![Udupi: ಗೀತಾರ್ಥ ಚಿಂತನೆ-187: ಭಗವಂತನಿಗಿಲ್ಲದ ಸ್ವಾಭಾವಿಕ, ನೈಮಿತ್ತಿಕ ನಾಶ](https://www.udayavani.com/wp-content/uploads/2025/02/puttige-shree-1-415x250.jpg)
![Udupi: ಗೀತಾರ್ಥ ಚಿಂತನೆ-187: ಭಗವಂತನಿಗಿಲ್ಲದ ಸ್ವಾಭಾವಿಕ, ನೈಮಿತ್ತಿಕ ನಾಶ](https://www.udayavani.com/wp-content/uploads/2025/02/puttige-shree-1-415x250.jpg)
Team Udayavani, Jan 29, 2025, 6:00 AM IST
ಅಮೆರಿಕದ ಹಿತಾಸಕ್ತಿಗೆ ತೊಂದರೆಯನ್ನುಂಟು ಮಾಡುವ ವಿದೇಶಗಳ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭದಿಂದಲೂ ಹೇಳುತ್ತಿದ್ದು, ಇದೀಗ ಭಾರತದ ವಿರುದ್ಧವೂ ಈ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರವಹಿಸಿಕೊಂಡ ದಿನದಿಂದಲೇ ತಮ್ಮ ಚುನಾವಣ ಪೂರ್ವ ಭರವಸೆ, ಘೋಷಣೆಗಳನ್ನು ಒಂದೊಂದಾಗಿಯೇ ಜಾರಿಗೊಳಿಸುವ ಮೂಲಕ ಟ್ರಂಪ್ ಅಮೆರಿಕವನ್ನು ಮತ್ತೊಮ್ಮೆ ವಿಶ್ವದ ಶ್ರೀಮಂತ ಮತ್ತು ಶಕ್ತಿಶಾಲಿ ರಾಷ್ಟ್ರನ್ನಾಗಿಸುವ ಸಂಕಲ್ಪವನ್ನು ಈಡೇರಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇರಿಸಿದ್ದಾರೆ. ವಿದೇಶಗಳಿಂದ ಆಮದಾಗುತ್ತಿರುವ ಉತ್ಪನ್ನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಿಧಿಸಲು ಟ್ರಂಪ್ ಮುಂದಾಗಿದ್ದಾರೆ. ಟ್ರಂಪ್‌ರ ಈ ನಡೆ ಜಾಗತಿಕ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ. ದೇಶದ ಹಿತಾಸಕ್ತಿ ರಕ್ಷಣೆಯ ನೆಪದಲ್ಲಿ ಜಾಗತಿಕ ರಾಷ್ಟ್ರಗಳ ಮೇಲೆ ಸವಾರಿ ಮಾಡಲು ಹೊರಟಿರುವ ಟ್ರಂಪ್ ನಡೆ ವಿಶ್ವ ರಾಷ್ಟ್ರಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಈಗಾಗಲೇ ಅಮೆರಿಕದಲ್ಲಿ ನೆಲೆಸಿರುವ ಎಲ್ಲ ಅಕ್ರಮ ವಲಸಿಗರನ್ನು ಸಾಮೂಹಿಕವಾಗಿ ಗಡೀಪಾರು ಮಾಡುವ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿರುವ ಟ್ರಂಪ್ ಆಡಳಿತ, ತನ್ನ ಈ ನೀತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ರಾಷ್ಟ್ರಗಳ ವಿರುದ್ಧ ಹೆಚ್ಚಿನ ತೆರಿಗೆ ವಿಧಿಸುವ ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ. ಅಮೆರಿಕದ ಈ ತೆರಿಗೆ ಬೆದರಿಕೆಗೆ ಕೊಲಂಬಿಯಾ ಈಗಾಗಲೇ ಮಣಿದಿದೆ. ಈಗ ಇದೇ ತಂತ್ರವನ್ನು ಕೆನಡಾ ಮತ್ತು ಮೆಕ್ಸಿಕೋದ ವಿರುದ್ಧವೂ ಅನುಸರಿಸಲು ಟ್ರಂಪ್ ಮುಂದಾಗಿದ್ದಾರೆ. ಡಾಲರ್‌ಗೆ ಪರ್ಯಾಯವಾಗಿ ಪ್ರತ್ಯೇಕ ಕರೆನ್ಸಿ ಹೊಂದುವ ಬ್ರಿಕ್ಸ್ ರಾಷ್ಟ್ರಗಳ ಚಿಂತನೆಯ ವಿರುದ್ಧ ಚುನಾವಣೆಗೂ ಮೊದಲು ಕೆಂಡಕಾರಿದ್ದ ಟ್ರಂಪ್, ಭಾರತವನ್ನು ಒಳಗೊಂಡ ಬ್ರಿಕ್ಸ್ ರಾಷ್ಟ್ರಗಳ ಉತ್ಪನ್ನಗಳಿಗೆ ಶೇ.100ರಷ್ಟು ತೆರಿಗೆ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಳೆದ ಕೆಲವು ವರ್ಷಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಒಂದಿಷ್ಟು ಬಲಯುತವಾಗಿ ಮುನ್ನಡೆಯುತ್ತಿರುವ ಚೀನ, ಭಾರತ ಮತ್ತು ಬ್ರೆಜಿಲ್ ರಾಷ್ಟ್ರಗಳ ವಿರುದ್ಧವೂ ಸುಂಕ ಸಮರ ನಡೆಸಲು ಮುಂದಾಗಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಸೌಹಾರ್ದ ಮಾತುಕತೆ ನಡೆಸಿ, ದ್ವಿಪಕ್ಷೀಯ ಸಂಬಂಧ ವೃದ್ಧಿಯ ಒಲವು ವ್ಯಕ್ತಪಡಿಸಿದ್ದರು. ಇದಾದ ಬಳಿಕ ಅಕ್ರಮ ವಲಸಿಗರ ವಿಷಯದಲ್ಲಿ ಅಮೆರಿಕ ಕೈಗೊಂಡ ನಿರ್ಧಾರಕ್ಕೆ ಭಾರತ ಸಹಕಾರ ನೀಡಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದರು.
ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಪ್ಲೋರಿಡಾದಲ್ಲಿ ರಿಪಬ್ಲಿಕನ್ನರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಅಮೆರಿಕದ ಹಿತಾಸಕ್ತಿಗೆ ಹಾನಿ ಉಂಟು ಮಾಡುವ ರಾಷ್ಟ್ರಗಳಿಂದ ಆಮದಾಗುವ ಎಲ್ಲ ತೆರನಾದ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇದೇ ವೇಳೆ ಚೀನ, ಭಾರತ, ಬ್ರೆಜಿಲ್ ರಾಷ್ಟ್ರಗಳನ್ನು ಹೆಸರಿಸಿರುವುದು ಕೂಡ ಅಚ್ಚರಿಗೆ ಕಾರಣವಾಗಿದೆ.
ಡೊನಾಲ್ಡ್ ಟ್ರಂಪ್ ಇಂತಹ ನಿರ್ಧಾರ ಕೈಗೊಂಡದ್ದೇ ಆದಲ್ಲಿ ವಾಣಿಜ್ಯ, ವ್ಯವಹಾರ, ಕೈಗಾರಿಕೆ ಕ್ಷೇತ್ರದಲ್ಲಿ ಅಮೆರಿಕದೊಂದಿಗೆ ಅತ್ಯುತ್ತಮ ಸಹಭಾಗಿತ್ವವನ್ನು ಹೊಂದಿರುವ ಭಾರತದ ಮೇಲೆ ಇದು ತೀರಾ ವ್ಯತಿರಿಕ್ತ ಪರಿಣಾಮ ಬೀರಲಿದೆ. ಟ್ರಂಪ್ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ ಮಾಸಾಂತ್ಯದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾವಿಸುವ ಸಾಧ್ಯತೆ ಇದೆ. ಆದರೆ ಕಟ್ಟಾ ರಾಷ್ಟ್ರವಾದಿಯಾಗಿರುವ ಟ್ರಂಪ್ ಅವರ ಮನವೊಲಿಸುವಲ್ಲಿ ಮೋದಿ ಯಶಸ್ವಿಯಾಗುವರೆ ಎಂಬುದೇ ಸದ್ಯದ ಕುತೂಹಲ.
Udupi: ಗೀತಾರ್ಥ ಚಿಂತನೆ-187: ಭಗವಂತನಿಗಿಲ್ಲದ ಸ್ವಾಭಾವಿಕ, ನೈಮಿತ್ತಿಕ ನಾಶ
Modi-Trump ಮೆಗಾ ಡೀಲ್; ರಕ್ಷಣೆ, ಇಂಧನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಹಭಾಗಿತ್ವ ಚರ್ಚೆ
Mangaluru: ಲಕ್ಷದ್ವೀಪದಿಂದ ಮಂಗಳೂರಿಗೆ ಬಂದ “ಚೆರಿಯಪಾನಿ’
Manipal: ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮನ್ನಣೆಗೆ ಮಾಹೆ ಚಿಂತನೆ: ಡಾ| ಎಂ.ಡಿ. ವೆಂಕಟೇಶ್
Kaup: ಹರಿದ್ವಾರದಿಂದ ನವಕುಂಭಗಳಲ್ಲಿ ತರಲಾದ ಗಂಗಾಜಲಕ್ಕೆ ಅದ್ದೂರಿ ಸ್ವಾಗತ
You seem to have an Ad Blocker on.
To continue reading, please turn it off or whitelist Udayavani.