ಖಡಕ್ ಉತ್ತರ ನೀಡುತ್ತಿದ್ದ ಜಾರ್ಜ್ ಫೆರ್ನಾಂಡಿಸ್
Team Udayavani, Jan 30, 2019, 12:30 AM IST
ರಕ್ಷಣಾ ಖಾತೆ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ ಮಾತೆಂದರೆ ಹಾಗೆಯೇ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಮೊದಲ ಬಾರಿಗೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸುದ್ದಿಗೆ ಹೆಚ್ಚು ಗ್ರಾಸವಾದರು. ಇಂಗ್ಲಿಷ್, ಹಿಂದಿ ಸುದ್ದಿವಾಹಿನಿಗಳಿಗೆ ಅವರು ಸುದ್ದಿಯ ಪ್ರಮುಖ ಆಕರ್ಷಣೆಯಾಗಿದ್ದರು. ಹಲವಾರು ಸಂದರ್ಶನಗಳಲ್ಲಿ ಅವರು ಪ್ರಶ್ನೆಗಳಿಗೆ ಖಡಕ್ ಉತ್ತರ ನೀಡುತ್ತಿದ್ದರು. ಅಂಥವುಗಳಲ್ಲಿ ಆಯ್ದ ಕೆಲವನ್ನು ನೀಡಲಾಗಿದೆ.
· ಪಾಕಿಸ್ತಾನ ಭಾರತಕ್ಕೆ ಸವಾಲೊಡ್ಡಬಲ್ಲುದೇ ಎಂಬ ಪ್ರಶ್ನೆ
ಪಾಕಿಸ್ತಾನವು ಯಾವುದೇ ಕಾರಣಕ್ಕೂ ಭಾರತಕ್ಕೆ ಬೆದರಿಕೆಯಾಗಿ ಪರಿಣಮಿಸದು. ನಮ್ಮ ದೇಶಕ್ಕೆ ಹೋಲಿಕೆ ಮಾಡಿದರೆ ಅದು ಸಣ್ಣ ದೇಶ. ಹೀಗಾಗಿ ಅದು ಯಾವತ್ತೂ ನಮಗೆ ಬೆದರಿಕೆಯಾಗದು. ಆ ರೀತಿ ಆಗಲು ಸಾಧ್ಯವೂ ಇಲ್ಲ.
ಎನ್‌ಡಿಟಿವಿ, 2000 ಜುಲೈಗುಪ್ತಚರ ವೈಪಲ್ಯದಿಂದಾಗಿ ಕಾರ್ಗಿಲ್ ದಾಳಿ ನಡೆಯಿತೇ?
ಗುಪ್ತಚರ ವೈಫಲ್ಯದಿಂದಾಗಿ ಕಾರ್ಗಿಲ್ ಮೇಲೆ ದಾಳಿ ನಡೆಯಿತು ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ. ಗಡಿ ಪ್ರದೇಶದ ನಡುವೆ ಭಾರತ ಮತ್ತು ಪಾಕಿಸ್ತಾನ ನಡುವೆ ಬಹಿರಂಗವಾಗಿ ಹೇಳಿಕೊಂಡ ಮತ್ತು ಹೇಳಿಕೊಳ್ಳದೆ ಇದ್ದ ಒಪ್ಪಂದವಿತ್ತು. 150 ಕಿಮೀ ಗಡಿ ಪ್ರದೇಶದ
ನಡುವೆ ಚಳಿಗಾಲದಲ್ಲಿ ಕಾವಲಿಗೆಂದು ಯಾರನ್ನೂ ನೇಮಿಸದೇ ಇರುವ ಬಗ್ಗೆ ಅನೌಪಚಾರಿಕ ಒಪ್ಪಂದ ನಡೆದಿತ್ತು. ಅದು 27 ವರ್ಷಗಳ ವರೆಗೆ ನಡೆದಿತ್ತು. ಉಳಿದ ಸಂದರ್ಭಗಳಲ್ಲಿ ಕಾರ್ಗಿಲ್ ವಲಯದಲ್ಲಿ ಆಯ್ಕೆಯ ಸ್ಥಳಗಳಲ್ಲಿ ಬಂಕರ್‌ಗಳನ್ನು ನಿರ್ಮಿಸಿ
ಕಾವಲು ಕಾಯಲಾಗುತ್ತಿತ್ತು. ಅದನ್ನು ಗುಪ್ತಚರ ವೈಫಲ್ಯವೆಂದು ಬಿಂಬಿಸುವುದು ನನ್ನ ಮನಸ್ಸಿನಲ್ಲಿ ಹೊಸ ಪ್ರಶ್ನೆ ಮೂಡಿಸುತ್ತಿದೆ.
ರಾತ್ರಿ 9 ಗಂಟೆ ಬಳಿಕ ಊಟವಿಲ್ಲ
ಈ ಟಿವಿಗೆ ನೀಡಿದ್ದ ಸಂದರ್ಶದಲ್ಲಿ ಅವರು ರಾತ್ರಿ 9 ಗಂಟೆ ಬಳಿಕ ಊಟವನ್ನೇ ಮಾಡುತ್ತಿರಲಿಲ್ಲ ಎಂದು ಹೇಳಿದ್ದರು. ಒಂದು ಗ್ಲಾಸ್ ಹಾಲು, ಬಾಳೆಹಣ್ಣು ಅಥವಾ ಇನ್ನು ಯಾವುದೇ ಹಣ್ಣು ತಿಂದು ಮಲಗುತ್ತಿದ್ದುದಾಗಿ ಹೇಳಿದ್ದರು. ರಾತ್ರಿ ಊಟ ಹೆಚ್ಚಾದರೆ ಬೆಳಗ್ಗೆ ಬೇಗನೆ ಏಳಲು ಸಾಧ್ಯವಾಗುವುದಿಲ್ಲ. ಅದು ನನ್ನ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತದೆ.
ಜೀವನಗಾಥೆ ಪಕ್ಷಿ ನೋಟ
ತಂದೆಯ ಹೆಸರು- ಜಾನ್ ಫೆರ್ನಾಂಡಿಸ್
ತಾಯಿಯ ಹೆಸರು- ಅಲಿಸ್ ಫೆರ್ನಾಂಡಿಸ್
ಹುಟ್ಟಿದ ದಿನಾಂಕ- 03-06-1930
ಹುಟ್ಟಿದ ಸ್ಥಳ- ಮಂಗಳೂರು
1967- 4ನೇ ಲೋಕಸಭೆಗೆ ಆಯ್ಕೆ
1969 -73- ಸಂಯುಕ್ತ ಸೋಶಿಯಲಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ
1973-77- ಸೋಶಿಯಲಿಸ್ಟ್ ಪಕ್ಷದ ಅಧ್ಯಕ್ಷ, ಅಖೀಲ ಭಾರತ ರೈಲ್ವೆ ಉದ್ಯೋಗಿಗಳ ಸಂಘದ ಅಧ್ಯಕ್ಷ
1977- 6ನೇ ಲೋಕಸಭೆಗೆ ಆಯ್ಕೆ
1977 ಮಾರ್ಚ್ , ಜುಲೈ- ಕೇಂದ್ರ ಸಂಪರ್ಕ ಖಾತೆ ಸಚಿವ
1977-79- ಕೇಂದ್ರ ಕೈಗಾರಿಕಾ ಸಚಿವ
1980- 7ನೇ ಲೋಕಸಭೆಗೆ ಆಯ್ಕೆ
1989- 9ನೇ ಲೋಕಸಭೆಗೆ ಆಯ್ಕೆ
1989-90- ಕೇಂದ್ರ ರೈಲ್ವೆ ಸಚಿವ
ಮಾರ್ಚ್-ಮೇ 1990- ಹೆಚ್ಚುವರಿಯಾಗಿ
ಕಾಶ್ಮೀರ ವ್ಯವಹಾರಗಳ ಖಾತೆ
1991-10ನೇ ಲೋಕಸಭೆಗೆ ಆಯ್ಕೆ
1994- ಸಮತಾ ಪಕ್ಷದ ಅಧ್ಯಕ್ಷ
1996- 11ನೇ ಲೋಕಸಭೆಗೆ ಆಯ್ಕೆ
1998- 12ನೇ ಲೋಕಸಭೆಗೆ ಆಯ್ಕೆ
1998-99- ಕೇಂದ್ರ ರಕ್ಷಣಾ ಸಚಿವ
1999- 13ನೇ ಲೋಕಸಭೆಗೆ ಆಯ್ಕೆ
ಜೆಡಿಯು ಸಂಸದೀಯ ಪಕ್ಷದ ನಾಯಕ
1999 ಅ.13-2001 ಮಾ.16- ರಕ್ಷಣಾ ಸಚಿವ
2001 ಅ.15-2004 ಮೇ- ಕೇಂದ್ರ ರಕ್ಷಣಾ ಸಚಿವ
2004- 14ನೇ ಲೋಕಸಭೆಗೆ ಆಯ್ಕೆ
ಬರೆದಿರುವ ಪುಸ್ತಕಗಳು
ವಾಟ್ ಏಲ್ಸ್ ದ ಸೋಶಿಯಲಿಸ್ಟ್ಸ್
ರೈಲ್ವೆ ಸ್ಟ್ರೈಕ್ ಆಫ್ 1974
ಜಾರ್ಜ್ ಫರ್ನಾಂಡಿಸ್ ಸ್ಪೀಕ್ಸ್
ಸಂಪಾದಕ – “ದ ಅದರ್ ಸೈ‚ಡ್- ಆಂಗ್ಲ ಮಾಸಿಕ
“ಪ್ರತಿಪಕ್ಸ್’ ಹಿಂದಿ ಮಾಸಪತ್ರಿಕೆಯ ಸಂಪಾದಕೀಯ ಮಂಡಳಿ ಮುಖ್ಯಸ್ಥ
ದೇಶದ ನಾಲ್ವರು ಅಗ್ರ ನಾಯಕರು
ಅಟಲ್ ಬಿಹಾರಿ ವಾಜಪೇಯಿ, ಜಾರ್ಜ್ ಫರ್ನಾಂಡಿಸ್, ಎಲ್.ಕೆ.ಅಡ್ವಾಣಿ ಮತ್ತು ರಾಮಕೃಷ್ಣ ಹೆಗಡೆ. ಈ ನಾಲ್ವರು ನಾಯಕರ ಪೈಕಿ ಇಬ್ಬರು ಬಿಜೆಪಿಯವರೇ ಆಗಿದ್ದರೆ, ಮತ್ತೆ ಹೆಗಡೆ ಜನತಾ ಪರಿವಾರದ ಹಿನ್ನೆಲೆಯವರು, ಜಾರ್ಜ್ ಹೋರಾಟದ ಹಿನ್ನೆಲೆಯಿಂದ
ಬಂದವರು. ರಾಷ್ಟ್ರ ರಾಜಕಾರಣದಲ್ಲಿ ಛಾಪು ಮೂಡಿಸಿದ್ದ ನಾಲ್ವರ ಪೈಕಿ ಇಬ್ಬರು ಕರ್ನಾಟಕದವರೇ ಆಗಿದ್ದಾರೆ. ವಾಜಪೇಯಿ, ಅಡ್ವಾಣಿ ಕರ್ನಾಟಕದ ಜತೆಗೆ ನಿಕಟ ಸಂಪರ್ಕದಲ್ಲಿದ್ದವರು. ಅವರೆಲ್ಲರೂ ಎ.ಬಿ.ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ
ರಕ್ಷಣೆ, ಗೃಹ, ವಾಣಿಜ್ಯ ಸಚಿವರಾಗಿದ್ದವರು. ವಾಜಪೇಯಿ ನೇತೃತ್ವದ 2ನೇ ಅವಧಿಯ ಎನ್‌ಡಿಎ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆ ಕೇಂದ್ರ ಸಂಪುಟದಲ್ಲಿ ಇರಲಿಲ್ಲ.
ಎನ್‌ಡಿಎ ಸೇರಿದ್ದು ಹೇಗೆ?
ಜಾರ್ಜ್ ಫರ್ನಾಂಡಿಸ್ ಕಾಂಗ್ರೆಸ್ ವಿರೋಧಿ ರಾಜಕಾರಣ ಮಾಡಿದವರು. ಕಾಂಗ್ರೆಸ್ ಸೋಲಿಸುವ ಶಕ್ತಿ ಬಿಜೆಪಿಗೆ ಇದೆ ಎಂಬ ಕಾರಣಕ್ಕಾಗಿಯೇ ಅವರು ಎನ್‌ಡಿಎ ಮೈತ್ರಿಕೂಟ ಸೇರಿದ್ದರು. 1971 ರ ಸುಮಾರಿಗೆ ಎಎಸ್‌ಪಿ ಹಾಗೂ ಎಸ್‌ಪಿ ಸೇರಿ ಪ್ರಜಾ ಸೋಷಲಿಸ್ಟ್ ಪಾರ್ಟಿ ಎಂದಾಯಿತು. ತದನಂತರ ಜಾರ್ಜ್ ಫರ್ನಾಂಡಿಸ್ , ಸಮತಾ ಪಕ್ಷವನ್ನೂ ಸ್ಥಾಪಿಸಿದರು. ಸಮತಾ ಪಕ್ಷ ಕಟ್ಟಿದಾಗ ಒಮ್ಮೆ ನನ್ನ ಮನೆಯ (ಬೆಂಗಳೂರಿನ ರಿಚ್ ಮಂಡ್ ಟೌನ್ ನಿವಾಸ) ಬೇಸ್ ಮೆಂಟ್‌ನಲ್ಲಿ ಆ ಪಕ್ಷದ ಸಭೆ ನಡೆದಿತ್ತು. 1999 ರಲ್ಲಿ ಸಂಯುಕ್ತ ಜನತಾದಳ ಜತೆ ವಿಲೀನಗೊಳಿಸಿದ್ದರು.
ಜಾರ್ಜ್ ಫೆರ್ನಾಂಡಿಸ್ ನಿಧನ ತುಂಬಲಾರದ ನಷ್ಟ. ಪ್ರಜಾಪ್ರಭುತ್ವ ತತ್ವಗಳನ್ನು ಎತ್ತಿ ಹಿಡಿಯಲು ಅವರು ಶ್ರಮಿಸಿದ್ದರು.
● ರಾಮನಾಥ್ ಕೋವಿಂದ್, ರಾಷ್ಟ್ರಪತಿ
ಕಾರ್ಮಿಕ ವರ್ಗದ ಪರ ಹೋರಾಟಗಾರ. ಜತೆಗೆ ಉತ್ತಮ ಆಡಳಿತಗಾರ ಎಂದು ಹಲವು ಸಂದರ್ಭಗಳಲ್ಲಿ ಸಾಬೀತು ಮಾಡಿದ್ದಾರೆ.
● ಎಂ.ವೆಂಕಯ್ಯ ನಾಯ್ಡು, ಉಪ ರಾಷ್ಟ್ರಪತಿ
ಜಾರ್ಜ್ ಸಾಹೇಬ್ ದೇಶದ ಅತ್ಯುನ್ನತ ನಾಯಕರಾಗಿದ್ದರು. ನಿರ್ಭಯ, ದೂರದರ್ಶಿತ್ವ ಕಲ್ಪನೆಗಳನ್ನು ಹೊಂದಿದ್ದ ಅವರು ದೇಶಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.
● ನರೇಂದ್ರ ಮೋದಿ, ಪ್ರಧಾನಮಂತ್ರಿ
ಸಮಾಜವಾದಿ ನಾಯಕರಾಗಿದ್ದ ಅವರು ಆಯಾ ಕಾಲಘಟ್ಟದಲ್ಲಿ ತಮ್ಮ ಹೊಣೆಗಾರಿಕೆ ನಿಭಾಯಿಸುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.
● ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.