ಚೀನ ಬಗ್ಗೆ ಎಚ್ಚರಿಕೆಯಿರಲಿ


Team Udayavani, Jun 9, 2020, 5:40 AM IST

ಚೀನ ಬಗ್ಗೆ ಎಚ್ಚರಿಕೆಯಿರಲಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಭಾರತೀಯ ಪ್ರದೇಶಗಳಲ್ಲಿ ಚೀನ ಸೈನಿಕರ ಒಳನುಸುಳುವಿಕೆ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ಕಳೆದೊಂದು ತಿಂಗಳಿಂದ ಚೀನಿ ಸೈನಿಕರ ವರ್ತನೆಯನ್ನು ನೋಡಿ ಇಡೀ ಜಗತ್ತು ಅಸಹ್ಯ ಪಡುತ್ತಿದೆ.

ಕಳೆದೊಂದು ತಿಂಗಳಿಂದ ಪೂರ್ವ ಲಡಾಖ್‌ ಪ್ರಾಂತ್ಯಗಳ ಬಳಿ ಚೀನಿ ಸೇನೆ ತೋರುತ್ತಾ ಬಂದ ಆಕ್ರಮಣಕಾರಿ ವರ್ತನೆ ಒಂದು ಹಂತಕ್ಕೆ ಶಾಂತವಾಗುವ ಲಕ್ಷಣಗಳು ಗೋಚರಿಸಿವೆ.

ಚೀನ ಮತ್ತು ಭಾರತೀಯ ಮಿಲಿಟರಿಯ ಉನ್ನತಾಧಿಕಾರಿಗಳ ನಡುವೆ ಶನಿವಾರ ಮಾತುಕತೆಯಾಗಿರುವುದು ಈ ಬೆಳವಣಿಗೆಗೆ ಕಾರಣ.

ಹಾಗೆಂದು, ಚೀನ ನಿಜಕ್ಕೂ ಶಾಂತವಾಗಿಬಿಡುತ್ತದೆ ಎಂದು ನಾವು ನಿರೀಕ್ಷಿಸುವಂತಿಲ್ಲ. ತನ್ನ ನೆಲದಲ್ಲೀಗ ಅದು ಮಿಲಿಟರಿ ಚಟುವಟಿಕೆಗಳಿಗೆ ವೇಗ ಕೊಡಲಾರಂಭಿಸಿದೆ. ಭಾರತೀಯ ಪ್ರದೇಶಗಳಲ್ಲಿ ಚೀನ ಸೈನಿಕರ ಒಳನುಸುಳುವಿಕೆ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ.

ಆದರೆ ಕಳೆದೊಂದು ತಿಂಗಳಿಂದ ಚೀನಿ ಸೈನಿಕರ ವರ್ತನೆಯನ್ನು ನೋಡಿ ಇಡೀ ವಿಶ್ವ ಅಸಹ್ಯ ಪಡುತ್ತಿದೆ. ಜಗತ್ತು ಕೋವಿಡ್ ವಿರುದ್ಧ ಹೋರಾಡುವಲ್ಲಿ ನಿರತವಾಗಿರುವಾಗ ಚೀನಿಯರು ಈ ಅನಿಶ್ಚಿತತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು ಖಂಡನೆಗೆ ಗುರಿಯಾಗುತ್ತಿದೆ.

ಭಾರತದ ಪ್ರದೇಶಗಳಲ್ಲಿ ಬಿಕ್ಕಟ್ಟು ಸೃಷ್ಟಿಸುವುದು ಹಾಗೂ ಇದರ ಜಾಡಲ್ಲಿ ಭಾರತದ ಮೇಲೆ ಒತ್ತಡ ಹೇರುವುದು ಚೀನದ ಹಳೆಯ ರಣನೀತಿಯಾಗಿದೆ. ಆದರೆ ಈಗ ಭಾರತದ ಯಾವುದೇ ಪ್ರದೇಶವನ್ನೂ ಕೈವಶ ಮಾಡಿಕೊಳ್ಳುವುದು ಸುಲಭವಲ್ಲ ಎನ್ನುವುದನ್ನು ಚೀನಿ ಆಡಳಿತ ಹಾಗೂ ಸೇನೆ ಸ್ಪಷ್ಟವಾಗಿ ಅರಿತಿವೆ. ಭಾರತವೀಗ 1962ರ ದೇಶವಾಗಿ ಉಳಿದಿಲ್ಲ.

ಸತ್ಯವೇನೆಂದರೆ, ಈ ಬಾರಿ ಚೀನದ ದುರ್ವರ್ತನೆಯ ಹಿಂದೆ ಅನ್ಯ ಕಾರಣವೂ ಇದೆ. ಭಾರತವು ಗಡಿ ಭಾಗದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರು ವುದು ಚೀನದ ನಿದ್ದೆಗೆಡಿಸಿದೆ. ಪ್ಯಾಂಗಾಂಗ್‌ ತ್ಸೋ ಲೇಕ್‌ ಸನಿಹದ ಪ್ರದೇಶದಲ್ಲಿ ಭಾರತವು ರಣಾಂಗಣ ದೃಷ್ಟಿಯಿಂದ ಮಹತ್ವ ಪೂರ್ಣ ರಸ್ತೆಯನ್ನು ನಿರ್ಮಿ ಸಿರುವುದು ಚೀನವನ್ನು ಹೆಚ್ಚು ಕಾಡುತ್ತಿರುವ ವಿಷಯ. ಇನ್ನು ಗಲವಾನ್‌ ಕಣಿವೆಯಲ್ಲಿ ಭಾರತ ನಿರ್ಮಿಸುತ್ತಿರುವ ರಸ್ತೆಯ ಬಗ್ಗೆಯೂ ಚೀನ ಅಪಸ್ವರವೆತ್ತುತ್ತಿದೆ.

ನಿಸ್ಸಂದೇಹವಾಗಿಯೂ ಭಾರತ ನಿರ್ಮಿಸುತ್ತಿರುವ ರಸ್ತೆಯ ಇಂಚಿಂಚೂ ಕೂಡ ಚೀನಕ್ಕೆ ಬೆಟ್ಟದಷ್ಟು ಚಿಂತೆ ಹೆಚ್ಚಿಸುತ್ತಲೇ ಇದೆ. ಗಲವಾನ್‌ ಕಣಿವೆಯಲ್ಲಿ ಭಾರತೀಯ ಸೈನ್ಯದ ಉಪಸ್ಥಿತಿಯು ಹೆಚ್ಚಾದರೆ, ಚೀನಿ ಸೈನಿಕರ ಚಲನವಲನಗಳ ಮೇಲೆ ಹದ್ದಿನಗಣ್ಣಿಡಲು ಸುಲಭವಾಗುತ್ತದೆ. ಚೀನ ಎಷ್ಟೇ ಅಸಮಾಧಾನ ವ್ಯಕ್ತಪಡಿಸಿದರೂ ಭಾರತ ತಾನಿಡುತ್ತಿರುವ ಹೆಜ್ಜೆಯಿಂದ ಹಿಂದೆ ಸರಿಯುತ್ತಿಲ್ಲ. ಈ ಕಾರಣಕ್ಕಾಗಿಯೇ, ಚೀನ ಸದ್ಯಕ್ಕೆ ಸುಮ್ಮನಾದರೂ, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಕ್ಕಟ್ಟನ್ನಂತೂ ಸೃಷ್ಟಿಸಲಿದೆ. ಈ ಬಗ್ಗೆ ಭಾರತ ಜಾಗರೂಕತೆಯಿಂದಿರಬೇಕು.

ಟಾಪ್ ನ್ಯೂಸ್

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Canada

Canada Temple Attack: ಕೆನಡಾ ದೇಗುಲ ದಾಳಿ: ಜಾಗತಿಕ ವಿರೋಧ ಪ್ರತಿಧ್ವನಿಸಲಿ

Flight

Hoax Call: ಹುಸಿ ಬಾಂಬ್‌ ಬೆದರಿಕೆ ಮರುಕಳಿಸದಿರಲಿ

kannadiga

Editorial: ಕನ್ನಡಿಗರ ನಿಂದನೆಗೆ ಕಠಿನ ಕ್ರಮ: ಸ್ತುತ್ಯರ್ಹ ನಿಲುವು

4-editorial

Editorial: ಸುವರ್ಣ ಕರ್ನಾಟಕ: ವಿಕಾಸಕ್ಕೆ ಕಾರ್ಯಸೂಚಿ ಅಗತ್ಯ

cyber crime

Cyber ​​crime ತಡೆ: ವಿವೇಚನೆಯೇ ಕೀಲಿಕೈ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.