ಕೋವಿಡ್ ವಿರುದ್ಧದ ಹೋರಾಟ, ಗಮನಾರ್ಹ ವೇಗ
Team Udayavani, Dec 11, 2020, 5:58 AM IST
ಸಾಂದರ್ಭಿಕ ಚಿತ್ರ
ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಜಗತ್ತು ಈಗ ಮಹತ್ವಪೂರ್ಣ ಚರಣವನ್ನು ತಲುಪಿದೆ. ಜಗತ್ತಿನಾದ್ಯಂತ ಲಸಿಕೆಗಳ ಮೇಲಿನ ಸಂಶೋಧನೆಗಳು, ಪ್ರಯೋಗಗಳು ವೇಗವಾಗಿ ನಡೆದಿವೆ. ಹಲವು ಲಸಿಕೆಗಳು 90 ಪ್ರತಿಶತಕ್ಕೂ ಅಧಿಕ ಫಲಪ್ರದವಾಗಿದೆ ಎನ್ನಲಾಗುತ್ತಿದೆ. ಫೈಜರ್ ಮತ್ತು ಬಯೋಎನ್‌ಟೆಕ್ ಸಿದ್ಧಪಡಿಸಿದ ಲಸಿಕೆಯನ್ನು ಮೊದಲ ಬಾರಿ ಸಾರ್ವಜನಿಕ ಬಳಕೆಗೆ ಅನುಮೋದಿಸುವ ಮೂಲಕ, ಲಸಿಕೆ ವಿತರಣೆಯನ್ನು ಆರಂಭಿಸಿದ ಪ್ರಥಮ ಪಶ್ಚಿಮ ದೇಶವಾಗಿ ಬದಲಾಗಿದೆ ಬ್ರಿಟನ್. ಆದಾಗ್ಯೂ ರಷ್ಯಾ ಈಗಾಗಲೇ ತನ್ನ ಸ್ಪುಟ್ನಿಕ್ ಲಸಿಕೆಯ ಅಭಿಯಾನವನ್ನು ಆರಂಭಿಸಿದೆ ಎನ್ನಲಾಗುತ್ತದಾದರೂ, ಫಲಪ್ರದ, ಪಾರದರ್ಶಕತೆಯ ಕೊರತೆಯಿಂದಾಗಿ ಆ ಲಸಿಕೆ ಹಾಗೂ ಅದಕ್ಕೆ ಅನುಮತಿ ನೀಡುವ ವಿಚಾರದಲ್ಲಿ ಜಾಗತಿಕ ಸ್ತರದಲ್ಲಿ ಅಷ್ಟೊಂದು ಆಶಾದಾಯಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಒಂದೆಡೆ ಬ್ರಿಟನ್‌ನಲ್ಲಿ ಲಸಿಕೆ ಬಳಕೆಗೆ ಅನುಮತಿ ದೊರೆಯುತ್ತಿರುವಂತೆಯೇ, ಈ ಸಂಗತಿ ಜಾಗತಿಕ ಕೋವಿಡ್ ಹಾಟ್‌ಸ್ಪಾಟ್ ಅಮೆರಿಕದ ಮೇಲೂ ಒತ್ತಡ ತಂದಿದೆ. ಈ ಮಹಾಮಾರಿಯಿಂದಾಗಿ ಅಮೆರಿಕದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸಾವನ್ನಪ್ಪುತ್ತಿರುವುದರಿಂದ ಇನ್ನು ವಿಳಂಬ ಮಾಡಿದರೆ ತಪ್ಪಾದೀತು ಎನ್ನುವ ಭಾವನೆ ಅಮೆರಿಕನ್ ಆರೋಗ್ಯ ವಲಯದಲ್ಲಿ ಮೂಡಿದಂತೆ ಕಾಣುತ್ತಿದೆ. ಈ ಕಾರಣಕ್ಕಾಗಿಯೇ, ಆ ದೇಶದಲ್ಲಿ ಲಸಿಕೆ ಅನುಮತಿಯ ಪ್ರಕ್ರಿಯೆ ಅಂತಿಮ ಚರಣ ತಲುಪಿದೆ ಎಂದು ವರದಿಗಳು ಬರುತ್ತಿವೆ. ಇದರ ನಡುವೆಯೇ ಇಂಡೋನೇಷ್ಯಾ ಚೀನಿ ಕಂಪೆನಿ ಸೈನೋವ್ಯಾಕ್ ಬಯೋಟೆಕ್ ಲಿಮಿಟೆಡ್ ವ್ಯಾಕ್ಸಿನ್‌ನ 12 ಲಕ್ಷ ಡೋಸ್‌ಗಳನ್ನು ತರಿಸಿಕೊಂಡು ಲಸಿಕಾಕರಣ ಅಭಿಯಾನ ಆರಂಭಿಸಿದೆ.
ಭಾರತದಲ್ಲೂ ಲಸಿಕೆ ವಿತರಣೆಯ ವಿಚಾರದಲ್ಲಿ ಈಗಾಗಲೇ ವೇಗವಾಗಿ ಸಿದ್ಧತೆಗಳು ನಡೆದಿವೆ. ಲಸಿಕೆಗಳ ವಿಚಾರದಲ್ಲಿ ವಿಚಾರ-ವಿಮರ್ಶೆ ನಿರ್ಣಾಯಕ ಘಟ್ಟ ತಲುಪಿದೆ. ಸೀರಂ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತ್ ಬಯೋಟೆಕ್‌ನಂಥ ಭಾರತೀಯ ಕಂಪೆನಿಗಳು ವೈಶ್ವಿಕ ವೈಜ್ಞಾನಿಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಯೋಗಿಸುತ್ತಿರುವ ಲಸಿಕೆಗಳ ವಿಚಾರದಲ್ಲಿ ಬುಧವಾರ ಪರಿಣತರ ಪ್ಯಾನಲ್ ಚರ್ಚೆ ನಡೆಸಿದೆ.
ನಿಶ್ಚಿತವಾಗಿಯೂ ಲಸಿಕೆಯ ಕ್ಷಮತೆ, ಸಂಭಾವ್ಯ ಅಡ್ಡಪರಿಣಾಮಗಳು ಹಾಗೂ ಬೆಲೆಗಳ ಹೊರತಾಗಿಯೂ ದೇಶದ ಮೂಲೆಮೂಲೆಗೂ ಸುರಕ್ಷಿತವಾಗಿ ಲಸಿಕೆಯನ್ನು ತಲುಪಿಸುವ(ಹಾಗೂ ಹಾಳಾಗದಂತೆ ನೋಡಿಕೊಳ್ಳುವ) ಸವಾಲೂ ಇದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ದೇಶಕ್ಕೆ ಯಾವ ಲಸಿಕೆ ಉಪಯುಕ್ತ ಎನ್ನುವ ನಿಷ್ಕರ್ಷೆಗೆ ಬರಲಾಗುತ್ತದೆ. ಆದರೆ ಪರಿಸ್ಥಿತಿಯ ಗಾಂಭೀರ್ಯವನ್ನು ಪರಿಗಣಿಸಿ, ಒಂದು ದೇಶಕ್ಕೆ ಒಂದೇ ಲಸಿಕೆಯನ್ನು ಬಳಸುವ ಬದಲು, ವಿವಿಧ ಲಸಿಕೆಗಳನ್ನು ಬಳಸುವ ನಿಟ್ಟಿನಲ್ಲೂ ಯೋಚಿಸಬೇಕು ಎಂದು ಒಂದು ವರ್ಗದ ಪರಿಣತರು ಹೇಳುತ್ತಿದ್ದಾರೆ. ಈ ಕುರಿತು ಸರಕಾರ ಹಾಗೂ ಆರೋಗ್ಯ ಇಲಾಖೆಯ ನಡುವೆ ಚಿಂತನೆಯೂ ನಡೆದಿರಬಹುದೇನೋ.
ಇದೇನೇ ಇದ್ದರೂ ಇವೆಲ್ಲದರ ನಡುವೆ ಕೇಂದ್ರ ಸರಕಾರ ಲಸಿಕೆ ವಿತರಣೆಯ ರೂಪುರೇಷೆಗಳನ್ನು, ನೀಲನಕ್ಷೆಗಳನ್ನು ತ್ವರಿತವಾಗಿ ಸಿದ್ಧಪಡಿಸಿ ಅನುಷ್ಠಾನಕ್ಕೆ ತರುತ್ತಿರುವುದೂ ಶ್ಲಾಘನೀಯ ಸಂಗತಿ. ಕೆಲವೇ ವಾರಗಳಲ್ಲಿ ಲಸಿಕೆ ಬರಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿರುವ ಬೆನ್ನಲ್ಲೇ ಲಸಿಕೆ ಕೇಂದ್ರಗಳ ಕಾರ್ಯವೈಖರಿಯ ರೂಪುರೇಷೆಯೂ ಸಿದ್ಧವಾಗಿದೆ. ಇನ್ನು ಲಸಿಕೆಯ ವಿತರಣೆ ಹಾಗೂ ನೋಂದಣಿಗಾಗಿಯೇ ಪ್ರತ್ಯೇಕವಾಗಿ ಕೋವಿನ್-20 ಎಂಬ ಆ್ಯಪ್ ಅನ್ನೂ ಕೇಂದ್ರ ಅಭಿವೃದ್ಧಿಪಡಿಸಿದ್ದು, ಇದೂ ಸಹ ಮುಂದಿನ ದಿನಗಳಲ್ಲಿ ಲಸಿಕೆ ವಿತರಣ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.