ಭಾರತದ ಜಿಡಿಪಿ ಬೆಳವಣಿಗೆ ದರ ಆಶಾದಾಯಕ


Team Udayavani, Jun 2, 2022, 6:00 AM IST

ಭಾರತದ ಜಿಡಿಪಿ ಬೆಳವಣಿಗೆ ದರ ಆಶಾದಾಯಕ

ಕೊರೊನಾ ವೇಳೆಯಲ್ಲಿ ತೀವ್ರ ಕುಸಿತ ಕಂಡು, ನೇತ್ಯಾತ್ಮಕ ಮಟ್ಟಕ್ಕೆ ತಲುಪಿದ್ದ ಭಾರತದ ಜಿಡಿಪಿ ದರ ಈಗ ಸುಧಾರಿಸಿಕೊಂಡು ಮತ್ತೆ ಉತ್ತಮ ಹಾದಿಯಲ್ಲಿದೆ. ಮಂಗಳವಾರವಷ್ಟೇ ಕೇಂದ್ರ ಸಾಂಖೀಕ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 2021-22ರಲ್ಲಿ ಭಾರತದ ಜಿಡಿಪಿ ದರ ಶೇ. 8.7 ಆಗಿದೆ. ಆದರೆ ಮೂರನೇ ತ್ತೈಮಾಸಿಕಕ್ಕೆ ಹೋಲಿಕೆ ಮಾಡಿದರೆ, ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧದಿಂದಾಗಿ ನಾಲ್ಕನೇ ತ್ತೈಮಾಸಿಕದಲ್ಲಿ ಜಿಡಿಪಿ ದರ ಇಳಿಕೆಯಾಗಿದೆ. ಅಂದರೆ ಶೇ. 4.1ರಷ್ಟು ದಾಖಲಾಗಿದೆ.

ಪ್ರತೀ ಬಾರಿಯೂ ಭಾರತದ ಆರ್ಥಿಕತೆ ಸುಧಾರಿಸಿಕೊಳ್ಳುತ್ತಿದೆ ಎನ್ನುವಾಗ, ಒಂದಿಲ್ಲೊಂದು ಕಾರಣಗಳಿಂದಾಗಿ ಪೆಟ್ಟು ಬೀಳುತ್ತದೆ. ಮೋದಿ ಸರಕಾರದ ಎರಡನೇ ಅವಧಿ ಶುರುವಾದಾಗ, ಭಾರತದ ಅಭಿವೃದ್ಧಿ ದರ ಏರಿಕೆಯ ಬಗ್ಗೆ ಭಾರೀ ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು. ಆದರೆ, 2019ರ ಅಂತ್ಯ ಮತ್ತು 2020ರ ಆರಂಭದಲ್ಲಿ ಜಗತ್ತಿನಾದ್ಯಂತ ಕಾಣಿಸಿಕೊಂಡ ಕೊರೊನಾ ಮಹಾಮಾರಿ, ಜನರಿಗಷ್ಟೇ ಅಲ್ಲ, ಎಲ್ಲಾ ದೇಶಗಳ ಆರ್ಥಿಕತೆಗೂ ದೊಡ್ಡ ಪೆಟ್ಟು ನೀಡಿತು. ಆರ್ಥಿಕ ತಜ್ಞರ ಪ್ರಕಾರ, ಕೊರೊನಾ ವೇಳೆಯಲ್ಲಿ ಆಗಿರುವ ಹೊಡೆತ ಸರಿಯಾಗಬೇಕು ಎಂದರೆ, ಇನ್ನೂ ಹತ್ತಾರು ವರ್ಷಗಳು ಬೇಕು. ಅಂದರೆ, 2035ರ ವೇಳೆಗೆ ಜಗತ್ತಿನ ಆರ್ಥಿಕತೆ ಸುಧಾರಿಸಿಕೊಳ್ಳುವ ಸಾಧ್ಯತೆ ಇದೆ.

ಈ ಎಲ್ಲ ಅಡ್ಡಿ ಆತಂಕಗಳ ನಡುವೆ 2021-22ರ ಭಾರತದ ಆರ್ಥಿಕತೆ ವರ್ಲ್ಡ್ ಬ್ಯಾಂಕ್‌, ಐಎಂಎಫ್ ಸೇರಿದಂತೆ ಎಲ್ಲ ಜಾಗತಿಕ ಆರ್ಥಿಕ ಸಂಸ್ಥೆಗಳ ನಿರೀಕ್ಷೆಗೆ ಅನುಗುಣವಾಗಿಯೇ ಬೆಳವಣಿಗೆ ಕಂಡಿದೆ.

ವಿಚಿತ್ರವೆಂದರೆ ಕಳೆದ ಆರ್ಥಿಕ ವರ್ಷದ ಮೊದಲ ಮೂರು ತ್ತೈಮಾಸಿಕಗಳಲ್ಲಿ ಬೆಳವಣಿಗೆ ದರ ಕೊಂಚ ಹೆಚ್ಚಾಗಿಯೇ ಇದೆ. ಆದರೆ, ಕಡೇ ತ್ತೈಮಾಸಿಕದ ಮೇಲೆ ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧ, ತೈಲ ದರ ಏರಿಕೆ, ಹಣದುಬ್ಬರ ಅಡ್ಡಪರಿಣಾಮ ಬೀರಿವೆ.

2021-22ರ ಹಣಕಾಸು ವರ್ಷದಲ್ಲಿ ಮೊದಲ ತ್ತೈಮಾಸಿಕದಲ್ಲಿ ಶೇ. 20.1, 2ನೇ ತ್ತೈಮಾಸಿಕದಲ್ಲಿ ಶೇ. 8.4, 3ನೇ ತ್ತೈಮಾಸಿಕದಲ್ಲಿ ಶೇ.5.4 ಹಾಗೂ 4ನೇ ತ್ತೈಮಾಸಿಕದಲ್ಲಿ ಶೇ. 4.1ರಷ್ಟು ಬೆಳವಣಿಗೆಯಾಗಿದೆ. ಇಲ್ಲಿ ಕಡೇ ತ್ತೈಮಾಸಿಕದಲ್ಲಿ ಇಳಿಕೆಯಾಗಿರುವುದು ಕಾಣಿಸಿದೆ.

ಇನ್ನು ವ್ಯಾಪಾರ, ಹೊಟೇಲ್‌ ಮತ್ತು ಸಾರಿಗೆ ವಲಯಗಳಲ್ಲಿಯೂ ಉತ್ತಮ ಸುಧಾರಣೆಯಾಗಿದೆ. ಇಲ್ಲಿ ಶೇ. 11.1ರಷ್ಟು ಬೆಳವಣಿಗೆಯಾಗಿದೆ. ಕಳೆದ ವರ್ಷದ ಇದೇ ವೇಳೆಗೆ ಶೇ.20ರಷ್ಟು ನೇತ್ಯಾತ್ಮಕ ಪ್ರಗತಿಯಾಗಿತ್ತು. ಹಾಗೆಯೇ ಉತ್ಪಾದನಾ ವಲಯವೂ ಶೇ. 9.9ರಷ್ಟು ಪ್ರಗತಿಯಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.0.6ರಷ್ಟು ನೇತ್ಯಾತ್ಮಕ ಬೆಳವಣಿಗೆಯಾಗಿತ್ತು. ಆದರೆ ಕಳೆದ ವರ್ಷ ಕೃಷಿ ವಲಯ ಶೇ.3.3ರಷ್ಟು ಬೆಳವಣಿಗೆ ಸಾಧಿಸಿದ್ದು, ಈ ವರ್ಷ ಶೇ. 3ಕ್ಕೆ ಕುಸಿತವಾಗಿದೆ. ಈ ಎಲ್ಲ ಅಂಕಿ ಅಂಶಗಳು, ಆರ್ಥಿಕತೆಯ ಬಗ್ಗೆ ಆಶಾವಾದ ಮೂಡಿಸುವಂತಿವೆ. ಇದಕ್ಕೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಬಂಧಿತ ವಲಯಗಳ ಉತ್ತೇಜನಕ್ಕೆ ಮತ್ತಷ್ಟು ಸಹಕಾರ ನೀಡಬೇಕು. ಎಲ್ಲೆಲ್ಲಿ ಕಡಿಮೆ ಬೆಳವಣಿಗೆ ದರವಾಗಿದೆಯೋ ಅಲ್ಲಿ, ಹೆಚ್ಚಿನ ಮುತುವರ್ಜಿ ವಹಿಸಬೇಕು. ಅಲ್ಲದೆ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಎಲ್ಲ ರೀತಿಯ ಕ್ರಮ ತೆಗೆದುಕೊಂಡು ಹಣದುಬ್ಬರ ಸಮಸ್ಯೆಯನ್ನೂ ಹೋಗಲಾಡಿಸಬೇಕು. ಆಗಷ್ಟೇ ಮುಂದಿನ ಹಣಕಾಸು ವರ್ಷದಲ್ಲಿ ಮತ್ತಷ್ಟು ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ.

ಟಾಪ್ ನ್ಯೂಸ್

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

8-

Panaji: ಕಲಂಗುಟ್ ಬೀಚ್ ನಲ್ಲಿ ಪ್ರವಾಸಿ ಕೊಲೆ

Glass Bridge: India’s first glass bridge inaugurated at Kanyakumari

Glass Bridge: ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗಾಜಿನ ಸೇತುವೆ ಉದ್ಘಾಟನೆ

Rane-Kerala-Cm

Rane’s Remark: ಕೇರಳ ʼಮಿನಿ ಪಾಕಿಸ್ಥಾನʼವೆಂದ ಸಚಿವ ನಿತೇಶ್ ರಾಣೆ; ಸಿಎಂ ಪಿಣರಾಯಿ ಖಂಡನೆ

Team India;  key players to miss England series; young batsman takes on leadership role

Team India: ಇಂಗ್ಲೆಂಡ್‌ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್‌ ಗೆ ನಾಯಕತ್ವದ ಹೊಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Exam

ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ

JAmmu

Jammu-Kashmir: ಉಗ್ರರನ್ನು ಮಟ್ಟ ಹಾಕಿದ‌ ಭದ್ರತಾ ಪಡೆಗಳು

6-national-emblem

National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ

MM-Singh

ದೇಶದ ಆರ್ಥಿಕತೆಗೆ ಹೊಸ ಭಾಷ್ಯ ಬರೆದ ಡಾ. ಮನಮೋಹನ್‌ ಸಿಂಗ್‌

Bangla–Pak

ಬಾಂಗ್ಲಾದೇಶದ ಭಾರತ ವಿರೋಧಿ ಮನಃಸ್ಥಿತಿ ಖಂಡನೀಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-

Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.