಷ್ಟೆಲ್ಲ ಆದರೂ, ಏಕೆ ಭಾರತದ ಪ್ರದೇಶಗಳ ಮೇಲೆ ಚೀನ ಆಸೆ ಇರಿಸಿಕೊಂಡಿದೆ ಎಂಬುದೇ ಅರ್ಥವಾಗದ ಸಂಗತಿಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ಥಾನ ತನ್ನ ಕುತ್ಸಿತ ಬುದ್ಧಿಯನ್ನು ತೋರಿದಂತೆಯೇ, ಇನ್ನೊಂದು ಭಾಗದಲ್ಲಿ ಚೀನ ತನ್ನ ದುರ್ಬದ್ಧಿಯನ್ನು ಪ್ರದರ್ಶಿಸುತ್ತಲೇ ಇದೆ. ಈ ಎರಡೂ ದೇಶಗಳಿಗೆ ಭಾರತ ಕಠಿನ ಉತ್ತರ ಕೊಡಲೇಬೇಕಾದ ಸನ್ನಿವೇಶ ಉದ್ಭವವಾಗಿದೆ. ಪದೇ ಪದೆ ಭಾರತದ ಭಾಗಗಳನ್ನು ತನ್ನದು ಎಂದು ಹೇಳುವ ಚೀನದ ವರ್ತನೆಯನ್ನು ಬಿಡಿಸಲೇಬೇಕಾಗಿದೆ.
ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ, ಗೃಹ ಸಚಿವ ಅಮಿತ್ ಶಾ ಅರುಣಾಚಲ ಪ್ರದೇಶ ಭೇಟಿಯಲ್ಲಿದ್ದಾರೆ. ಚೀನದ ಆಕ್ಷೇಪಕ್ಕೆ ಅವರು ತಕ್ಕ ಉತ್ತರವನ್ನೂ ನೀಡಿದ್ದಾರೆ. ಯಾರೊಬ್ಬರು ಭಾರತದ ಒಂದಿಂಚೂ ಭೂಮಿಯನ್ನೂ ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ. ಈ ಹೊತ್ತಿನಲ್ಲಿ ಗೃಹ ಸಚಿವರ ಕಡೆಯಿಂದ ಬಂದ ಉತ್ತರ ಸಮಂಜಸವಾಗಿಯೇ ಇದೆ.
ಈ ಸಂಗತಿಗಳ ನಡುವೆ ಚೀನದ ಮತ್ತೂಂದು ಕುತ್ಸಿತ ಬುದ್ಧಿಯೂ ಇದೆ. ಅದು ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ತನ್ನದೇ ಆದ ಹೆಸರನ್ನು ಇಡುವುದು. ಕಳೆದ ವಾರವಷ್ಟೇ ಇಂಥ ಬೆಳವಣಿಗೆಯೂ ನಡೆದು ಕೇಂದ್ರ ವಿದೇಶಾಂಗ ಇಲಾಖೆ ಖಡಕ್ಕಾಗಿಯೇ ಚೀನಗೆ ತಿರುಗೇಟು ನೀಡಿತ್ತು. ಭಾರತದಲ್ಲಿರುವ ಸ್ಥಳಗಳ ಮೇಲೆ ಹೆಸರಿಡುವ ಕೀಳು ಕೆಲಸಕ್ಕೆ ಏಕೆ ಕೈಹಾಕುತ್ತಿದ್ದೀರಿ ಎಂದೂ ಪ್ರಶ್ನಿಸಿತ್ತು.
ಆಗ ಅರುಣಾಚಲ ಪ್ರದೇಶವನ್ನು ಟಿಬೆಟ್‌ನ ದಕ್ಷಿಣ ಭಾಗ ಎಂದು ಚೀನ ಕರೆದಿತ್ತು. ಅಲ್ಲದೆ ಝಾಂಗ್‌ನ್ಯಾನ್ ಎಂದು ಕರೆದಿತ್ತು. ಅಲ್ಲದೆ ಐದು ಪರ್ವತ ಶ್ರೇಣಿಗಳು, ಎರಡು ಭೂ ಪ್ರದೇಶಗಳು, ಎರಡು ವಸತಿ ಕೇಂದ್ರಗಳು ಮತ್ತು ಎರಡು ನದಿಗಳಿಗೆ ತನ್ನದೇ ಆದ ಹೆಸರುಗಳನ್ನು ನೀಡಿತ್ತು. ಇದಷ್ಟೇ ಅಲ್ಲ, 2017 ಮತ್ತು 2021ರಲ್ಲಿಯೂ ಚೀನ ಇಂಥದ್ದೇ ಕೆಟ್ಟ ಕೆಲಸಕ್ಕೆ ಕೈಹಾಕಿತ್ತು. 2017ರಲ್ಲಿ ಆರು ಹೆಸರುಗಳು, 2021ರಲ್ಲಿ 15 ಸ್ಥಳಗಳಿಗೆ ಹೆಸರಿಡುವ ಕೆಲಸ ಮಾಡಿತ್ತು.
ಅಂದ ಹಾಗೆ ಈ ವಿವಾದ 1950ರಿಂದಲೂ ಇದೆ. 1959ರಲ್ಲಿ ದಲಾೖಲಾಮಾ ಅವರು ಟಿಬೆಟ್‌ನಿಂದ ಹೊರಬಂದು, ಅರುಣಾಚಲ ಪ್ರದೇಶದಲ್ಲಿ ಆಶ್ರಯ ಪಡೆದ ಮೇಲೆ ಈ ವಿವಾದ ಮತ್ತಷ್ಟು ತೀವ್ರಗೊಂಡಿತ್ತು. ಆಗಿನಿಂದಲೂ ಚೀನ ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸಾಧಿಸುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ಭಾರತವೂ ಅರುಣಾಚಲ ಪ್ರದೇಶ ಭಾರತದ್ದೇ ಅಂಗ ಎಂದು ಖಂಡತುಂಡವಾಗಿ ಹೇಳುತ್ತಿದೆ. ಆದರೂ ಈ ರಾಜ್ಯದ ಮೇಲೆ ಚೀನಗೆ ಆಸೆ ಹೋಗಿಲ್ಲ. ಇಂಥ ಕೀಳು ಮನಸ್ಥಿತಿಯ ದೇಶಗಳಿಗೆ ತಕ್ಕ ಪಾಠ ಕಲಿಸಲೇಬೇಕಾದ ಅಗತ್ಯತೆ ಖಂಡಿತವಾಗಿಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.