ಜಿಎಸ್‌ಟಿ ಕಡಿತ
Team Udayavani, Nov 11, 2017, 4:20 PM IST
ಏಕಾಏಕಿ 177 ವಸ್ತುಗಳ ತೆರಿಗೆ ಇಳಿಸಿದ ನಿರ್ಧಾರದ ಹಿಂದೆ ರಾಜಕೀಯ ಕಾರಣಗಳು, ವಿಪಕ್ಷಗಳ ಒತ್ತಡ ಇದೆ ಎನ್ನುವುದು ನಿಜವಾಗಿದ್ದರೂ ಸರಕಾರ ಇಂದಲ್ಲ ನಾಳೆ ಈ ನಿರ್ಧಾರ ಕೈಗೊಳ್ಳಲೇಬೇಕಾಗಿತ್ತು.
ಭಾರೀ ಮಹತ್ವಾಕಾಂಕ್ಷೆಯಿಂದ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ ಪದ್ಧತಿಯಿಂದ ಜನರಿಗಾಗುತ್ತಿರುವ ತೊಂದರೆಗಳು ಕಡೆಗೂ ಸರಕಾರಕ್ಕೆ ಗಮನಕ್ಕೆ ಬಂದಿರುವುದು ಒಳ್ಳೆಯ ಬೆಳವಣಿಗೆ. ಗುವಾಹಟಿಯಲ್ಲಿ ಇಂದು ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ 177 ನಿತ್ಯೋಪಯೋಗಿ ವಸ್ತುಗಳನ್ನು ಶೇ.18 ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಕೇಂದ್ರ ಸರಕಾರ ಹೊಸ ತೆರಿಗೆ ಪದ್ಧತಿ ಜಾರಿಗೊಂಡ ನಾಲ್ಕು ತಿಂಗಳ ಬಳಿಕ ಜನರಿಗೆ ದೊಡ್ಡದೊಂದು ಕೊಡುಗೆಯನ್ನು ನೀಡಿದೆ.
ಇಷ್ಟರತನಕ ಶೇ.28 ಸ್ತರದಲ್ಲಿದ್ದ ಈ ವಸ್ತುಗಳ ಪೈಕಿ ಹೆಚ್ಚಿನವು ಜನತೆ ನಿತ್ಯ ಬಳಸುವಂತಾಗಿತ್ತು. ಇವುಗಳ ತೆರಿಗೆ ಶೇ.10 ಇಳಿಕೆಯಾಗುವುದರಿಂದ ಜನಸಾಮಾನ್ಯರು ತಮ್ಮ ಜೀವನ ಮಟ್ಟವನ್ನು ಇನ್ನಷ್ಟು ಸುಧಾರಿಸಿಕೊಳ್ಳಬಹುದು. ಚೂಯಿಂಗ್‌ಗಮ್‌ನಿಂದ ಹಿಡಿದು ಸೋಪಿನ ಪುಡಿಯ ತನಕ ಹಲವು ವಸ್ತುಗಳ ತೆರಿಗೆಯನ್ನು ಇಳಿಸಲಾಗಿದೆ. ಚಾಕೋಲೇಟ್, ಮೇಕ್ ಅಪ್ ಸಾಧನಗಳು, ಶೇವಿಂಗ್ ಸಾಧನಗಳು, ಶಾಂಪೂ, ಸುಗಂಧ ದ್ರವ್ಯಗಳು, ಗ್ರಾನೈಟ್, ಮಾರ್ಬಲ್ ಈ ಮುಂತಾದ ವಸ್ತುಗಳೀಗ ಶೇ.18 ತೆರಿಗೆ ಸ್ತರ ವ್ಯಾಪ್ತಿಗೆ ಪ್ರವೇಶಿಸಿವೆ.
ಜು.1ರಂದು ಜಿಎಸ್‌ಟಿ ಜಾರಿಗೊಳಿಸಿದಾಗ ಸುಮಾರು 1200 ವಸ್ತುಗಳನ್ನು ಜಿಎಸ್‌ಟಿ ವ್ಯಾಪ್ತಿಯೊಳಗೆ ತರಲಾಗಿತ್ತು. 0, ಶೇ.5, ಶೇ.12, ಶೇ.18 ಮತ್ತು ಶೇ.28 ಎಂಬ ಐದು ಸ್ತರದ ತೆರಿಗೆ ಪದ್ಧತಿಯಲ್ಲಿ ಭಾರೀ ಐಷಾರಾಮದ ವಸ್ತುಗಳಿಗೆ ಮಾತ್ರ ಶೇ.28 ತೆರಿಗೆ ಅನ್ವಯಿಸಬೇಕೆಂದು ಹೇಳಲಾಗಿ ತ್ತಾದರೂ ಚೂಯಿಂಗ್‌ಗಮ್, ಶಾಂಪೂ, ಶೇವಿಂಗ್ ಸಾಧನಗಳಂತಹ ಬಡವ ಶ್ರೀಮಂತರೆನ್ನದೆ ಎಲ್ಲರೂ ನಿತ್ಯ ಬಳಸುವ ವಸ್ತುಗಳನ್ನು ಈ ವ್ಯಾಪ್ತಿಗೆ ಒಳಪಡಿಸಿದ್ದೇ ವಿಚಿತ್ರ ತರ್ಕ.
ಅದ್ಯಾವ ಅರ್ಥಶಾಸ್ತ್ರಜ್ಞ ಚಾಕೊಲೆಟ್, ಐ ಮೇಕ್ ಅಪ್ ಸಾಧನಗಳು ಅಥವಾ ಸುಗಂಧ ದ್ರವ್ಯಗಳನ್ನು ಶ್ರೀಮಂತರು ಮಾತ್ರ ಬಳಸುತ್ತಾರೆ ಎಂದು ಹೇಳಿದನೋ? ಕಡೆಗಾದರೂ ಸರಕಾರಕ್ಕೆ ಇವುಗಳು ಎಲ್ಲರೂ ನಿತ್ಯವೂ ಉಪಯೋಗಿಸುವ ವಸ್ತು ಗಳು ಎಂದು ಅರಿವಾಗಿದೆ ಎನ್ನುವುದೇ ಸಮಾಧಾನ ಕೊಡುವ ವಿಚಾರ. ಪ್ರಸ್ತುತ ಶೇ.28 ತೆರಿಗೆ ಸ್ತರದಲ್ಲಿ ಉಳಿದಿರುವುದು ಹಾನಿಕಾರಕ ಮತ್ತು ತೀರಾ ಐಷಾರಾಮಿ ಎನ್ನುವಂತಹ 50 ವಸ್ತುಗಳು ಮಾತ್ರ. ಇವುಗಳಲ್ಲೂ ಕೆಲವು ವಸ್ತುಗಳನ್ನು ಶೇ.18ರ ವ್ಯಾಪ್ತಿಗೆ ತರುವ ಕುರಿತು ಚಿಂತನೆಗಳಾಗುತ್ತಿವೆ.
ಕ್ರಮೇಣ ಜಿಎಸ್‌ಟಿ ಗರಿಷ್ಠ ವ್ಯಾಪ್ತಿಯನ್ನೇ ಶೇ. 18ಕ್ಕಿಳಿಸುವ ಯೋಜನೆ ಇದ್ದು ಇದಕ್ಕೆ ಕೊಂಚ ಸಮಯ ಹಿಡಿಯಬಹುದು. ಸಿಮೆಂಟ್, ಪೈಂಟ್‌ನಂತಹ ಎಲ್ಲರಿಗೂ ಅಗತ್ಯವಾಗಿರುವ ವಸ್ತುಗಳನ್ನು ಶೇ.28 ಸ್ತರದ ವ್ಯಾಪ್ತಿಯಿಂದ ತುರ್ತಾಗಿ ಹೊರಗೆ ತರುವ ಅಗತ್ಯವಿದೆ. ದೇಶದ ಜಿಡಿಪಿಗೆ ಬಲುದೊಡ್ಡ ಕೊಡುಗೆ ನೀಡುತ್ತಿರುವ ರಿಯಲ್ ಎಸ್ಟೇಟ್ ಉದ್ಯಮದ ಮುಖ್ಯ ವಸ್ತುಗಳೇ ಸಿಮೆಂಟ್ ಮತ್ತು ಪೈಂಟ್. ಇವುಗಳಿಗೆ ಗರಿಷ್ಠ ತೆರಿಗೆ ವಿಧಿಸಿದರೆ ಸಹಜವಾಗಿಯೇ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಪರಿಣಾಮವಾಗುತ್ತದೆ.
ಹೀಗಾಗಿ ಮುಂಬರುವ ದಿನಗಳಲ್ಲಿ ಆರ್ಥಿಕತೆಯ ಚಾಲನಾ ಶಕ್ತಿಯಾಗಿರುವ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರ ಈ ಕ್ರಮ ಕೈಗೊಳ್ಳಬೇಕು. ಅಂತೆಯೇ ವಾಶಿಂಗ್ ಮೆಶಿನ್, ಏರ್ ಕಂಡೀಶನರ್ ಐಷಾರಾಮಿ ವಸ್ತುಗಳು ಎನ್ನುವ ತರ್ಕವೂ ಸರಿಯಲ್ಲ. ಎಲ್ಲ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರ ಮನೆಗಳಲ್ಲಿ ವಾಶಿಂಗ್ ಮೆಶಿನ್ ಇರುತ್ತದೆ. ಮುಂಬಯಿ, ದಿಲ್ಲಿಯಂತಹ ಮಹಾನಗರಗಳಿಗೆ ಬೇಸಿಗೆಯಲ್ಲಿ ಏರ್ ಕಂಡೀಶನರ್ ಅನಿವಾರ್ಯ ಎಂಬ ಪರಿಸ್ಥಿತಿಯಿದೆ.
ಈ ವಸ್ತುಗಳ ತೆರಿಗೆ ಇಳಿಕೆಯಾಗುವುದು ಕೂಡ ಅಪೇಕ್ಷಣೀಯ. ಅದೇ ರೀತಿ ಔಷಧಗಳಿಗೆ ಆದಷ್ಟು ಕಡಿಮೆ ತೆರಿಗೆ ವಿಧಿಸುವ ಕುರಿತು ಚಿಂತನೆ ನಡೆಸಬೇಕು. ಬಹುತೇಕ ಔಷಧಿಗಳು ಪ್ರಸ್ತುತ ಶೇ.12 ಸ್ತರದಲ್ಲಿದ್ದು, ಈ ಪೈಕಿ ಹಲವು ಅಗತ್ಯ ಔಷಧಿಗಳನ್ನು ಶೇ.5 ಸ್ತರಕ್ಕೆ ತರಲು ಸಾಧ್ಯವಿದೆ. ಜಿಎಸ್‌ಟಿ ಕೆಟ್ಟ ತೆರಿಗೆ ಪದ್ಧತಿ ಅಲ್ಲ ಎನ್ನುವುದು ಅದು ಜಾರಿಯಾದ ಮೊದಲ ತ್ತೈಮಾಸಿಕದಲ್ಲೇ ಸಾಬೀತಾಗಿದೆ. ತೆರಿಗೆ ಸಂಗ್ರಹ ಗಮನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದಲ್ಲದೆ, ತೆರಿಗೆ ಪಾವತಿಸುವವರ ಸಂಖ್ಯೆಯೂ ಹೆಚ್ಚಿದೆ.
ಈಗಾಗಲೇ 160 ದೇಶಗಳಲ್ಲಿ ಜಿಎಸ್‌ಟಿ ಯಶಸ್ವಿಯಾಗಿದ್ದು, ಭಾರತದಲ್ಲಿ ಸೋಲುತ್ತದೆ ಎನ್ನಲು ಕಾರಣಗಳಿಲ್ಲ. ಯಾವುದೇ ಹೊಸತನಕ್ಕೆ ಹೊಂದಿಕೊಳ್ಳಲು ತುಸು ಸಮಯ ಬೇಕಾಗುತ್ತದೆ. ಪ್ರಸ್ತುತ ಸರಕಾರ ಏಕಾಏಕಿ 177 ವಸ್ತುಗಳ ತೆರಿಗೆ ಇಳಿಸಿದ ನಿರ್ಧಾರದ ಹಿಂದೆ ರಾಜಕೀಯ ಕಾರಣಗಳು ಮತ್ತು ವಿಪಕ್ಷಗಳ ಒತ್ತಡ ಇದೆ ಎನ್ನುವುದು ನಿಜವಾಗಿದ್ದರೂ ಇಂದಲ್ಲ ನಾಳೆಯಾದರೂ ಸರಕಾರ ಈ ನಿರ್ಧಾರ ಕೈಗೊಳ್ಳಲೇ ಬೇಕಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ
Editorial: ನೈಜ ಕ್ರೀಡಾ ಸಾಧಕರಿಗೆ ಸಂದ ದೇಶದ ಅತ್ಯುನ್ನತ ಕ್ರೀಡಾ ಗೌರವ
Government Transport: ಸರಕಾರಿ ಸಾರಿಗೆ ಸಂಸ್ಥೆಗಳಿಗೆ ಬೇಕಿದೆ ಸುಧಾರಣ ಚಿಕಿತ್ಸೆ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
ಕೆಪಿಎಸ್‌ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.