ವಿವಾದದ ಗೂಡಾದ ಸಮ್ಮೇಳನ


Team Udayavani, Nov 27, 2017, 11:07 AM IST

27-3.jpg

ಈಗೀಗ ವಿವಾದಗಳಿಲ್ಲದೆ ಯಾವೊಂದು ಕಾರ್ಯಕ್ರಮವೂ ನಡೆಯುವುದಿಲ್ಲ ಎನ್ನುವಂತಾಗಿದೆ. ಕನ್ನಡಿಗರ  ನಾಡು ನುಡಿಯ ಜಾತ್ರೆಯೆಂದೇ ಕನ್ನಡಿಗರು ಹೆಮ್ಮೆಯಿಂದ ಹೇಳಿಕೊಳ್ಳುವ ಸಾಹಿತ್ಯ ಸಮ್ಮೇಳನ ಕೂಡ ಕಳೆದ ಕೆಲವು ವರ್ಷಗಳಿಂದೀಚೆಗೆ ಸಾಹಿತ್ಯ ಹೊರತು ಪಡಿಸಿ ಇತರ ವಿವಾದಗಳಿಂದಾಗಿಯೇ ಸುದ್ದಿಯಾಗುತ್ತಿದೆ. ಮೈಸೂರಿನಲ್ಲಿ ನಡೆದ 83ನೇ ಸಾಹಿತ್ಯ ಸಮ್ಮೇಳನವೂ ವಿವಾದದಿಂದ ಹೊರತಾಗಲಿಲ್ಲ ಎನ್ನುವುದಕ್ಕಿಂತಲೂ ಇಡೀ ಸಮ್ಮೇಳನವೇ ವಿವಾದದ ಗೂಡಾಯಿತು ಎನ್ನುವುದೇ ಹೆಚ್ಚು ಸರಿ. ನಾಡು ಕಂಡ ಅತ್ಯಂತ ಪ್ರಜ್ಞಾವಂತ ಸಾಹಿತಿ ಚಂಪಾ ಅವರ ಅಧ್ಯಕ್ಷ ಭಾಷಣವೇ ಎಲ್ಲಕ್ಕಿಂತ ಹೆಚ್ಚು ವಿವಾದ ಸೃಷ್ಟಿಸಿತು.

ಉಳಿದಂತೆ ಸಾಹಿತ್ಯ ಸಮ್ಮೇಳನ ಎಂಬ ಪರಿಕಲ್ಪನೆಯನ್ನು ಪರಿಚಯಿಸಿದ ಮೈಸೂರು ಮಹಾರಾಜರ ವಂಶಸ್ಥರಿಗೆ ಆಹ್ವಾನ ನೀಡದೇ ಇರುವುದು, ಮೈಸೂರಿನಲ್ಲಿಯೇ ಇರುವ ಪ್ರಸಿದ್ಧ ಸಾಹಿತಿ ಎಸ್‌. ಎಲ್‌. ಭೈರಪ್ಪ ಅವರನ್ನು ಸೌಜನ್ಯಕ್ಕಾಗಿಯಾದರೂ ಕರೆಯದೆ ಇರುವುದೆಲ್ಲ ಸಾಹಿತ್ಯಕ್ಕಿಂತಲೂ ಹೆಚ್ಚು ಚರ್ಚೆಗೆ ಕಾರಣವಾದ ವಿಷಯಗಳು. ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಹಸ್ತಕ್ಷೇಪ ಅಗತ್ಯಕ್ಕಿಂತ ಹೆಚ್ಚಾಗಿರುವುದೇ ವಿವಾದಗಳು ಹೆಚ್ಚಾಗಲು ಕಾರಣ. ಅದರಲ್ಲೂ ಕಳೆದ ಮೂರ್‍ನಾಲು ವರ್ಷಗಳಲ್ಲಿ ಒಂದು ನಿರ್ದಿಷ್ಟ ವಾದವನ್ನು ಎತ್ತಿಹಿಡಿಯುವ ಸಾಹಿತಿಗಳನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಿರುವುದರ ಹಿಂದೆ ರಾಜಕೀಯ ಹುನ್ನಾರಗಳಿಲ್ಲ ಎಂದರೆ ನಂಬುವುದು ಕಷ್ಟವಾಗುತ್ತದೆ.

ಹೀಗಾಗಿ ನಾಡಿನ ನುಡಿ, ಜಲ, ನೆಲ, ಸಂಸ್ಕೃತಿ, ಪರಂಪರೆ ಮತ್ತಿತರ ವಿಚಾರಗಳ ಕುರಿತು ಚರ್ಚೆಯಾಗಬೇಕಾದಲ್ಲಿ ರಾಜಕೀಯ ಸಿದ್ಧಾಂತಗಳ ಕುರಿತು ಚರ್ಚೆಯಾಗುತ್ತಿದೆ. ಸಾಹಿತ್ಯದ ವೇದಿಕೆಯಲ್ಲಿ ರಾಜಕೀಯದ ಕುರಿತು ಚರ್ಚೆಯಾಗಬಾರದು ಎಂದಲ್ಲ. ಆದರೆ ಆ ಚರ್ಚೆ ಒಂದು ನಿರ್ದಿಷ್ಟ ರಾಜಕೀಯ ಸಿದ್ಧಾಂತವನ್ನು ಸಮರ್ಥಿಸುವ  ಮೂಲಕ ಆ ಸಿದ್ಧಾಂತವನ್ನು ಪ್ರತಿಪಾದಿಸುವ ರಾಜಕೀಯ ಪಕ್ಷದ ಪರವಾಗಿ ನಡೆಯುತ್ತಿರುವ ಚರ್ಚೆಯಂತೆ ಕಂಡು ಬಂದರೆ ಅದನ್ನು ಸಾಹಿತ್ಯದ ಕುರಿತಾದ ಚರ್ಚೆ ಎನ್ನುವಂತಿಲ್ಲ. ಮೈಸೂರಿನಲ್ಲಿ ಪ್ರಸ್ತುತ ನಡೆದಿರುವುದು  ಇದೇ ಎಡವಟ್ಟು. ಡಾ| ಚಂಪಾ ಅವರು ಜಾತ್ಯಾತೀತ ಪಕ್ಷಗಳಿಗೆ ಮತ ಹಾಕಿ ಎಂದು ಅಪ್ಪಟ ಚುನಾವಣಾ ಪ್ರಚಾರ ಭಾಷಣದಲ್ಲಿ ಕರೆಕೊಟ್ಟ ರೀತಿ ಹೇಳಿದಾಗ ಅವರು ಯಾರ ಪರವಾಗಿ ಮಾತನಾಡಿದ್ದಾರೆ ಎನ್ನುವುದನ್ನು ತಿಳಿಯಲು ಅಪಾರ ರಾಜಕೀಯ ಅಥವ ಸಾಹಿತ್ಯಕ ಪಾಂಡಿತ್ಯದ ಆಗ್ಯವಿಲ್ಲ. ಇದೇ ವೇದಿಕೆಯಲ್ಲಿ ಅವರು ಸರಕಾರದ ಸಚಿವರೊಬ್ಬರ ಖಾತೆ ಬದಲಾಯಿಸಬೇಕೆಂಬ ಸಲಹೆಯನ್ನೂ ಕೊಟ್ಟಿದ್ದಾರೆ.

ಸಚಿವರ ಖಾತೆ ಬದಲಾವಣೆ ಮುಖ್ಯಮಂತ್ರಿಯ ಅಧಿಕಾರಕ್ಕೆ ಬಿಟ್ಟ ವಿಚಾರ. ಹಾಗೊಂದು ವೇಳೆ ಡಾ|ಚಂಪಾ ಅವರಿಗೆ ಸಚಿವರ ಕಾರ್ಯಶೈಲಿಯ ಬಗ್ಗೆ ಅಸಮಾಧಾನವಿದ್ದರೆ ಅದನ್ನು ನೇರವಾಗಿ ಮುಖ್ಯಮಂತ್ರಿಯ ಬಳಿ ಹೇಳಬಹುದಿತ್ತೆ ಹೊರತು ವಿಪಕ್ಷ ನಾಯಕರಂತೆ ಸಾರ್ವಜನಿಕ ವೇದಿಕೆಯಲ್ಲಿ ಖಾತೆ ಬದಲಾಯಿಸಿ, ರಾಜೀನಾಮೆ ಪಡೆಯಿರಿ ಎಂದೆಲ್ಲ ಹೇಳುವುದು ರಾಜಕೀಯಕ್ಕಾದರೆ ಸರಿ, ಸಾಹಿತ್ಯಕ್ಕೆ ಸರಿಯಾಗುವುದಿಲ್ಲ. ಸಾಹಿತ್ಯ ಸಮ್ಮೇಳನ ನಡೆಸಲು ಸರಕಾರ ಕೋಟಿಗಟ್ಟಲೆ ಅನುದಾನ ನೀಡುತ್ತಿದೆ ಎನ್ನುವುದು ಸರಿ. ಹಾಗೆಂದು ಈ ಅನುದಾನದ ಋಣಕ್ಕೆ ಬಿದ್ದು ಸರಕಾರವನ್ನು ಖುಷಿಪಡಿಸುವಂತಹ ಮಾತುಗಳನ್ನೇ ಹೇಳಬೇಕೆಂದು ಸಾಹಿತಿಗಳೇ ಭಾವಿಸಿದರೆ ಇನ್ನು ಏನು ಗತಿ? ಡಾ| ಚಂಪಾ ಪ್ರಧಾನಿ ಮೋದಿಯನ್ನೂ ಸಮ್ಮೇಳನದ ವೇದಿಕೆಯಲ್ಲಿ ಟೀಕಿಸಿದ್ದಾರೆ.

ಸರಕಾರಿ ಕೃಪಾಕಟಾಕ್ಷದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಮೋದಿಯನ್ನು ಮತ್ತು ಅವರ ಪಕ್ಷವನ್ನು ಹಾಗೂ ಅದರ ಮಾತೃಸಂಘಟನೆಯನ್ನು ತೆಗಳುವ ಕಾರ್ಯ ಕ್ರಮಗಳು ಇರಬಹುದು ಎನ್ನುವುದನ್ನು ಮೊದಲೇ ನಿರೀಕ್ಷೆಸಿದ್ದೆವು. ಆದರೆ ಅದು ಈ ಮಟ್ಟಕ್ಕೆ ಇಳಿದು ಬರೀ ರಾಜಕೀಯ ಸಮ್ಮೇಳನವಾಗುತ್ತದೆ ಎಂದು ಭಾವಿಸಿರಲಿಲ್ಲ. ಸರಕಾರ ಕೊಡುವುದು ಜನರ ತೆರಿಗೆಯ ಹಣವನ್ನು. ಈ ಹಣದಲ್ಲಿ ನಡೆಯುವ ಜಾತ್ರೆ ಕನ್ನಡಿಗರ ಸಾಹಿತ್ಯ ಜಾತ್ರೆಯೇ ಹಒರತು, ಸರಕಾರದ ಕಾರ್ಯಕ್ರಮವಲ್ಲ. ಈ ಮಾತನ್ನು ಸಾಹಿತಗಳಿಗೆ ಯಾರೂ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಆದರೂ ಏಕೋ ಕೆಲವು ಸಾಹಿತಿಗಳು ಸರಕಾರದ ಅನ್ನದ ಋಣಕ್ಕೆ ಬಿದ್ದವರಂತೆ ವರ್ತಿಸುವುದನ್ನು ನೋಡುವಾಗ ಖೇದವಾಗುತ್ತದೆ.

ಕನ್ನಡಿಗರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನ ವಿಲ್ಲದ ಯಾವುದೋ ಒಂದು ರಾಜಕೀಯ ಸಿದ್ಧಾಂತವನ್ನು ಅಥವ ನಾಯಕರನ್ನು ಟೀಕಿಸಲು ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಬಳಸಿ ಕೊಳ್ಳುವುದು ಜನರ ತೆರಿಗೆ ಹಣವನ್ನು ಪೋಲು ಮಾಡಿದಂತೆ. ಹಾಗೇ ನೋಡಿದರೆ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಿಸಲು ಕನ್ನಡ ನಾಡು ಎದುರಿಸುತ್ತಿರುವ ಶಿಕ್ಷಣ, ಉದ್ಯೋಗ, ಕೃಷಿ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿದ್ದವು. ಇವುಗಳ ಕುರಿತು ಯಾವ ಗಂಭೀರ ಚರ್ಚೆಯೂ ನಡೆಯದೆ ಬರೀ ರಾಜಕೀಯ ಚರ್ಚಿಸಿದ ಕಾರಣ ಮೈಸೂರು ಸಾಹಿತ್ಯ ಸಮ್ಮೇಳನ ವಿವಾದದ ಸಮ್ಮೇಳನವಾಗಿ ಹೆಚ್ಚು ಕಾಲ ನೆನಪಿನಲ್ಲಿ ಉಳಿಯಲಿದೆ ಎಂದಷ್ಟೇ ಇದರಿಂದ ಆಗಿರುವ ಸಾಧನೆ.

ಟಾಪ್ ನ್ಯೂಸ್

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

ಲಿವ್ ಇನ್ ಸಂಗಾತಿಯನ್ನು ಕೊಂದು ದೇಹವನ್ನು 6 ತಿಂಗಳು ಫ್ರಿಡ್ಜ್ ನಲ್ಲಿ ಇಟ್ಟಿದ್ದ ಆರೋಪಿ

Tragedy: Live-In ಸಂಗಾತಿಯನ್ನು ಕೊಂದು ದೇಹವನ್ನು ಫ್ರಿಡ್ಜ್ ನಲ್ಲಿ ಇಟ್ಟು ಮನೆ ತೊರೆದ ಹಂತಕ

Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್‌ ಮಾರ್ಮಿಕ ಮಾತು

Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್‌ ಮಾರ್ಮಿಕ ಮಾತು

ಸಿ.ಟಿ.ರವಿ

chikkamagaluru: ಹೆಬ್ಬಾಳ್ಕರ್‌ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ

Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ

Bihar; ಮಕ್ಕಳಿಲ್ಲದ ಮಹಿಳೆಯನ್ನು ಗರ್ಭಿಣಿಯನ್ನಾಗಿ ಮಾಡಿ 5 ಲಕ್ಷ ರೂ ಪಡೆಯಿರಿ: ಹೀಗೊಂದು ಜಾಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್;‌ ಬೆಳಗಾವಿಗೆ ವಂದೇ ಭಾರತ್‌ ವಿಸ್ತರಣೆಗೆ ಮನವಿ

17-bng

Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

Police firing on drug trafficker in Kalaburagi

Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್

16-bng

Bengaluru: 4 ಕೋಟಿ ಪ್ರಯಾಣಿಕರು: ಏರ್‌ ಪೋರ್ಟ್ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.