ಪೌರತ್ವ ಮಸೂದೆ ಸೌಹಾರ್ದತೆ ಕದಡದಿರಲಿ
Team Udayavani, Dec 11, 2019, 5:33 AM IST
ಮಸೂದೆ ಒಂದು ಧರ್ಮವನ್ನು ಗುರಿಯಾಗಿರಿಸಿಕೊಂಡಿದ್ದು, ಇದು ಸಂವಿಧಾನದಲ್ಲಿ ಉಲ್ಲೇಖೀಸಿರುವ ಜಾತ್ಯತೀತ ಆಶಯಕ್ಕೆ ವಿರುದ್ಧವಾಗಿದೆ. ಮಸೂದೆ ಸಂವಿಧಾನದ 14ನೇ ವಿಧಿಯಲ್ಲಿ ಉಲ್ಲೇಖೀಸಲಾದ ಸಮಾನತೆ ಹಕ್ಕನ್ನು ಉಲ್ಲಂ ಸುತ್ತದೆ ಎಂಬುದು ಪ್ರತಿಪಕ್ಷಗಳ ಟೀಕೆಯಾಗಿದೆ.
ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸುಮಾರು 7 ಗಂಟೆ ಕಾಲ ಬಿಸಿ ಬಿಸಿ ಚರ್ಚೆಯ ಬಳಿಕ ಸೋಮವಾರ ತಡರಾತ್ರಿ ಅಂಗೀಕಾರಗೊಂಡಿತ್ತು. ಮಸೂದೆ ಪರವಾಗಿ 311 ಸಂಸದರು, ವಿರುದ್ಧವಾಗಿ 80 ಸಂಸದರು ಮತ ಚಲಾಯಿಸಿದ್ದರು. ಈ ವಿಧೇಯಕ ಒಗ್ಗಟ್ಟಿನ ವಿರೋಧಿ, ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡುತ್ತದೆ. ಇಂತಹ ಮಸೂದೆಯನ್ನು ಮಂಡಿಸುವ ಅಗತ್ಯ ಏನಿತ್ತು ಎಂಬುದು ಕಾಂಗ್ರೆಸ್ ಪ್ರಶ್ನೆ.
ಪೌರತ್ವ ತಿದ್ದುಪಡಿ ಮಸೂದೆ ಅಲ್ಪಸಂಖ್ಯಾಕರ ವಿರೋಧಿ ಅಲ್ಲ, ಅದು ಅಕ್ರಮ ನುಸುಳುಕೋರರ ವಿರೋಧಿ ಎಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಗೆ ಸ್ಪಷ್ಟಪಡಿಸಿದ್ದರು. ಪ್ರಸ್ತಾವಿತ ವಿಧೇಯಕದ ಪ್ರಕಾರ 2014ರ ಡಿಸೆಂಬರ್ 31ರೊಳಗೆ ಪಾಕಿಸ್ಥಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನದಿಂದ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಹಾಗೂ ಕ್ರಿಶ್ಚಿಯನ್ ಧರ್ಮದ ನಿರಾಶ್ರಿತರು ಭಾರತದ ಕಾಯಂ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ.
ಅಸ್ಸಾಂ, ಮೇಘಾಲಯ, ಮಿಜೋರಾಂ, ತ್ರಿಪುರಾ ರಾಜ್ಯಗಳ ಬುಡಕಟ್ಟು ಪ್ರದೇಶಗಳ ವಲಸಿಗರಿಗೆ ಈ ವಿಧೇಯಕ ಅನ್ವಯವಾಗುವುದಿಲ್ಲ.ಅಂತೆಯೇ ಸಂವಿಧಾನದ ಆರನೇ ಶೆಡ್ನೂಲ್ ಹಾಗೂ ಬಂಗಾಳ ಪೂರ್ವ ಗಡಿನಾಡು ನಿಯಂತ್ರಣ ಕಾಯ್ದೆ 1873ರ ವ್ಯಾಪ್ತಿಗೆ ಒಳಪಟ್ಟ ಅರುಣಾಚಲ ಪ್ರದೇಶ, ನಾಗಲ್ಯಾಂಡ್, ಮಿಜೋರಾಂ ರಾಜ್ಯಗಳಿಗೆ ಪೌರತ್ವ ತಿದ್ದುಪಡಿ ವಿಧೇಯಕ ಅನ್ವಯವಾಗುವುದಿಲ್ಲ.
1955ರಲ್ಲಿ ಜಾರಿಗೆ ಬಂದ ಪೌರತ್ವ ಕಾಯ್ದೆಯಲ್ಲಿ 11 ವರ್ಷಗಳಿಂದ ಭಾರತದಲ್ಲಿ ನಿರಾಶ್ರಿತರಾಗಿರುವವರು ಪೌರತ್ವ ಪಡೆಯಲು ಅರ್ಹರು. ಇಂಥವರು ಪೌರತ್ವಕ್ಕೆ ಅರ್ಜಿ ಸಲ್ಲಿಸಿದ ದಿನಾಂಕಕ್ಕೂ ಮೊದಲು ಒಂದು ವರ್ಷದಿಂದ ಭಾರತ ಬಿಟ್ಟು ಬೇರೆಡೆಗೆ ಹೋಗಿರಬಾರದು. ಇದೀಗ ತಿದ್ದುಪಡಿ ಮಸೂದೆಯಲ್ಲಿ 11 ವರ್ಷದ ಕಾಲಮಿತಿಯನ್ನು 5 ವರ್ಷಕ್ಕೆ ಇಳಿಸಿ, ನೆರೆಯ ದೇಶಗಳಿಂದ ಅಕ್ರಮವಾಗಿ ವಲಸೆ ಬಂದ ಮುಸ್ಲಿಮೇತರ ಆರು ಧರ್ಮಿಯರಿಗೆ ಪೌರತ್ವ ನೀಡಲು ನಿರ್ಧರಿಸಿದೆ.
ಮಸೂದೆ ಒಂದು ಧರ್ಮವನ್ನು ಗುರಿಯಾಗಿರಿಸಿಕೊಂಡಿದ್ದು, ಇದು ಸಂವಿಧಾನದಲ್ಲಿ ಉಲ್ಲೇಖೀಸಿರುವ ಜಾತ್ಯತೀತ ಆಶಯಕ್ಕೆ ವಿರುದ್ಧವಾಗಿದೆ. ಮಸೂದೆ ಸಂವಿಧಾನದ 14ನೇ ವಿಧಿಯಲ್ಲಿ ಉಲ್ಲೇಖೀಸಲಾದ ಸಮಾನತೆ ಹಕ್ಕನ್ನು ಉಲ್ಲಂ ಸುತ್ತದೆ ಎಂಬುದು ಪ್ರತಿಪಕ್ಷಗಳ ಟೀಕೆಯಾಗಿದೆ.
ಪೌರತ್ವ ತಿದ್ದುಪಡಿ ಮಸೂದೆ ಮೊದಲು 2016ರಲ್ಲಿ ಮಂಡನೆಯಾಗಿತ್ತು. ಪ್ರತಿಪಕ್ಷಗಳ ಆಗ್ರಹದ ಬಳಿಕ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ನೀಡಲಾಗಿತ್ತು. ಈ ಸಮಿತಿ ಕಳೆದ ಜನವರಿಯಲ್ಲಿ ವರದಿ ನೀಡಿದ್ದು, ವರದಿಯ ಶಿಫಾರಸಿನಂತೆ ಕೆಲವು ಬದಲಾವಣೆ ಮಾಡಿ ಬಜೆಟ್ ಅಧಿವೇಶನದಲ್ಲಿ ಮಸೂದೆಯನ್ನು ಪುನರ್ ಮಂಡಿಸಲಾಗಿತ್ತು. ಈ ವೇಳೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು. ಆದರೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿರಲಿಲ್ಲ. ಆಗ 16ನೇ ಲೋಕಸಭೆ ಅವಧಿ ಮುಕ್ತಾಯಗೊಂಡಿತ್ತು.
ಮತ್ತೂಂದೆಡೆ ಅಸ್ಸಾಂನಲ್ಲಿ ನಡೆದಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಕೇಂದ್ರ ಈಗಾಗಲೇ ಹೇಳಿದೆ. ಈ ಹಿನ್ನೆಲೆಯಲ್ಲಿ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳು ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ತೀವ್ರ ಪ್ರತಿಭಟನೆಗೆ ಇಳಿದಿವೆ. ಎನ್‌ಆರ್‌ಸಿಗೂ ಪೌರತ್ವ ತಿದ್ದುಪಡಿ ಮಸೂದೆಗೂ ಸಂಬಂಧವಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ.
ಇದೀಗ ಪ್ರತಿಪಕ್ಷಗಳ ಆಕ್ಷೇಪದ ನಡುವೆಯೇ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಳ್ಳಬೇಕಾಗಿದೆ. ಮೇಲ್ಮನೆಯಲ್ಲಿ ಎನ್‌ಡಿಎ ಸದಸ್ಯ ಬಲ 102 ಇದೆ. ಇಲ್ಲಿ ಸರಳ ಬಹುಮತಕ್ಕೆ 121 ಸದಸ್ಯರ ಬೆಂಬಲ ಬೇಕಾಗಿದೆ. ಎಐಎಡಿಎಂಕೆ, ಬಿಜೆಡಿ, ಟಿಆರ್‌ಎಸ್ ಮೊದಲಾದ ತಟಸ್ಥ ಪಕ್ಷಗಳು 34 ಸದಸ್ಯರನ್ನು ಹೊಂದಿದ್ದು, ಅವರ ನೆರವಿನಿಂದ ಅಂಗೀಕಾರ ಪಡೆಯುವುದು ಕೇಂದ್ರದ ತಂತ್ರವಾಗಿದೆ.
ಇದಕ್ಕೂ ಮುನ್ನ ಈಶಾನ್ಯ ರಾಜ್ಯಗಳನ್ನು ಆವರಿಸಿರುವ ಎನ್‌ಆರ್‌ಸಿ ಹಾಗೂ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಸಂಬಂಧಿಸಿದ ಎಲ್ಲಾ ಅನುಮಾನಗಳನ್ನು ಪರಿಹರಿಸಿ ಮುಂದಡಿ ಇಡಬೇಕಾದ ಅನಿರ್ವಾಯತೆ ಕೇಂದ್ರದ ಮುಂದಿರುವ ಸವಾಲಾಗಿದೆ. ದೇಶದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆಯಾಗುವ ಯಾವ ಮಸೂ ದೆಯೂ ದೀರ್ಘಾವಧಿಯಲ್ಲಿ ಪ್ರತಿಕೂಲ ಪರಿಣಾಮಗಳನ್ನು ಬೀರುವ ಸಾಧ್ಯತೆ ಯಿದೆ. ಯಾವ ಕಾರಣಕ್ಕೂ ಸೌಹಾರ್ದತೆಗೆ ಧಕ್ಕೆಯಾಗದಂತೆ ನೋಡಿ ಕೊಳ್ಳ ಬೇಕಾದದ್ದು ಸರಕಾರದ ಕರ್ತವ್ಯ. ಹೀಗಾಗಿ ಇಂಥ ಸೂಕ್ಷ್ಮ ವಿಚಾರಗಳನ್ನು ಸಾಧ್ಯ ವಾದಷ್ಟು ಸಾರ್ವಜನಿಕ ಚರ್ಚೆಗೆ ಒಳಪಡಿಸಿ ಸಮುಚಿತ ನಿರ್ಧಾರ ಕೈಗೊಳ್ಳುವುದು ವಿವೇಚನೆಯುಕ್ತವಾದ ನಡೆಯಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.