ಔಷಧ ಮಾರಾಟ ಕ್ಷೇತ್ರ ಇನ್ನಷ್ಟು ಸುಧಾರಿಸಬೇಕು; ಬೆಲೆ ಕೈಗೆಟಕುವಂತಿರಲಿ
Team Udayavani, Mar 25, 2017, 3:50 AM IST
ಭಾರತದಲ್ಲಿ ಔಷಧಗಳ ಬೆಲೆ ತೌಲನಿಕವಾಗಿ ಇತರ ದೇಶಗಳಿಗಿಂತ ಕಡಿಮೆ ಎಂಬುದು ನಿಜ. ಆದರೆ ಇಲ್ಲಿನ ಜನರ ಆದಾಯ ಮಟ್ಟ, ಆರೋಗ್ಯ ಸ್ಥಿತಿ, ಜೀವನ ಮಟ್ಟಗಳನ್ನು ಗಮನದಲ್ಲಿ ಇರಿಸಿಕೊಂಡು ಔಷಧ ಮಾರಾಟ ಕ್ಷೇತ್ರದಲ್ಲಿ ಸರಕಾರ ಇನ್ನಷ್ಟು ಜನೋಪಯೋಗಿ ಸುಧಾರಣೆ ತರಬೇಕಾಗಿದೆ.
ಸಗಟು ಬೆಲೆ ಸೂಚ್ಯಂಕದಲ್ಲಿ ಬದಲಾವಣೆಗಳಿಗೆ ಅನುಗುಣವಾಗಿ ಬೆಲೆಯನ್ನು ಹೆಚ್ಚಿಸುವ ಔಷಧ ಮಾರಾಟಗಾರ ಕಂಪೆನಿಗಳ ಬೇಡಿಕೆಗೆ ಕೇಂದ್ರ ಸರಕಾರ ಸಮ್ಮತಿ ನೀಡಿರುವುದರಿಂದ ಕೆಲವಾರು ಅಗತ್ಯ ಔಷಧಗಳು ಏಪ್ರಿಲ್ 1ರಿಂದ ಶೇ.2ರಷ್ಟು ದುಬಾರಿಯಾಗಲಿವೆ. ರಾಷ್ಟ್ರೀಯ ಪಟ್ಟಿಯಲ್ಲಿರುವ 875 ಔಷಧಗಳ ಬೆಲೆಯನ್ನು ಕೇಂದ್ರ ಸರಕಾರವು ರಾಷ್ಟ್ರೀಯ ಔಷಧ ಪ್ರಾಧಿಕಾರದ ಮೂಲಕ ನೇರವಾಗಿ ನಿಯಂತ್ರಿಸುತ್ತಿದ್ದು, ಸಗಟು ಬೆಲೆ ಸೂಚ್ಯಂಕದ ಆಧಾರದಲ್ಲಿ ಇದು ಪ್ರತಿವರ್ಷವೂ ಏರಿಳಿಯುತ್ತಿರುತ್ತದೆ. ಇದರ ಪರಿಣಾಮವಿದು.
ಕಳೆದ ಮಾರ್ಚ್ 8ರಂದು ರಾಷ್ಟ್ರೀಯ ಔಷಧ ಪ್ರಾಧಿಕಾರವು 54 ಅವಶ್ಯಕ ಔಷಧಗಳ ಬೆಲೆಧಿಯನ್ನು ಶೇ.55ರಷ್ಟು ಇಳಿಸಿತ್ತು. ಆ ಬಳಿಕ ಹೃದ್ರೋಗ ಚಿಕಿತ್ಸೆಯಲ್ಲಿ ಉಪಯೋಗಿಸುವ ಸ್ಟೆಂಟ್ ಮಾರಾಟ ಬೆಲೆಯ ಗರಿಷ್ಠ ಮಿತಿ ಪ್ರಕಧಿಟಿಧಿಸಿತ್ತು. ಮಾರ್ಚ್ 2016ರಿಂದ ಈಚೆಗೆ ಕೆಲವು ಪ್ರಮುಖ ಕ್ಯಾನ್ಸರ್ ಔಷಧಗಳಲ್ಲಿ ಶೇ.86ಧಿರಷ್ಟು, ಮಧುಧಿಮೇಹ ಔಷಧಧಿಗಳಲ್ಲಿ ಶೇ.42ರಷ್ಟು ಮತ್ತು ಹೃದ್ರೋಗ ಸಂಬಂಧಿ ಔಷಧಗಳಲ್ಲಿ ಶೇ.55ರಷ್ಟು ಬೆಲೆ ಇಳಿಕೆಯಾಗಿದೆ. ಈಗ ಏಪ್ರಿಲ್ 1ರಿಂದ ಜಾರಿಯಾಗಲಿರುವ ಅಲ್ಪ ಏರಿಕೆಯಿಂದ ಸಂಬಂಧಿತ ಔಷಧಗಳನ್ನು ನಿಯಮಿತವಾಗಿ ಉಪಯೋಗಿಸುತ್ತಿರುವವರ ಜೇಬಿಗೆ ತುಸು ಹೆಚ್ಚುವರಿ ಹೊರೆ ಬೀಳುತ್ತದೆ.
ದೇಶದಲ್ಲಿ ಸದ್ಯಕ್ಕೆ 875 ಅವಶ್ಯಕ ಔಷಧಗಳ ಮಾರಾಟ ಬೆಲೆಯನ್ನು ಕೇಂದ್ರ ಸರಕಾರವು ರಾಷ್ಟ್ರೀಯ ಔಷಧ ಪ್ರಾಧಿಕಾರದ ಮೂಲಕ ತನ್ನ ನಿಯಂತ್ರಣದಲ್ಲಿ ಇರಿಸಿಕೊಂಡಿದೆ. ಸಗಟು ಮಾರಾಟ ಸೂಚ್ಯಂಕಕ್ಕೆ ಅನುಗುಣವಾಗಿ ಅವುಗಳ ಬೆಲೆಯನ್ನು ಏರಿಳಿಸುತ್ತದೆ. ಅಗತ್ಯ ಔಷಧಗಳ ಬೆಲೆಗಳು ತೀರಾ ದುಬಾರಿಯಾಗಿದ್ದು, ಆ ಕಾರಣದಿಂದ ಜನರಿಗೆ ಹೊರೆಯುಂಟಾಗಬಾರದು ಎಂಬುದು ಇದರ ಹಿಂದಿನ ಉದ್ದೇಶ. ಮೂಲಭೂತ ಹಕ್ಕಾಗಿರುವ ಉತ್ತಮ ಆರೋಗ್ಯ ಸೇವೆಯನ್ನು ಇದು ಖಾತರಿಪಡಿಸುತ್ತದೆ.
ಅಮೆರಿಕ, ಯುರೋಪ್ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಔಷಧ ಬೆಲೆಗಳು ಸಾಕಷ್ಟು ಕಡಿಮೆಯೇ ಎಂಬುದು ನಿಜ. ಅದನ್ನು ಜನರ ಕೈಗೆಟಕುವ ಮಟ್ಟದಲ್ಲಿಯೇ ಇರಿಸಲು ಸರಕಾರವೂ ಯೋಗ್ಯ ಕ್ರಮಗಳನ್ನು ತೆಗೆದುಕೊಂಡಿರುವುದು ಸ್ವಾಗತಾರ್ಹ. ಆದರೂ, ಮಧುಮೇಹ, ಕ್ಯಾನ್ಸರ್, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ಭಾರತೀಯರಲ್ಲಿ ನಡುವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುವ ಪ್ರಮಾಣವನ್ನು ಗಮನಿಸಿದರೆ ಈ ಔಷಧಗಳು ಇನ್ನಷ್ಟು ಸುಲಭ ದರದಲ್ಲಿ ಲಭ್ಯವಾಗಬೇಕಾಗಿದೆ. ಇದಲ್ಲದೆ, ಒಂದೇ ಆಕರ ಔಷಧ ದ್ರವ್ಯವನ್ನು ಹೊಂದಿರುವ ವಿವಿಧ ಕಂಪೆನಿಗಳ ಉತ್ಪನ್ನಗಳ ನಡುವೆ ಇರುವ ಬೆಲೆ ವ್ಯತ್ಯಾಸವೂ ಗಮನಿಸಬೇಕಾದ ವಿಚಾರ. ಬಹುತೇಕ ಔಷಧಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಅಥವಾ ಅಂತಹ ಮೂಲ ಔಷಧ ದ್ರವ್ಯಗಳ ಪೇಟೆಂಟನ್ನು ಹೊಂದಿರುವುದು ವಿದೇಶೀ ಕಂಪೆನಿಗಳು ಎಂಬುದು ಇದಕ್ಕೆ ಮೂಲ ಕಾರಣವಾಗಿದೆ. ಕೆಲವು ವರ್ಷಗಳ ಹಿಂದೆ ಸ್ವಿಸ್ ಮೂಲದ ಔಷಧ ತಯಾರಕ ಕಂಪೆನಿಯೊಂದು ಸ್ತನ ಕ್ಯಾನ್ಸರ್‌ಗೆ ತಾನು ಪೇಟೆಂಟ್ ಹೊಂದಿರುವ ಔಷಧವನ್ನು ಭಾರತದಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವುದರ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿ ತಡೆ ಒಡ್ಡಿದ್ದನ್ನು ಸ್ಮರಿಸಬಹುದಾಗಿದೆ. ಸರಕಾರ ಈಚೆಗೆ ಹೃದ್ರೋಗ ಚಿಕಿತ್ಸೆಯ ಸ್ಟೆಂಟ್‌ಗಳ ಗರಿಷ್ಠ ಮಾರಾಟ ಬೆಲೆ ನಿಗದಿ ಪಡಿಸುವುದಕ್ಕೆ ಮುನ್ನ ಅವುಗಳ ಬೆಲೆ ಲಕ್ಷದವರೆಗೂ ಇರುತ್ತಿತ್ತು.
ಈ ದೃಷ್ಟಿಯಿಂದ ಸರಕಾರ ಆವಶ್ಯಕವೆಂದು ಪರಿಗಣಿಸಬಹುದಾದ ಇನ್ನಷ್ಟು ಔಷಧಗಳ ಬೆಲೆ ನಿಯಂತ್ರಣವನ್ನು ತನ್ನ ಹಿಡಿತದಲ್ಲಿ ಇರಿಸಿಕೊಳ್ಳಬೇಕಾಗಿದೆ ಹಾಗೂ ಅವು ಜನಸಾಮಾನ್ಯರ ಕೈಗೆ ಯಾವಾಗಲೂ ಎಟಕುವಂತೆ ನೋಡಿಕೊಳ್ಳಬೇಕಾಗಿದೆ. ತೌಲನಿಕವಾಗಿ ಇತರ ದೇಶಗಳಿಗಿಂತ ಭಾರತದಲ್ಲಿ ಔಷಧಗಳ ಬೆಲೆ ಕಡಿಮೆ ಇದೆ ನಿಜ. ಆದರೆ, ಭಾರತೀಯರ ಜೀವನ ಮಟ್ಟ, ಆದಾಯ ಮಟ್ಟ ಮತ್ತು ಆರೋಗ್ಯ ಸ್ಥಿತಿಗತಿಗಳನ್ನು ಗಮನಕ್ಕೆ ತೆಗೆದುಕೊಂಡು ಸರಕಾರ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಕ್ರಮ ಇದು. ಇದರ ಜತೆಗೆ, ವಿವಿಧ ರಾಜ್ಯಗಳಲ್ಲಿ ಔಷಧಗಳ ಬೆಲೆ ಬೇರೆ ಬೇರೆ ಇರುವುದು, ಒಂದೇ ಆಕರ ದ್ರವ್ಯದ ಔಷಧಕ್ಕೆ ಬೇರೆ ಬೇರೆ ಕಂಪೆನಿಗಳ ಬೆಲೆ ಬೇರೆ ಬೇರೆ ಆಗಿರುವುದು ಅಥವಾ ತೀವ್ರ ವ್ಯತ್ಯಾಸ, ನಕಲಿ ಔಷಧಗಳ ಹಾವಳಿ, ವಿದೇಶೀ ಕಂಪೆನಿಗಳ ಲಾಭಕೋರತನ ಇತ್ಯಾದಿಗಳಿಗೂ ತಡೆ ಹಾಕಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.