ದೇಶದ ಕೆಲವೆಡೆ ಸಾಮುದಾಯಿಕ ಪ್ರಸರಣ; ಕೂಲಂಕಷ ಅಧ್ಯಯನವಾಗಲಿ
Team Udayavani, Oct 20, 2020, 6:11 AM IST
ಲಾಕ್‌ಡೌನ್ ತೆರವಾದ ಅನಂತರ ಕೋವಿಡ್ ಪ್ರಕರಣಗಳ ಸಂಖ್ಯೆ ಹಠಾತ್ತನೆ ಏರಿಕೆಯಾಗುತ್ತಾ ಸಾಗಿದ್ದರಿಂದ, ದೇಶಾದ್ಯಂತ ಕೋವಿಡ್ ಸಾಮುದಾಯಿಕ ಪ್ರಸರಣದ ಹಂತ ತಲುಪಿದೆಯೇ ಎನ್ನುವ ಅಂಶ ಚರ್ಚೆಗೊಳಗಾಗುತ್ತಲೇ ಬಂದಿದೆ. ಈಗ ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್ ಅವರು ದೇಶದ ಕೆಲವು ಜಿಲ್ಲೆಗಳಲ್ಲಿ ಕೋವಿಡ್‌ನ ಸಾಮುದಾಯಿಕ ಪ್ರಸರಣ ಆಗುತ್ತಿದೆ ಎಂದಿದ್ದಾರೆ.
ಸತ್ಯವೇನೆಂದರೆ, ಜೂನ್ ತಿಂಗಳಲ್ಲೇ ಈ ವಿಚಾರವಾಗಿ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಹಾಗೂ ತಜ್ಞರ ನಡುವೆ ಜಟಾಪಟಿ ಆರಂಭ ವಾಗಿತ್ತು. “”ಭಾರತದಲ್ಲಿ ಈಗಾಗಲೇ ಹಲವು ಪ್ರದೇಶಗಳಲ್ಲಿ ಕೋವಿಡ್-19 ಸಮು ದಾಯ ಪ್ರಸರಣ ಶುರುವಾಗಿದೆ. ಆದರೆ ಐಸಿಎಂಆರ್ ಸತ್ಯಕ್ಕೆ ದೂರವಾದ ವರದಿಗಳನ್ನು ತೋರಿಸುತ್ತಿದೆ. ಸಮುದಾಯ ಪ್ರಸರಣ ಆರಂಭವಾಗಿದೆ ಎಂದು ಸರಕಾರ ಹೇಳಿ ದರೆ ಜನರು ಕೂಡ ಎಚ್ಚರಿಕೆ ವಹಿಸುತ್ತಾರೆ” ಎಂದು ಏಮ್ಸ್‌ನ ಮಾಜಿ ನಿರ್ದೇಶಕ ಡಾ| ಎಂ.ಸಿ. ಮಿಶ್ರಾ ವ್ಯಕ್ತಪಡಿಸಿದ್ದ ಆಕ್ರೋಶ ಅಂದು ಬಹಳ ಸುದ್ದಿಯಾಗಿತ್ತು.
ಸಾಮುದಾಯಿಕ ಪ್ರಸರಣವೆನ್ನುವುದು ಪರಿಸ್ಥಿತಿ ಕೈ ಜಾರಿದೆ ಎನ್ನುವುದನ್ನು ಸೂಚಿಸುವಂಥ ಹಂತ. ಸೋಂಕಿನ ಮೂಲವನ್ನು ಪತ್ತೆ ಮಾಡಲು ಸಾಧ್ಯವಾಗ ದಂಥ ಸ್ಥಿತಿ. ಇದರಿಂದಾಗಿ, ಸಾಮುದಾಯಿಕ ಪ್ರಸರಣವಾಗುತ್ತಿರುವ ಪ್ರದೇಶಗಳಲ್ಲಿ ಬಹು ತೇಕರಿಗೆ ಸೋಂಕು ಹರಡುವ ಅಪಾಯವಿರುತ್ತದೆ.
ಕೊರೊನಾ ವೈರಸ್‌ನ ಸಾಮುದಾಯಿಕ ವ್ಯಾಪಿಸುವಿಕೆಯು ಪ್ರಸಕ್ತ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿರಬಹುದು. ಆದರೆ, ಈಗ ಎಲ್ಲ ರಾಜ್ಯಗಳೂ ನಿರ್ಬಂಧಗಳನ್ನು ತೆಗೆದುಹಾಕಿ, ಜನರ ಓಡಾಟವನ್ನು ಯಥಾಸ್ಥಿತಿಗೆ ತಂದಿರುವುದರಿಂದ ದೇಶಾದ್ಯಂತ ಸಾಮುದಾಯಿಕ ಪ್ರಸರಣ ಆಗಬಹುದೇ? ಅದನ್ನು ತಡೆಯಲು ಸಾಧ್ಯವಿದೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ.
ದುರದೃಷ್ಟವಶಾತ್, ಸರಕಾರಗಳ ಹಾಗೂ ಸಾರ್ವಜನಿಕರ ಈಗಿನ ಮನೋಧೋರಣೆಯನ್ನು ಗಮನಿಸಿದರೆ, ಈ ಅಪಾಯವನ್ನು ತಡೆಯಲು ಅಸಾಧ್ಯ ಎಂದೆನಿಸುತ್ತದೆ. ಕೆಲವು ತಿಂಗಳವರೆಗೂ ಹೆಚ್ಚಾಗಿ ನಗರ ಪ್ರದೇಶಗಳಿಗೆ ಸೀಮಿತವಾ ಗಿದ್ದ ಸಾಂಕ್ರಾಮಿಕ ಈಗ ಗ್ರಾಮೀಣ ಭಾಗಗಳಲ್ಲೂ ವೇಗವಾಗಿ ಹರಡಲಾರಂಭಿ ಸಿದೆ. ಜನರಲ್ಲಿನ ಜಾಗೃತಿಯ ಕೊರತೆ, ತ್ವರಿತ ವೈದ್ಯಕೀಯ ನೆರವಿನ ಅಭಾವ, ರೋಗ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯುವ ಗುಣ ರೋಗ ಪ್ರಸರಣದ ಅಪಾಯವನ್ನು ಹೆಚ್ಚಿಸುತ್ತಲೇ ಸಾಗಿದೆ. ಈ ಕಾರಣಕ್ಕಾಗಿಯೇ, ಯಾವ ರಾಜ್ಯಗಳ, ಯಾವೆಲ್ಲ ಪ್ರದೇಶಗಳಲ್ಲಿ ಸೋಂಕು ಸಾಮುದಾಯಿಕ ಪ್ರಸರಣದ ಹಂತ ತಲುಪಿದೆ ಎನ್ನುವುದರ ಕೂಲಂಕಷ ಅಧ್ಯಯನವಾಗಿ ಶೀಘ್ರದಲ್ಲೇ ಪಟ್ಟಿ ಬಿಡುಗಡೆ ಮಾಡುವುದಕ್ಕೆ ಸರಕಾರಗಳು ಆದ್ಯತೆ ನೀಡಬೇಕು. ಆಗ ಮುಂದಿನ ಸುರಕ್ಷತಾ ಕ್ರಮಗಳು, ಅಂದರೆ, ಆ ಭಾಗದಿಂದ ರೋಗ ಇನ್ನಿತರೆಡೆಗೆ ವೇಗವಾಗಿ ವಿಸ್ತರಿಸದಂತೆ ತಡೆಯಲು ಸಾಧ್ಯವಾಗುತ್ತದೆ. ಈಗ ಹಬ್ಬಗಳ ದಿನವಾಗಿ ರುವುದರಿಂದ, ಜನರು ಅಜಾಗರೂಕತೆ ಮೆರೆದರೆ ಒಂದೇ ತಿಂಗಳಲ್ಲೇ 26 ಲಕ್ಷ ಪ್ರಕರಣಗಳು ವರದಿಯಾಗಬಲ್ಲವು ಎಂದೂ ಎಚ್ಚರಿಕೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ವೈಯಕ್ತಿಕ ಸುರಕ್ಷತೆ, ಸ್ವತ್ಛತೆಯನ್ನು ಕಡೆಗಣಿಸಲೇಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.