ಗ್ರಾಮೀಣ ಪ್ರದೇಶಗಳತ್ತ ಚಿತ್ತ ಕೋವಿಡ್ ಪ್ರಸರಣ
Team Udayavani, Jul 22, 2020, 8:48 AM IST
ಸಾಂದರ್ಭಿಕ ಚಿತ್ರ
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕವು ಸಮುದಾಯ ಪ್ರಸರಣ ಚರಣವನ್ನು ತಲುಪಿಬಿಟ್ಟಿದೆಯೇ ಎನ್ನುವ ಬಗ್ಗೆ ಕೆಲವು ದಿನಗಳಿಂದ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ಪ್ರಶ್ನೆಗೆ ಸಾಂಕ್ರಾಮಿಕ ರೋಗ ತಡೆ ವಿಶೇಷಜ್ಞರು ಮತ್ತು ಸರಕಾರಗಳ ನಡುವೆ ಸಹಮತವಂತೂ ಇಲ್ಲ. ಆದರೆ ದೇಶದಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯನ್ನು ಪರಿಗಣಿಸಿದಾಗ ನಿಜಕ್ಕೂ ರೋಗ ಸಮುದಾಯ ಪ್ರಸರಣ ಹಂತವನ್ನು ತಲುಪಿಬಿಟ್ಟಿತೇ ಎನ್ನುವ ಅನುಮಾನ ಕಾಡದಿರದು. ಒಟ್ಟು ಪ್ರಕರಣಗಳ ಸಂಖ್ಯೆ ಈಗಾಗಲೇ 11.71 ಲಕ್ಷ ದಾಟಿದ್ದರೆ, ಇದರಲ್ಲಿ 4 ಲಕ್ಷ ಸಕ್ರಿಯ ಪ್ರಕರಣಗಳು ಇವೆ. ಕಳವಳದ ಅಂಶವೆಂದರೆ, ಈಗ ನಿತ್ಯ ಸೋಂಕಿತರ ಸಂಖ್ಯೆ 40 ಸಾವಿರ ದಾಟಿರುವುದು!
ಇಂದು ದೇಶದಲ್ಲಿ ಟೆಸ್ಟ್‌ಗಳ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಕಾರಣದಿಂದಾಗಿಯೇ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಾಣಿಸಿದೆ ಎನ್ನಲಾಗುತ್ತದೆ. ಆದರೆ ಮತ್ತಷ್ಟು ಪರೀಕ್ಷೆಗಳನ್ನು ನಡೆಸಿದರೆ, ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಮಗದಷ್ಟು ಏರಿಕೆ ಕಾಣುತ್ತದೆ ಎಂದರ್ಥ ಅಲ್ಲವೇ? ಈ ಕಾರಣಕ್ಕಾಗಿಯೇ ನಿತ್ಯ ಟೆಸ್ಟ್‌ಗಳ ಸಂಖ್ಯೆ ಈ ತಿಂಗಳಾಂತ್ಯಕ್ಕೆ ಕನಿಷ್ಠ ನಾಲ್ಕು ಲಕ್ಷದಷ್ಟಾದರೂ ನಡೆಯಬೇಕು ಎನ್ನುತ್ತಾರೆ ತಜ್ಞರು. ದೇಶದಲ್ಲಿ ಜುಲೈ 15ರಿಂದ ಪ್ರತಿ ನಿತ್ಯ 3 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳು ನಡೆಯಲಾರಂಭಿಸಿವೆ. ಗಮನಾರ್ಹ ಸಂಗತಿಯೆಂದರೆ ಇತ್ತ ರಾಜ್ಯದಲ್ಲೂ ಸಹ ಟೆಸ್ಟಿಂಗ್ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿರುವುದು. ಜೂನ್ ತಿಂಗಳ ವೇಳೆ 15-18 ಸಾವಿರದ ಆಸುಪಾಸು ನಡೆಯುತ್ತಿದ್ದ ನಿತ್ಯ ಟೆಸ್ಟಿಂಗ್‌ಗಳ ಸಂಖ್ಯೆ ಈಗ ಕೆಲವು ದಿನಗಳಿಂದ 35 ಸಾವಿರದ ಗಟಿ ದಾಟಿದೆ. ಈಗ ಕರ್ನಾಟಕವು ಸಕ್ರಿಯ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿದ್ದು, ಮೊದಲೆರಡು ಹಾಟ್‌ಸ್ಪಾಟ್‌ಗಳಲ್ಲಿ ಮಹಾರಾಷ್ಟ್ರ ಹಾಗೂ ತಮಿಳುನಾಡು ಇವೆ. ರಾಜ್ಯದಲ್ಲಷ್ಟೇ ಅಲ್ಲದೇ ಅನ್ಯ ರಾಜ್ಯಗಳಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಅನೇಕ ರಾಜ್ಯಗಳು ತಮ್ಮಲ್ಲಿ ಹಲವು ಭಾಗಗಳಲ್ಲಿ ಅರೆ ಅಥವಾ ಪೂರ್ಣ ಲಾಕ್‌ಡೌನ್ ಜಾರಿಮಾಡಿವೆ.
ಇವನ್ನೆಲ್ಲ ಗಮನಿಸಿದಾಗ ಕೋವಿಡ್-19 ಪ್ರಕರಣಗಳ ಸಂಖ್ಯೆ ಎಲ್ಲಿಗೆ ಹೋಗಿ ತಲುಪಲಿದೆ, ಎಷ್ಟು ಪಸರಿಸಲಿದೆ, ಯಾವಾಗ ನಿಲ್ಲಲಿದೆ ಎನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಇದೇ ವೇಳೆಯಲ್ಲೇ ಈ ರೋಗ ಮಾರಣಾಂತಿಕವಲ್ಲ ಎನ್ನುವುದು ನಿಜವಾದರೂ ಪ್ರತಿಯೊಂದು ಜೀವವೂ ಅಮೂಲ್ಯವಾದ್ದರಿಂದ ಸಾವನ್ನು ಅಂಕಿಯಲ್ಲಿ ಅಳೆಯುವುದು ತರವಾಗದು. ಈಗಾಗಲೇ ದೇಶದಲ್ಲಿ 7 ಲಕ್ಷಕ್ಕೂ ಅಧಿಕ ಜನರು ಗುಣಮುಖರಾಗಿದ್ದಾರೆ ಎನ್ನುವುದು ನೆಮ್ಮದಿಯ ವಿಷಯವೇ ಆದರೂ ನಿತ್ಯ ಸೋಂಕಿತರ ಸಂಖ್ಯೆ 40 ಸಾವಿರ ದಾಟುತ್ತಿರುವುದು ಖಂಡಿತ ಚಿಂತೆಯ ವಿಷಯವೇ ಸರಿ. ಈಗ ಗ್ರಾಮೀಣ ಭಾಗಗಳಲ್ಲೂ ಸೋಂಕಿತರ ಸಂಖ್ಯೆ ಏರುತ್ತಿದೆ. ಈ ಕಾರಣಕ್ಕಾಗಿಯೇ, ಎಲ್ಲ ರಾಜ್ಯ ಸರಕಾರಗಳೀಗ ತಮ್ಮ ಗಮನವನ್ನು ಗ್ರಾಮೀಣ ಭಾಗಗಳತ್ತ ಹೆಚ್ಚು ಹರಿಸಬೇಕಾದ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.