ಅಭಿನಂದನ್‌ ಜತೆಗೆ ದೇಶ


Team Udayavani, Feb 28, 2019, 12:30 AM IST

x-10.jpg

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ಬುಧವಾರ ಎರಡೂ ಕಡೆಗಳ ಯುದ್ಧ ವಿಮಾನಗಳ ನಡುವೆ ತೀವ್ರ ಘರ್ಷಣೆ ಸಂಭವಿಸಿದೆ. ಮಂಗಳವಾರದ ಸರ್ಜಿಕಲ್‌ ದಾಳಿಗೆ ಪ್ರತಿಯಾಗಿ ಭಾರತದ ವಾಯುನೆಲೆಗೆ ಪ್ರವೇಶಿಸಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ವಾಪಸ್‌ ಕಳುಹಿಸುವಲ್ಲಿ ಯಶಸ್ವಿಯಾಗಿರುವ ಭಾರತೀಯ ವಾಯು ಸೇನೆ, ಆ ದೇಶದ ಎಫ್ 16 ಯುದ್ಧ ವಿಮಾನವನ್ನೂ ಹೊಡೆದುರುಳಿಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಭಾರತದ ಮಿಗ್‌ 21 ಯುದ್ಧ ವಿಮಾನ ಹೊಡೆದುರುಳಿಸಿದ್ದು, ಪೈಲಟ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಬಂಧಿಸಿ ಕರೆದೊಯ್ದಿದೆ. ಇಡೀ ದೇಶವೇ ಇವರ ಬಿಡುಗಡೆಗಾಗಿ ಪ್ರಾರ್ಥಿಸುತ್ತಿದ್ದು, ಅವರೊಟ್ಟಿಗಿದೆ.  

ಪಾಕ್‌ ಆಕ್ರಮಿತ ಕಾಶ್ಮೀರದ ಸ್ಥಳೀಯರು ನಮ್ಮ ಪೈಲಟ್‌ಗೆ ಥಳಿಸಿರುವ ವಿಡಿಯೋವನ್ನು ಪಾಕಿಸ್ತಾನವೇ ಬಿಡುಗಡೆ ಮಾಡಿದೆ. ಈ ವೇಳೆ ಪಾಕ್‌ ಸೇನೆಯ ಸೈನಿಕರು ಇದ್ದರೂ, ಅವರು ವರ್ಧಮಾನ್‌ ಮೇಲೆ ಸ್ಥಳೀಯರಿಂದ ಹಲ್ಲೆಯಾಗುತ್ತಿದ್ದರೂ ಬಿಡಿಸುವ ಯತ್ನ ಮಾಡದೇ ಇರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಅಂತಾರಾಷ್ಟ್ರೀಯ ಮಿಲಿಟರಿ ನಿಯಮದ ಪ್ರಕಾರ, ಇದು ಅಕ್ಷಮ್ಯ ನಡೆಯಾಗಿದ್ದು, ಈ ಬಗ್ಗೆ ಭಾರತವೂ ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇನ್ನೊಂದು ದೇಶದ ಯೋಧರು ಸೆರೆಸಿಕ್ಕಲ್ಲಿ, ಅವರನ್ನು ಉತ್ತಮವಾಗಿ ನಡೆಸಿಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವನ್ನೂ ಪಾಕಿಸ್ತಾನ ಹೊಂದದೇ ಇರುವುದು ಈ ವಿಡಿಯೋ ಮೂಲಕ ಗೊತ್ತಾಗಿದೆ. 

ಇದಷ್ಟೇ ಅಲ್ಲ, ಬುಧವಾರ ಬೆಳಗ್ಗೆಯಿಂದಲೂ ಸುಳ್ಳುಗಳ ಸರಮಾಲೆಯನ್ನೇ ಪೊಣಿಸಿದ್ದ ಪಾಕಿಸ್ತಾನ, ತನ್ನದೇ ಹೇಳಿಕೆಗಳನ್ನು ಹಿಂಪಡೆದು ಮುಜುಗರಕ್ಕೀಡಾದ ಪ್ರಸಂಗವೂ ಜರುಗಿದೆ. ಕಾಶ್ಮೀರದ ಬುದ್ವಾಮ್‌ನಲ್ಲಿ ಮಿಗ್‌ ಹೆಲಿಕಾಪ್ಟರ್‌ ಪತನಗೊಂಡ ದೃಶ್ಯಾವಳಿಗಳನ್ನು ಪ್ರಕಟಿಸಿದ್ದ ಪಾಕಿಸ್ತಾನ ಮಾಧ್ಯಮಗಳು ನಾವೇ ಇದನ್ನು ಹೊಡೆದುಹಾಕಿದ್ದೆವು ಎಂದಿದ್ದವು. ನಂತರ, ಈ ಘಟನೆಗೂ ನಮಗೂ ಸಂಬಂಧವೇ ಇಲ್ಲ ಎಂದು ಅಲ್ಲಿನ ಸೇನಾ ವಕ್ತಾರರೇ ಹೇಳಿದರು. 

ಇನ್ನು ಇಬ್ಬರು ಪೈಲಟ್‌ಗಳನ್ನು ಬಂಧಿಸಿದ್ದೇವೆ ಎಂದು ಘಂಟಾಘೋಷವಾಗಿ ಹೇಳಿದ್ದ ಪಾಕಿಸ್ತಾನ, ರಾತ್ರಿ ವೇಳೆಗೆ ಈ ಹೇಳಿಕೆಯನ್ನೂ ವಾಪಸ್‌ ಪಡೆಯಿತು. ಪಾಕ್‌ ಸೇನೆಯ ವಕ್ತಾರರು, ನಾವು ಭಾರತದ ಎರಡು ಯುದ್ಧ ವಿಮಾನ ಹೊಡೆದಿದ್ದೇವೆ, ಆದರೆ, ಒಬ್ಬ ಪೈಲಟ್‌ನನ್ನು ಮಾತ್ರ ಸೆರೆಹಿಡಿದಿದ್ದೇವೆ. ಇದಷ್ಟೇ ಅಲ್ಲ, ನಮ್ಮ ಜತೆ‌ಯಲ್ಲಿ ಇರುವ ಅಭಿನಂದನ್‌ ವರ್ಧಮಾನ್‌ ಅವರಿಗೆ ಯಾವುದೇ ಹಿಂಸೆಯನ್ನೂ ಕೊಟ್ಟಿಲ್ಲ. ಅಂತಾರಾಷ್ಟ್ರೀಯ ಮಿಲಿಟರಿ ನಿಯಮದ ಪ್ರಕಾರವೇ ನಡೆಸಿಕೊಳ್ಳುತ್ತಿದ್ದೇವೆ ಎಂದು ಹೇಳಿ ಸ್ಪಷ್ಟನೆ ಕೊಟ್ಟರು. 

ಇದಕ್ಕೆ ಕಾರಣವೂ ಇದೆ. ವರ್ಧಮಾನ್‌ ಅವರನ್ನು ಬಂಧಿಸಿದ ಕೂಡಲೇ ಈ ಸಂಗತಿಯನ್ನು ಇಡೀ ಜಗತ್ತಿಗೆ ಹೇಳಬೇಕಿತ್ತು. ಈ ನಿಟ್ಟಿನಲ್ಲಿ ಅಲ್ಲಿ ಏನಾಗುತ್ತಿದೆ ಎಂಬುದನ್ನು ಅವಲೋಕಿಸದೇ, ವರ್ಧಮಾನ್‌ ಅವರಿಗೆ ಹಿಂಸೆ ನೀಡುತ್ತಿರುವ ವಿಡಿಯೋ ದೃಶ್ಯಾವಳಿಗಳನ್ನು ಪಾಕಿಸ್ತಾನ ಮಾಧ್ಯಮಗಳ ಮೂಲಕ ಪ್ರಸಾರ ಮಾಡಿಸಿತು. ಕೇವಲ ಅರ್ಧಗಂಟೆಯಲ್ಲೇ ಈ ವಿಡಿಯೋ ಇಡೀ ಜಗತ್ತಿಗೆ ತಲುಪಿ, ಪಾಕಿಸ್ತಾನದ ವರ್ತನೆಗೆ ಛೀ ಥೂ ಎಂದು ಹೇಳಲು ಶುರು ಮಾಡಿದರು. ಇದರಿಂದ ಆತಂಕಗೊಂಡ ಪಾಕ್‌ ಸೇನೆ, ನಾವು ಅಭಿನಂದನ್‌ ವರ್ಧಮಾನ್‌ ಅವರನ್ನು ಉತ್ತಮವಾಗಿ ನಡೆಸಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟನೆ ಕೊಟ್ಟಿತು.

ಇವತ್ತಿನ ಸಾಮಾಜಿಕ ಮಾಧ್ಯಮಗಳ ಭರಾಟೆಯಲ್ಲಿ ಯಾವುದೇ ಸುದ್ದಿಯನ್ನು ಹಿಂದೆ ಮುಂದೆ ನೋಡದೇ ಪ್ರಕಟ ಮಾಡಬಾರದು ಎಂಬುದಕ್ಕೆ ಪಾಕಿಸ್ತಾನದ ಈ ಸುದ್ದಿಗಳೇ ಸಾಕ್ಷಿ. ನಮಗೆ ಹಿನ್ನಡೆಯಾಗುತ್ತಿಲ್ಲ ಎಂದು ಹೇಳುವ ಸಲುವಾಗಿ ಸುಳ್ಳು ಸುದ್ದಿಗಳನ್ನು ಪ್ರಕಟ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡಾಗುತ್ತಿರುವ ಪಾಕಿಸ್ತಾನ ಇನ್ನಾದರೂ ಬುದ್ಧಿ ಕಲಿಯಬೇಕು. 

ಎಲ್ಲದಕ್ಕೂ ಯುದ್ಧವೇ ಪರಿಹಾರವಲ್ಲ ಎಂಬುದು ಇತಿಹಾಸ ನೋಡಿದ ಎಲ್ಲರಿಗೂ ಗೊತ್ತು. ಅದರಲ್ಲೂ ಮಹಾಭಾರತ, ರಾಮಾಯಣ ಓದಿರುವ ಭಾರತದಂಥ ದೇಶದಲ್ಲಿ ಯುದ್ಧದಿಂದ ಏನಾಗುತ್ತದೆ ಎಂಬುದು ಚೆನ್ನಾಗಿಯೇ ಅರಿವಿದೆ. ಆದರೆ, ಉಗ್ರರಿಗೆ ಆಶ್ರಯ ಕೊಟ್ಟು, ಅವರ ಕಡೆಯಿಂದ ಪರೋಕ್ಷ ಸಮರ ನಡೆಸುತ್ತಿರುವ ಪಾಕಿಸ್ತಾನ ಆಡಳಿತ, ಅಲ್ಲಿನ ಸೇನೆ, ಐಎಸ್‌ಐ ತಮ್ಮ ವರ್ತನೆ ಬದಲಾವಣೆ ಮಾಡಿಕೊಳ್ಳದಿದ್ದರೆ, ಕೆಲವೊಂದು ಕಠಿಣ ಕ್ರಮಗಳು ಅನಿವಾರ್ಯವಾಗುತ್ತವೆ. ಇಂದು ಭಾರತವೇನೂ ಯುದ್ಧ ಮಾಡಲೇಬೇಕು ಎಂದು ಹೊರಟಿಲ್ಲ. ಆದರೆ, ಪುಲ್ವಾಮಾದಂಥ ದಾಳಿಗೆ ಉಗ್ರರು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಾಲಕೋಟ್‌ನ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿದ್ದು. ಇದನ್ನು ಅರಿತುಕೊಳ್ಳದೇ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌, ನಮಗೆ ಯುದ್ಧ ಬೇಕಿಲ್ಲ, ಶಾಂತಿಯ ಪ್ರತಿಪಾದಕರು ಎಂದು ಹೇಳಲು ಹೊರಟಿರುವುದು ಕೇವಲ ಹಾಸ್ಯಾಸ್ಪದವಷ್ಟೇ. ಮೊದಲು ಉಗ್ರರಿಗೆ ಅನ್ನ ನೀರು ಕೊಡುವುದನ್ನು ನಿಲ್ಲಿಸಿ, ನಂತರ ಶಾಂತಿ ಸಾಮರಸ್ಯದಿಂದ ಬಾಳ್ಳೋಣ ಎಂದರೆ ಆ ಮಾತಿಗೆ ಒಂದು ಅರ್ಥವಾದರೂ ಬಂದೀತು. 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.