ನೀರಸ ಪ್ರತಿಕ್ರಿಯೆ; ಒಗ್ಗಟ್ಟಿಲ್ಲದ ಬಂದ್‌ ಏಕೆ?

ಸಂಪಾದಕೀಯ

Team Udayavani, Feb 14, 2020, 10:44 AM IST

Bandh

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಬಂದ್‌ಗೆ ಕರೆ ನೀಡುವುದೇ ಹಾಸ್ಯಾಸ್ಪದ ವಿಚಾರ ಆಗಬಾರದು. ಒಂದು ಉತ್ತಮ ಉದ್ದೇಶಕ್ಕಾಗಿ ಬಂದ್‌ಗೆ ಕರೆ ನೀಡಿದ ಮೇಲೆ, ಎಲ್ಲರನ್ನೂ ಜತೆಗೆ ಕರೆದೊಯ್ಯುವ ಮನಸ್ಸು ಕೂಡ ಇರಬೇಕು. ಬೆಂಗಳೂರಷ್ಟೇ ಅಲ್ಲ, ರಾಜ್ಯದ
ಕೆಲವೊಂದು ಜಿಲ್ಲೆಗಳಲ್ಲಿ ಬಂದ್‌ಗೆ ಯಾವುದೇ ರೀತಿಯಲ್ಲೂ ಬೆಂಬಲ ಸಿಕ್ಕಿಲ್ಲ. ಉತ್ತರ ಕರ್ನಾಟಕದ ಯಾವುದೇ
ಭಾಗದಲ್ಲೂ ಬಂದ್‌ ನಡೆಯಲಿಲ್ಲ.

ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಕನ್ನಡ ಪರ ಸಂಘಟನೆಗಳು ಕರೆದಿದ್ದ ರಾಜ್ಯವ್ಯಾಪಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ, ಅಲ್ಲಲ್ಲಿ ಪ್ರತಿಭಟನೆ ನಡೆದದ್ದು ಬಿಟ್ಟರೆ ಬಂದ್‌ನಿಂದಾಗಿ ಯಾರಿಗೂ ಬಿಸಿ ತಾಗಿಲ್ಲ. ಇದರ ನಡುವೆಯೇ ಒಂದೆರಡು ಕಡೆ ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿರುವ ವರದಿಯೂ ಆಗಿದೆ. ಬಂದ್‌ ಹೆಸರಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳೂ ಉದ್ಭವಿಸಿವೆ.

ಇದೆಲ್ಲದರ ನಡುವೆಯೇ ಗುರುವಾರ ಬಂದ್‌ಗೆ ಕರೆ ನೀಡಿದ್ದೇಕೆ ಎಂಬ ಪ್ರಶ್ನೆಗಳು ಜನರಲ್ಲಿ ಮೂಡತೊಡಗಿವೆ. ಒಂದಂತೂ ಸತ್ಯ, ಕನ್ನಡ ಪರ ಸಂಘಟನೆಗಳಲ್ಲಿ ಒಗ್ಗಟ್ಟು ಮೂಡದ ಹೊರತು ಕನ್ನಡಕ್ಕಾಗಿ ಮಾಡುವ ಯಾವುದೇ ಕೆಲಸಗಳು ಈಡೇರುವುದಿಲ್ಲ ಎಂಬ ಅಂಶವನ್ನು ಸಂಘಟನೆಗಳು ಅರಿತುಕೊಳ್ಳಬೇಕು. ಇಂಥ ಹೋರಾಟಗಳನ್ನು ನಡೆಸುವಾಗ ಕನಿಷ್ಠ ಪಕ್ಷ ರಾಜ್ಯದಲ್ಲಿ ಇರುವ ಕನ್ನಡ ಪರ ಸಂಘಟನೆಗಳ ನಾಯಕರೆಲ್ಲಾ ಕುಳಿತು, ಯೋಚಿಸಿ ಮುಂದಡಿ ಇಡುವುದು ಉತ್ತಮ. ಸಂಘಟನೆಗಳ ನಡುವೆಯೇ ಒಗ್ಗಟ್ಟಿಲ್ಲ ಎಂಬುದು ಗುರುವಾರ ಬೆಳಗ್ಗೆ ಕೆಲವು ಕನ್ನಡ ಸಂಘಟನೆಗಳ ಕಾರ್ಯಕರ್ತರು ಬಂದ್‌ನಲ್ಲಿ ಭಾಗವಹಿಸದವರಿಗೆ ಗುಲಾಬಿ ಹೂ ನೀಡಿ ಸತ್ಕರಿಸಿದಾಗ ಸಾಬೀತಾಗಿದೆ.

ಹೀಗಾಗಿ ಎಲ್ಲೋ ಒಂದು ಕಡೆ ಬಂದ್‌ಗೆ ಕರೆ ನೀಡುವುದೇ ಹಾಸ್ಯಾಸ್ಪದ ವಿಚಾರವಾಗಬಾರದು. ಒಂದು ಉತ್ತಮ ಉದ್ದೇಶಕ್ಕಾಗಿ ಬಂದ್‌ಗೆ ಕರೆ ನೀಡಿದ ಮೇಲೆ, ಎಲ್ಲರನ್ನೂ ಜತೆಗೆ ಕರೆದೊಯ್ಯುವ ಮನಸ್ಸು ಕೂಡ ಇರಬೇಕು. ಬೆಂಗಳೂರಷ್ಟೇ ಅಲ್ಲ, ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಬಂದ್‌ಗೆ ಯಾವುದೇ ರೀತಿಯಲ್ಲೂ ಬೆಂಬಲ ಸಿಕ್ಕಿಲ್ಲ. ಉತ್ತರ ಕರ್ನಾಟಕದ ಯಾವುದೇ ಭಾಗದಲ್ಲೂ ಬಂದ್‌ ನಡೆಯಲಿಲ್ಲ. ಇನ್ನೂ ಕೆಲವು ಕಡೆಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವ ಪ್ರಯತ್ನಕ್ಕೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾದರೆ ಬಂದ್‌ಗೆ ಕರೆ ನೀಡಿದ್ದ ಕನ್ನಡ ಸಂಘಟನೆಗಳು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇಷ್ಟೆಲ್ಲಾ ಸಂಗತಿಗಳ ನಡುವೆಯೇ ಬಂದ್‌ಗೆ ಕರೆ ನೀಡುವವರು ಮಕ್ಕಳ ಪರೀಕ್ಷೆ ಬಗ್ಗೆಯೂ ಯೋಚನೆ ಮಾಡಬೇಕು. ಫೆಬ್ರವರಿ, ಮಾರ್ಚ್‌, ಏಪ್ರಿಲ್‌ ತಿಂಗಳುಗಳೆಂದರೆ ಮಕ್ಕಳ ಪರೀಕ್ಷೆ ಕಾಲ. ಈಗಾಗಲೇ ಪ್ರಥಮ ಪಿಯುಸಿಯೂ ಸೇರಿದಂತೆ ಕೆಲವು ಪದವಿ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ಇಂಥ ಬಂದ್‌ನಿಂದಾಗಿ ಮಕ್ಕಳು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳೂ ಗೊಂದಲಕ್ಕೀಡಾಗುತ್ತಾರೆ. ಪರೀಕ್ಷೆ ಮುಂದೂಡುವುದೋ ಅಥವಾ ಬೇಡವೋ, ಬಂದ್‌ ಆಗುತ್ತೋ, ಇಲ್ಲವೋ ಎಂಬ ಗೊಂದಲಗಳಿಂದಾಗಿ ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತದೆ. ಹೀಗಾಗಿ ಏಕಾಏಕಿ ಬಂದ್‌ಗೆ ಕರೆ ನೀಡುವ ಮುನ್ನ, ಯಾರಿಗೆಲ್ಲಾ ತೊಂದರೆಯಾಗುತ್ತದೆ, ಯಾವ ರೀತಿ ತೊಂದರೆಯಾಗುತ್ತದೆ ಎಂಬುದನ್ನು ಅರಿಯುವುದು ಸೂಕ್ತ.

ಸರೋಜಿನಿ ಮಹಿಷಿ ವರದಿ ಜಾರಿ ವಿಚಾರವೂ ಅಷ್ಟೇ. ರಾಜ್ಯದ ಪಾಲಿಗೆ ಇದೊಂದು ಗಂಭೀರವಾದ ವಿಚಾರ. ಸರೋಜಿನಿ ಮಹಿಷಿ ಅವರು ವರದಿ ಕೊಟ್ಟ ಮೇಲೆ ಹಲವಾರು ಸರ್ಕಾರಗಳು ಬಂದಿವೆ, ಹೋಗಿವೆ. ಆದರೂ ಇದುವರೆಗೂ ಈ ವರದಿ ಜಾರಿಯಾಗಿಯೇ ಇಲ್ಲ. ಇಂಥ ಹೋರಾಟ ಮಾಡಿದಾಗ ಆಗ ಅಧಿಕಾರದಲ್ಲಿರುವ ನಾಯಕರು ಇನ್ನೇನು ಜಾರಿ ಮಾಡಿಯೇ ಬಿಡುತ್ತೇವೆ ಎನ್ನುತ್ತಾರೆ, ನಂತರ ಮರೆತೇ ಬಿಡುತ್ತಾರೆ.

ಸರೋಜಿನಿ ಮಹಿಷಿ ಅವರು 1984ರಲ್ಲಿ ನೀಡಿದ್ದ ವರದಿ ಇದು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿನ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂಬುದು ಈ ವರದಿಯ ಪ್ರಮುಖಾಂಶ. ಒಟ್ಟಾರೆಯಾಗಿ 58 ಶಿಫಾರಸುಗಳನ್ನು ಸಲ್ಲಿಕೆ ಮಾಡಲಾಗಿತ್ತು. ಕೇಂದ್ರವಾಗಲಿ, ರಾಜ್ಯವಾಗಲಿ, ಖಾಸಗಿ ವಲಯವಾಗಲಿ ಎಲ್ಲೆಡೆ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂಬುದು ಈ ವರದಿಯ ಪ್ರಮುಖ ಆಶಯವಾಗಿತ್ತು. ಆದರೆ, ವರದಿ ನೀಡಿ ಅಂದಾಜು 36 ವರ್ಷಗಳಾಗಿವೆ. ಇನ್ನೂ ಮೀಸಲಾತಿ ಜಾರಿಗೆ ಬಂದಿಲ್ಲ ಎಂಬುದು ಮಾತ್ರ ವಿಪರ್ಯಾಸ.

ಟಾಪ್ ನ್ಯೂಸ್

JONATHAN

National Games: ಪುರುಷರ ಶೂಟಿಂಗ್‌ ಸ್ಪರ್ಧೆ; ರಾಜ್ಯದ ಶೂಟರ್‌ ಜೋನಾಥನ್‌ಗೆ ಚಿನ್ನ

Sanju-Samson

Injury: ವಿಕೆಟ್‌ ಕೀಪರ್‌-ಬ್ಯಾಟರ್‌ ಸಂಜು ಸ್ಯಾಮ್ಸನ್‌ ಗಾಯಾಳು

ICC-Team-india

Tournament Team: ಯು-19 “ಕೂಟದ ತಂಡ’ದಲ್ಲಿ ಭಾರತದ 4 ಆಟಗಾರ್ತಿಯರು

Udupi: ಗೀತಾರ್ಥ ಚಿಂತನೆ 176: ಭೂತಜ್ಞಾನ, ಸ್ವರೂಪಜ್ಞಾನದ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ 176: ಭೂತಜ್ಞಾನ, ಸ್ವರೂಪಜ್ಞಾನದ ವ್ಯತ್ಯಾಸ

mng-Asian-Sisters

Harbin: ಏಷ್ಯನ್‌ ಗೇಮ್ಸ್‌ ಐಸ್‌ ಸ್ಕೇಟಿಂಗ್‌: ಮಂಗಳೂರಿನ ಅಣ್ಣ-ತಂಗಿ ಆಯ್ಕೆ

Champions-Trophy

Kick Start: ಚಾಂಪಿಯನ್ಸ್‌ ಟ್ರೋಫಿ ಪಂದ್ಯಗಳ ಟಿಕೆಟ್‌ ಮಾರಾಟ ಆರಂಭ

ಫೆ.11ರಿಂದ ಹೂಡಿಕೆದಾರರ ಸಮಾವೇಶ: ಸ್ಟಾರ್ಟಪ್‌ ಪ್ರೋತ್ಸಾಹಕ್ಕೆ 3 ಲ. ಡಾಲರ್‌

ಫೆ.11ರಿಂದ ಹೂಡಿಕೆದಾರರ ಸಮಾವೇಶ: ಸ್ಟಾರ್ಟಪ್‌ ಪ್ರೋತ್ಸಾಹಕ್ಕೆ 3 ಲ. ಡಾಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Editorial: ಬೇಸಗೆಯಲ್ಲಿ ಹೆಚ್ಚುತ್ತಿರುವ ಬೆಂಕಿ ಆಕಸ್ಮಿಕ; ಈಗಿನಿಂದಲೇ ಮುನ್ನೆಚ್ಚರಿಕೆ ಇರಲಿ

6

Editorial: ಗ್ರಾಮೀಣ ಭಾಗದಲ್ಲಿ ಪಶು ವೈದ್ಯರ ಸೇವೆ ನಿರಂತರ ಸಿಗಲಿ

4

Editorial: ಜಲಜೀವನ್‌ ಕಾಮಗಾರಿ ಚುರುಕುಗೊಳ್ಳಲಿ…

1

Editorial: ಪಂಚಾಯತ್‌ ವ್ಯಾಪ್ತಿಯ ಅರೆ ಪಟ್ಟಣಗಳಲ್ಲೂ ಎಸ್‌.ಟಿ.ಪಿ. ಅಗತ್ಯ

Donald trumph

Donald Trump ಸುಂಕ ಸಂಘರ್ಷಕ್ಕೆ ಮುನ್ನುಡಿ : ವಿಶ್ವ ರಾಷ್ಟ್ರಗಳಿಗೆ ಹೊಸ ತಲೆನೋವು

MUST WATCH

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

ಹೊಸ ಸೇರ್ಪಡೆ

RCB-women

ಆರ್‌ಸಿಬಿ ಮಹಿಳಾ ತಂಡಕ್ಕೆ ಹೀದರ್‌ ಗ್ರಹಾಂ, ಗಾರ್ಥ್

JONATHAN

National Games: ಪುರುಷರ ಶೂಟಿಂಗ್‌ ಸ್ಪರ್ಧೆ; ರಾಜ್ಯದ ಶೂಟರ್‌ ಜೋನಾಥನ್‌ಗೆ ಚಿನ್ನ

court

Road dispute:ತಹಶೀಲ್ದಾರ್‌ ಆದೇಶ ಪುರಸ್ಕರಿಸಿದ ಜಿಲ್ಲಾ ನ್ಯಾಯಾಲಯ

Sanju-Samson

Injury: ವಿಕೆಟ್‌ ಕೀಪರ್‌-ಬ್ಯಾಟರ್‌ ಸಂಜು ಸ್ಯಾಮ್ಸನ್‌ ಗಾಯಾಳು

rape

Bantwal: ಬಾಲಕಿಯ ಅಪಹರಿಸಿ ಕಿರುಕುಳ:ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.