ಪೌರತ್ವ ನೀತಿಗೆ ತಿದ್ದುಪಡಿ: ಐಟಿ ವೃತ್ತಿಪರರಿಗೆ ಶುಭಸುದ್ದಿ

Team Udayavani, Jul 11, 2019, 5:36 AM IST

s-34

ಅಮೆರಿಕವು ತನ್ನ ಪೌರತ್ವ ನೀತಿಯಲ್ಲಿ ಅತ್ಯಂತ ಮಹತ್ವಪೂರ್ಣ ಬದಲಾವಣೆ ತರಲು ಮುಂದಾಗಿದ್ದು ಪ್ರಸ್ತಾವಿತ ತಿದ್ದುಪಡಿ ಕಾಯಿದೆ ಜಾರಿಗೆ ಬಂದದ್ದೇ ಆದಲ್ಲಿ ಅಲ್ಲಿ ನೆಲೆ ನಿಂತಿರುವ ಭಾರತೀಯರ ದಶಕಗಳ ಬೇಡಿಕೆ ಈಡೇರಲಿದೆ. ಸದ್ಯ ಅಮೆರಿಕದ ಪೌರತ್ವ ನೀತಿಯ ಪ್ರಕಾರ ಗ್ರೀನ್‌ಕಾರ್ಡ್‌ಗಾಗಿ ಒಂದು ದೇಶಕ್ಕೆ ಗರಿಷ್ಠ ಶೇ. 7ರ ಮಿತಿಯನ್ನು ವಿಧಿಸಲಾಗಿದೆ. ಎಚ್‌-1ಬಿ ವೀಸಾ ಪಡೆದು ಅಮೆರಿಕಕ್ಕೆ ತೆರಳಿರುವ ಭಾರತೀಯರಿಗಂತೂ ಈ ನೀತಿ ಅಲ್ಲಿನ ಪೌರತ್ವ ಪಡೆಯಲು ತಡೆಯಾಗಿ ಪರಿಣಮಿಸಿತ್ತು. ವಿವಿಧ ಕ್ಷೇತ್ರಗಳಲ್ಲಿ ಅದರಲ್ಲೂ ಐಟಿ ಕ್ಷೇತ್ರದಲ್ಲಿ ಉನ್ನತ ಕೌಶಲವನ್ನು ಪಡೆದು ಅಮೆರಿಕದಲ್ಲಿ ನೆಲೆಯಾಗಿರುವ ಭಾರತೀಯರಿಗೆ ಅಲ್ಲಿನ ಪೌರತ್ವ ಪಡೆಯುವುದು ಕಷ್ಟಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ವೃತ್ತಿಪರರು ಪೌರತ್ವ ನೀತಿಗೆ ತಿದ್ದುಪಡಿ ತರುವಂತೆ ಅಮೆರಿಕ ಸರಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದರು. ಅಷ್ಟು ಮಾತ್ರವಲ್ಲದೆ ಕೆನಡಾ ಸಹಿತ ಇನ್ನಿತರ ಕೆಲವು ದೇಶಗಳು ತಮ್ಮ ಗ್ರೀನ್‌ಕಾರ್ಡ್‌ ನಿಯಮಾವಳಿಗಳಲ್ಲಿ ಸಡಿಲಿಕೆಗಳನ್ನು ಮಾಡಿ ವಿದೇಶಿ ತಂತ್ರಜ್ಞರನ್ನು ತಮ್ಮತ್ತ ಆಕರ್ಷಿಸಲಾರಂಭಿಸಿವೆ. ಭಾರತೀಯ ಟೆಕ್ಕಿಗಳೂ ಕೆನಡಾದತ್ತ ಮುಖ ಮಾಡಲಾರಂಭಿಸಿದ್ದಾರೆ. ಈ ಕಾರಣದಿಂದಾಗಿ ಕೊಂಚ ವಿಚಲಿತವಾಗಿರುವ ಅಮೆರಿಕ ಗ್ರೀನ್‌ ಕಾರ್ಡ್‌ ವಿತರಣೆಗೆ ಸಂಬಂಧಿಸಿದ ದೇಶಗಳ ಕೋಟಾವನ್ನು ರದ್ದುಪಡಿಸುವ ತಿದ್ದುಪಡಿ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಿದೆ.

ಭಾರತೀಯ ಮೂಲದ ಟೆಕ್ಕಿಗಳು ಮತ್ತು ತಂತ್ರಜ್ಞರು ಎಚ್‌-1ಬಿ ವೀಸಾ ಪಡೆದು ಅಮೆರಿಕಕ್ಕೆ ತೆರಳಿ ಅಲ್ಲಿ ವೃತ್ತಿನಿರತರಾಗಿದ್ದಾರೆ. ಇವರೆಲ್ಲರೂ ಅಲ್ಲಿನ ಗ್ರೀನ್‌ಕಾರ್ಡ್‌ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಅಮೆರಿಕದಲ್ಲಿ ವಿತರಣೆಯಾಗುತ್ತಿರುವ ಗ್ರೀನ್‌ಕಾರ್ಡ್‌ಗಳ ಪೈಕಿ ಶೇ. 0.25ರಷ್ಟು ಭಾರತೀಯರಿಗೆ ಲಭಿಸುತ್ತಿದೆ. ಇದೀಗ ಅಮೆರಿಕ ಸರಕಾರ ಸಂಸತ್‌ನಲ್ಲಿ ಮಂಡಿಸಿರುವ ಮಸೂದೆ ಅಂಗೀಕಾರವಾದರೆ ಮುಂದಿನ ಒಂದು ದಶಕದ ಅವಧಿಯಲ್ಲಿ ಶೇ. 90ರಷ್ಟು ಗ್ರೀನ್‌ ಕಾರ್ಡ್‌ಗಳು ಭಾರತೀಯರ ಪಾಲಾಗಲಿದೆ ಎಂದು ಅಲ್ಲಿನ ವಲಸೆ ಇಲಾಖೆ ಅಂದಾಜಿಸಿದೆ. ಅಷ್ಟು ಮಾತ್ರವಲ್ಲದೆ ಅಮೆರಿಕದ ಖಾಯಂ ನಿವಾಸಿಗಳಾಗಲು ಕಳೆದ ಹಲವಾರು ವರ್ಷಗಳಿಂದ ಚಾತಕಪಕ್ಷಿಗಳಂತೆ ಕಾಯುತ್ತಿರುವ ಭಾರತೀಯ ವಲಸಿಗರಿಗೆ ಅನುಕೂಲ ಆಗಲಿದೆ. ಇನ್ನೊಂದು ಅಂದಾಜಿನ ಪ್ರಕಾರ ಅಮೆರಿಕದಲ್ಲಿ ನೆಲೆಸಿರುವ 3 ಲಕ್ಷ ಭಾರತೀಯ ವಲಸಿಗರಿಗೆ ಗ್ರೀನ್‌ಕಾರ್ಡ್‌ ಲಭಿಸಲಿದೆ.

ಭಾರತದಲ್ಲಿ ಭಾರೀ ಸಂಖ್ಯೆಯಲ್ಲಿ ಉನ್ನತ ಕೌಶಲ ಹೊಂದಿರುವ ವೃತ್ತಿಪರರಿದ್ದು ಇವರನ್ನು ಸೆಳೆಯುವ ದೃಷ್ಟಿಯಿಂದ ಅಮೆರಿಕ ತನ್ನ ಪೌರತ್ವ ನೀತಿಗೆ ತಿದ್ದುಪಡಿ ತರಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಮೆರಿಕದ ಕಂಪೆನಿಗಳು ಮತ್ತು ಹೂಡಿಕೆದಾರರಿಗೆ ವೃತ್ತಿಪರ ಉದ್ಯೋಗಿಗಳ ಆವಶ್ಯಕತೆ ಇರುವುದರಿಂದ ಮತ್ತು ಇತರ ದೇಶಗಳ ವೃತ್ತಿಪರರಿಗೆ ಹೋಲಿಸಿದರೆ ಭಾರತೀಯರಿಗೆ ಕಡಿಮೆ ವೇತನ ನೀಡಿದರೆ ಸಾಕು ಎಂಬ ಕಾರಣಗಳಿಂದ ಅಮೆರಿಕ ಈ ಮಹತ್ತರ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಅಷ್ಟು ಮಾತ್ರವಲ್ಲದೆ ಅಮೆರಿಕದ ಆರ್ಥಿಕ ಬೆಳವಣಿಗೆಯಲ್ಲಿ ವಲಸಿಗರ ಪಾತ್ರ ನಿರ್ಣಾಯಕವಾಗಿರುವುದರಿಂದ ಅಮೆರಿಕ ಈ ನಡೆ ಹೆಚ್ಚಿನ ಮಹತ್ವವನ್ನು ಪಡೆದಿದೆ. ಈ ತಿದ್ದುಪಡಿ ಮಸೂದೆಗೆ ಅಮೆರಿಕದ ಅಧ್ಯಕ್ಷೀಯ ಹುದ್ದೆಯ ಆಕಾಂಕ್ಷಿ ಕಮಲಾ ಹ್ಯಾರೀಸ್‌ ಬಹಿರಂಗವಾಗಿಯೇ ತಮ್ಮ ಬೆಂಬಲ ಘೋಷಿಸುವ ಮೂಲಕ ಭಾರತೀಯ ಮೂಲದ ವಲಸಿಗರ ಬೆಂಬಲಕ್ಕೆ ನಿಂತಿದ್ದಾರೆ. ಡೆಮಾಕ್ರಾಟ್‌ ಮತ್ತು ರಿಪಬ್ಲಿಕನ್‌ ಪಕ್ಷಗಳ ಸದಸ್ಯರೂ ತಿದ್ದುಪಡಿ ಮಸೂದೆ ಪರವಾಗಿ ನಿಂತಿರುವುದರಿಂದ ಈ ಮಸೂದೆ ಸಂಸತ್‌ನ ಅಂಗೀಕಾರ ಪಡೆಯುವುದು ನಿಚ್ಚಳವಾಗಿದೆ. ಅಮೆರಿಕದ ಈ ನಡೆ ಭಾರತದ ಅದರಲ್ಲೂ ದೇಶದ ಐಟಿ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಬೆಂಗಳೂರಿನ ಐಟಿ ವೃತ್ತಿಪರರಿಗೆ ವರದಾನವಾಗಿ ಪರಿಣಮಿಸಲಿದೆ. ಎಚ್‌-1ಬಿ ವೀಸಾ ಪಡೆದು ಅಮೆರಿಕಕ್ಕೆ ತೆರಳಿ ಅಲ್ಲಿ ವೃತ್ತಿನಿರತವಾಗಿರುವ ರಾಜ್ಯದ ತಂತ್ರಜ್ಞರಿಗೆ ಇನ್ನು ಅಮೆರಿಕದ ಖಾಯಂ ಪೌರತ್ವ ಲಭಿಸಲಿದೆ. ಇದರಿಂದ ಪೌರತ್ವದ ಕುರಿತಾಗಿ ಅವರು ಎದುರಿಸುತ್ತಿದ್ದ ಸಂಕಷ್ಟ ನಿವಾರಣೆಯಾಗಲಿದ್ದು ಅಮೆರಿಕದ ಇತರ ಪ್ರಜೆಗಳಂತೆಯೇ ಅಲ್ಲಿನ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳಲಿದ್ದಾರೆ.

ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ-ವಹಿವಾಟಿಗೆ ಸಂಬಂಧಿಸಿದಂತೆ ತಿಕ್ಕಾಟಗಳು ನಡೆಯುತ್ತಿವೆ. ಅಮೆರಿಕದ ಉತ್ಪನ್ನಗಳಿಗೆ ಭಾರತ ಸರಕಾರ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಿಧಿಸಿರುವುದು ಉಭಯ ದೇಶಗಳ ನಡುವಣ ಸಂಬಂಧದಲ್ಲಿ ಒಂದಿಷ್ಟು ಬಿರುಕು ಮೂಡಿಸಿರುವ ಸಂದರ್ಭದಲ್ಲಿಯೇ ಅಮೆರಿಕ ತನ್ನ ಪೌರತ್ವ ನೀತಿಗೆ ತಿದ್ದುಪಡಿ ತರಲು ಮುಂದಾಗಿರುವುದು ದ್ವಿಪಕ್ಷೀಯ ಸಂಬಂಧದ ಬಲವರ್ಧನೆಗೆ ಸಹಕಾರಿಯಾಗಲಿದೆ. ಐಟಿ ದಿಗ್ಗಜ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಭಾರತದ ಪಾಲಿಗೆ ಅಮೆರಿಕದ ಈ ನಿರ್ಧಾರ ಒಂದು ಸಕಾರಾತ್ಮಕ ಬೆಳವಣಿಗೆ ಎಂದೇ ಪರಿಗಣಿಸಲಾಗಿದೆ.

ಟಾಪ್ ನ್ಯೂಸ್

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

Mandya_SAHITYA

ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.