ಇನ್ನಷ್ಟು ಸಮಗ್ರವಾಗಬೇಕಿತ್ತು: ಹೊಸ ಟೆಲಿಕಾಂ ನೀತಿ
Team Udayavani, Sep 28, 2018, 6:00 AM IST
ಖಾಸಗಿ ಕಂಪೆನಿಗಳು ಉತ್ತಮ ಇಂಟರ್‌ನೆಟ್ ಸೌಲಭ್ಯ ಒದಗಿಸುತ್ತಿದ್ದರೂ ಅವುಗಳ ಲಕ್ಷ್ಯವಿರುವುದು ಹೆಚ್ಚು ಗ್ರಾಹಕರು ಇರುವ ನಗರಗಳಲ್ಲೇ ಹೊರತು ಹಳ್ಳಿಗಾಡುಗಳಲ್ಲಿ ಅಲ್ಲ. ಎಲ್ಲವೂ ಡಿಜಿಟಲ್‌ವುಯ ಆಗಬೇಕೆಂದು ಬಯಸುವಾಗ ಎಲ್ಲೆಡೆಗೂ ಸಶಕ್ತವಾದ ಇಂಟರ್‌ನೆಟ್ ಸಂಪರ್ಕವೂ ಇರಬೇಕು.
ಅತ್ಯಂತ ವೇಗವಾಗಿ ಮತ್ತು ಬೃಹತ್ ಗಾತ್ರದಲ್ಲಿ ಬೆಳೆಯುತ್ತಿರುವ ಉದ್ಯಮ ದೂರಸಂಪರ್ಕ ಕ್ಷೇತ್ರ. ಒಂದು ದೂರವಾಣಿ ಸಂಪರ್ಕ ಪಡೆಯಲು ಅರ್ಜಿ ಕೊಟ್ಟು 5 ವರ್ಷ ಕಾಯುವಲ್ಲಿಂದ ಒಬ್ಬನಿಗೆ ಐದಾರು ದೂರವಾಣಿ ಸಂಪರ್ಕ ನಿರಾಯಾಸವಾಗಿ ದೊರಕುವ ತನಕದ ಪ್ರಗತಿ ಅದ್ಭುತವೇ ಸರಿ. ಡಿಜಿಟಲ್ ಸಂವಹನದ ಆವಿಷ್ಕಾರದ ಬಳಿಕ ದೇಶದ ದೂರಸಂಪರ್ಕ ಕ್ಷೇತ್ರದ ಅಭಿವೃದ್ಧಿ ನಿರೀಕ್ಷೆಗೂ ಮೀರಿದ್ದು. ಕಾಲು ಶತಮಾನದ ಹಿಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಹೋಲಿಕೆ ಮಾಡಿ ನೋಡಿದಾಗ ಈ ಕ್ಷೇತ್ರದಲ್ಲಿ ನಾವು ಮಾಡಿದ ಸಾಧನೆ ಏನು ಎನ್ನುವುದು ಅನುಭವಕ್ಕೆ ಬರುತ್ತದೆ. ಸರಕಾರಿ ಸ್ವಾಮ್ಯದಲ್ಲಿದ್ದ ದೂರಸಂಪರ್ಕ ಕ್ಷೇತ್ರ ಉದಾರೀಕರಣದ ಫಲವಾಗಿ ಖಾಸಗಿಯವರಿಗೂ ತೆರೆದುಕೊಂಡ ಪರಿಣಾಮವಾಗಿ ಈ ಪ್ರಗತಿ ಸಾಧ್ಯವಾಗಿದೆ. ಹೀಗೆ ದೂರಸಂಪರ್ಕ ಕ್ಷೇತ್ರದಲ್ಲಾಗಿರುವ ಬದಲಾವಣೆಗೆ ತಕ್ಕಂತೆ ನೀತಿಯೂ ಬದಲಾಗುವ ಅಗತ್ಯವಿತ್ತು. ಈ ಅಗತ್ಯವನ್ನು ಕೇಂದ್ರ ಸರಕಾರ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಯನ್ನು ರಚಿಸುವ ಮೂಲಕ ಈಡೇರಿಸಿದೆ. ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ಈ ರಾಷ್ಟ್ರೀಯ ನೀತಿ ಇನ್ನು ಮೇಲ್ಮನೆಯಲ್ಲೂ ಅನುಮೋದಿಸಲ್ಪಡಬೇಕು.
ದೂರಸಂಪರ್ಕ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಟೆಲಿಕಾಂ ನೀತಿಯನ್ನು ರಚಿಸಲಾಗಿದೆ. ವಿಪುಲ ಉದ್ಯೋಗ ಸೃಷ್ಟಿಗೆ ಅವಕಾಶವಿರುವ ಈ ಕ್ಷೇತ್ರದಲ್ಲಿ ಹೂಡಿಕೆಯನ್ನು ಆಕರ್ಷಿಸುವುದು ಸರಕಾರದ ಮುಖ್ಯ ಉದ್ದೇಶ. 2022ಕ್ಕಾಗುವಾಗ ಸುಮಾರು 7 ಲಕ್ಷ ಕೋಟಿ ರೂಪಾಯಿ ಹೂಡಿಕೆ ಟೆಲಿಕಾಂ ಕ್ಷೇತ್ರಕ್ಕೆ ಹರಿದುಬರಬಹುದು ಹಾಗೂ ಇದೇ ವೇಳೆ ಸುಮಾರು 40 ಲಕ್ಷ ಉದ್ಯೋಗ ಸೃಷ್ಟಿಯಾಗಬಹುದು ಎಂಬ ನಿರೀಕ್ಷೆಯನ್ನು ಸರಕಾರ ಇಟ್ಟುಕೊಂಡಿದೆ. ಇದಕ್ಕಾಗಿ 10 ಲಕ್ಷ ಮಂದಿಗೆ ಕೌಶಲ ವೃದ್ಧಿ ತರಬೇತಿಯನ್ನೂ ನೀಡಲುದ್ದೇಶಿಸಿದೆ. ಉದ್ಯೋಗ ಸೃಷ್ಟಿ ತುರ್ತು ಅಗತ್ಯವಾಗಿರುವುದರಿಂದ ನೀತಿಯಲ್ಲಿ ಅದಕ್ಕೆ ಪೂರವಾದ ಇಂಥ ಅಂಶಗಳಿರುವುದು ಸ್ವಾಗತಾರ್ಹ.
ಎಲ್ಲ ಗ್ರಾಮ ಪಂಚಾಯತುಗಳಿಗೆ 2020ರ ಒಳಗಾಗಿ 1 ಜಿಪಿಪಿಎಸ್ ವೇಗದ ಇಂಟರ್ನೆಟ್ ಸೌಲಭ್ಯ, ಪ್ರತಿ ವ್ಯಕ್ತಿಗೆ 50 ಎಂಬಿಪಿಎಸ್ ಬ್ರಾಡ್‌ಬ್ಯಾಂಡ್ ಸಂಪರ್ಕ ಮತ್ತಿತರ ಕೆಲವು ಆಕರ್ಷಣೀಯ ಅಂಶಗಳು ಹೊಸ ನೀತಿಯಲ್ಲಿವೆ. ಆದರೆ ಹೊಸ ನೀತಿಯಲ್ಲಿರುವ ಕೆಲವು ಅಂಶಗಳು 2012ರಲ್ಲಿ ಆಗಿನ ಸರಕಾರ ರಚಿಸಿದ ನೀತಿಯಲ್ಲಿದ್ದ ಅಂಶಗಳೇ ಆಗಿವೆ. ಉದಾಹರಣೆಗೆ ಹೇಳುವುದಾದರೆ ಪ್ರತಿ ನಾಗರಿಕನಿಗೆ ಇಂಟರ್‌ನೆಟ್ ಸೌಲಭ್ಯ ಕಲ್ಪಿಸುವುದು. 2012ರ ರಾಷ್ಟ್ರೀಯ ದೂರಸಂಪರ್ಕ ನೀತಿಯಲ್ಲೂ ಈ ಅಂಶವನ್ನು ಪ್ರಸ್ತಾವಿಸಲಾಗಿತ್ತು. ಆರು ವರ್ಷ ಕಳೆದರೂ ಇದನ್ನು ಪೂರ್ಣವಾಗಿ ಸಾಕಾರಗೊಳಿಸಲು ಸಾಧ್ಯವಾಗಿಲ್ಲ. 4ಜಿ ಯುಗಕ್ಕೆ ಕಾಲಿರಿಸಿದ್ದರೂ ಇನ್ನೂ 2ಜಿ ಸಂಪರ್ಕವೂ ಇಲ್ಲದ ಅನೇಕ ಹಳ್ಳಿಗಳು ದೇಶದಲ್ಲಿವೆ ಎನ್ನುವುದು ವಾಸ್ತವ ವಿಚಾರ. ಎಲ್ಲರಿಗೂ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸುವ ಕನಸಂತೂ ಇನ್ನೂ ಕೈಗೆಟುಕದಷ್ಟು ದೂರದಲ್ಲಿದೆ.
ಖಾಸಗಿ ಕಂಪೆನಿಗಳು ಉತ್ತಮ ಇಂಟರ್‌ನೆಟ್ ಸೌಲಭ್ಯ ಒದಗಿಸುತ್ತಿದ್ದರೂ ಅವುಗಳ ಲಕ್ಷ್ಯವಿರುವುದು ಹೆಚ್ಚು ಗ್ರಾಹಕರು ಇರುವ ನಗರಗಳಲ್ಲೇ ಹೊರತು ಹಳ್ಳಿಗಾಡುಗಳಲ್ಲಿ ಅಲ್ಲ. ಎಲ್ಲವೂ ಡಿಜಿಟಲ್‌ವುಯ ಆಗಬೇಕೆಂದು ಬಯಸುವಾಗ ಎಲ್ಲೆಡೆಗೂ ಸಶಕ್ತವಾದ ಇಂಟರ್‌ನೆಟ್ ಸಂಪರ್ಕವೂ ಇರಬೇಕು. ಹೊಸ ನೀತಿಯಲ್ಲಿ ಇಂಥ ಕೆಲವು ಲೋಪಗಳತ್ತಲೂ ಗಮನ ಹರಿಸಿದ್ದರೆ ಸಮುಚಿತವಾಗುತ್ತಿತ್ತು.
ಅದೇ ರೀತಿ ಸಿ-ಡಾಟ್ ಅನ್ನು ಪ್ರಮುಖ ಟೆಲಿಕಾಂ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಾಗಿ ಮಾರ್ಪಡಿಸುವ ಅಂಶವನ್ನು ಪ್ರಸ್ತಾವಿಸಲಾಗಿದ್ದು ಇದು ಕಳೆದೊಂದು ದಶಕದಿಂದ ಪ್ರಸ್ತಾವನೆಯಲ್ಲಿರುವ ವಿಷಯ. ಈ ವಿಚಾರವಾಗಿ ಇನ್ನು ಒಂದಿಂಚು ಮುಂದುವರಿಯಲು ಸಾಧ್ಯವಾಗಿಲ್ಲ. ಹೊಸ ನೀತಿಯಲ್ಲಿ ಮತ್ತೆ ಅದನ್ನೇ ಉಲ್ಲೇಖೀಸುವ ಅಗತ್ಯವಿರಲಿಲ್ಲ. ಹೀಗೆ ಹಳೆ ಪ್ರಸ್ತಾವಗಳನ್ನೇ ಹೊಸ ರೂಪದಲ್ಲಿ ಮಂಡಿಸುವುದಕ್ಕಿಂತ ಇವುಗಳನ್ನು ಜಾರಿಗೊಳಿಸುವ ಕ್ರಿಯಾ ಯೋಜನೆ ಏನು ಎನ್ನುವುದನ್ನು ತಿಳಿಸಬಹುದಿತ್ತು. ಸೆಮಿಕಂಡಕ್ಟರ್‌ಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಸಲುವಾಗಿ ನೀತಿಯೊಂದನ್ನು ಕೆಲವು ವರ್ಷದ ಹಿಂದೆಯೇ ರಚಿಸಲಾಗಿದ್ದರೂ ಇನ್ನೂ ಯಾವುದೇ ಕಂಪೆನಿ ಇದರಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿಲ್ಲ. ಹೊಸ ನೀತಿ ರಚಿಸುವಾಗ ಇಂಥ ವಿಚಾರಗಳತ್ತಲೂ ಗಮನ ಹರಿಸುವ ಅಗತ್ಯವಿತ್ತು. ಹಳೇ ಮದ್ಯವನ್ನು ಹೊಸ ಬಾಟಲಿಯಲ್ಲಿ ನೀಡಿದರೆ ಅದರ ರುಚಿ ಬದಲಾಗುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.