ತುರ್ತು ಸೇವೆಗೆ ಇನ್ನೊಂದು ನಂಬರ್‌, ಎಮರ್ಜೆನ್ಸಿ ನಂಬರ್‌ಗಳ ಗೊಂದಲ


Team Udayavani, Jun 12, 2017, 4:25 PM IST

help.jpg

ಹೊಸ 100ರಲ್ಲಿ ಒಂದೊಂದು ಇಲಾಖೆಗಾಗಿ ಒಂದೊಂದು ಅಂಕಿಯನ್ನು ಒತ್ತಿ, ಅಲ್ಲಿನ ಮಾತನ್ನು ಆಲಿಸಿ ಕೂರುವಷ್ಟು ವ್ಯವಧಾನ ತುರ್ತು ಸಂದರ್ಭ ಇರುತ್ತದೆಯೇ? ರಾಜ್ಯಕ್ಕೆ ಸೀಮಿತವಾಗಿ ಹೊಸ ಎಮರ್ಜೆನ್ಸಿ ನಂಬರ್‌ ಪ್ರಾರಂಭಿಸುವ ತುರ್ತು ಅಗತ್ಯ ಏನಿತ್ತು? 

ಅಪಘಾತ, ಬೆಂಕಿ ಅವಘಡ, ಹೃದಯಾಘಾತ, ಪ್ರಾಕೃತಿಕ ವಿಕೋಪಗಳಂತಹ ತುರ್ತು ಸಂದರ್ಭದಲ್ಲಿ ನೆರವು ನೀಡುವ ಸಲುವಾಗಿ ಸರಕಾರ ನಮ್ಮ 100 ಎಂಬ ಹೊಸದೊಂದು ತುರ್ತು ಸೇವೆಯ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಇದು ಈಗಾಗಲೇ ಇದ್ದ ಪೊಲೀಸ್‌ ಸಹಾಯವಾಣಿಯ ಪರಿಷ್ಕೃತ ರೂಪ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೊಸ ನಂಬರ್‌ಗೆ ಚಾಲನೆ ಕೊಡುವಾಗ ಹೇಳಿದ್ದಾರೆ. ಸದ್ಯಕ್ಕೆ ಬೆಂಗಳೂರು ನಗರದಲ್ಲಿ ನಮ್ಮ 100 ಸೇವೆ ದೊರೆಯುತ್ತದೆ. ಕ್ರಮೇಣ  ರಾಜ್ಯವ್ಯಾಪಿಯಾಗಿ ಜಾರಿಯಾಗಲಿದೆ. ಮಹಿಳಾ ಸಹಾಯವಾಣಿ, ಮಕ್ಕಳ ಸಹಾಯವಾಣಿ  ಸೇರಿದಂತೆ ಬೇರೆ ಬೇರೆ ಸಹಾಯವಾಣಿಗಳನ್ನು ನಮ್ಮ 100ನಲ್ಲಿ ಅಂತರ್ಗತಗೊಳಿಸಲಾಗಿದೆ. ಅರ್ಥಾತ್‌ ಏನೇ ಆಪತ್ತಿನ ಸಂದರ್ಭ ಇದ್ದರೂ 100 ನಂಬರ್‌ಗೆ ಕರೆ ಮಾಡಿದರೆ ಸಹಾಯ ಧಾವಿಸಿ ಬರುತ್ತದೆ. 100ಕ್ಕೆ ಕರೆ ಮಾಡಿ ಅನಂತರ ಯಾವ ಇಲಾಖೆಯ ಸೇವೆ ಬೇಕೆಂದು ತೀರ್ಮಾನಿಸಿ ಇನ್ನೊಂದು ನಂಬರ್‌ ಒತ್ತಬೇಕು.

ಪೊಲೀಸರಿಗಾದರೆ 1, ಸಂಚಾರಿ ಪೊಲೀಸರಿಗಾದರೆ 2, ವಿಚಾರಣೆ ಮತ್ತು ಪೊಲೀಸ್‌ ಠಾಣೆಗೆ ಭೇಟಿ ನೀಡುವ ಸಮಯ ನಿಗದಿಪಡಿಸಲು 3 ಹೀಗೆ ನಂಬರ್‌ಗಳನ್ನು ಒತ್ತಬೇಕು. ಇದಕ್ಕೆ ಹೊಸ ಸೇವೆಗಳು ಸೇರ್ಪಡೆಯಾದಂತೆಲ್ಲ ಒತ್ತಬೇಕಾದ ನಂಬರ್‌ಗಳೂ ಹೆಚ್ಚುತ್ತಾ ಹೋಗುತ್ತದೆ. ಆ್ಯಂಬುಲೆನ್ಸ್‌ ಮತ್ತು ಅಗ್ನಿಶಾಮಕ ಪಡೆಯ ಸಹಾಯವಾಣಿಗಳನ್ನೂ ಇನ್ನೊಂದೆರಡು ವಾರದಲ್ಲಿ ಇದಕ್ಕೆ ಸೇರಿಸಲಾಗುತ್ತದೆ. 

ಅಪಘಾತ, ಅಪರಾಧ, ಆರೋಗ್ಯ ಸಮಸ್ಯೆ, ಪ್ರವಾಹ, ಬೆಂಕಿ ಅವಘಡ ಅಥವ ಇನ್ಯಾವುದೇ ರೀತಿಯ ಆಪತ್ತಿನ ಸಂದರ್ಭದಲ್ಲಿ ಸಹಾಯ ಯಾಚಿಸುವ ಸಲುವಾಗಿ ಸುಲಭವಾಗಿ ನೆನಪಿಟ್ಟುಕೊಳ್ಳುವ  ದೂರವಾಣಿ ಸಂಖ್ಯೆಯನ್ನು ನೀಡಲಾಗುತ್ತದೆ. ದೇಶದಲ್ಲಿ ಪೊಲೀಸ್‌ಗೆ 100, ಅಗ್ನಿಶಾಮಕ ಪಡೆಗೆ 101 ಮತ್ತು ಆ್ಯಂಬುಲೆನ್ಸ್‌ಗೆ 102 ಸಾರ್ವತ್ರಿಕ ಬಳಕೆಯಲ್ಲಿರುವ ಸಹಾಯವಾಣಿಗಳು. ಬೇರೆ ಬೇರೆ ಇಲಾಖೆಗೆ ಪ್ರತ್ಯೇಕ ಸಹಾಯವಾಣಿ ಇದ್ದರೆ ಜನರಿಗೆ ಗಡಿಬಿಡಿಯಲ್ಲಿ ಯಾವ ನಂಬರ್‌ಗೆ ಫೋನ್‌ ಮಾಡುವುದು ಎಂಬ ಗೊಂದಲವಾಗುವ ಸಾಧ್ಯತೆಯಿರುವುದರಿಂದ ಕಳೆದ ಷರ್ವ ಕೇಂದ್ರ ಸರಕಾರ ಎಲ್ಲ ಸೇವೆಗಳಿಗೂ ಅನ್ವಯಿಸುವಂತೆ 112ನ್ನು ರಾಷ್ಟ್ರೀಯ ಎಮರ್ಜೆನ್ಸಿ ನಂಬರ್‌ಗೆ ಎಂದು ಘೋಷಿಸಿತ್ತು.

ಕಳೆದ ಜನವರಿಯಿಂದಲೇ ಈ ನಂಬರ್‌ ಕಾರ್ಯಾರಂಭ ಮಾಡಿದೆ ಎಂದು ದಾಖಲೆಗಳು ಹೇಳುತ್ತಿವೆ. ಆದರೆ ಇದು ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದರ ಮೌಲ್ಯಮಾಪನವಿನ್ನೂ ಆಗಿಲ್ಲ. ಅಮೆರಿಕ, ಬ್ರಿಟನ್‌, ಚೀನ ಮುಂತಾದ ದೇಶಗಳ ಈ ಮಾದರಿಯ ರಾಷ್ಟ್ರೀಯ ಎಮರ್ಜೆನ್ಸಿ ನಂಬರ್‌ಗಳನ್ನು ಹೊಂದಿವೆ. ಎಲ್ಲ ರಾಜ್ಯಗಳೂ 112ನ್ನೇ ಎಮರ್ಜೆನ್ಸಿ ನಂಬರ್‌ ಆಗಿ ಅಳವಡಿಸಿಕೊಳ್ಳಬೇಕು. ಜನರಿಗೆ ಸ್ಥಳೀಯ ಭಾಷೆಗಳಲ್ಲಿ ಮಾಹಿತಿ ನೀಡುವ ಸಲುವಾಗಿ ರಾಜ್ಯಗಳು ತಮ್ಮದೇ ಆದ ಕಾಲ್‌ಸೆಂಟರ್‌ಗಳನ್ನು ಸ್ಥಾಪಿಸಿಕೊಳ್ಳಬೇಕೆಂದು ಕೇಂದ್ರ ಹೇಳಿತ್ತು. 

112 ಎಲ್ಲ ರೀತಿಯ ಮೊಬೈಲ್‌ ಮತ್ತು ಸ್ಥಿರ ದೂರವಾಣಿಗಳಲ್ಲಿ ಕಾರ್ಯನಿರ್ವಹಿಸುತ್ತದೆ.  ಸಿಮ್‌ ಇಲ್ಲದಿದ್ದರೂ 112ಕ್ಕೆ ಕರೆ ಮಾಡಬಹುದು. ಇಷ್ಟು ಮಾತ್ರವಲ್ಲದೆ ಮೊಬೈಲ್‌ ಫೋನ್‌ಗಳು ಲಾಕ್‌ ಆಗಿದ್ದರೂ 112ಕ್ಕೆ ಕರೆ ಮಾಡಲು ಅಡ್ಡಿಯಿಲ್ಲ. ಜತೆಗೆ ಎಸ್‌ಎಂಎಸ್‌ ಮೂಲಕವೂ ನೆರವು ಕೇಳಬಹುದು. ಇಷ್ಟೆಲ್ಲ ಸೌಲಭ್ಯವಿರುವ 112ನ್ನು ಅನುಷ್ಠಾನಿಸಿಕೊಳ್ಳಲು ಕರ್ನಾಟಕವೂ ಸೇರಿದಂತೆ ಹೆಚ್ಚಿನೆಲ್ಲ ರಾಜ್ಯಗಳು ವಿಶೇಷ ಆಸ್ಥೆ ತೋರಿಸಿಲ್ಲ. ಇದರ ಬದಲಾಗಿ ಹೊಸ ಹೊಸ ಎಮರ್ಜೆನ್ಸಿ ನಂಬರ್‌ಗಳನ್ನು ಪ್ರಾರಂಭಿಸುತ್ತಿವೆ. ಇದರಿಂದಾಗಿ  ಜನರಿಗೆ  ಯಾವುದು ನಿಜವಾದ ಎಮರ್ಜೆನ್ಸಿ ನಂಬರ್‌ ಎನ್ನುವ ಗೊಂದಲವುಂಟಾಗಿದೆ. 

ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಂಡರೂ ಬೇರೆ ಬೇರೆ ಸರಕಾರಿ ಇಲಾಖೆಗಳು ನಾನಾ ರೀತಿಯ ಎಮರ್ಜೆನ್ಸಿ ನಂಬರ್‌ಗಳನ್ನು ಹೊಂದಿವೆ. ಇದರ ಜತೆಗೆ ಎನ್‌ಜಿಒಗಳು, ಖಾಸಗಿ ಆಸ್ಪತ್ರೆಗಳು ಕೂಡ ತಮ್ಮದೇ ಆದ ಎಮರ್ಜೆನ್ಸಿ ನಂಬರ್‌ಗಳನ್ನು ಇಟ್ಟುಕೊಂಡಿವೆ. ಇಷ್ಟೆಲ್ಲ ನಂಬರ್‌ ಇರುವಾಗ ಜನರು ಯಾವುದಕ್ಕೆಂದು ಕರೆ ಮಾಡುವುದು? ಇನ್ನು  ಹಿಂದಿನ ನಂಬರ್‌ಗಳು ಚಾಲನೆಯಲ್ಲಿರುವುದಿಲ್ಲವೇ ಎನ್ನುವದನ್ನು ಸ್ಪಷ್ಟಪಡಿಸಿಲ್ಲ. 100ರಲ್ಲಿ ಒಂದೊಂದು ಇಲಾಖೆಗಾಗಿ ಒಂದೊಂದು ಅಂಕಿಯನ್ನು ಒತ್ತಿಕೊಂಡು ಅದರಿಂದ ಬರುವ ಮಾತನ್ನು ಆಲಿಸಿಕೊಂಡು ಕುಳಿತುಕೊಳ್ಳುವಷ್ಟು ವ್ಯವಧಾನ ತುರ್ತು ಸಂದರ್ಭದಲ್ಲಿ ಇರುತ್ತದೆಯೇ? ರಾಜ್ಯಕ್ಕೆ ಮಾತ್ರ ಸೀಮಿತವಾಗಿ ಹೊಸ ಎಮರ್ಜೆನ್ಸಿ ನಂಬರ್‌ ಪ್ರಾರಂಭಿಸುವ ತುರ್ತು ಅಗತ್ಯ ಏನಿತ್ತು. ಕೇಂದ್ರ ನೀಡಿದ ನಂಬರನ್ನೇ ಪರಿಣಾಮಕಾರಿಯಾಗಿ ಜಾರಿಗೆ ತಂದು ಇತರ ರಾಜ್ಯಗಳಿಗೆ ಮಾದರಿಯಾಗಬಹುದಿತ್ತಲ್ಲವೆ?

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-editorial

Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ

8

Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ

2025; May the mantra of peace and coexistence resonate throughout the world

Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ

Exam

ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.