ಸಿಲಿಂಡರ್‌ ದರ ಹೆಚ್ಚಳ ಜನಸಾಮಾನ್ಯರಿಗೆ ಹೊರೆ


Team Udayavani, Mar 2, 2023, 6:00 AM IST

ಸಿಲಿಂಡರ್‌ ದರ ಹೆಚ್ಚಳ ಜನಸಾಮಾನ್ಯರಿಗೆ ಹೊರೆ

ಇಡೀ ಜಗತ್ತೇ ಹಣದುಬ್ಬರದ ಕಪಿಮುಷ್ಟಿಗೆ ಸಿಲುಕಿ ಒದ್ದಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ನೆರೆಯ ಪಾಕಿಸ್ಥಾನ, ಶ್ರೀಲಂಕಾ, ಬಾಂಗ್ಲಾದೇಶ ಸಹಿತ ಹಲವಾರು ದೇಶಗಳು ಈ ಹಣದುಬ್ಬರದ ಹೊಡೆತಕ್ಕೆ ಸಿಲುಕಿ ಕಕ್ಕಾಬಿಕ್ಕಿಯಾಗಿವೆ. ದೂರದ ಅಮೆರಿಕ, ಇಂಗ್ಲೆಂಡ್‌, ಐರೋಪ್ಯ ಒಕ್ಕೂಟದ ದೇಶಗಳೂ ಇದಕ್ಕೆ ಹೊರತೇನಲ್ಲ.

ಈ ಹಣದುಬ್ಬರ ಎದುರಿಸುವುದಕ್ಕಾಗಿಯೇ  ಭಾರತೀಯ ರಿಸರ್ವ್‌ ಬ್ಯಾಂಕ್‌ ಹಲವಾರು ಸುಧಾರಣಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಮೂಲಕ ಬೇಡಿಕೆಯನ್ನು ತಗ್ಗಿಸುವ ಕೆಲಸವನ್ನೂ ಅದು ಮಾಡುತ್ತಿದೆ. ಅಂದರೆ ರೆಪೋ ದರ ಹೆಚ್ಚಳದ ಮೂಲಕ ಜನ ಹೆಚ್ಚೆಚ್ಚು ಸಾಲದ ಮೊರೆ ಹೋಗಬಾರದು ಎನ್ನುವ ದೃಷ್ಟಿಯಿಂದಲೇ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ.

ಈ ಸಂಗತಿಗಳನ್ನು ಹೇಳಲು ಕಾರಣವೂ ಇದೆ. ನಿಗದಿಯಂತೆಯೇ ಮಾ.1ರ ತೈಲ ದರ ಪರಿಷ್ಕರಣೆಯಲ್ಲಿ ಗೃಹ ಬಳಕೆ ಸಿಲಿಂಡರ್‌ ದರವನ್ನು 50 ರೂ. ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್‌ ದರವನ್ನು 350.50 ರೂ.ನಷ್ಟು ಏರಿಕೆ ಮಾಡಲಾಗಿದೆ. ಹೀಗಾಗಿ ಗೃಹ ಬಳಕೆ ಸಿಲಿಂಡರ್‌ ದರ ಬೆಂಗಳೂರಿನಲ್ಲಿ 1,105.50 ರೂ. ಆಗಿದ್ದರೆ, ವಾಣಿಜ್ಯ ಬಳಕೆ ಸಿಲಿಂಡರ್‌ ದರ 2,190.50 ರೂ.ಗೆ ತಲುಪಿದೆ. ಈ ದರ ಏರಿಕೆಯ ಪೆಟ್ಟು ಅಡುಗೆ ಮನೆಯೊಳಗಿನ ಗೃಹಿಣಿಯ ಬಜೆಟ್‌ನಿಂದ ಹಿಡಿದು, ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿಯಂಥ ನಗರಗಳಲ್ಲಿ ಕೆಲಸ ಮಾಡುತ್ತಿರುವ, ಹೊಟೇಲ್‌ ಊಟವನ್ನೇ ನಂಬಿಕೊಂಡಿರುವ ಅಸಂಖ್ಯಾಕ ಮಂದಿಗೂ ಬೀಳಲಿದೆ.

ತೈಲ ದರ ಏರಿಕೆ ಎಂಬುದು ಒಂದು ರೀತಿಯಲ್ಲಿ ವೃತ್ತಾಕಾರದಂತೆ. ಇದರಲ್ಲಿ ಯಾರೋ ಒಬ್ಬರಿಗೆ ಏಟು ಬಿದ್ದು, ಉಳಿದವರು ಆರಾಮಾಗಿರಬಹುದು ಎಂಬುದು ಸುಳ್ಳು. ಸಿಲಿಂಡರ್‌ ದರ ಏರಿಕೆಯಿಂದಾಗಿ ಒಬ್ಬ ಶ್ರೀಸಾಮಾನ್ಯ ಅಥವಾ ಆತನ ಕುಟುಂಬದ ಬಜೆಟ್‌ ಮೇಲೆ ದೊಡ್ಡ ಹೊಡೆತ ಬಿದ್ದೇ ಬೀಳುತ್ತದೆ.

ಮೊದಲೇ ಹೇಳಿದ ಹಾಗೆ, ಹಣದುಬ್ಬರದ ಕಾಲದಲ್ಲಿ ಸಿಲಿಂಡರ್‌ ದರ ಏರಿಕೆ ಮಾಡುವ ನಿರ್ಧಾರ ಒಳ್ಳೆಯದಲ್ಲ. ಇದೊಂದು ರೀತಿ ಕಷ್ಟಕಾಲದಲ್ಲಿ ಗಾಯದ ಮೇಲೆ ಬರೆ ಎಳೆದ ಹಾಗೆ. ಅಲ್ಲದೆ, ಹಣದುಬ್ಬರ ನಿಯಂತ್ರಣದ ಅವಧಿಯಲ್ಲೇ ಜನಸಾಮಾನ್ಯರ ತೀರಾ ಅಗತ್ಯಕ್ಕೆ ಬೇಕಾದವುಗಳ ದರ ಏರಿಕೆ ಮಾಡಿದರೆ, ಅದರಿಂದ ಜನರಿಗೆ ದೊಡ್ಡ ಪ್ರಮಾಣದ ಅನಾನುಕೂಲಗಳಾಗಲಿವೆ ಎಂಬುದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಬಹುದು.

ಹಾಗೆಯೇ ಇದು ತೀರಾ ಲಾಭ ಮತ್ತು ನಷ್ಟದ ವಿಚಾರವೇನಲ್ಲ. ಸುಖೀ ರಾಜ್ಯ ಅಥವಾ ಕ್ಷೇಮ ರಾಜ್ಯದ ಪರಿಕಲ್ಪನೆಯಲ್ಲಿ ಈ ಲಾಭ ನಷ್ಟದ ಬಗ್ಗೆ ಯೋಚನೆ ಮಾಡುವುದು ಅಸಮಂಜಸ. ಜತೆಗೆ, ಜುಲೈನಿಂದ ಏರಿಕೆಯನ್ನೇ ಮಾಡಿರಲಿಲ್ಲ, ಈಗ ಮಾಡಿದ್ದೇವೆ ಎಂದು ಹೇಳುವುದೂ ತರವಲ್ಲ. ಏಕೆಂದರೆ ಇದು ಬೇಡಿಕೆ ಸೃಷ್ಟಿಸಿ, ಲಾಭ ಮತ್ತು ನಷ್ಟದ ವ್ಯಾಪಾರ ಮಾಡುವ ಮಾರುಕಟ್ಟೆಯಂತೂ ಅಲ್ಲವೇ ಅಲ್ಲ. ಇದು ಸೇವೆ ಎಂಬುದನ್ನು ತಿಳಿದರೆ ಈ ಪ್ರಮಾಣದಲ್ಲಿ ದರ ಏರಿಕೆಯ ಆಸ್ಪದವೂ ಬರುವುದಿಲ್ಲ.

2022ರ ಮೇನಲ್ಲಿ 14 ಕೆ.ಜಿ. ಸಿಲಿಂಡರ್‌ ದರ 1,005 ರೂ. ಮುಟ್ಟಿತು. ಅಲ್ಲಿಂದ ಜೂನ್‌ನಲ್ಲಿ 1,055 ರೂ.ಗೆ ತಲುಪಿತು. ಈಗ ಈ ದರ 1,105 ರೂ.ಗೆ ಬಂದಿದೆ. ಹಾಗೆಯೇ ವಾಣಿಜ್ಯ ಸಿಲಿಂಡರ್‌ ದರದಲ್ಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಒಂದೇ ಬಾರಿಗೆ 350 ರೂ. ಹೆಚ್ಚಳ ಮಾಡಿರುವುದು ಸಂಕಷ್ಟಕ್ಕೀಡು ಮಾಡಿದೆ. ಕರ್ನಾಟಕದ ಹೊಟೇಲ್‌ ಮಾಲಕರ ಸಂಘವೂ ಈ ದರ ಹೆಚ್ಚಳದ ವಿರುದ್ಧ ತೀವ್ರ ಆಕ್ರೋಶವನ್ನೇ ವ್ಯಕ್ತಪಡಿಸಿದೆ. ಆದರೆ ಸದ್ಯಕ್ಕೆ ಬೆಲೆ ಹೆಚ್ಚಳ ಮಾಡಲ್ಲ ಎಂಬುದು ಸಮಾಧಾನದ ಸಂಗತಿ.

ಏನೇ ಆಗಲಿ ನಮ್ಮನ್ನು ಆಳುವ ವ್ಯವಸ್ಥೆ ಜನರ ಪರವಾಗಿಯೇ ಇರಬೇಕು. ಆಗಷ್ಟೇ ಕಲ್ಯಾಣ ರಾಜ್ಯದ ಪರಿಕಲ್ಪನೆಗೆ ಒಂದು ಅರ್ಥವಾದರೂ ಸಿಗುತ್ತದೆ. ಹೀಗಾಗಿ ಬೆಲೆ ಏರಿಕೆಯಂಥ ವಿಚಾರದಲ್ಲಿ ದೂರದೃಷ್ಟಿಯಿಂದ ಯೋಚಿಸಿ ನಿರ್ಧಾರ ತೆಗೆದುಕೊಂಡರೆ ಉತ್ತಮ.

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.