ಸುಲಭದ ಸಾಲಕ್ಕಾಗಿ ವಂಚನೆಯ ಬಲೆಗೆ ಬೀಳದಿರಿ


Team Udayavani, Aug 22, 2022, 6:00 AM IST

ಸುಲಭದ ಸಾಲಕ್ಕಾಗಿ ವಂಚನೆಯ ಬಲೆಗೆ ಬೀಳದಿರಿ

ಚೀನದ ಸುಲಭ ಸಾಲದ ವಂಚನೆಯ ಜಾಲಕ್ಕೆ ಬೀಳಬೇಡಿ ಎಂದು ಪದೇ ಪದೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದರೂ, ಇದು ಕಡಿಮೆ ಯಾಗದೇ ಇರುವುದು ದುರದೃಷ್ಟಕರ ಸಂಗತಿ. ಇಂದಿಗೂ, ಚೀನ ಲೋನ್‌ ಆ್ಯಪ್‌ ಗಳ ಹಾವಳಿ ಮುಂದುವರಿದಿದ್ದು, ಲಕ್ಷಾಂತರ ಭಾರತೀ ಯರು ಸಾವಿರಾರು ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಈ ಬಲೆಯೊಳಗೆ ಸಿಲುಕಿದ ನೂರಾರು ಮಂದಿ ತಮ್ಮ ಖಾಸಗೀತನವನ್ನೂ ಕಳೆದುಕೊಂಡಿದ್ದಾರೆ.

ಸುಲಭವಾಗಿ ಸಾಲ ನೀಡುವ ಆ್ಯಪ್‌ಗ್ಳ ಕುರಿತಂತೆ ಬಲವಾಗಿ ಯೋಚಿಸಬೇಕಾದ ಅನಿವಾರ್ಯ ಇದೆ. ಕೇಂದ್ರ ಸರಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಮಾತ್ರ ಈ ಬಗ್ಗೆ ಯೋಚಿಸಲಿ ಎಂದು ಬಿಟ್ಟರೆ ಕೆಲಸವಾಗದು. ಈ ವಿಚಾರದಲ್ಲಿ ಜನರೂ ಕೈಜೋಡಿಸಬೇಕಾದ ಅಗತ್ಯ ಇದೆ. ಏಕೆಂದರೆ, ಎಲ್ಲಿವರೆಗೆ ಮೋಸ ಹೋಗುವವರು ಇರುತ್ತಾರೆಯೋ, ಅಲ್ಲಿವರೆಗೆ ಮೋಸ ಮಾಡುವವರು ಇರುತ್ತಾರೆ ಎಂಬುದನ್ನು ಮರೆಯಬಾರದು.

ಈ ಆ್ಯಪ್‌ ಸಾಲದ ಮೋಡಿ ಹೆಚ್ಚಾಗಿದ್ದು ಕೊರೊನಾ ಸಾಂಕ್ರಾಮಿಕ ಬಂದು, ಜನರ ಆರ್ಥಿಕತೆಯನ್ನು ಹಾಳುಗೆಡವಿದ ಮೇಲೆಯೇ. ಅದಕ್ಕೂ ಮುನ್ನ ಇದ್ದವಾದರೂ, ಕೆಲವೇ ಕೆಲವು ಮಾತ್ರ ಕಾರ್ಯ ನಿರ್ವಹಿ­ಸು­ತ್ತಿದ್ದವು. ಇವುಗಳಿಗೆ ಆರ್‌ಬಿಐನ ಸಂಕೋಲೆಯೂ ಇದ್ದುದರಿಂದ ಸುಲಭವಾಗಿ ಕಾರ್ಯ ನಿರ್ವಹಣೆ ಮಾಡಲು ಸಾಧ್ಯವಿರಲಿಲ್ಲ.

ಆದರೆ, ಕೊರೊನೋತ್ತರದಲ್ಲಿ ಜನರ ಕೈನಲ್ಲಿ ಹಣ ಕಡಿಮೆಯಾಗಿ, ಅವರ ಆರ್ಥಿಕ ಸ್ಥಿತಿ ಏರುಪೇರಾದ ಮೇಲೆ ಹಣಕ್ಕಾಗಿ ಬಹಳಷ್ಟು ಮಂದಿ ಇಂಥ ಸುಲಭ ಸಾಲದ ಆ್ಯಪ್‌ ಗಳ ಮೊರೆ ಹೋಗಿದ್ದಾರೆ. ಒಮ್ಮೆ ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆ್ಯಪಲ್‌ ಪ್ಲೇ ಸ್ಟೋರ್‌ಗಳಿಗೆ ಹೋಗಿ ಸರ್ಚ್‌ ಮಾಡಿದರೆ, ಇಂಥ ಸಾವಿರಾರು ಆ್ಯಪ್‌ಗಳು ಕಾಣ ಸಿಗುತ್ತವೆ. ಇವುಗಳಲ್ಲಿ ನಿಜವಾಗಿಯೂ, ಯಾವುದೇ ಮೋಸವಿಲ್ಲದೇ ಸಾಲ ನೀಡುವ ಆ್ಯಪ್‌ ಯಾವುದು? ಚೀನದಿಂದ ಹಣ ಪೂರೈಕೆಯಾಗಿ ಕಾರ್ಯ ನಿರ್ವಹಿಸುವ ಆ್ಯಪ್‌ ಗಳು ಯಾವುವು ಎಂಬುದನ್ನು ತಿಳಿಯು­ವುದೇ ಕಷ್ಟಕರ ಸನ್ನಿವೇಶದಂತಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ಆರ್‌ಬಿಐ ಒಟ್ಟಿಗೆ ಸೇರಿಕೊಂಡು ಇಂಥ ಆ್ಯಪ್‌ ಗಳ ನಿಯಂತ್ರಣಕ್ಕಾಗಿ ತುರ್ತು ಗಮನ ನೀಡಬೇಕಾದದ್ದು ಅತ್ಯವಶ್ಯಕವಾಗಿದೆ.

ರವಿವಾರವೂ ಸುಮಾರು 500 ಕೋಟಿ ರೂ.ಗಳಷ್ಟು ಅವ್ಯವಹಾರದ ಹಗರಣ ಬೆಳಕಿಗೆ ಬಂದಿದೆ. ಪತ್ರಿಕಾ ವರದಿಗಳ ಪ್ರಕಾರ, ಸದ್ಯ ದೇಶದಲ್ಲಿ ಶೇ.54ರಷ್ಟು ಸಾಲ ನೀಡುವ ಆ್ಯಪ್‌ ಗಳು ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ, ಭಾರತದಲ್ಲಿ ಮೊಬೈಲ್‌ ಬ್ಯಾಂಕಿಂಗ್‌ ಆರಂಭವಾದ ಮೇಲೆ ಇಂಥ ಪ್ರಕರಣಗಳು ಹೆಚ್ಚಾಗಿವೆ ಎಂಬ ಮಾಹಿತಿಯೂ ಇದೆ.

ಮೊದಲೇ ಹೇಳಿದ ಹಾಗೆ, ಅಕ್ರಮ ಆ್ಯಪ್‌ ಗಳ ಬೆನ್ನುಮೂಳೆ ಮುರಿಯಲು ಸಾಧ್ಯವಿರುವುದು ಜನರಿಗೇ. ಸುಲಭವಾಗಿ, ಥಟ್‌ ಅಂತ ಸಾಲ ಕೊಡುತ್ತೇವೆ ಎಂದು ಹೇಳುವವರನ್ನು ನಂಬಲು ಹೋಗಬಾರದು. ಕಡಿಮೆ ದಾಖಲೆಗಳನ್ನು ಪಡೆದುಕೊಂಡು ಸಾಲ ಕೊಡುತ್ತಾರೆ ಎಂದಾದರೆ, ಅವರು ವಸೂಲಿಗೆ ಅಡ್ಡ ಮಾರ್ಗ ಹಿಡಿದೇ ಹಿಡಿಯುತ್ತಾರೆ. ಇಂಥವರ ಕುರಿತಂತೆ ಎಚ್ಚರದಿಂದ ಇರಬೇಕು. ಸಾಧ್ಯವಾದರೆ, ಆರ್‌ಬಿಐನ ಕೆಳಗೆ ಬರುವಂಥ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ನೋಡುವುದು ಸೂಕ್ತ.

ಟಾಪ್ ನ್ಯೂಸ್

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

9

Dr MC Sudhakar: ‘ಹೈಕಮಾಂಡ್‌ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’

3

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.