Editorial: ಸಾರಿಗೆ ವ್ಯವಸ್ಥೆ ಮತ್ತಷ್ಟು ಜನೋಪಯೋಗಿಯಾಗಲಿ

Team Udayavani, Jan 13, 2025, 3:07 PM IST

8

ಉಡುಪಿ ನಗರ ಭಾಗದಲ್ಲಿರುವ ಆಟೋರಿಕ್ಷಾಗಳಿಗೆ ಪ್ರತ್ಯೇಕ ನಿಯಮಾವಳಿ ರೂಪಿಸಬೇಕೆಂಬ ಬಗ್ಗೆ ಇತ್ತೀಚೆಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಪ್ರಸ್ತುತ ಇದು ಉತ್ತಮ ಕ್ರಮವಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಅನಧಿಕೃತವಾಗಿ ತಲೆ ಎತ್ತಿರುವ ಕೆಲವು ಆಟೋರಿಕ್ಷಾ ನಿಲ್ದಾಣಗಳೂ ಒಂದು ಕಾರಣ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿಯೇ ನಗರಸಭೆಯು ಇನ್ನು ಮುಂದೆ ನಗರಭಾಗದಲ್ಲಿ ಆಟೋರಿಕ್ಷಾಗಳಿಗೆ ಅನುಮತಿ ನೀಡಬಾರದು ಎಂಬ ಬಗ್ಗೆ ಜಿಲ್ಲಾಡಳಿತ ಹಾಗೂ ಆರ್‌ಟಿಒ ಅಧಿಕಾರಿಗಳೊಂದಿಗೆ ಮಾತುಕತೆಗೆ ಮುಂದಾಗಿದೆ.
ಅಂದ ಹಾಗೆಯೇ ಆರಂಭದಲ್ಲಿಯೇ ಈ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸದ ಪೊಲೀಸ್‌ ಇಲಾಖೆ ಹಾಗೂ ನಗರಸಭೆಯವರೂ ಇದಕ್ಕೆ ಕಾರಣರು. ಅದೇನೇ ಇರಲಿ; ಸಾರಿಗೆ ವ್ಯವಸ್ಥೆ ಅಂದ ಮೇಲೆ ಜನಸಾಮಾನ್ಯರಿಗೆ ಅನುಕೂಲವಾಗುವಂತಿರಬೇಕು.

ಸಾರ್ವಜನಿಕರ ಇನ್ನೊಂದು ಮುಖ್ಯ ದೂರು ಎಂದರೆ ಆಟೋರಿಕ್ಷಾಗಳು ಮೀಟರ್‌ ಹಾಕದೆ ಹೆಚ್ಚು ಬಾಡಿಗೆ ವಸೂಲು ಮಾಡುತ್ತಿದ್ದಾರೆ ಎಂಬುದು. ಹೆಚ್ಚಿನವರು ಮೀಟರ್‌ ಹಾಕಿಯೇ ಆಟೋ ಓಡಿಸಿದರೂ ಕೆಲವೇ ಕೆಲವರಿಂದಾಗಿ ಶಿಸ್ತಿನಿಂದ ದುಡಿಯುತ್ತಿರುವವರ ಮೇಲೂ ಸಂಶಯ ಪಡುವಂತಾಗಿದೆ. ಜಿಲ್ಲಾಡಳಿತ ಮೀಟರ್‌ ಕಡ್ಡಾಯಗೊಳಿಸಿದ್ದರೂ ಕೆಲವು ಸಂದರ್ಭ ಅದರ ಪಾಲನೆಯಾಗುತ್ತಿಲ್ಲ. ರಿಕ್ಷಾದಿಂದ ಇಳಿಯುವ ವೇಳೆ ಬೇಕಾಬಿಟ್ಟಿ ಬಾಡಿಗೆ ಹೇಳುತ್ತಾರೆ ಎಂಬ ದೂರೂ ಇದೆ. ಈ ಬಗ್ಗೆ ಆಡಳಿತದ ಜತೆಗೆ ರಿಕ್ಷಾ ಚಾಲಕರ ಸಂಘಟನೆಗಳವರೂ ಗಮನ ಹರಿಸುವುದು ಅಗತ್ಯವಾಗಿದೆ.

ಆಟೋ ರಿಕ್ಷಾ ಸೇವೆ ಎಂಬುದು ಯಾವುದೇ ನಗರಕ್ಕೆ ತುರ್ತು ಅಗತ್ಯವಾಗಿರುವ ವ್ಯವಸ್ಥೆ. ಸಿಟಿ ಬಸ್‌ಗಳು ನಗರದಲ್ಲಿ ಕಾರ್ಯಾಚರಣೆ ಮಾಡಿಕೊಂಡಿದ್ದರೂ ನಗರದ ಒಳರಸ್ತೆಗಳಿಗೆ ತೆರಳಲು ಆಟೋರಿಕ್ಷಾಗಳ ಸೇವೆ ಅತ್ಯಗತ್ಯ. ಅದೆಷ್ಟೇ ದುರ್ಗಮ ಹಾದಿಯಿದ್ದರೂ ಮನೆತನಕ ಕರೆದುಕೊಂಡು ಹೋಗಿ ಬಿಡುವ ಆಟೋ ಚಾಲಕರ ಹಲವಾರು ರೀತಿಯ ಮಾನವೀಯ ಸ್ಪಂದನೆಗಳನ್ನೂ ಮರೆಯುವಂತಿಲ್ಲ. ದಾರಿ ಗೊತ್ತಿಲ್ಲದ ಸಂದರ್ಭ ಅವರೇ ಹುಡುಕಿಕೊಂಡು, ಪರಿಚಯದವರಲ್ಲಿ ಕೇಳಿಕೊಂಡು ಪ್ರಯಾಣಿಕರನ್ನು ಗಮ್ಯ ಸ್ಥಾನಕ್ಕೆ ತಲುಪಿಸುವರು. ಇದೂ ಅಲ್ಲದೆ ನಗರದಲ್ಲಿ ಯಾವುದಾದರೂ ಅವಘಡಗಳಾದಾಗ ತುರ್ತು ಸೇವೆಗೆ ಇವರೇ ಧಾವಿಸುತ್ತಾರೆ. ಅಪಘಾತಗಳ ಸಂದರ್ಭ ಹಿಂದೆ-ಮುಂದೆ ಆಲೋಚಿಸದೆ ತುರ್ತಾಗಿ ಆಸ್ಪತ್ರೆಗೆ ಸಾಗಿಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇವರಿಗೆ ಸರಿಯಾದ ನಿಲ್ದಾಣ ಒದಗಿಸುವುದು ಆಡಳಿತದ ಜವಾಬ್ದಾರಿಯೂ ಆಗಿರುತ್ತದೆ. ಈ ನಿಟ್ಟಿನಲ್ಲಿಯೂ ಪ್ರಯತ್ನಗಳು ಸಾಗಬೇಕಿದೆ.

ಈ ನಡುವೆ ಉಬರ್‌ ವ್ಯವಸ್ಥೆಯ ಬಗ್ಗೆ ಚೆರ್ಚಗಳಾಗುತ್ತಿವೆಯಾದರೂ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಏಕೆಂದರೆ ಹಲವಾರು ಮಂದಿ ಆಟೋರಿಕ್ಷಾ ಚಾಲಕರು ನಿತ್ಯದ ಬಾಡಿಗೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಮೀಟರ್‌ ಹಾಕುವುದು, ಸಮವಸ್ತ್ರ ಧರಿಸುವುದು, ಸಾರ್ವಜನಿಕರೊಂದಿಗೆ ವರ್ತಿಸುವ ರೀತಿಯ ಕುರಿತು ರಿಕ್ಷಾ ಚಾಲಕರ ಸಂಘ ಸಂಸ್ಥೆಗಳು ಗಮನ ಹರಿಸುವ ಅಗತ್ಯವಿದ್ದರೆ, ಅವರಿಗೆ ಬೇಕಾದ ಮೂಲ ಸೌಕರ್ಯಗಳ ಕುರಿತು ಜಿಲ್ಲಾಡಳಿತ, ನಗರಸಭೆ ಗಮನ ಹರಿಸುವುದು ಅಗತ್ಯವಾಗಿದೆ. -ಸಂ.

ಟಾಪ್ ನ್ಯೂಸ್

Monkey Disease: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

Monkey Disease: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

1-modi

Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫ‌ಲ್ಯ: ಸುನಿಲ್‌ ಕುಮಾರ್‌

ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫ‌ಲ್ಯ: ಸುನಿಲ್‌ ಕುಮಾರ್‌

eart

Japan; ಕ್ಯುಶು ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ!

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

Udupi: ಗೋವಿನ ಮೇಲಿನ ಕ್ರೌರ್ಯ ಖಂಡಿಸಿದ ಮಠಾಧೀಶರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Editorial: ಇಂಟರ್‌ನೆಟ್‌-ನೆಟ್‌ವರ್ಕ್‌ ಸುಧಾರಣೆಗೆ ಸರಕಾರ ಮುಂದಾಗಲಿ

3

Editorial: ಕುಡಿಯುವ ನೀರಿನ ಪರಿಶುದ್ಧತೆಯ ಪ್ರಶ್ನೆ ಬಾರದಿರಲಿ

1

Editorial: ಪಂಚಾಯತ್‌ ತೆರಿಗೆ ಸಂಗ್ರಹಕ್ಕೆ ಕಾನೂನು ರೂಪುಗೊಳ್ಳಲಿ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Monkey Disease: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

Monkey Disease: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

1-modi

Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

1-nidhi

Hosanagar; ಚಕ್ರಾನಗರ ಬಿಳಗಿನ ಮನೆಯಲ್ಲಿ ನಿಧಿ ಶೋಧ: ಬೃಹತ್ ನಿಲುವುಗಲ್ಲು ಧ್ವಂಸ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.