ಮೋದಿ ವರ್ಚಸ್ಸಿನ ಅತಿ ಅವಲಂಬನೆ ಬೇಡ: ಬಿಜೆಪಿ ನಿರೀಕ್ಷಿತ ಗೆಲುವು


Team Udayavani, Apr 27, 2017, 1:34 PM IST

27-ANKA-3.jpg

ಎಂಸಿಡಿ ಅಧಿಕಾರ ಉಳಿಸಿಕೊಳ್ಳುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು, ಹೀಗಾಗಿ ಚುನಾವಣೆಯನ್ನು ಅದು ತೀರಾ ಗಂಭೀರವಾಗಿ ಪರಿಭಾವಿಸಿದ್ದುದರಲ್ಲಿ ಅಚ್ಚರಿಯಿಲ್ಲ. ಆದರೆ, ಮೋದಿ ವರ್ಚಸ್ಸಿನ ಅತಿ ಅವಲಂಬನೆ ಒಳ್ಳೆಯದಲ್ಲ ಎಂಬ ಎಚ್ಚರ ಅದಕ್ಕಿರಲಿ.

ದೇಶದ ರಾಜಧಾನಿ ದಿಲ್ಲಿಯ ಮುನಿಸಿಪಲ್‌ ಕಾರ್ಪೊರೇಶನ್‌ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರತಿಸ್ಪರ್ಧಿಗಳ ಎದುರು ಭಾರೀ ಅಂತರದ ಜಯ ಗಳಿಸಿದೆ. ಹಾಲಿ ದಿಲ್ಲಿ ವಿಧಾನಸಭೆಯನ್ನು ಆಳುತ್ತಿರುವ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ಬಿಜೆಪಿಗೂ ಅದಕ್ಕೂ ಸ್ಥಾನಗಳಿಕೆಯಲ್ಲಿ ಭಾರೀ ಅಂತರವಿದೆ. 2014ರ ಮಹಾಚುನಾವಣೆ, ಇತ್ತೀಚೆಗಿನ ಉತ್ತರಪ್ರದೇಶ, ಉತ್ತರಾಖಂಡ ವಿಧಾನಸಭೆ ಚುನಾವಣೆಗಳ ಸೋಲುಗಳ ಪುನರಾವರ್ತನೆ ಕಾಂಗ್ರೆಸ್‌ ಪಾಲಿಗೆ ದಿಲ್ಲಿಯಲ್ಲೂ ನಡೆದಿದೆ. ಯಥಾಪ್ರಕಾರ ಬಿಜೆಪಿ ತನ್ನ ಗೆಲುವಿನ ಯಶಸ್ಸಿನ ಹಿರಿಮೆಯನ್ನು ಪ್ರಧಾನಿ ಮೋದಿ ಅವರ ವರ್ಚಸ್ಸು ಮತ್ತು ಅಧ್ಯಕ್ಷ ಅಮಿತ್‌ ಶಾ ಅವರ ಕಾರ್ಯತಂತ್ರಗಳ ಹೆಗಲ ಮೇಲೇರಿಸಿದೆ. 

ಎರಡು ವರ್ಷಗಳ ಹಿಂದೆ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನಗಳನ್ನು ಮಾತ್ರ ಪಡೆಯಲು ಶಕ್ತವಾಗಿದ್ದ ಬಿಜೆಪಿ ಈ ಮುನಿಸಿಪಲ್‌ ಕಾರ್ಪೊರೇಶನ್‌ ಚುನಾವಣೆಯನ್ನು ವಿಧಾನಸಭಾ ಚುನಾವಣೆಗೆ ಸರಿಸಮಾನವಾಗಿ ಪರಿಭಾವಿಸಿತ್ತು ಎಂದರೆ ತಪ್ಪಿಲ್ಲ. ದೇಶವನ್ನಾಳುವ ತನ್ನ ಗದ್ದುಗೆಯ ಸನಿಹದಲ್ಲಿಯೇ ಆಪ್‌ ಅಧಿಕಾರದಲ್ಲಿರುವುದು, ಅದರ ನೇತಾರ ಅರವಿಂದ ಕೇಜ್ರಿವಾಲ್‌ ಮಗ್ಗುಲಿನಲ್ಲಿ ಸಿಲುಕಿದ ಮುಳ್ಳಿನಂತಿರುವುದು ಅದಕ್ಕೆ ಅಸಹನೀಯವಾಗಿತ್ತು. ಹೀಗಾಗಿ ಆಪ್‌ ಗೆಲುವನ್ನು ತಡೆಯಲು ಅದು ಮುನಿಸಿಪಲ್‌ ಕಾರ್ಪೊರೇಶನ್‌ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಪ್‌ 67 ಸ್ಥಾನಗಳನ್ನು ಗೆದ್ದುದರಿಂದ ಬಿಜೆಪಿಗೆ ಈ ಚುನಾವಣೆ ಅಧಿಕಾರ ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. ಇದಕ್ಕೆ ಅದು ನಡೆಸಿದ ಪ್ರಚಾರವೇ ಸಾಕ್ಷಿ. ರಾಜನಾಥ್‌ ಸಿಂಗ್‌, ಉಮಾಭಾರತಿ, ಸ್ಮತಿ ಇರಾನಿ, ವೆಂಕಯ್ಯ ನಾಯ್ಡು ಅವರಂತಹ ಘಟಾನುಘಟಿ ನಾಯಕರು ಪ್ರಚಾರದಲ್ಲಿ ಭಾಗವಹಿಸಿದ್ದರು, ನಿರ್ಮಲಾ ಸೀತಾರಾಮನ್‌, ಜಿತೇಂದ್ರ ಸಿಂಗ್‌, ವಿಜಯ್‌ ಗೋಯಲ್‌ ಅವರಂಥವರು ಅಮಿತ್‌ ಶಾ ಮೇಲ್ವಿಚಾರಣೆಯಲ್ಲಿ ಚುನಾವಣಾ ಕಾರ್ಯತಂತ್ರದ ಉಸ್ತುವಾರಿ ವಹಿಸಿದ್ದರು ಎಂಬುದು ಈ ಚುನಾವಣೆಯನ್ನು ಅದು ಎಷ್ಟು ಗಂಭೀರವಾಗಿ ತೆಗೆದುಕೊಂಡಿತ್ತು ಎಂಬುದನ್ನು ಸೂಚಿಸುತ್ತದೆ. 

ಇದಕ್ಕೆ ತದ್ವಿರುದ್ಧವಾಗಿ ಪ್ರಬಲ ಸ್ಪರ್ಧೆ ಒಡ್ಡುವ ನಿರೀಕ್ಷೆ ಹುಟ್ಟಿಸಿದ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಹಗರಣಗಳು, ಕೀಳು ಮಟ್ಟದ ವಿವಾದಗಳಲ್ಲಿ ಸಿಲುಕಿತ್ತು ಮತ್ತು ಭರವಸೆಗಳನ್ನು ಈಡೇರಿಸದೆ ನಿರಾಶೆ ಮೂಡಿಸಿತ್ತು. ಇತ್ತೀಚೆಗಿನ ಉತ್ತರ ಪ್ರದೇಶ ಚುನಾವಣೆಯಲ್ಲಿ ಇಲೆಕ್ಟ್ರಾನಿಕ್‌ ಮತಯಂತ್ರಗಳನ್ನು ತಿರುಚಲಾಗಿದೆ ಎಂಬ ಕೇಜ್ರಿವಾಲ್‌ ಆರೋಪ ಮತ್ತು ದಿಲ್ಲಿ ಮುನಿಸಿಪಲ್‌ ಚುನಾವಣೆಯಲ್ಲಿ ಹಳೆಯ ಮತಪೆಟ್ಟಿಗೆಗಳನ್ನು ಬಳಸಬೇಕು ಎಂಬ ಅವರ ಆಗ್ರಹ ದಿಲ್ಲಿಯ ಜನರಿಗೆ ಹಾಸ್ಯಾಸ್ಪದವಾಗಿ ಕಂಡಿದ್ದರೆ ಅಚ್ಚರಿಯಿಲ್ಲ. ಈ ಚುನಾವಣೆಯಲ್ಲೂ ಇವಿಎಂ ತಿರುಚಲಾಗಿದೆ ಎಂಬ ರಾಗವನ್ನು ಆಪ್‌ ಮತ್ತೆ ಹಾಡಿದೆ. 

ಇನ್ನೊಂದೆಡೆ, ಒಂದು ಕಾಲದಲ್ಲಿ ದಿಲ್ಲಿಯಲ್ಲಿ ಸುದೀರ್ಘ‌ ಸಮಯ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ನಿರಾಶಾದಾಯಕ ತೃತೀಯ ಸ್ಥಾನಕ್ಕೆ ಕುಸಿದಿದೆ. 2013 ಮತ್ತು 2015ರ ದಿಲ್ಲಿ ವಿಧಾನಸಭಾ ಚುನಾವಣೆ, 2014ರ ಲೋಕಸಭಾ ಚುನಾವಣೆ ಹಾಗೂ ತೀರಾ ಇತ್ತೀಚೆಗೆ ದಿಲ್ಲಿಯ ರಜೌರಿ ಗಾರ್ಡನ್‌ ಅಸೆಂಬ್ಲಿ ಉಪಚುನಾವಣೆಯ ಸೋಲಿನ ಸರಣಿ ಅದರ ಪಾಲಿಗೆ ಮುನಿಸಿಪಲ್‌ ಕಾರ್ಪೊರೇಶನ್‌ ಚುನಾವಣೆಯಲ್ಲೂ ಮುಂದುವರಿದಿದೆ. ಸೋಲಿನ ಹೊಣೆ ಹೊತ್ತು ದಿಲ್ಲಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಅಜಯ್‌ ಮಾಕೆನ್‌ ರಾಜೀನಾಮೆ ನೀಡಿದ್ದಾರೆ, ಅದರ ಬೆನ್ನಿಗೆ ಪಕ್ಷದೊಳಗಿನ ಅಸಮಾಧಾನ ಮತ್ತೆ ಬಹಿರಂಗವಾಗಿದೆ. ದೀರ್ಘ‌ಕಾಲ ದಿಲ್ಲಿ ಮುಖ್ಯಮಂತ್ರಿಯಾಗಿದ್ದ, ಇತ್ತೀಚೆಗಿನ ಉ. ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿ ಎಂದು ಬಿಂಬಿತವಾಗಿದ್ದ ಶೀಲಾ ದೀಕ್ಷಿತ್‌ ತನ್ನ ಸಹಿತ ಪಕ್ಷದ ಹಿರಿಯ ನಾಯಕರನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸದೆ ಇದ್ದುದರ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದಾರೆ. ಬಿಜೆಪಿಯ ಗೆಲುವಿನ ಸರಮಾಲೆ ಇಲ್ಲೂ ಮುಂದುವರಿದಿದೆ ನಿಜ. ಮೋದಿ ವರ್ಚಸ್ಸು ಮತ್ತು ಅಮಿತ್‌ ಶಾ ಕಾರ್ಯತಂತ್ರವನ್ನು ಅದು ನೆಚ್ಚಿಕೊಂಡಿದೆ. ಆದರೆ, ಒಳ್ಳೆಯ ಆಡಳಿತವನ್ನು ನೀಡುವ ಹೊಣೆಯೂ ಅದರ ಮೇಲಿದೆ. ಕೇವಲ ಮೋದಿ ವರ್ಚಸ್ಸನ್ನು ಅತಿಯಾಗಿ ನೆಚ್ಚಿಕೊಂಡಿರುವುದು ಒಳ್ಳೆಯದಲ್ಲ, ಅದಕ್ಕೆ ಪರ್ಯಾಯವಾಗಿ ಉತ್ತಮ ಆಡಳಿತದ ವ್ಯಕ್ತಿತ್ವವೊಂದನ್ನು ತಾನು ರೂಪಿಸಿಕೊಳ್ಳಬೇಕು ಎನ್ನುವ ಎಚ್ಚರ ಅದಕ್ಕಿರಬೇಕು.

ಟಾಪ್ ನ್ಯೂಸ್

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.