ಕಣಿವೆಯಲ್ಲಿ ಉಗ್ರ ನಿಗ್ರಹ, ಬದಲಾಗಲಿ ರಣತಂತ್ರ


Team Udayavani, Jun 27, 2018, 11:21 AM IST

kashmir.jpg

ಪ್ರತಿಯೊಂದು ಶವ ಯಾತ್ರೆಯ ಸಂದರ್ಭದಲ್ಲೂ ಉಗ್ರ ಸಂಘಟನೆಗಳು ಅದನ್ನು “ರಿಕ್ರೂಟಿಂಗ್‌ ಗ್ರೌಂಡ್‌’ ಮಾಡಿಕೊಂಡುಬಿಟ್ಟಿವೆ. ಈ ಶವಯಾತ್ರೆಯ ವಿಡಿಯೋಗಳ‌ು ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಸಾರವಾಗುತ್ತವೆ. 

ಕಾಶ್ಮೀರ ಕಣಿವೆಯಲ್ಲಿ ಉಗ್ರವಾದವನ್ನು ಹತ್ತಿಕ್ಕುವ ಕಾರ್ಯದಲ್ಲಿ ಕೇಂದ್ರ ಸರಕಾರ ಪ್ರಮುಖ ಹೆಜ್ಜೆಗಳನ್ನು ಇಡುತ್ತಲೇ ಇದೆಯಾದರೂ, ಕಣಿವೆಯು ನಾನಾ ವಿಧದಲ್ಲಿ ಭದ್ರತಾಪಡೆಗಳಿಗೆ ಸವಾಲು ಒಡ್ಡುತ್ತಲೇ ಇದೆ. “ಆಪರೇಷನ್‌ ಆಲೌಟ್‌’ ಹೆಸರಲ್ಲಿ ನಮ್ಮ ಭದ್ರತಾ ಪಡೆ ಅನೇಕ ತಿಂಗಳಿಂದ ಕಾಶ್ಮೀರ ಕಣಿವೆಯಲ್ಲಿ ಆತಂಕವಾದಿಗಳ ಹುಡುಕಾಟ ಮತ್ತು ಅವರ ನಿರ್ನಾಮದ ಕಾರ್ಯಾಚರಣೆ ನಡೆಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಬಂದ ಬಳಿಕ ಸಹಜವಾಗಿಯೇ ರಕ್ಷಣಾ ತಂತ್ರಗಳಲ್ಲಿ, ರಣ ನೀತಿಗಳಲ್ಲಿ ವೇಗವಾಗಿ ಬದಲಾವಣೆಗಳಾಗುವ ನಿರೀಕ್ಷೆ ಹೆಚ್ಚಿದೆ.  

ರಾಜ್ಯಪಾಲರ ಆಡಳಿತವು ಕೇಂದ್ರ ಸರಕಾರಕ್ಕೆ ಮತ್ತು ಸೈನ್ಯದ ಕಾರ್ಯಾ ಚರಣೆಗಳಿಗೆ ಅಡ್ಡಗಾಲಾಗುತ್ತಿದ್ದ ಅಡೆತಡೆಗಳನ್ನು ನಿವಾರಿಸ ಬಲ್ಲದು. ಇತ್ತೀಚೆಗೆ ಕಣಿವೆಯಿಂದ ಹೊರಬರುತ್ತಿರುವ ಕೆಲ ವರದಿಗಳು ಆಪರೇಷನ್‌ ಆಲೌಟ್‌ನ ಮುಂದುವರಿದ ಭಾಗವಾಗಿ, ಕಾರ್ಯಾಚರಣೆಯಲ್ಲಿ ಮೃತಪಟ್ಟ ಉಗ್ರರ ಶವ ಯಾತ್ರೆಯ ಮೇಲೆ ನಿರ್ಬಂಧ ಹೇರಲು ಸೇನೆ ಯೋಚಿಸುತ್ತಿದೆ ಎನ್ನುತ್ತಿವೆ. ಈ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರದ ಭದ್ರತಾ ಪಡೆಗಳ ಅಧಿಕಾರಿಗಳು ಅನುಷ್ಠಾನದ ರೂಪುರೇಷೆಗಳನ್ನು ರಚಿಸುತ್ತಿದ್ದಾರೆ, ಅಲ್ಲದೇ ಕಾರ್ಯಾ ಚರಣೆಯಲ್ಲಿ ಹತರಾಗುವ ಉಗ್ರರನ್ನು ಕೆಲ ಸಂಬಂಧಿಕರ ಸಮ್ಮುಖದಲ್ಲಿ ಸೇನೆಯೇ ಹೂಳಲಿದೆ ಎನ್ನುವುದು ವರದಿಗಳ ಸಾರ. 

ಸದ್ಯಕ್ಕಂತೂ ವಿದೇಶಿ ಉಗ್ರರ ಶವ ಮೆರವಣಿಗೆಯ ಮೇಲೆ ಈ ರೀತಿಯ ನಿರ್ಬಂಧವಿದೆ. ಒಂದು ವೇಳೆ ದೇಶ ದಲ್ಲಿನ ಉಗ್ರರ ವಿಷಯ ದಲ್ಲೂ ಈ ನಿಯಮ ಲಾಗೂ ಆದರೆ ನಿಜಕ್ಕೂ ಕಾಶ್ಮೀರದಲ್ಲಿ ಬದಲಾವಣೆ ಕಾಣಬಹುದು. 

ಸತ್ಯವೇನೆಂದರೆ ಉಗ್ರರ ಶವವನ್ನು ಅವರ ಮನೆಯ ವರಿಗೆ ಒಪ್ಪಿಸಿದಾಗ ಅಂತಿಮ ಸಂಸ್ಕಾರದ ವೇಳೆ ಸಾವಿರಾರು ಯುವಕರು ಒಂದೆಡೆ ಜಮೆ ಆಗುತ್ತಾರೆ. ಅವರ ನಡುವೆ ಪ್ರತ್ಯೇಕತಾ ವಾದಿಗಳು ಮತ್ತು ಉಗ್ರರು ನುಸುಳಿ ಸೇನೆಯ ವಿರುದ್ಧ ಯುವಕರ ತಲೆಕೆಡಿ ಸುವ ಕೆಲಸ ನಿರ್ವಿಘ್ನವಾಗಿ ನಡೆಯುತ್ತದೆ. ಇದೊಂದು ರೀತಿಯಲ್ಲಿ ಭಾರತೀಯ ಸೇನೆಯ ವಿರುದ್ಧದ ಉಗ್ರ ಸಂಘಟನೆಗಳ ಮುಖ್ಯ ರಣ ತಂತ್ರವಾಗಿ ಬದಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಕೋಪಾವಿಷ್ಠ ಯುವಕರು ಸೇರಿರುವಾಗ ಉಗ್ರರನ್ನು ಪತ್ತೆ ಹಚ್ಚುವುದು ಅಥವಾ ನುಗ್ಗಿ ಅವರನ್ನು ಹಿಡಿಯುವುದು ಸುಲಭದ ಮಾತಲ್ಲ. ಇಂಥ ಸಂದರ್ಭಗಳಲ್ಲಿ ಸಹಜ ವಾಗಿಯೇ ಭಾವೋದ್ವೇಗ ತೀವ್ರವಾಗಿ ರುತ್ತದಾದ್ದರಿಂದ ಯುವಕರು ಆವೇಶದ ಭರದಲ್ಲಿ ಉಗ್ರ ಸಂಘಟನೆಗಳ ಜಾಲಕ್ಕೆ ಸಿಲುಕಿಬಿಡುತ್ತಾರೆ. ಬುರ್ಹಾನ್‌ ವಾನಿಯ ಶವ ಯಾತ್ರೆಯ ನಂತರ ಅದರಲ್ಲಿ ಪಾಲ್ಗೊಂಡ 5-7 ಯುವಕರು ಹಿಜ್ಬುಲ್‌ ಮುಜಾಹಿದ್ದೀನ್‌ ಸೇರಿದ್ದಾರೆಂದು ತಿಳಿದು ಬಂದಿದೆ. ತದ
ನಂತರದ ಪ್ರತಿಯೊಂದು ಶವ ಯಾತ್ರೆಯ ಸಂದರ್ಭದಲ್ಲೂ ಉಗ್ರ ಸಂಘಟನೆಗಳು ಅದನ್ನು “ರಿಕ್ರೂಟಿಂಗ್‌ ಗ್ರೌಂಡ್‌’ ಮಾಡಿಕೊಂಡುಬಿಟ್ಟಿವೆ. ಈ ಶವಯಾತ್ರೆಯ ವಿಡಿಯೋಗಳ‌ು ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಸಾರವಾಗುತ್ತವೆ. ಇದು ದೇಶದ ಇತರೆ ರಾಜ್ಯಗಳ ಯುವಕರನ್ನು ಬ್ರೇನ್‌ವಾಶ್‌ ಮಾಡುವ ತಂತ್ರವೂ ಹೌದು. ಈ ಕಾರಣಕ್ಕಾಗಿಯೇ ಕೇಂದ್ರ ಗೃಹ ಸಚಿವಾಲಯ ಮತ್ತು ಜಮ್ಮು-ಕಾಶ್ಮೀರದ ಸುರûಾ ಏಜೆನ್ಸಿಗಳ ಅಧಿಕಾರಿಗಳು ಇಂಥ ಶವಯಾತ್ರೆಗಳ ಮೇಲೆ ನಿರ್ಬಂಧ ಹೇರುವಂತೆ ಶಿಫಾರಸು ಮಾಡುತ್ತಲೇ ಬಂದಿವೆ. ದೇಶದ ಹಿತಾಸಕ್ತಿಯ ದೃಷ್ಟಿಯಿಂದ ನೋಡುವುದಾದರೆ ಇಂಥದ್ದೊಂದು ನಿರ್ಬಂಧ ಜಾರಿಯಾಗಬೇಕು.

 ಎಲ್ಲಿಯವರೆಗೂ ಸ್ಥಳೀಯ ಯುವಕರು ಉಗ್ರ ಸಂಘಟನೆಗಳ ಜಾಲಕ್ಕೆ ಸಿಲುಕುವುದನ್ನು ತಡೆಯಲು ಆಗುವುದಿಲ್ಲವೋ ಅಲ್ಲಿಯವರೆಗೂ ಕಾಶ್ಮೀರ ಶಾಂತವಾಗಲಾರದು. ಒಬ್ಬ ಉಗ್ರನನ್ನು ಹೊಡೆದುರುಳಿಸಿದಾಗ ಇನ್ನೈದು ಉಗ್ರರು ಹುಟ್ಟಿಕೊಂಡರೆ ಸೇನೆಗೆ ಸಂಕಷ್ಟ ಹೆಚ್ಚುತ್ತಲೇ ಹೋಗುತ್ತದೆ. 

ಶವ ಹೂಳುವ ಸಮಯದಲ್ಲಿ ಅಲ್ಲಿ ಮೃತ ಉಗ್ರನ ಕೆಲ ಸಂಬಂಧಿಕರು ಇದ್ದರೆ ಅವರಿಚ್ಛೆಗೆ ಅನುಗುಣವಾದ ರೀತಿಯಲ್ಲಿ ದಫ‌ನ ಕಾರ್ಯ ಮಾಡಬಹುದು. ಆದರೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದಾಗ ಆ ಕಾರ್ಯ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತದೇ ಎಂದರೆ, ಅದು ಉಗ್ರರ ಹುಟ್ಟಿಕೊಳ್ಳುವ ಸ್ಥಳವಾಗಿಬಿಡುತ್ತದೆಂದರೆ ಅದನ್ನು ಹತ್ತಿಕ್ಕುವ ಕೆಲಸ ಆಗಲೇಬೇಕು.

ಟಾಪ್ ನ್ಯೂಸ್

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

ಭಾರತದ ಪ್ರಬುದ್ಧ ನಡೆಗೆ ಮೆತ್ತಗಾದ ಕೆನಡಾ ಸರಕಾರ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.