ಫೇಸ್‌ಬುಕ್-ರಿಲಯನ್ಸ್ ಸಹಭಾಗಿತ್ವ ಬದಲಾಗುವುದೇ ಡಿಜಿಟಲ್ ದಿಕ್ಕು?
Team Udayavani, Apr 24, 2020, 11:31 AM IST
ಪ್ರಪಂಚದ ಅತಿದೊಡ್ಡ ಸೋಷಿಯಲ್ ನೆಟ್ ವರ್ಕಿಂಗ್ ಕಂಪೆನಿ ಫೇಸ್‌ಬುಕ್, ರಿಲಯನ್ಸ್ ಜಿಯೋದಲ್ಲಿ 43,574 ಕೋಟಿ ರೂ ಹೂಡಿಕೆ ಮಾಡಿ, ಅದರಲ್ಲಿನ ಅಜಮಾಸು 10 ಪ್ರತಿಶತ ಪಾಲುದಾರಿಕೆ ಪಡೆದಿದೆ. ಫೇಸ್‌ಬುಕ್ ಇದುವರೆಗೂ ಯಾವೊಂದು ಕಂಪೆನಿಯಲ್ಲೂ ಇಷ್ಟೊಂದು ಬೃಹತ್ ಪ್ರಮಾಣದ ಆರ್ಥಿಕ ಹೂಡಿಕೆ ಮಾಡಿದ್ದಿಲ್ಲ. ಭಾರತದ ನಂಬರ್ 1 ಟೆಲಿಕಾಂ ಕಂಪೆನಿ ಮತ್ತು ಜಗತ್ತಿನ ನಂಬರ್ 1 ಸೋಷಿಯಲ್ ನೆಟ್ ವರ್ಕಿಂಗ್ ಕಂಪೆನಿಯ ಈ ಸಹಭಾಗಿತ್ವವು ಭಾರತದ ಟೆಲಿಕಾಂ ವಲಯದಲ್ಲಷ್ಟೇ ಅಲ್ಲದೇ, ದೇಶದ ಇ-ಕಾಮರ್ಸ್, ಇ-ಪೇಮೆಂಟ್ ಕ್ಷೇತ್ರದಲ್ಲೂ ಮಹತ್ತರ ಬದಲಾವಣೆಯ ಸೂಚನೆ ನೀಡುತ್ತಿದೆ.
ಇಲ್ಲಿ ನೆನಪಿಸಲೇಬೇಕಾದ ಸಂಗತಿಯೆಂದರೆ, ಫೇಸ್‌ಬುಕ್ ಅಷ್ಟೇ ಅಲ್ಲದೇ, ಅದರ ಅಂಗವಾದ ವಾಟ್ಸ್ ಆ್ಯಪ್‌ನ ಗ್ರಾಹಕರೂ ದೇಶದಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿದ್ದಾರೆ. ಇದೇ ವೇಳೆಯಲ್ಲೇ ವಾಟ್ಸ್ ಆ್ಯಪ್ ಕೂಡ ಪೇಟಿಎಂ, ಗೂಗಲ್‌ಪೇನಂತೆ ಪೇಮೆಂಟ್ ಸೇವೆಗಳನ್ನು ಆರಂಭಿಸುವ ತಯಾರಿಯಲ್ಲಿದೆ. ಹೀಗಾಗಿ, ಇದೊಂದು ಅಭೂತಪೂರ್ವ ಒಪ್ಪಂದವಾಗಿದ್ದು, ಸಂವಹನ, ಇ-ಸೇವೆ ವಲಯಕ್ಕೆ ಹೊಸ ಸವಾಲನ್ನಂತೂ ಎದುರಿಟ್ಟಿದೆ. ಜಿಯೋ ಬಂದ ನಂತರ ದೇಶದ ಟೆಲಿಕಾಂ ಕ್ಷೇತ್ರದ ದಿಕ್ಕೇ ಬದಲಾಗಿದೆ ಎನ್ನುವುದು ಸತ್ಯ. ಅತ್ಯಂತ ವೇಗದ ಅಂತರ್ಜಾಲ ಸೇವೆಯನ್ನು ಅತಿ ಅಗ್ಗದ ದರದಲ್ಲಿ ಪೂರೈಸಬಹುದೆಂದು ತೋರಿಸಿಕೊಟ್ಟ ಸಂಸ್ಥೆಯಿದು. ಅಲ್ಲಿಯವರೆಗೂ ಇತರೆ ಟೆಲಿಕಾಂ ಕಂಪೆನಿಗಳು 1 ಜಿಬಿ ಡೇಟಾಗೆ ಗ್ರಾಹಕರಿಂದ 150-200 ಪಡೆಯುತ್ತಿದ್ದವು! ಇಂಟರ್ನೆಟ್ ಎನ್ನುವುದು ಹಣವಿದ್ದವರಿಗಷ್ಟೇ ಎನ್ನುವಂಥ ಸ್ಥಿತಿಯಿತ್ತು. ಆದರೆ ಜಿಯೋ ಪ್ರವೇಶದ ನಂತರ, ದೇಶದ ಮೂಲೆಮೂಲೆಯ ಜನರ ಕೈಗೂ 4 ಜಿ ಸೇವೆ ಕೈಗೆಟುಕುವಂತಾಯಿತು. ತದನಂತರದಿಂದ, ಎಲ್ಲಾ ಟೆಲಿಕಾಂ ಕಂಪೆನಿಗಳೂ ಅಗ್ಗದ ಇಂಟರ್ನೆಟ್ ಸೇವೆ ಒದಗಿಸಲಾರಂಭಿಸಿದವು. ಇಂದು ಲಾಕ್‌ಡೌನ್ ಸಮಯದಲ್ಲಿ ಮನೆಮನೆಯಲ್ಲೂ ಅಗ್ಗದ ದರಲ್ಲಿ 4 ಜಿ ಸೌಲಭ್ಯ ಸಿಗುವಂತಾಗಿರುವುದರಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಜಿಯೋ ಪಾತ್ರ ಇದೆ.
ಇದೇನೇ ಇದ್ದರೂ, ಎಲ್ಲಕ್ಕಿಂತ ಮುಖ್ಯವಾಗಿ ಈ ಸಹಭಾಗಿತ್ವವು, ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇ-ಕಾಮರ್ಸ್ ವೇದಿಕೆ “ಜಿಯೋ ಮಾರ್ಟ್’ಗೆ ಬಹಳ ವೇಗ ಕೊಡುವ ಸಾಧ್ಯತೆಯಿದ್ದು, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂಥ ಕಂಪೆನಿಗಳಿಗೆ ಬಹುದೊಡ್ಡ ಸ್ಪರ್ಧೆ ಎದುರಾಗಲಿದೆ. 2018ರ ವೇಳೆಗೆ 30 ಶತಕೋಟಿ ಡಾಲರ್‌ಗಳಷ್ಟಿದ್ದ ದೇಶದ ಇ-ಕಾಮರ್ಸ್ ವ್ಯವಹಾರವು, 2028ರ ವೇಳೆಗೆ 200 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ. ಫೇಸ್‌ಬುಕ್‌ನ ಹೂಡಿಕೆಯಲ್ಲಿ 15 ಸಾವಿರ ಕೋಟಿ ರೂಪಾಯಿ ಜಿಯೋ ಜತೆಗೇ ಉಳಿಯಲಿದೆ. ಇದು ಬಹುದೊಡ್ಡ ಮೊತ್ತವಾಗಿದ್ದು, ಈ ಹಣವನ್ನು ಜಿಯೋ-ಮಾರ್ಟ್ ಬೆಳವಣಿಗೆಗೆ ಬಳಸಿಕೊಳ್ಳಲೂಬಹುದು.
ಇದೇ ವೇಳೆಯಲ್ಲೇ ಕೆಲವು ವರ್ಷಗಳಿಂದ ಫೇಸ್‌ಬುಕ್ ಎದುರಿಸುತ್ತಿರುವ ಆರೋಪವನ್ನೂ ನಾವು ಪರಿಗಣಿಸಬೇಕಿದೆ. ಆ ಸಂಸ್ಥೆ ಬಳಕೆದಾರರ ಡೇಟಾವನ್ನು ರಾಜಕೀಯ ಪಕ್ಷಗಳಿಗೆ, ಕಂಪೆನಿಗಳಿಗೆ ಮಾರಿಕೊಂಡು ಟೀಕೆಗೊಳಗಾದ ಉದಾಹರಣೆಯೂ ನಮ್ಮೆದುರಿಗಿದೆ. ಇಂದು ಆ ಕಂಪೆನಿಯ ಬಳಿ ದೇಶದ ಕೋಟ್ಯಂತರ ಜನರ ಡೇಟಾ ಇದೆ. ಜಿಯೋದೊಂದಿಗಿನ ಸಹಭಾಗಿತ್ವದಿಂದಾಗಿ ದೇಶದಲ್ಲಿ ಅದರ ಉಪಸ್ಥಿತಿ ಹೆಚ್ಚಲಿದೆ. ಹೀಗಿರುವಾಗ, ಭಾರತೀಯರ ಡೇಟಾ ಪ್ರೈವೆಸಿಗೆ ಎದುರಾಗದಂತೆ ಎಚ್ಚರಿಕೆ ವಹಿಸುವ ಅಗತ್ಯವೂ ಇದೆ. ಈ ವಿಚಾರದಲ್ಲಿ ಸರಕಾರಗಳು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಬೇಕಿದೆ. ಒಟ್ಟಲ್ಲಿ, ಈ ಸಹಭಾಗಿತ್ವವು, ದೇಶದ ಡಿಜಿಟಲ್ ವಲಯದಲ್ಲಿ ಯಾವ ರೀತಿಯ ಬದಲಾವಣೆ ತರಲಿದೆ ಎನ್ನುವ ಪ್ರಶ್ನೆಗೆ ಸಮಯವೇ ಉತ್ತರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.