ನಿಲ್ಲದ ಪಾಕ್‌ ದುಷ್ಕೃತ್ಯ ತಕ್ಕ ಪಾಠ ಕಲಿಸಿ


Team Udayavani, Oct 5, 2020, 5:45 AM IST

ನಿಲ್ಲದ ಪಾಕ್‌ ದುಷ್ಕೃತ್ಯ ತಕ್ಕ ಪಾಠ ಕಲಿಸಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ತನ್ನ ನೆಲದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾದಾಗಲೆಲ್ಲ ಪಾಕಿಸ್ಥಾನ, ಜನರ ಹಾಗೂ ಜಗತ್ತಿನ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಗಡಿ ಭಾಗದಲ್ಲಿ ಭಾರತ ವಿರೋಧಿ ಕೃತ್ಯಗಳಿಗೆ ಮುಂದಾಗುತ್ತದೆ.

ಜಮ್ಮು-ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾಗಿ ಬದಲಾದ ಬಳಿಕವಂತೂ ಗಡಿ ಭಾಗದಲ್ಲಿ ಉಗ್ರರನ್ನು ನುಸುಳಿಸುವ, ಗುಂಡಿನ ದಾಳಿ ನಡೆಸುವ ಕೃತ್ಯವನ್ನು ಅದು ಹೆಚ್ಚಿಸಿಬಿಟ್ಟಿದೆ.

ಕೆಲವು ದಿನಗಳ ಹಿಂದೆ ಪಾಕಿಸ್ಥಾನದ ಇಂಥದ್ದೇ ಒಂದು ಕುಕೃತ್ಯದಲ್ಲಿ ಭಾರತದ ಮೂವರು ಸೈನಿಕರು ಹುತಾತ್ಮರಾಗಿ, ಐವರು ಗಾಯಗೊಂಡಿದ್ದಾರೆ. ಇದಕ್ಕೆ ಭಾರತ ಸಮರ್ಥವಾಗಿಯೇ ಪ್ರತ್ಯುತ್ತರವನ್ನೂ ನೀಡಿದೆ.

ಒಂದೆಡೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾನವ ಹಕ್ಕುಗಳ ಬಗ್ಗೆ ಭಾಷಣ ಮಾಡುವ, ನೆರವಿಗಾಗಿ ಅಂಗಲಾಚುವ ಪಾಕಿಸ್ಥಾನ ಇನ್ನೊಂದೆಡೆ ಕದನ ವಿರಾಮದ ಉಲ್ಲಂಘನೆ ಮಾಡುತ್ತಾ ಅನಗತ್ಯವಾಗಿ ಭಾರತಕ್ಕೆ ತೊಂದರೆ ಮಾಡುತ್ತಲೇ ಇರುತ್ತದೆ. ಭಾರತವು ಪಾಕಿಸ್ಥಾನದ ಮೇಲೆ ಎರಡು ಬಾರಿ ಸರ್ಜಿಕಲ್‌ ಸ್ಟ್ರೈಕ್‌ಗಳನ್ನು ನಡೆಸಿ, ನಮ್ಮ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಪ್ರಬಲವಾಗಿಯೇ ಎಚ್ಚರಿಸಿದ್ದರೂ, ಪಾಕಿಸ್ಥಾನ ಪಾಠ ಕಲಿಯುವುದಕ್ಕೆ ಸಿದ್ಧವಿಲ್ಲವೆನಿ ಸುತ್ತದೆ ಅಥವಾ ಚೀನದ ಕುಮ್ಮಕ್ಕಿನಿಂದಾಗಿ ಅದು ತನಗೇನೂ ಆಗುವುದಿಲ್ಲ ಎಂಬ ಭಾÅಮಕ ಜಗತ್ತಿನಲ್ಲಿ ಬದುಕುತ್ತಿದೆಯೆನಿಸುತ್ತದೆ.

ಭಾರತ ಮತ್ತು ಪಾಕಿಸ್ಥಾನದ ನಡುವೆ 17 ವರ್ಷಗಳ ಹಿಂದೆ ನಿಯಂತ್ರಣ ರೇಖೆಯ ಬಳಿ ಯುದ್ಧ ವಿರಾಮದ ಒಪ್ಪಂದವಾಗಿತ್ತು. ಆದರೆ, ಈ ವಿಚಾರದಲ್ಲಿ ಇತಿಹಾಸವನ್ನು ತೆರೆದು ನೋಡಿದರೆ, ಈ ಒಪ್ಪಂದವನ್ನು ನಿಭಾಯಿಸುವ ಸಂಪೂರ್ಣ ಜವಾಬ್ದಾರಿ ಭಾರತಕ್ಕೇ ಬಿಟ್ಟ ವಿಚಾರ ಎಂಬಂತೆ ವರ್ತಿಸುತ್ತಾ ಬಂದಿದೆ ಪಾಕಿಸ್ಥಾನ. ಪ್ರತಿ ಬಾರಿಯೂ ಭಾರತದ ವಿರುದ್ಧ ದುಷ್ಕೃತ್ಯಗಳನ್ನು ಎಸಗಿದಾಗಲೆಲ್ಲ ಪಾಕಿಸ್ಥಾನ, ಅದನ್ನು ಮುಚ್ಚಿಹಾಕಲು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಜಮ್ಮು-ಕಾಶ್ಮೀರದ ವಿಚಾರವನ್ನು ಪ್ರಸ್ತಾವಿಸಿ ಮೊಸಳೆ ಕಣ್ಣೀರು ಸುರಿಸುತ್ತದೆ.

ಈ ಕಾರಣದಿಂದಾಗಿಯೇ, ವೈಶ್ವಿ‌ಕ ಸಮುದಾಯವೂ ಗಡಿ ಭಾಗದಲ್ಲಿ ಪಾಕಿಸ್ಥಾನದ ವರ್ತನೆಗಳನ್ನು ಹೆಚ್ಚಾಗಿ ಖಂಡಿಸುವುದೇ ಇಲ್ಲ. ಒಂದು ವರದಿಯ ಪ್ರಕಾರ ಕಳೆದ ಎಂಟು ತಿಂಗಳುಗಳಲ್ಲಿ ಪಾಕಿಸ್ಥಾನ ಅತ್ಯಧಿಕ ಬಾರಿ ಯುದ್ಧವಿರಾಮ ಉಲ್ಲಂಘನೆ ಮಾಡಿದೆ. ಅಲ್ಲದೇ, ಪ್ರತಿ ಬಾರಿಯೂ ಭಾರತದಿಂದ ಇದಿರೇಟು ತಿಂದಿದೆ. ಈ ಕಾರಣಕ್ಕಾಗಿಯೇ ಪಾಕಿಸ್ಥಾನವನ್ನು ಅಂತಾರಾಷ್ಟ್ರೀಯ ಸ್ತರದಲ್ಲಿ ರಾಜತಾಂತ್ರಿಕವಾಗಿ ಕಟ್ಟಿಹಾಕುವ ಅಗತ್ಯ ಹಿಂದೆಂದಿಗಿಂತಲೂ ಅಧಿಕವಾಗಿದೆ.

ಈಗ ಪಾಕಿಸ್ಥಾನ ಗಿಲ್ಗಿಟ್‌-ಬಾಲ್ಟಿಸ್ಥಾನಕ್ಕೆ ತನ್ನ 5ನೇ ಪ್ರಾಂತ್ಯದ ದರ್ಜೆ ಕೊಡಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಆದರೆ ಅಲ್ಲಿನ ಜನರು ಇದಕ್ಕೆ ಪ್ರಬಲ ಪ್ರತಿರೋಧ ತೋರಿಸುತ್ತಿದ್ದು ಈ ಕಾರಣಕ್ಕಾಗಿಯೇ ಇಮ್ರಾನ್‌ ಸರಕಾರ ಆ ಭಾಗದಲ್ಲಿ ಮಾನವಹಕ್ಕು ಉಲ್ಲಂಘನೆಯಲ್ಲಿ ತೊಡಗಿದೆ. ಇನ್ನು ಬಲೂಚಿಸ್ಥಾನದಲ್ಲೂ ಪಾಕ್‌ನ ಅಕ್ರಮಗಳು ಮುಂದುವರಿದಿದೆ. ಈ ವಿಚಾರಗಳನ್ನು ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೆಚ್ಚು ಚರ್ಚೆಯಾಗುವಂತೆ ಮಾಡಿ, ಪಾಕಿಸ್ಥಾನದ ಧ್ವನಿಯನ್ನು ಅಡಗಿಸಲೇಬೇಕಿದೆ.

ಟಾಪ್ ನ್ಯೂಸ್

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.