ಹೆಚ್ಚಾದ ವೈರಸ್ ಹಾವಳಿ ಮುಗಿಯದ ಸವಾಲು
Team Udayavani, Jun 19, 2020, 5:51 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ದೇಶದಲ್ಲಿ ಕೋವಿಡ್ ಕಾರಣದಿಂದಾಗಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ.
ಇಷ್ಟೊಂದು ಸಂಖ್ಯೆಯ ಸಾವುಗಳು ನಿಜಕ್ಕೂ ಆತಂಕ ಹಾಗೂ ಬೇಸರ ಹುಟ್ಟಿಸುವ ಸಂಗತಿಯೇ ಹೌದು.
ಆದರೂ, ಸೋಂಕಿತರ-ಮೃತರ ಅನುಪಾತದ ದೃಷ್ಟಿಯಿಂದ ನೋಡಿದಾಗ ಜಾಗತಿಕ ಮರಣ ಪ್ರಮಾಣ ಸರಾಸರಿ 5 ಪ್ರತಿಶತಕ್ಕೂ ಅಧಿಕವಿದ್ದರೆ, ಭಾರತದಲ್ಲಿ 3 ಪ್ರತಿಶತದಷ್ಟಿದೆ. ಆದಾಗ್ಯೂ, ಸಾವು ಹಾಗೂ ಸೋಂಕನ್ನು ಕೇವಲ ಅಂಕಿಸಂಖ್ಯೆಗಳ ಆಧಾರದ ಮೇಲೆಯೇ ನೋಡಲು ಆಗುವುದಿಲ್ಲ ಎನ್ನುವುದು ಸತ್ಯ.
ಪ್ರತಿಯೊಬ್ಬ ವ್ಯಕ್ತಿಯ ಸಾವೂ ಸಹ ಆತನ ಕುಟುಂಬಕ್ಕೆ, ಪ್ರೀತಿಪಾತ್ರರಿಗೆ ಬಹು ದೊಡ್ಡ ಆಘಾತವೇ ಸರಿ. ಆ ಇಡೀ ಕುಟುಂಬದ ಅಸ್ತಿತ್ವವೇ ಅಲ್ಲಾಡಿಬಿಡುತ್ತದೆ, ಕಟ್ಟಿಕೊಂಡ ಕನಸುಗಳೆಲ್ಲವೂ ಛಿದ್ರವಾಗಿಬಿಡುತ್ತವೆ.
ಈ ಕಾರಣಕ್ಕಾಗಿಯೇ, ಸೋಂಕಿತರ ಸಂಖ್ಯೆಯನ್ನು ಆದಷ್ಟು ಬೇಗ ತಗ್ಗುವಂತೆ ನೋಡಿಕೊಂಡು, ಜೀವಹಾನಿಗಳನ್ನು ತಡೆಯುವ ನಿಟ್ಟಿನಲ್ಲಿ ಪರಿಶ್ರಮಕ್ಕೆ ವೇಗ ನೀಡಬೇಕಿದೆ.
ಆದಾಗ್ಯೂ, ಈಗ ಪ್ರತಿದಿನ 1 ಲಕ್ಷಕ್ಕೂ ಅಧಿಕ ಟೆಸ್ಟಿಂಗ್‌ಗಳನ್ನು ನಡೆಸಲಾಗುತ್ತಿದೆಯಾದರೂ, ಇದು ಎಲ್ಲಾ ರಾಜ್ಯಗಳಲ್ಲೂ ಸಮನಾಗಿಲ್ಲ ಎನ್ನುವುದೇ ಆತಂಕದ ವಿಷಯ. ಅದರಲ್ಲೂ ರಾಜಧಾನಿ ದೆಹಲಿಯಲ್ಲಿ ಹಾಗೂ ವಾಣಿಜ್ಯ ನಗರಿ ಮುಂಬಯಿಯಲ್ಲಿ ಹಠಾತ್ತನೆ ಪರೀಕ್ಷೆಗಳ ಪ್ರಮಾಣ ಕಡಿಮೆಯಾಗಿದ್ದು ಟೀಕೆಗೆ ಒಳಗಾಗುತ್ತಿದೆ.
ಆದರೆ, ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವುದೊಂದೇ ಮರಣ ಪ್ರಮಾಣದ ತಡೆಗೆ ಪರಿಣಾಮಕಾರಿ ಮಾರ್ಗ ಆಗಲಾರದು. ಹೆಚ್ಚಿನ ಸಂಖ್ಯೆಯಲ್ಲಿ ಜೀವಗಳು ಉಳಿಯಬೇಕು ಎಂದರೆ, ರೋಗಾವಸ್ಥೆಯು ಉಲ್ಬಣಿಸುವ ಮುನ್ನವೇ ರೋಗಿಯು ಪರೀಕ್ಷೆಗೊಳಪಟ್ಟು, ಆಸ್ಪತ್ರೆ ತಲುಪುವುದು ಮುಖ್ಯವಾಗುತ್ತದೆ. ಈಗಲೂ ಅನೇಕರು ರೋಗ ಲಕ್ಷಣಗಳು ತೀವ್ರವಾದ ನಂತರವೇ ಟೆಸ್ಟಿಂಗ್‌ಗೆ ಮುಂದಾಗುತ್ತಿದ್ದಾರೆ.
ಎಲ್ಲಕ್ಕಿಂತ ಆತಂಕ ಹುಟ್ಟಿಸುತ್ತಿರುವ ಸಂಗತಿಯೆಂದರೆ, ರೋಗದ ಅಪಾಯದ ಬಗ್ಗೆ ಈಗ ಜನರಲ್ಲಿ ಭಯವೇ ದೂರವಾಗಿಬಿಟ್ಟಿದೆಯೇನೋ ಎಂಬಂಥ ಚಿತ್ರಣಗಳು ಕಂಡುಬರುತ್ತಿರುವುದು. ಲಾಕ್ ಡೌನ್ ನಿಯಮಗಳು ಸಡಿಲವಾಗಿ, ಆರ್ಥಿಕ ಚಕ್ರ ಆರಂಭವಾಗುವುದು ದೇಶದ ವಿತ್ತ ಹಿತದೃಷ್ಟಿಯಿಂದ ಅಗತ್ಯ ಕ್ರಮವಾಗಿತ್ತು.
ಆದರೆ, ನಿರ್ಬಂಧಗಳು ಸಡಿಲವಾಗಿವೆ ಎಂದರೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ ಎಂದೇನೂ ಅರ್ಥವಲ್ಲ. ಸತ್ಯವೇನೆಂದರೆ, ಈಗ ದೇಶದಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಈಗ ಮಾಡುವ ನಿಷ್ಕಾಳಜಿಯು ಖಂಡಿತ ಮುಂದೆ ಬೆಲೆ ತೆರುವಂತೆ ಮಾಡಲಿದೆ.
ಈ ಕಾರಣಕ್ಕಾಗಿಯೇ ಅಪಾಯವನ್ನು ಕಡೆಗಣಿಸದೇ, ಸಾಮಾಜಿಕ ಅಂತರದ ನಿಯಮಗಳನ್ನು, ಸ್ವಚ್ಛತೆಯನ್ನು ಪಾಲಿಸಲೇಬೇಕು. ಏಪ್ರಿಲ್ – ಮೇ ಅವಧಿಯಲ್ಲಿ ಗಂಟೆಗೊಮ್ಮೆಯಾದರೂ ಕೈತೊಳೆಯುತ್ತಿದ್ದ ಭಾರತೀಯರು ಈಗ ಹೊರಗೆ ಅಡ್ಡಾಡಿ ಬಂದರೂ ಈ ನಿಯಮವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುತ್ತದೆ ಪ್ಯಾಂಡೆಮಿಕ್ ರಿಸರ್ಚ್ ಸೊಸೈಟಿಯ ಅಧ್ಯಯನ ವರದಿ. ನೆನಪಿರಲಿ, ಕೋವಿಡ್ ವಿರುದ್ಧದ ಹೋರಾಟ ಈಗ ನಿರ್ಣಾಯಕ ಹಂತ ತಲುಪಲಿದೆ. ಭಾರತೀಯರೆಲ್ಲ ಎಚ್ಚರಿಕೆಯಿಂದಿರಲೇ ಬೇಕಾದ ಸಮಯವಿದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
“ಟೋಲ್‌ಗಳಲ್ಲಿ ಸೌಲಭ್ಯವಿಲ್ಲ’: ಮಂಜುನಾಥ ಭಂಡಾರಿ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.