ಎಚ್‌1-ಬಿ ವೀಸಾ ಅಸ್ತ್ರ: ಬೈಡೆನ್‌ಗೆ ಟ್ರಂಪ್‌ ಹೊಸ ಸವಾಲು

Team Udayavani, Jan 16, 2021, 7:12 AM IST

ಎಚ್‌1-ಬಿ ವೀಸಾ ಅಸ್ತ್ರ: ಬೈಡೆನ್‌ಗೆ ಟ್ರಂಪ್‌ ಹೊಸ ಸವಾಲು

ಅಮೆರಿಕದ ಅಧ್ಯಕ್ಷ ಟ್ರಂಪ್‌, ಮುಂಬರಲಿರುವ ಬೈಡೆನ್‌ ಸರಕಾರದೆದುರು ಸಾಧ್ಯವಾದಷ್ಟೂ ಸಮಸ್ಯೆಗಳನ್ನು ಸೃಷ್ಟಿಸಿ ಹೋಗಬೇಕೆಂದು ನಿರ್ಧರಿಸಿದಂತಿದೆ. ಹೊರಗಿನವರು ಅಮೆರಿಕನ್ನರ ಕೆಲಸ ಕದಿಯುತ್ತಿದ್ದಾರೆ, ಅಮೆರಿಕನ್‌ ಉದ್ಯೋಗಗಳು ಅಮೆರಿಕನ್ನರಿಗೇ ಸಿಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಟ್ರಂಪ್‌, ಕಳೆದ ವರ್ಷ ಎಚ್‌1 ಬಿ ವೀಸಾ ಸೇರಿದಂತೆ ಹಲವು ಉದ್ಯೋಗ ವೀಸಾಗಳ ಮೇಲೆ ನಿರ್ಬಂಧ ಹೇರಿದ್ದರು. ಆದರೆ ಇನ್ನೊಂದೆಡೆ ಜೋ ಬೈಡೆನ್‌ ತಂಡ, ತಾವು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈ ಉದ್ಯೋಗ ವೀಸಾಗಳ ಮೇಲಿನ ನಿರ್ಬಂಧವನ್ನು ರದ್ದು ಮಾಡುವುದಾಗಿ ಹೇಳಿದೆ. ಈ ಕಾರಣಕ್ಕಾಗಿಯೇ, ಈಗ ಟ್ರಂಪ್‌ ಆಡಳಿತ ಎಚ್‌1-ಬಿ ವೀಸಾ ಅಡಿಯಲ್ಲಿ ಅಮೆರಿಕದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಿಗುವ ಕನಿಷ್ಠ ವೇತನದ ಮಿತಿಯಲ್ಲಿ ಭಾರೀ ಏರಿಕೆ ಆಗುವಂಥ ನಿಯಮ ಜಾರಿ ಮಾಡಿ ಬೈಡೆನ್‌ಗೆ ಹೊಸ ಸವಾಲು ಎದುರೊಡ್ಡಿದೆ. ಇನ್ನು ಮುಂದೆ ಲಾಟರಿ ಆಧಾರದ ಬದಲಾಗಿ, ಹೆಚ್ಚಿನ ಸಂಬಳ ಹಾಗೂ ಕೌಶಲಗಳ ಆಧಾರದ ಮೇಲೆಯೇ ಎಚ್‌1-ಬಿ ವೀಸಾ ನೀಡುವುದಾಗಿ ಟ್ರಂಪ್‌ ಆಡಳಿತ ಹೇಳುತ್ತಿದೆ.

ಅಮೆರಿಕನ್‌ ಉದ್ಯೋಗಿಗಳಿಗೆ ಹೋಲಿಸಿದರೆ, ಭಾರತ-ಚೀನ ಸೇರಿದಂತೆ ವಿವಿಧ ದೇಶಗಳ ಉದ್ಯೋಗಿಗಳು ಕಡಿಮೆ ವೇತನಕ್ಕೆ, ಹೆಚ್ಚು ಸವಲತ್ತುಗಳನ್ನು ಪಡೆಯದೇ ಕೆಲಸ ಮಾಡುತ್ತಾರೆ. ಈ ಕಾರಣಕ್ಕೇ ಅಲ್ಲಿನ ಕಂಪೆನಿಗಳು ಹೊರದೇಶದವರನ್ನು ನೇಮಕಾತಿ ಮಾಡಿಕೊಳ್ಳುತ್ತಾ ಬಂದಿವೆ. ಈಗ ಏಕಾಏಕಿ ಇಂಥ ಉದ್ಯೋಗಿಗಳ ಸಂಬಳದ ಕನಿಷ್ಠ ಮಿತಿಯಲ್ಲಿ ಗಣನೀಯ ಏರಿಕೆ ಮಾಡಿದರೆ, ಕಂಪೆನಿಗಳು  ನೇಮಕಾತಿಗೆ ಹಿಂದೇಟು ಹಾಕುವಂತಾಗುತ್ತದೆ. ಸಹಜವಾಗಿಯೇ, ಉದ್ಯೋಗ ವೀಸಾ ಮೇಲಿನ ನಿಷೇಧಗಳು ಅಮೆರಿಕದ ಉದ್ಯಮ ವಲಯಕ್ಕೆ, ಅವುಗಳಲ್ಲಿನ ವಿದೇಶಿ ಕೆಲಸಗಾರರಿಗೆ ಮತ್ತು ಈ ಉದ್ಯೋಗಿಗಳ ಕುಟುಂಬಗಳಿಗೆ ಬಹಳ ತೊಂದರೆಯನ್ನುಂಟುಮಾಡುತ್ತವೆ.

ಹೊಸ ನಿಯಮದಿಂದಾಗಿ ಅಮೆರಿಕದಲ್ಲಿನ ಭಾರತೀಯ ಕಂಪೆನಿಗಳು ಹಾಗೂ ಹೊರಗುತ್ತಿಗೆ ಕಂಪೆನಿಗಳ ಕೆಳಹಂತದ ನೌಕರ ವರ್ಗಕ್ಕೆ ಪೆಟ್ಟು ಬೀಳಲಿರುವುದರಿಂದ ಈ ಕಂಪೆನಿಗಳಿಗಂತೂ ಹೊಡೆತ ಬೀಳಲಿದೆ. ಇನ್ನೊಂದೆಡೆ ಕೌಶಲ ಹಾಗೂ ಕನಿಷ್ಠ ವೇತನ ಮಿತಿಯ ಆಧಾರದಲ್ಲೇ ಎಚ್‌1ಬಿ ಉದ್ಯೋಗ ವೀಸಾ ನೀಡುವ ನಿಯಮದಿಂದಾಗಿ, ಅಮೆರಿಕದಲ್ಲಿನ ವಿದೇಶಿ ವಿದ್ಯಾರ್ಥಿಗಳಿಗೆ, ಈಗಷ್ಟೇ ಪದವಿ ಮುಗಿಸಿರುವವರಿಗೂ ಸಮಸ್ಯೆಯಾಗಲಿದೆ. ಏಕೆಂದರೆ ಅವರ ಬಳಿ ಹೆಚ್ಚಿನ ಸಂಬಳದ ಕೆಲಸ ಗಿಟ್ಟಿಸಿಕೊಳ್ಳುವಂಥ ಅನುಭವವೂ ಇರುವುದಿಲ್ಲ. ಹೆಚ್ಚು ಸಂಬಳ ನೀಡಬೇಕಾಗಿ ಬಂದಾಗ ಕಂಪೆನಿಗಳು ಅನುಭವ ಇರುವವರನ್ನು ನೇಮಕಾತಿ ಮಾಡಿಕೊಳ್ಳುತ್ತವೆ. ತನ್ನ ಬೆಂಬಲಿಗರ ದೃಷ್ಟಿಯಲ್ಲಿ ಉತ್ತಮವಾಗಿ ಕಾಣಿಸಿಕೊಳ್ಳಬೇಕು ಹಾಗೂ ಬೈಡೆನ್‌ ವೀಸಾ ನಿಷೇಧವನ್ನು ಹಿಂಪಡೆದು ಜನರ ಮುನಿಸಿಗೆ ಪಾತ್ರರಾಗುವಂಥ ಕಠಿನ ಸವಾಲನ್ನು ಎದುರಿಸಬೇಕು ಎನ್ನುವ ಸ್ಪಷ್ಟ ಗುರಿ ಟ್ರಂಪ್‌ ಅವರ ಈ ನಡೆಯ ಹಿಂದಿದೆ. ಟ್ರಂಪ್‌ ಸೃಷ್ಟಿಸಿರುವ ಈ ಹೊಸ ಸಮಸ್ಯೆಯನ್ನು ಬೈಡೆನ್‌ ಆಡಳಿತ ಎಷ್ಟು ಬೇಗ ಬಗೆಹರಿಸುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

ಟಾಪ್ ನ್ಯೂಸ್

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

champions trophy

Cricket: ಚಾಂಪಿಯನ್ಸ್‌ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…

Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…

Belagavi; It hurts a lot, I won’t be afraid even if a hundred CT Ravi comes: Lakshmi Hebbalkar

Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.