Election result 2023; ನಾಲ್ಕು ರಾಜ್ಯಗಳ ಫಲಿತಾಂಶ ಆಡಳಿತದಲ್ಲಿದ್ದ ಪಕ್ಷಗಳಿಗೆ ಪಾಠ
Team Udayavani, Dec 4, 2023, 5:55 AM IST
ಪಂಚರಾಜ್ಯಗಳಲ್ಲಿ ಮಿಜೋರಾಂ ಹೊರತುಪಡಿಸಿ, ಉಳಿದ ನಾಲ್ಕು ರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಮೂರರಲ್ಲಿ, ಕಾಂಗ್ರೆಸ್ ಒಂದರಲ್ಲಿ ಗೆಲುವು ಸಾಧಿಸಿವೆ. ಮಧ್ಯಪ್ರದೇಶ ಹೊರತುಪಡಿಸಿ, ಉಳಿದ ರಾಜ್ಯಗಳಲ್ಲಿ ಆಡಳಿತ ಪಕ್ಷಗಳಿಗೆ ಮತದಾರ ತಕ್ಕ ಪಾಠವನ್ನೇ ಕಲಿಸಿದ್ದಾನೆ. ಅಂದರೆ, ಮೂರು ರಾಜ್ಯಗಳಲ್ಲಿಯೂ ಆಡಳಿತದಲ್ಲಿದ್ದ ಪಕ್ಷಗಳನ್ನು ಮತದಾರ ಸಾರಾಸಗಟಾಗಿ ತಿರಸ್ಕಾರ ಮಾಡಿದ್ದಾನೆ.
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿತ್ತು. ಆರಂಭದಿಂದಲೂ ಕಂಡು ಬಂದ ಆಂತರಿಕ ಕಿತ್ತಾಟದಿಂದ ಎಲ್ಲೋ ಒಂದು ಕಡೆ ಮತದಾರ ಬೇಸರ ವ್ಯಕ್ತಪಡಿಸಿದ್ದಾನೆ. ಇಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರ ನಡುವೆ ಇಲ್ಲಿ ಆಂತರಿಕ ಸಂಘರ್ಷ ನಡೆದೇ ಇತ್ತು. ಆದರೆ ಇಲ್ಲಿ ತನ್ನ ಆಂತರಿಕ ಕಿತ್ತಾಟವನ್ನು ಹೋಗಲಾಡಿಸಿ ಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸಲೇ ಇಲ್ಲ. ಇದು ಆ ಪಕ್ಷಕ್ಕೆ ಬಹುವಾಗಿ ಕಾಡಿದೆ. ಇನ್ನು ಛತ್ತೀಸ್‌ಗಢದಲ್ಲಿ ಚುನಾವಣೆಗೂ ಮುನ್ನ ಮರಳಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಬಗ್ಗೆ ಮಾತುಗಳಿದ್ದವು. ಇಲ್ಲಿ ಮುಖ್ಯಮಂತ್ರಿಯಾಗಿದ್ದ ಭೂಪೇಶ್ ಬಘೇಲ್, ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಇವರ ಐದು ವರ್ಷದ ಆಡಳಿ ತದ ಬಗ್ಗೆ ಜನರಲ್ಲಿಯೂ ಉತ್ತಮ ಅಭಿಪ್ರಾಯಗಳಿವೆ ಎಂದೇ ಹೇಳಲಾ ಗು ತ್ತಿತ್ತು. ರಾಜ್ಯದಲ್ಲಿ ನೀಡಿದ್ದ ಯೋಜನೆಗಳ ಬಗ್ಗೆ ಸದಭಿಪ್ರಾಯ ಗಳಿದ್ದವು. ಆದರೆ ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂದರೆ ಅದೊಂದು ಜಿದ್ದಾ ಜಿದ್ದಿನ ಸಮರ. ಇಲ್ಲಿ ಹೋರಾಟ ನಡೆಸುತ್ತಲೇ ಇರಬೇಕು. ಒಂದು ವೇಳೆ ಕೊಂಚ ಮೈಮರೆತರೂ, ಸೋಲು ಗ್ಯಾರಂಟಿ ಎಂಬುದನ್ನು ಈ ರಾಜ್ಯ ದಲ್ಲಿ ನೋಡ ಬಹುದಾಗಿದೆ. ಇಲ್ಲಿನ ಕಾಂಗ್ರೆಸ್ ಸೋಲಿಗೆ ಅತೀಯಾದ ಆತ್ಮವಿಶ್ವಾಸವೂ ಕಾರಣ ಎಂಬ ವಿಶ್ಲೇಷಣೆಗಳೂ ಇವೆ. ಹೀಗಾಗಿ ಆಡಳಿತದಲ್ಲಿರುವವರು ಮತ ದಾರ ರನ್ನು ಲಘುವಾಗಿ ಪರಿಗಣಿಸಬಾರದು ಎಂಬುದು ಇಲ್ಲಿ ಸಾಬೀತಾಗಿದೆ.
ತೆಲಂಗಾಣದಲ್ಲಿಯೂ ಮತದಾರ ಆಡಳಿತದಲ್ಲಿದ್ದ ಬಿಆರ್‌ಎಸ್ ಅನ್ನು ತಿರಸ್ಕರಿಸಿದ್ದಾನೆ. ಇದು ಕಳೆದ 10 ವರ್ಷದಿಂದ ಆಡಳಿತದಲ್ಲಿತ್ತು. ಮುಖ್ಯ ಮಂತ್ರಿ ಕೆ.ಚಂದ್ರ ಶೇಖರ ರಾವ್, ಜನರಿಂದ ದೂರ ಸರಿಯುತ್ತಿದ್ದಾರೆ ಎಂಬ ಭಾವನೆ ವ್ಯಕ್ತವಾಗಿತ್ತು. ತೋಟದ ಮನೆಯಿಂದ ಆಡಳಿತ ನಡೆಸುತ್ತಿ ದ್ದಾರೆ ಎಂಬ ಆರೋಪ ಗಳೂ ಕಾಂಗ್ರೆಸ್, ಬಿಜೆಪಿ ಕಡೆಯಿಂದ ಕೇಳಿಬರು ತ್ತಿದ್ದವು. ಆದರೆ ಈ ಯಾವ ಆರೋಪಗಳ ಬಗ್ಗೆ ಚಂದ್ರಶೇಖರ ರಾವ್ ಗಂಭೀರ ವಾಗಿ ಪರಿಗಣಿಸಲೇ ಇಲ್ಲ. ಇಲ್ಲಿಯೂ ಮತದಾರರು ತಮ್ಮನ್ನು ಕೈಬಿಡು ವುದಿಲ್ಲ ಎಂದೇ ಆತ್ಮವಿಶ್ವಾಸ ದಲ್ಲಿದ್ದರು. ಇಲ್ಲಿ ಮತದಾರ ಸೋಲಿನ ಪಾಠ ಕಲಿಸಿದ್ದಾನೆ. ಮಧ್ಯಪ್ರದೇಶದಲ್ಲಿ ಮಾತ್ರ ಆಡಳಿತ ವಿರೋಧಿ ಅಲೆ ಮಧ್ಯೆಯೂ ಆಡಳಿತ ಪಕ್ಷ ವಾಪಸ್ ಅಧಿಕಾರ ಕ್ಕೇರಿದೆ. ಇಲ್ಲಿ ವಿಪಕ್ಷ ಜನ ರನ್ನು ತಲುಪುವಲ್ಲಿ ವಿಫಲವಾಗಿದೆ. ಆಡಳಿತದಲ್ಲಿದ್ದ ಪಕ್ಷ, ಚುನಾವಣೆ ಯನ್ನು ಹೆಚ್ಚು ವೃತ್ತಿಪರತೆ ಯಿಂದ ಎದುರಿಸಿ ಗೆಲುವು ಸಾಧಿಸಿದೆ. ಏನೇ ಆಗಲಿ ಇಡೀ ಚುನಾವಣೆಯಲ್ಲಿ ಮತದಾರನೇ ರಾಜ. ಆತನಿಗೆ ತಿಳಿದಂತೆಯೇ ವರ್ತಿಸುತ್ತಾನೆ. ತನ್ನನ್ನು ಲಘುವಾಗಿ ಪರಿಗಣಿಸಬೇಡಿ ಎಂಬುದನ್ನು ಆತ ಪ್ರತೀ ಚುನಾ ವಣೆಯಲ್ಲೂ ತೋರಿಸುತ್ತಾನೆ. ಲಘುವಾಗಿ ಪರಿಗಣಿಸಿದರೆ ತಕ್ಕ ಪಾಠ ಕಲಿಸುತ್ತಾನೆ. ಇದಕ್ಕೆ ಈ ನಾಲ್ಕು ಚುನಾವಣೆಗಳ ಫಲಿತಾಂಶವೇ ಸಾಕ್ಷಿಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.