Covid ಹೊಸ ರೂಪಾಂತರಿ: ಮುನ್ನೆಚ್ಚರಿಕೆ, ಸನ್ನದ್ಧತೆ ಇರಲಿ


Team Udayavani, Dec 18, 2023, 6:20 AM IST

Covid ಹೊಸ ರೂಪಾಂತರಿ: ಮುನ್ನೆಚ್ಚರಿಕೆ, ಸನ್ನದ್ಧತೆ ಇರಲಿ

ಕೊರೊನಾದ ಅತ್ಯಂತ ಕ್ಷಿಪ್ರವಾಗಿ ಹರಡಬಲ್ಲ ಹೊಸ ತಳಿ ಜೆಎನ್‌.1 ಸೋಂಕು ಕೇರಳದಲ್ಲಿ ಪತ್ತೆಯಾಗಿರುವುದು ಗಾಬರಿ ಪಡಬೇಕಾದ ವಿಷಯ ಅಲ್ಲ; ಆದರೆ ಮುನ್ನೆಚ್ಚರಿಕೆಯಿಂದ ಇರಬೇಕಾದ, ಸಂಭಾವ್ಯ ಪರಿಸ್ಥಿತಿಗಳನ್ನು ಪರಿಣಾಮಕಾರಿ ಯಾದ ರೀತಿಯಲ್ಲಿ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಬೆಳವಣಿಗೆ.

2019-20ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ಹಾಹಾಕಾರ ಸೃಷ್ಟಿಸಿದ ಕೊರೊನಾ ಮರುವರ್ಷ ಬೇರೆಯದೇ ರೀತಿಯಲ್ಲಿ ಅಪಾರ ತೊಂದರೆಗೆ ಕಾರಣ ವಾಗಿತ್ತು. ಮೊದಲ ವರ್ಷ ಕಾಯಿಲೆ ಸಂಪೂರ್ಣವಾಗಿ ಅಪರಿಚಿತ ವಾಗಿದ್ದುದರಿಂದ ಸಾವುನೋವುಗಳು ಸಂಭವಿಸಿದವು. ಆಗ ಜಗತ್ತಿನಾದ್ಯಂತ ಸೃಷ್ಟಿಯಾದದ್ದು ಮನುಕುಲ ಇತ್ತೀಚೆಗಿನ ದಶಕಗಳಲ್ಲಿ ಅನುಭವಿಸಿರದಂತಹ ಆರೋಗ್ಯ ತುರ್ತುಸ್ಥಿತಿ. ಅದರಿಂದ ಹೇಗೋ ಪಾರಾಗಿ ನಿಟ್ಟುಸಿರು ಬಿಡುವ ವೇಳೆಗೆ ಮರುವರ್ಷ ಅದೇ ಕೊರೊನಾ ತುಸು ಹೊಸ ರೂಪ ತಳೆದು ಕಂಗೆಡಿಸಿತು. ಆಗ ಆಮ್ಲಜನಕ ಕೊರತೆ ಉಂಟಾದುದು, ಬ್ಲ್ಯಾಕ್‌ ಫ‌ಂಗಸ್‌ ಕಾಟ ಮರೆಯಲಾಗದ್ದು. ಮೊದಲ ವರ್ಷದ ಅನುಭವವನ್ನು ಪಾಠವಾಗಿ ಇರಿಸಿ ಕೊಂಡು ಮರುವರ್ಷದ ಅಲೆಯನ್ನು ಎದುರಿಸಲು ಮುಂದಾದಾಗ ಅದು ಬೇರೆಯದೇ ರೂಪದಲ್ಲಿ ಕಾಡಿತ್ತು ಎಂಬುದು ಗಮನದಲ್ಲಿ ಇರಿಸಿಕೊಳ್ಳಬೇಕಾದ ಅಂಶ.

ನಮ್ಮ ದೇಶದಲ್ಲಿ ದೃಢಪಟ್ಟಿರುವ ಕೊರೊನಾ ಉಪತಳಿ ಜೆಎನ್‌.1ನಿಂದಾಗಿ ಜೀವಹಾನಿ ಉಂಟಾಗಿಲ್ಲ ಎನ್ನುವುದು ಸದ್ಯಕ್ಕೆ ಸಮಾಧಾನದ ವಿಚಾರ. ಹಾಗೆಂದ ಮಾತ್ರಕ್ಕೆ ನಾವು ಯಾರೂ ನಿರಾಳವಾಗಿ ಇರುವಂತಿಲ್ಲ. ಏಕೆಂದರೆ ಹೊಸ ತಳಿ ಪ್ರತಿ  ರಕ್ಷಣೆಗಾಗಿ ನಾವು ಬಳಸುವ ವೈದ್ಯಕೀಯ ವ್ಯವಸ್ಥೆಗೆ ಸವಾಲು ಹಾಕು  ವಂಥದ್ದು. ಹೀಗಾಗಿ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಆರೋಗ್ಯ ಮತ್ತು ತಾಂತ್ರಿಕ ಪರಿಣತರ ತಂಡ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮತ್ತೆ ವಿಷಮ ಪರಿಸ್ಥಿತಿ ಬಾರದಂತೆ ಎಲ್ಲರೂ ನೋಡಿಕೊಳ್ಳಬೇಕಾಗಿದೆ.

ಕೊರೊನಾದಂತಹ ಶ್ವಾಸಾಂಗ ಸಂಬಂಧಿ ಸೋಂಕು ರೋಗಗಳು ಚಳಿಗಾಲದಲ್ಲಿ ಹೆಚ್ಚುವುದು ಈ ಹಿಂದಿನ ನಿದರ್ಶನಗಳಿಂದ ಶ್ರುತಪಟ್ಟಿದೆ. ಅಮೆರಿಕ, ಸಿಂಗಾಪುರ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೆಮ್ಮು, ನೆಗಡಿ ಸೇರಿದಂತೆ ಕೊರೊನಾ ಲಕ್ಷಣಗಳನ್ನೇ ಹೊಂದಿರುವ ಆರೋಗ್ಯ ಸಮಸ್ಯೆ ವ್ಯಾಪಕವಾಗಿರು ವುದು ಈಗಾಗಲೇ ವರದಿಯಾಗಿದೆ.

ನಮ್ಮ ದೇಶವೂ ಸೇರಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಕೊರೊನಾದ ಹೊಸ ರೂಪಾಂತರಿಯಿಂದಾಗಿ ಆರೋಗ್ಯ ಸಮಸ್ಯೆ ಉಂಟಾಗಿರುವುದು ನಿಜ. ಅದು ಈ ಹಿಂದಿನ ವರ್ಷಗಳಂತೆ ಹಾಹಾಕಾರ ಉಂಟು ಮಾಡುವುದು ಬೇಡವೇ ಬೇಡ. ಅದಕ್ಕಾಗಿ ನಾವೆಲ್ಲರೂ ರಾಜ್ಯ ಮತ್ತು ಕೇಂದ್ರ ಸರಕಾರಗಳ ಜತೆಗೆ ಕೈಜೋಡಿಸಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಆತಂಕ ಪಡದೆ ಉತ್ತಮ ಆರೋಗ್ಯಾಭ್ಯಾಸಗಳನ್ನೂ ನಾವು ಹೊಂದುವುದು ಅಗತ್ಯವಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಲಭ್ಯಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸುವುದು ಅಗತ್ಯ. ಶನಿವಾರದಿಂದ ರ‌ವಿವಾರದ ಅವಧಿಯಲ್ಲಿ ಕೇಂದ್ರ ಸರಕಾರದ ಮಾಹಿತಿ ಪ್ರಕಾರ 335 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ರೂಪಾಂತರಿ ಜೆಎನ್‌.1 ಇಲ್ಲದೇ ಇರುವುದು ಸಮಾಧಾನದ ಸಂಗತಿ.

ಕೊರೊನಾದಂತಹ ಅಪರಿಚಿತ ಸೋಂಕು ರೋಗಗಳ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬುದಕ್ಕೆ ರೂಪಾಂತರ ಹೊಂದಬಲ್ಲ ಅದರ ಸಾಮರ್ಥ್ಯ ಪ್ರಧಾನ ಕಾರಣ. ಅಲ್ಲದೆ ಇಂತಹ ಕಾಯಿಲೆಗಳನ್ನು ಗುಣಪಡಿಸಲು ಸಿದ್ಧ ಔಷಧಗಳು ಇಲ್ಲ. ಅದರಿಂದ ಉಂಟಾಗುವ ರೋಗ ಲಕ್ಷಣಗಳನ್ನು ಉಪಶಮನಗೊಳಿಸುವ ಔಷಧಗಳು ಮಾತ್ರ ನಮ್ಮಲ್ಲಿ ಲಭ್ಯವಿವೆ. ಹೀಗಾಗಿಯೇ ಪ್ರತೀ ಬಾರಿ ಹೊಸ ತಳಿ, ಹೊಸ ರೂಪಾಂತರಿ ಪತ್ತೆಯಾದಾಗ ಗಾಬರಿಗೊಳ್ಳದೆ ಸನ್ನದ್ಧತೆ ಹೆಚ್ಚಿಸಿಕೊಳ್ಳಬೇಕು, ಮುಂಜಾಗರೂಕತೆಯಿಂದ ಇರಬೇಕು.

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.