ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

Team Udayavani, Oct 27, 2021, 6:50 AM IST

ಆತಂಕ ಬೇಡ; ಆದರೆ ಎಚ್ಚರಿಕೆಯಂತೂ ಬೇಕು

ಇನ್ನೇನು ಕೋವಿಡ್‌ ಹಾವಳಿ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಜಗತ್ತಿನ ಹಲವು ಭಾಗಗಳಲ್ಲಿ ಸೋಂಕಿನ ಎ.ವೈ.4.2 ಕಾಣಿಸಲಾರಂಭಿಸಿದೆ.

ಹೀಗಾಗಿ ಮತ್ತೆ ಲಾಕ್‌ಡೌನ್‌ ಸೇರಿದಂತೆ ಹಲವು ಪ್ರತಿಬಂಧಕ ಕ್ರಮಗಳು ಜಾರಿಯಾಗಲಿದೆಯೇ ಎಂಬ ದುಗುಡ ಸಹಜವೇ. ರಾಜ್ಯದಲ್ಲಿ ಕೂಡ ಇದುವರೆಗಿನ ಮಾಹಿತಿ ಪ್ರಕಾರ ಎರಡು ಕೇಸುಗಳು ದೃಢಪಟ್ಟಿದೆ. ಆದರೆ ದೇಶವಾಸಿಗಳು ಆತಂಕಪಡುವ ಅಗತ್ಯವಿಲ್ಲ. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಹೊಸ ರೂಪಾಂತರಿ ಪತ್ತೆಯಾಗಿದ್ದರೂ ಅದನ್ನು “ಇನ್ನೂ ಅಧ್ಯಯನ ದಲ್ಲಿರುವ ಹಂತದ ರೂಪಾಂತರಿ’ ಎಂದೇ ಉಲ್ಲೇಖಿಸಿದ್ದಾರೆ.ಇದರ ಜತೆಗೆ ರಾಜ್ಯ ಸಹಿತ ದೇಶದ ಹಲವು ಭಾಗಗಳಲ್ಲಿ ಪತ್ತೆಯಾಗಿರುವ ಎ.ವೈ.4.2 ರೂಪಾಂತರಿ ಸೆಪ್ಟಂಬರ್‌ನಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಇದ್ದ ವೇಳೆ ನಡೆಸಲಾಗಿದ್ದ ಮಾದರಿಗಳ ಅಧ್ಯಯನದಿಂದ ದೃಢಪಟ್ಟದ್ದು ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ವರದಿ ಹೇಳಿದೆ. ಹೀಗಾಗಿ ಇದೊಂದು ಸಮಾಧಾನದ ವಿಚಾರ. ಹೊಸ ರೂಪಾಂತರಿಯ ಸವಾಲಿನ ಬಗ್ಗೆ ಕೇಂದ್ರ ಸರಕಾರ ಕೂಡ ತತ್‌ಕ್ಷಣ ಕಾರ್ಯಪ್ರವೃತ್ತವಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ ವಿಜ್ಞಾನಿ ಡಾ| ಸಮೀರನ್‌ ಪಾಂಡಾ ಪ್ರಕಾರ ಸೋಂಕಿನ ಎರಡನೇ ಅವಧಿಯಲ್ಲಿ ಕಂಡು ಬಂದಂತೆ ಹಾನಿಕಾರ ಫ‌ಲಿತಾಂಶ ನೀಡುವುದಿಲ್ಲ. ಆದರೆ ಕ್ಷಿಪ್ರವಾಗಿ ಹರಡುತ್ತದೆ ಎಂಬ ಅಂಶವನ್ನು ಪುಷ್ಟೀಕರಿಸಿದ್ದಾರೆ.

ಹೀಗಾಗಿ ನಾವೆಲ್ಲರೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಈಗಾಗಲೇ ಜಾರಿಗೊಳಿಸಿರುವ ಸೋಂಕು ಪ್ರತಿಬಂಧಕ ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಿ, ಮತ್ತಷ್ಟು ಸೋಂಕಿನ ಪ್ರಭಾವ ತಗ್ಗಿಸಲು ನೆರವಾಗು ವುದು ಆದ್ಯ ಕರ್ತವ್ಯವೇ ಆಗಿದೆ.

ವೈರಸ್‌ನ ರೂಪಾಂತರ ಎನ್ನುವುದು ಸಾಮಾನ್ಯ ಪ್ರಕ್ರಿಯೆ. ಈ ಅಂಶವನ್ನು ಹಿಂದಿನ ಅವಧಿಗಳಲ್ಲಿ ಕೇಂದ್ರ ಸರಕಾರದ ಪರಿಣತರ ಸಮಿತಿ ಸ್ಪಷ್ಟಪಡ ಸಿದ್ದರೂ ಮತ್ತೂಮ್ಮೆ ಅದನ್ನು ನಾವೆಲ್ಲರೂ ಮನಗಾಣಬೇಕಾಗಿದೆ. ಕೆಲವು ದಿನಗಳ ಹಿಂದಷ್ಟೇ ಮುಕ್ತಾಯವಾದ ದಸರಾ ಸಂದರ್ಭ ಹೆಚ್ಚಿನ ವರು ಮನೆಯಲ್ಲಿಯೇ ಹಬ್ಬ ಆಚರಿಸಿದ್ದರು. ಅದೇ ನಿಲುವನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ಬರುವ ದೀಪಾವಳಿಗೂ ಅನುಸರಿಸ ಬೇಕಾ ಗಿದೆ. ಈ ಮೂಲಕ ವೈರಸ್‌ ಹರಡುವುದನ್ನು ತಡೆಯುವುದಕ್ಕೆ ಕೂಡ ನಮ್ಮದೇ ಆದ ಕೊಡುಗೆ ಕೊಡಬೇಕಾದದ್ದು ಕರ್ತವ್ಯವೇ ಆಗಿದೆ.

ಇದನ್ನೂ ಓದಿ:ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಅಧ್ಯಯನದ ಪ್ರಕಾರ ಎ.ವೈ.4.2 ರೂಪಾಂತರಿಯಲ್ಲದೆ, ಎ.ವೈ. 33, ಎ.ವೈ.4.1 ಎಂಬ ಮತ್ತೆ ಎರಡು ಹೊಸ ವರ್ಗೀಕರಣವೂ ಇದೆ. ಹೀಗಾಗಿ ಸಮಾಧಾನದ ಜತೆಗೆ ಎಲ್ಲರೂ ಎಚ್ಚರಿಕೆಯಿಂದಲೇ ಇರುವ ಅನಿವಾರ್ಯತೆ ಉಂಟಾಗಿದೆ. ವಿಜ್ಞಾನಿಗಳ ಕ್ಷಿಪ್ರ ಸಂಶೋಧನೆಯಿಂದಾಗಿ ಪಿಡುಗಿನ ವಿರುದ್ಧ ಲಸಿಕೆ ಸಿದ್ಧಗೊಂಡಿದೆ. ಕೆಲವು ದಿನಗಳ ಹಿಂದಷ್ಟೇ 100 ಕೋಟಿ ಡೋಸ್‌ ಲಸಿಕೆ ನೀಡಿ ದಾಖಲೆಯನ್ನೂ ಬರೆಯಲಾಗಿದೆ. ಈ ಪೈಕಿ ಮೊದಲ ಡೋಸ್‌ ಪಡೆದಿರುವವರ ಸಂಖ್ಯೆ ಹೆಚ್ಚು. ಸೋಂಕಿನಿಂದ ಉಂಟಾಗುವ ಪ್ರತಿಕೂಲ ಪರಿಣಾಮ ತಡೆಯಬೇಕಾಗಿದೆ. ಜತೆಗೆ ಶೀಘ್ರದಲ್ಲಿಯೇ ಚಳಿಗಾಲವೂ ಆರಂಭವಾಗುವುದರಿಂದ ನಾವೆಲ್ಲರೂ ಗರಿಷ್ಠ ಎಚ್ಚರಿಕೆ ವಹಿಸಬೇಕು. ಇದರ ಜತೆಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಅದಕ್ಕಾಗಿ ವೈಯಕ್ತಿಕ ಶುಚಿತ್ವ, ಸಾರ್ವಜನಿಕವಾಗಿಯೂ ಕಸ, ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಅದನ್ನು ವಿಲೇವಾರಿ ಮಾಡಲು ಸ್ಥಳೀಯ ಸಂಸ್ಥೆಗಳ ಜತೆಗೆ ನಾವೂ ಕೈಜೋಡಿಸಬೇಕಾಗಿದೆ.

ಟಾಪ್ ನ್ಯೂಸ್

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

kKasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

Kasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

aatishi

Delhi CM;5 ಸಚಿವರೊಂದಿಗೆ ನಾಳೆ ಆತಿಷಿ ಪ್ರಮಾಣ ವಚನ ಸ್ವೀಕಾರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಬಾಹ್ಯಾಕಾಶ ಕ್ಷೇತ್ರದಲ್ಲಿ ಪಾರಮ್ಯ ಸಾಧಿಸಲು ಭಾರತದ ದಿಟ್ಟಹೆಜ್ಜೆ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

kKasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

Kasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

adike

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Legislative Council ಚುನಾವಣೆ: ಗರಿಗೆದರಿದ ಚಟುವಟಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.